AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: 2 ಬಾರಿ ಫೈನ್ ಕಟ್ಟಿದ ಬಳಿಕ ಹೊಸ ಸೆಲೆಬ್ರೇಷನ್ ಪರಿಚಯಿಸಿದ ದಿಗ್ವೇಶ್ ರಾಠಿ

IPL 2025: 2 ಬಾರಿ ಫೈನ್ ಕಟ್ಟಿದ ಬಳಿಕ ಹೊಸ ಸೆಲೆಬ್ರೇಷನ್ ಪರಿಚಯಿಸಿದ ದಿಗ್ವೇಶ್ ರಾಠಿ

ಝಾಹಿರ್ ಯೂಸುಫ್
|

Updated on: Apr 09, 2025 | 1:18 PM

IPL 2025 KKR vs LSG: ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 238 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ 234 ರನ್​ಗಳಿಸಿತು. ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ನೋಟ್​ಬುಕ್ ಸೆಲೆಬ್ರೇಷನ್​ನೊಂದಿಗೆ ದಿಗ್ವೇಶ್ ರಾಠಿ (Digvesh Rathi) ಸಂಚಲನ ಸೃಷ್ಟಿಸಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಆರ್ಯ ಅವರನ್ನು ಔಟ್ ಮಾಡಿ ನೋಟ್ ಬುಕ್ ಸೆಲೆಬ್ರೇಷನ್ ಮಾಡಿದ್ದ ದಿಗ್ವೇಶ್​ಗೆ ಪಂದ್ಯ ಶುಲ್ಕದ ಶೇ.25 ರಷ್ಟು ದಂಡ ವಿಧಿಸಿದ್ದರು. ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು.

ಇದಾದ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತದೇ ನೋಟ್​ ಬುಕ್ ಸೆಲೆಬ್ರೇಷನ್​ನೊಂದಿಗೆ ದಿಗ್ವೇಶ್ ರಾಠಿ ಕಾಣಿಸಿಕೊಂಡಿದ್ದರು. ಅಲ್ಲದೆ ಐಪಿಎಲ್​ ನಿಯಮ ಉಲ್ಲಂಘಿಸಿದ್ದಕಾಗಿ ಈ ಬಾರಿ ದಿಗ್ವೇಶ್​ಗೆ ಪಂದ್ಯ ಶುಲ್ಕದ ಶೇ. 50 ರಷ್ಟು ದಂಡ ಹಾಗೂ 2 ಡಿಮೆರಿಟ್ ಪಾಯಿಂಟ್ ನೀಡಲಾಗಿತ್ತು.

ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲೂ ಸುನಿಲ್ ನರೈನ್ ಅವರ ವಿಕೆಟ್ ಪಡೆದು ನೋಟ್​ ಬುಕ್ ಸೆಲೆಬ್ರೇಷನ್ ಮಾಡಿದ್ದಾರೆ. ಆದರೆ ಈ ಬಾರಿ ಅವರು ಆಟಗಾರರನ್ನು ಗುರಿಯಾಗಿಸಿಲ್ಲ. ಬದಲಾಗಿ ಮೈದಾನದ ಮೇಲೆ ಸಹಿ ಹಾಕುವ ಮೂಲಕ ಸಂಭ್ರಮಿಸಿದ್ದಾರೆ. ಈ ಮೂಲಕ ದಿಗ್ವೇಶ್ ರಾಠಿ ಮೈದಾನದ ಮೇಲೆ ಸಹಿ ಹಾಕುವ ಸಂಭ್ರಮಕ್ಕೆ ಮುನ್ನಡಿ ಬರೆದಿದ್ದಾರೆ. ಆದರೆ ಈ ಸೆಲೆಬ್ರೇಷನ್​ಗೆ ಬಿಸಿಸಿಐ ಅವರಿಗೆ ಮತ್ತೆ ದಂಡ ಹಾಕಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.

ಕೊಲ್ಕತ್ತಾ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 238 ರನ್ ಕಲೆಹಾಕಿದರೆ, ಈ ಗುರಿಯನ್ನು ಬೆನ್ನತ್ತಿದ ಕೆಕೆಆರ್ 234 ರನ್​ಗಳಿಸಿತು. ಈ ಮೂಲಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ.