Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲಬುರಗಿ: ಎಟಿಎಂನಲ್ಲಿರುವ ಸಿಸಿಟಿವಿ ಕೆಮೆರಾಗಳಿಗೆ ಕಪ್ಪುಮಸಿ ಸ್ಪ್ರೇ ಮಾಡಿ ₹ 18 ಲಕ್ಷ ದರೋಡೆ

ಕಲಬುರಗಿ: ಎಟಿಎಂನಲ್ಲಿರುವ ಸಿಸಿಟಿವಿ ಕೆಮೆರಾಗಳಿಗೆ ಕಪ್ಪುಮಸಿ ಸ್ಪ್ರೇ ಮಾಡಿ ₹ 18 ಲಕ್ಷ ದರೋಡೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Apr 09, 2025 | 2:42 PM

ಬೀದರ್ ದರೋಡೆಕೋರರು ಮತ್ತು ಕೊಲೆಗಡುಕರನ್ನು ಈ ಭಾಗದ ಪೊಲೀಸರು ಸೆರೆಹಿಡಿದಿದ್ದರೆ ಕಲಬುರಗಿಯಲ್ಲಿ ದರೋಡೆ ಪ್ರಕರಣ ಪ್ರಾಯಶಃ ನಡೆಯುತ್ತಿರಲಿಲ್ಲ. ಇಲ್ಲಿ ಹಣ ದೋಚಿದ್ದು ಅದೇ ಗ್ಯಾಂಗ್ ಇಲ್ಲವೇ ಹರಿಯಾಣ ಮೂಲದವರು ಎಂದು ಶಂಕಿಸಲಾಗುತ್ತಿದೆ. ಈ ದರೋಡೆಕೋರರು ಮೊಬೈಲ್ ಫೋನ್​​​ಗಳನ್ನು ಬಳಸುವುದಿಲ್ಲವಾದ್ದರಿಂದ ಟ್ರೇಸ್ ಮಾಡುವುದು ಪೊಲೀಸರಿಗೆ ಕಷ್ಟವಾಗುತ್ತಿದೆ.

ಕಲಬುರಗಿ, ಏಪ್ರಿಲ್ 9: ಪೊಲೀಸರು ಚಾಪೆ ಕೆಳಗೆ ನುಸುಳಿದರೆ ಎಟಿಎಂಗಳನ್ನು ದರೋಡೆ ಮಾಡುವವರು ರಂಗೋಲಿ ಕೆಳಗೆ ನುಸುಳುತ್ತಾರೆ. ಬೀದರ್ ಎಟಿಎಂ ರಾಬರಿ ಮತ್ತು ಇಬ್ಬರು ಗಾರ್ಡ್​​ಗಳ ಕೊಲೆ ಪ್ರಕರಣ (Bidar robbery and murder case) ಇನ್ನೂ ಹಸಿಯಾಗಿರುವಾಗಲೇ, ಕಲಬುರಗಿಯ ಪೂಜಾರಿ ಚೌಕ್​ನಲ್ಲಿರುವ ಎಸ್​ಬಿಐ ಎಟಿಎಂ ಕಿಯಾಸ್ಕೊಂದರಿಂದ ದರೋಡೆಕೋರರು ₹18 ಲಕ್ಷ ದೋಚಿಕೊಂಡು ಪರಾರಿಯಾಗಿದ್ದಾರೆ. ದರೋಡೆ ಬೆಳಗಿನ ಜಾವ 3ಗಂಟೆ ಸುಮಾರಿಗೆ ನಡೆದಿದೆ ಮತ್ತು ಕಳ್ಳರು ತಮ್ಮ ಮುಖಗಳು ಎಟಿಎಂ ಕಿಯಾಸ್ಕ್ ಇರುವ ಕೋಣೆಯಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗದಿರಲು ಅವುಗಳಿಗೆ ಕಪ್ಪುಮಸಿಯನ್ನು ಸ್ಪ್ರೇ ಮಾಡಿದ್ದಾರೆ. ಕಿಯಾಸ್ಕ್​ ಓಪನ್ ಮಾಡಲು ಕಳ್ಳರು ಗ್ಯಾಸ್ ಕಟ್ಟರ್ ಬಳಸಿದ್ದಾರೆ.

ಇದನ್ನೂ ಓದಿ:  ಮಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆ ಯತ್ನ: ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ