WHO Covid-19 Report | ತಾನೇ ಸಿದ್ಧಪಡಿಸಿದ ಕೊವಿಡ್​ ಪ್ರಾಥಮಿಕ ವರದಿ ತಿರಸ್ಕರಿಸಿದ ವಿಶ್ವಸಂಸ್ಥೆ; ಅಮೇರಿಕಾ ಒತ್ತಡವೋ, ಚೀನಾದ್ದೋ?

ಕೊವಿಡ್​-19 ವೈರಸ್​ ಮೂಲದ ಕುರಿತಾಗಿ ತನ್ನದೇ ವಿಜ್ಞಾನಿಗಳ ತಂಡ ತಯಾರಿಸಿದ ಪ್ರಾಥಮಿಕ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ತಿರಸ್ಕರಿಸಿದೆ. ಇದಕ್ಕೆ ಅಮೇರಿಕಾದ ಒತ್ತಡ ಕಾರಣವೋ ಅಥವಾ ಚೀನಾ ಮೂಲದಿಂದ ಬಂದ ಒತ್ತಡ ಕಾರಣವೋ ಗೊತ್ತಾಗುತ್ತಿಲ್ಲ.

WHO Covid-19 Report | ತಾನೇ ಸಿದ್ಧಪಡಿಸಿದ ಕೊವಿಡ್​ ಪ್ರಾಥಮಿಕ ವರದಿ ತಿರಸ್ಕರಿಸಿದ ವಿಶ್ವಸಂಸ್ಥೆ; ಅಮೇರಿಕಾ ಒತ್ತಡವೋ, ಚೀನಾದ್ದೋ?
ಪ್ರಾತಿನಿಧಿಕ ಚಿತ್ರ
Follow us
ಡಾ. ಭಾಸ್ಕರ ಹೆಗಡೆ
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 05, 2021 | 4:00 PM

ಇದು ಆಗುತ್ತೆ ಎನ್ನೋದು ಗೊತ್ತಿತ್ತು. ಆದರೆ, ಅದು ಇಷ್ಟು ಬೇಗ ಆಗುತ್ತೆ ಎನ್ನೋದು ಗೊತ್ತಿರಲಿಲ್ಲ. ಕೊರೊನಾ ವೈರಸ್​ನ ಜಾತಕ ಹೊರ ಹಾಕಲು ನಾಲ್ಕು ತಿಂಗಳಿಂದ ಚೀನಾದಲ್ಲಿ ಕೆಲಸ ಮಾಡಿ ತಯಾರಿಸಿದ್ದ ತನ್ನದೇ ಆದ ಪ್ರಾಥಮಿಕ ವರದಿಯನ್ನು ವಿಶ್ವ ಆರೋಗ್ಯ ಸಂಸ್ಥೆ (World Health Organisation) ಕಸದ ಬುಟ್ಟಿಗೆ ಎಸೆಯಲು ನಿರ್ಧರಿಸಿದೆ. ಎರಡು ವಾರಗಳ ಹಿಂದೆ ಬೀಜಿಂಗ್​ನಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ತಾನು ಕೈಗೊಂಡಿದ್ದ ಮೊದಲ ಹಂತದ ಸಂಶೋಧನೆಯ ವಿವರ ನೀಡಿದ್ದ WHO ತಂಡ ತಾವು ಇನ್ನೂ ಸಂಶೋಧನೆಯ ಕೆಲಸ ಮಾಡುವುದಿದೆ. ಇನ್ನೂ ಖಡಾಖಂಡಿತವಾಗಿ ಈ ವೈರಸ್​ ಎಲ್ಲಿಂದ ಬಂತು ಎಂದು ಹೇಳುವುದಕ್ಕೆ ಸಾಕ್ಷಾಧಾರಗಳು ಸಿಗುತ್ತಿಲ್ಲ ಎಂದು ಹೇಳಿತ್ತು. ಇಲ್ಲಿ ಒಂದು ಪ್ರಮುಖ ತಿರುವಿದೆ. ತನ್ನದೇ ಆದ ಪ್ರಾಥಮಿಕ ವರದಿಯನ್ನು ತಿರಸ್ಕರಿಸಲು ಚೀನಾ ಒತ್ತಾಯ ಮಾಡಿರಬಹುದು ಎಂದು ನೀವೆಲ್ಲ ತಿಳಿದುಕೊಂಡಿದ್ದರೆ ತಪ್ಪು. ಇದಕ್ಕೊಂದು ಪ್ರಮಖ ಕಾರಣವಿದೆ.

ಅದೇನು ಕಾರಣ? ಅಂತರಾಷ್ಟ್ರೀಯ ಮಟ್ಟದ ದೊಡ್ಡ ಹೆಸರಿನ 24 ಜನ ವಿಜ್ಞಾನಿಗಳು WHOಗೆ ಪತ್ರ ಬರೆದು ವುಹಾನ್ ವೈರಸ್​ ಎಲ್ಲಿಂದ ಬಂತು ಬಗ್ಗೆ ಹೊಸದಾಗಿ ತನಿಖೆ ಆಗಬೇಕು. ಅವರೆಲ್ಲ ಸೇರಿ ಬರೆದ ಈ ಕುರಿತು ಬರೆದ ತೆರೆದ ಪತ್ರ ಈಗ ಮಾಧ್ಯಮದ ಮುಂದೆ ಬಂದಿದೆ. ಈ 24 ವಿಜ್ಞಾನಿಗಳ ಪ್ರಕಾರ, ಎಲ್ಲ ಕಡೆಯೂ ಹೋಗಿ ಬರಲು ಮತ್ತು ಸಂಶೋಧನೆ ನಡೆಸಲು ಸ್ವಾತಂತ್ರ್ಯ ಇರಲಿಲ್ಲ ಮತ್ತು ಒಪ್ಪಿಗೆ ಸಿಗಲಿಲ್ಲ. ಎಲ್ಲಿ ವುಹಾನ್​ ವೈರಸ್​ನ ಮೂಲ ಇರಬಹುದು ಎಂದು ಊಹಿಸುತ್ತಾರೆಯೋ ಅಲ್ಲಿಗೆ ಹೋಗಲು ಮತ್ತು ಅಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿಲ್ಲ ಎಂದು ಈ ವಿಜ್ಞಾನಿಗಳ ತಂಡ ಹೇಳಿದೆ, ಎಂದು ಫೈನಾನ್​ಷಿಯಲ್​ ಟೈಮ್ಸ್​ ಮುಂತಾದ ಹಲವಾರು ಅಂತರಾಷ್ಟ್ರೀಯ ಪತ್ರಿಕೆಗಳು ಬರೆದಿವೆ. ಪ್ರಯೋಗಾಲಯದಿಂದ ಬಂದಿರಬಹುದು ಎಂಬ ಕೋನದಿಂದ ಕೂಡ ವಿವರವಾದ ಸಂಶೋಧನೆ ಆಗಲೇಬೇಕು ಎಂದು 24 ವಿಜ್ಞಾನಿಗಳು ಹೇಳಿದ್ದಾರೆ.

ಈ ಮಧ್ಯೆ, ಜಿನೇವಾದಲ್ಲಿ ಮಾತನಾಡಿದ WHO ವಕ್ತಾರ ತಾರಿಕ್​ ಜಸಾರೇವಿಕ್, ಇನ್ನು ಕೆಲವು ವಾರದಲ್ಲಿ ಅಂತಿಮ ವರದಿ ಬರಲಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಮತ್ತಷ್ಟು ಕುತೂಹಲ ಮೂಡಿಸಿದೆ. ಚೀನಾ ಈಗಾಗಲೇ ತನ್ನಲ್ಲಿರುವ ಮೂಲ ಮಾಹಿತಿ ನೀಡಲು ನಿರಾಕರಿಸಿದೆ. ಹಾಗಿದ್ದರೂ WHO ತಂಡ ವುಹಾನ್​ ಪ್ರಯೋಗಾಲಯದಿಂದ ಈ ವೈರಸ್​ ಬಂದಿದೆ ಎಂಬುದನ್ನು ತಿರಸ್ಕರಿಸಿತ್ತು.

ಈಗಾಗಲೇ  ಚೀನಾ ತನ್ನನ್ನು ತಾನು ಸಮರ್ಥಿಸಿಕೊಂಡಿದೆ. 2019-20ರಲ್ಲಿ 24 ಪ್ರಾಂತ್ಯಗಳ, 2600 ಪ್ರಾಣಿಗಳನ್ನು ಪಿಸಿಆರ್​ ಟೆಸ್ಟ್​​ಗೆ ಒಳಪಡಿಸಿದ್ದೇವೆ. ಇದರಲ್ಲಿ ಒಂದೇ ಒಂದು ಕೇಸ್​​ ಕೂಡ ಪಾಸಿಟಿವ್​ ಬಂದಿಲ್ಲ. ಅದರಲ್ಲೂ ಹುಬೇ ಪ್ರಾಂತ್ಯದಲ್ಲೇ 300 ಪ್ರಬೇಧದ 50,000 ಪ್ರಾಣಿಗಳನ್ನು ಪಿಸಿಆರ್​ ಟೆಸ್ಟ್​ಗೆ ಒಳಪಡಿಸಿದ್ದು, ಒಂದೂ ಕೊರೊನಾ ಪಾಸಿಟಿವ್​ ಕೇಸ್​ ಇರಲಿಲ್ಲ. ಇನ್ನು ಜೆನೆಟಿಕ್​ ಟೆಸ್ಟ್ ಮಾಡಿಯೇ, ವಿವರವಾಗಿ ಅಧ್ಯಯನ ಮಾಡಬೇಕು ಎಂದೂ ಚೀನಾ ಹೇಳಿಕೊಂಡಿತ್ತು.

ಇದನ್ನು ಓದಿ:

ಕೊರೊನಾ ವೈರಾಣು ಹುಟ್ಟಿದ್ದು ಚೀನಾದ ಲ್ಯಾಬ್​ನಲ್ಲಿ ಅಲ್ಲ: WHO ತಜ್ಞರು

ಕೊರೊನಾ ವೈರಾಣು ಮೂಲ ಪತ್ತೆಗೆ ಚೀನಾದ ವುಹಾನ್​ ಪ್ರಯೋಗಾಲಯಕ್ಕೆ ಕಾಲಿಟ್ಟ WHO ತಂಡ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್