AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಬಿಗ್​ ಬಾಸ್​ ಮನೆಗೆ ಬಂದ ಈ ಶೋಭಾ ಯಾರು?; ಸ್ಪರ್ಧಿಗಳಿಗೂ ಕನ್​ಫ್ಯೂಷನ್​!

ಪ್ರತಿ ಬಾರಿ ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ ಕೊಡಿಸಲಾಗುತ್ತದೆ. ಹೆಚ್ಚು ಖ್ಯಾತಿ ಪಡೆದಿರುವ ವ್ಯಕ್ತಿಗಳನ್ನು ಶೋ ಮಧ್ಯದಲ್ಲಿ ಮನೆ ಒಳಗೆ ಕಳುಹಿಸಲಾಗುತ್ತದೆ

ಕನ್ನಡ ಬಿಗ್​ ಬಾಸ್​ ಮನೆಗೆ ಬಂದ ಈ ಶೋಭಾ ಯಾರು?; ಸ್ಪರ್ಧಿಗಳಿಗೂ ಕನ್​ಫ್ಯೂಷನ್​!
ಬಿಗ್ ಬಾಸ್ ಕನ್ನಡ ಸೀಸನ್​ 8
ರಾಜೇಶ್ ದುಗ್ಗುಮನೆ
|

Updated on: Mar 24, 2021 | 8:01 PM

Share

ಕನ್ನಡ ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ನಾಲ್ಕನೇ ವಾರ ಪೂರೈಸುತ್ತಿದ್ದಾರೆ. ಮೊದಲ ವಾರ ಧನುಶ್ರೀ, ಎರಡನೇ ವಾರ ನಿರ್ಮಲಾ ಚೆನ್ನಪ್ಪ ಹಾಗೂ ಮೂರನೇವಾರ ಗೀತಾ ಭಾರತಿ ಭಟ್​ ಎಲಿಮಿನೇಟ್​ ಆಗಿದ್ದಾರೆ. ಮನೆಯಲ್ಲಿ ಈಗ ಉಳಿದು ಕೊಂಡಿದ್ದು 14 ಮಂದಿ ಮಾತ್ರ. ಹೀಗಿರುವಾಗಲೇ ಬಿಗ್​ ಬಾಸ್​ ಮನೆಗೆ ಶೋಭಾ ಎನ್ನುವವರ ಎಂಟ್ರಿ ಆಗಿದೆಯೇ ಎನ್ನುವ ಪ್ರಶ್ನೆ ಮೂಡಿದೆ. ಪ್ರತಿ ಬಾರಿ ಬಿಗ್​ ಬಾಸ್​ ಮನೆಗೆ ವೈಲ್ಡ್​ ಕಾರ್ಡ್​ ಎಂಟ್ರಿ ಕೊಡಿಸಲಾಗುತ್ತದೆ. ಹೆಚ್ಚು ಖ್ಯಾತಿ ಪಡೆದಿರುವ ವ್ಯಕ್ತಿಗಳನ್ನು ಶೋ ಮಧ್ಯದಲ್ಲಿ ಮನೆ ಒಳಗೆ ಕಳುಹಿಸಲಾಗುತ್ತದೆ. ಹಾಂಗತ ಈ ಸೀಸನ್​ನಲ್ಲಿ ಬಿಗ್​ ಬಾಸ್​ ಮನೆ ಒಳಗೆ ಯಾರನ್ನೂ ಕಳುಹಿಸಿಲ್ಲ! ಹೀಗೊಂದು ಪ್ರಶ್ನೆ ಹುಟ್ಟಿಕೊಳ್ಳಲು ರಾಜೀವ್​ ಮಾಡಿದ ಎಡವಟ್ಟು ಕಾರಣ.

ಬಿಗ್​ ಬಾಸ್​ ಮನೆಯಲ್ಲಿ ಎಲ್ಲರೂ ಕೂತು ಮಾತನಾಡುತ್ತಿದ್ದರು. ಆಗ ಚದುರಂಗದ ಟಾಸ್ಕ್​ ಬಗ್ಗೆ ಮಾತನಾಡಿದ್ದಾರೆ ರಾಜೀವ್​. ನಿಧಿ ನೀನು ನನಗೆ ಯಾಕೆ ಹೊಡೆದೆ ಎನ್ನುವುದು ಗೊತ್ತೇ ಆಗಿಲ್ಲ. ಪಾಪ ಶೋಭಾ ನನಗೆ ಹೊಡೆದಿಲ್ಲ ಎಂದು ರಾಜೀವ್​ ಮಾತನಾಡುತ್ತಾ ಇದ್ದರು. ರಾಜೀವ್​, ಶುಭಾ ಪೂಂಜಾಗೆ ಶೋಭಾ ಎಂದು ಹೇಳಿದ್ದನ್ನು ಕೇಳಿ ಮನೆ ಮಂದಿಯೆಲ್ಲ ನಕ್ಕಿದ್ದಾರೆ.

ಇದನ್ನು ಕೇಳಿದ ಶುಭಾ ಪೂಂಜಾ ರೇಗಿದ್ದಾರೆ. ಅಷ್ಟೇ ಅಲ್ಲ, ರಾಜೀವ್​ಗೆ ರಾಜೇಶ್​ ಎನ್ನುವ ನಾಮಕರಣ ಮಾಡಿದ್ದಾರೆ! ಬಿಗ್​ ಬಾಸ್​ ಮನೆಗೆ ಬಂದ ಈ ಶೋಭಾ ಯಾರು ಎಂದು ಶಮಂತ್​ ಬ್ರೋ ಗೌಡ ಪ್ರಶ್ನೆ ಮಾಡಿದ್ದಾರೆ. ಕೊನೆಗೆ ರಾಜೀವ್​ ಈ ವಿಚಾರಕ್ಕೆ ಶುಭಾ ಬಳಿ ಕ್ಷಮೆ ಕೂಡ ಕೇಳಿದ್ದಾರೆ. ನಂತರ ಶುಭಾ ಮಂಜುಗೆ ಮಾಂಜಾ ಎಂದು ಕಿಚಾಯಿಸಿದ್ದಾರೆ!

ಇದನ್ನೂ ಓದಿ: BBK8: ನಿಧಿ-ಶುಭಾ ಬಿಗ್​ ಬಾಸ್​ ಮನೆಯ ಗಾಸಿಪ್​ ರಾಣಿಯರು! ಮಲಗುವ ಮುನ್ನ ಬರೀ ಇಂಥ ಮಾತುಗಳೇ

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ