‘ಗಂಡಸರನ್ನು ಕಂಡರೆ ದಿವ್ಯಾ ಸುರೇಶ್​ಗೆ ವಾಕರಿಕೆ’! ಪ್ರಶಾಂತ್​ ಸಂಬರಗಿ ಗುಟ್ಟಾಗಿ ಇಂಥ ಮಾತು ಹೇಳಿದ್ದೇಕೆ?

Bigg Boss Kannada: ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ದಿವ್ಯಾ ಸುರೇಶ್​ ಹೈಲೈಟ್​ ಆಗುತ್ತಿದ್ದಾರೆ. ಅವರ ಬಗ್ಗೆ ಹಲವು ವಿಚಾರಗಳು ದೊಡ್ಮನೆಯಲ್ಲಿ ಗುಸುಗುಸು ಚರ್ಚೆಗೆ ಕಾರಣ ಆಗುತ್ತಿವೆ.

‘ಗಂಡಸರನ್ನು ಕಂಡರೆ ದಿವ್ಯಾ ಸುರೇಶ್​ಗೆ ವಾಕರಿಕೆ’! ಪ್ರಶಾಂತ್​ ಸಂಬರಗಿ ಗುಟ್ಟಾಗಿ ಇಂಥ ಮಾತು ಹೇಳಿದ್ದೇಕೆ?
ದಿವ್ಯಾ ಸುರೇಶ್
Follow us
ಮದನ್​ ಕುಮಾರ್​
|

Updated on: Mar 30, 2021 | 10:37 AM

ಬಿಗ್​ ಬಾಸ್​ನಲ್ಲಿ 4ನೇ ವಾರದ ಎಲಿಮಿನೇಷನ್​ ಕಳೆದ ಬಳಿಕ ಎಲ್ಲರೂ ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಬೇರೆ ಸ್ಪರ್ಧಿಗಳ ಬಲಾಬಲದ ಬಗ್ಗೆಯೂ ಚರ್ಚೆಗಳು ನಡೆದಿವೆ. ಎಲ್ಲಿ, ಏನು ತಪ್ಪಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದೇ ವಿಚಾರವಾಗಿ ಇತ್ತೀಚೆಗೆ ಪ್ರಶಾಂತ್​ ಸಂಬರಗಿ ಮತ್ತು ಶಮಂತ್​ ಬ್ರೋ ಗೌಡ ನಡುವೆ ಒಂದಷ್ಟು ಮಾತುಕತೆ ನಡೆಯಿತು. ಆಗ ಅವರು ದಿವ್ಯಾ ಸುರೇಶ್​ ಬಗ್ಗೆ ಗುಸಗುಗುಸು ಮಾತನಾಡಿಕೊಂಡಿದ್ದಾರೆ.

ಎಷ್ಟೇ ಪ್ರಯತ್ನ ಮಾಡಿದರೂ ಶಮಂತ್​ಗೆ ದಿವ್ಯಾ ಜೊತೆ ಕನೆಕ್ಟ್​ ಆಗಲು ಸಾಧ್ಯವಾಗುತ್ತಿಲ್ಲ. ಯಾಕೆ ಹೀಗಾಗುತ್ತಿದೆ ಎಂಬುದಕ್ಕೆ ಅವರು ಪ್ರಶಾಂತ್​ ಸಂಬರಗಿ ಹತ್ತಿರ ಹೋಗಿ ಸಲಹೆ ಕೇಳಿದ್ದಾರೆ. ಆಗ ಪ್ರಶಾಂತ್​ ಕೆಲವೊಂದು ಉಪಾಯಗಳನ್ನು ಹೇಳಿಕೊಟ್ಟಿದ್ದಾರೆ. ಇದೇ ಮಾತುಕತೆಯ ನಡುವೆ ‘ಗಂಡಸರನ್ನು ಕಂಡರೆ ದಿವ್ಯಾ ವಾಕರಿಕೆ ಮಾಡುತ್ತಾಳೆ’ ಎಂದು ಪ್ರಶಾಂತ್​ ಗುಟ್ಟಾಗಿ ಹೇಳಿದ್ದಾರೆ.

‘ನಿನಗೆ ಒಂದು ಸ್ಟ್ರಾಟಜಿ ಹೇಳಿಕೊಡುತ್ತೇನೆ. ನೀನು ಅವಳಿಗೆ ಕಾಳು ಹಾಕುತ್ತಿದ್ದೀಯ ಎಂಬುದನ್ನು ಮೊದಲು ತಲೆಯಿಂದ ತೆಗೆದುಬಿಡು. ಎರಡು-ಮೂರು ಸಲ ಹೋಗಿ ಸುಮ್ಮನೆ ಅವರ ಸಲಹೆ ಕೇಳು. ನೀನು ಅವಳಿಗೆ ಕಾಂಪಿಟೀಷನ್​ ಕೊಡುತ್ತಿದ್ದೀಯ ಅಂತಾನೇ ಅವಳು ನಿನ್ನ ಮೇಲೆ ರೇಗಾಡೋದು. ಅವಳು ತುಂಬ ಸಫರ್​ ಆಗಿ ಬಿಟ್ಟಿದ್ದಾಳೆ. ಗಂಡಸರನ್ನು ಕಂಡರೆ ವಾಕರಿಕೆ ಮಾಡುತ್ತಾಳೆ. ಅದು ಯಾವುದೇ ಗಂಡಸು ಆಗಿರಲಿ. ಅದನ್ನು ನೀನು ಅರ್ಥಮಾಡಿಕೋ. ಸ್ವಲ್ಪ ಗಟ್ಟಿಯಾಗಿ ಮಾತನಾಡು. ಸಾಫ್ಟ್​ ಆಗಿ ಮಾತನಾಡಬೇಡ’ ಎಂದು ಶಮಂತ್​ಗೆ ಪ್ರಶಾಂತ್ ಕಿವಿಮಾತು ಹೇಳಿದ್ದಾರೆ.

ಬಿಗ್ ಬಾಸ್​ ಮನೆಗೆ ಕಾಲಿಟ್ಟ ದಿನದಿಂದಲೂ ದಿವ್ಯಾ ಸುರೇಶ್​ ಅವರು ಮಂಜು ಪಾವಗಡ ಜೊತೆ ಹೆಚ್ಚು ಬೆರೆತಿದ್ದಾರೆಯೇ ಹೊರತು ಬೇರೆ ಗಂಡಸರ ಜೊತೆ ಅವರು ಮಾತನಾಡುವುದು ಕಡಿಮೆ. ಅದೇ ಕಾರಣಕ್ಕಾಗಿ ಪ್ರಶಾಂತ್​ ಸಂಬರಗಿ ಈ ರೀತಿ ಹೇಳಿದ್ದಾರೆ. ದಿವ್ಯಾ ಬದುಕಿನಲ್ಲಿ ನಡೆದ ಕೆಲವು ಘಟನೆಗಳು ಇದಕ್ಕೆ ಕಾರಣ ಇರಬಹುದು ಎಂಬುದು ಪ್ರಶಾಂತ್​ ಅಭಿಪ್ರಾಯ. ಇನ್ನು, ಮಂಜು-ದಿವ್ಯಾ ನಡುವಿನ ಆಪ್ತತೆ ಆಗಾಗ ಸದ್ದು ಮಾಡುತ್ತಿದೆ. ವಾರದ ಪಂಚಾಯಿತಿಯಲ್ಲಿ ಸುದೀಪ್​ ಕೂಡ ಇದೇ ವಿಚಾರ ಇಟ್ಟುಕೊಂಡು ಇಬ್ಬರ ಕಾಲು ಎಳೆಯುತ್ತಿರುತ್ತಾರೆ.

ಬಿಗ್​ ಬಾಸ್ ಮನೆಯ ಆಟ 5ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದ ಕ್ಯಾಪ್ಟನ್​ ಆಗಿ ವಿಶ್ವನಾಥ್​ ಆಯ್ಕೆ ಆಗಿದ್ದಾರೆ. ನಿಧಿ ಸುಬ್ಬಯ್ಯ, ಅರವಿಂದ್​, ಶುಭಾ ಪೂಂಜಾ, ಶಂಕರ್​ ಅಶ್ವತ್ಥ್​, ಪ್ರಶಾಂತ್​ ಸಂಬರಗಿ ಈ ವಾರ ನಾಮಿನೇಟ್​ ಆಗಿದ್ದಾರೆ. ದಿವ್ಯಾ ಸುರೇಶ್​ ಅವರನ್ನು ವಿಶ್ವನಾಥ್​ ಸೇವ್​​ ಮಾಡಿದ್ದಾರೆ.

ಇದನ್ನೂ ಓದಿ: ಗುಟ್ಟಾಗಿ ನಡೆಯುತ್ತಿದ್ದದ್ದು ಬಯಲಾಯ್ತು; ಮೊದಲ ಬಾರಿಗೆ ಮಂಜು ವಿರುದ್ಧ ತಿರುಗಿ ಬಿದ್ರು ದಿವ್ಯಾ ಸುರೇಶ್​

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು