ಗುಟ್ಟಾಗಿ ನಡೆಯುತ್ತಿದ್ದದ್ದು ಬಯಲಾಯ್ತು; ಮೊದಲ ಬಾರಿಗೆ ಮಂಜು ವಿರುದ್ಧ ತಿರುಗಿ ಬಿದ್ರು ದಿವ್ಯಾ ಸುರೇಶ್​

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ತಮ್ಮ ನಿಜವಾದ ಆಟ ಶುರು ಮಾಡಿದ್ದಾರೆ. ಮಂಜು ವಿರುದ್ಧ ಎಲ್ಲರನ್ನೂ ಎತ್ತಿಕಟ್ಟುತ್ತಿದ್ದಾರೆ.

ಗುಟ್ಟಾಗಿ ನಡೆಯುತ್ತಿದ್ದದ್ದು ಬಯಲಾಯ್ತು; ಮೊದಲ ಬಾರಿಗೆ ಮಂಜು ವಿರುದ್ಧ ತಿರುಗಿ ಬಿದ್ರು ದಿವ್ಯಾ ಸುರೇಶ್​
ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​
Follow us
ರಾಜೇಶ್ ದುಗ್ಗುಮನೆ
| Updated By: guruganesh bhat

Updated on: Mar 27, 2021 | 7:00 AM

ಬಿಗ್​ ಬಾಸ್ ಮನೆಯಲ್ಲಿ ದಿವ್ಯಾ ಸುರೇಶ್​ ಡಬಲ್​ ಗೇಮ್​ ಆಡುತ್ತಿದ್ದಾರೆ. ಮಂಜು ಪಾವಗಡ ಎದುರಿಗೆ ನಗು ನಗುತ್ತಾ ಮಾತನಾಡುವ ಅವರು, ಪ್ರಶಾಂತ್​ ಸಂಬರಗಿ ಎದುರು ಹೋಗಿ ಮಂಜು ವಿರುದ್ಧವೇ ಮಾತನಾಡುತ್ತಾರೆ. ಮಂಜು ಜತೆಗಿನ ಫ್ರೆಂಡ್​ಶಿಪ್​ ಜಾಸ್ತಿ ಆಗಿರುವುದರಿಂದ ನಾನು ವೀಕ್​ ಅನಿಸೋ ತರ ಫೀಲ್​ ಆಯ್ತು ಎಂದು ಹೇಳಿದ್ದರು. ಇದೆಲ್ಲವೂ ಗುಟ್ಟಾಗಿಯೇ ನಡೆಯುತ್ತಾ ಇತ್ತು. ಆದರೆ, ಈಗ ಬಿಗ್​ ಬಾಸ್​ ಮನೆಯಲ್ಲಿ ಇದೇ ಮೊದಲ ಬಾರಿಗೆ ದಿವ್ಯಾ ಸುರೇಶ್​ ನೇರವಾಗಿ ಮಂಜು ವಿರುದ್ಧ ತಿರುಗಿ ಬಿದ್ದಿದ್ದಾರೆ. ಗುಟ್ಟಾಗಿ ನಡೆಯುತ್ತಿದ್ದಿದ್ದು ಈಗ ಬಯಲಾದಂತಾಗಿದೆ. ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ತಮ್ಮ ನಿಜವಾದ ಆಟ ಶುರು ಮಾಡಿದ್ದಾರೆ. ಮಂಜು ವಿರುದ್ಧ ಎಲ್ಲರನ್ನೂ ಎತ್ತಿಕಟ್ಟುತ್ತಿದ್ದಾರೆ. ಮಂಜು ಆಪ್ತೆ ಎನಿಸಿಕೊಂಡ ದಿವ್ಯಾ ಸುರೇಶ್​ ಬಳಿಯೂ ಚಾಡಿ ಹೇಳುವ ಕೆಲಸ ಮಾಡಿದ್ದರು. ಎಲ್ಲರೂ ಒಂದೊಂದು ಐಡೆಂಟಿಟಿ ಹೊಂದಿದ್ದಾರೆ. ಶುಭಾಗೆ ಅವರದ್ದೇ ಆದ ಚಾರ್ಮ್​ ಇದೆ. ಮಹಿಳೆಯರಲ್ಲಿ ನೀನೇ ಸ್ಟ್ರಾಂಗ್​. ಆದರೆ, ನೀನು ಮಂಜುನ ಬಾಲ ಆಗ್ತಾ ಇದೀಯಾ. ನೆರಳಲ್ಲಿ ಬದುಕುಬೇಡ. ನೀನು ಒಬ್ಬರ ಪ್ರಾಪರ್ಟಿ ಆಗಬಾರದು ಎಂದು ಬುದ್ಧಿ ಹೇಳಿದ್ದರು. ಇದಾದ ಬೆನ್ನಲ್ಲೇ ದಿವ್ಯಾ ಇದೇ ಮೊದಲ ಬಾರಿಗೆ ಮಂಜು ಅವರ ವಿರುದ್ಧವಾಗಿ ಮಾತನಾಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಮಂಜುಗೆ ಕಿಚನ್​ ಡಿಪಾರ್ಟ್​ಮೆಂಡ್ ನೀಡಲಾಗಿದೆ. ಹೀಗಾಗಿ, ಪಾತ್ರೆ ತೊಳೆಯಬೇಕಿತ್ತು. ಆದರೆ, ಮಂಜು ಅಡುಗೆ ಮನೆಗೆ ಹೋಗದೆ ಹೊರ ಭಾಗದಲ್ಲಿ ಕುಳಿತು ಸುದ್ದಿ ಹೇಳುತ್ತಾರೆ ನಿಂತಿದ್ದರು. ಅಷ್ಟೇ ಅಲ್ಲ, ನಾನು ವಾಕಿಂಗ್​ ಮುಗಿಸಿ ಬಂದು ತೊಳೆಯುತ್ತೇನೆ ಕಾಯಿರಿ ಎಂದಿದ್ದರು.

ಆದರೆ, ದಿವ್ಯಾ ಕಾದಿಲ್ಲ. ಬದಲಿಗೆ ಅವರು ಪಾತ್ರೆ ತೊಳೆಯುವ ಕೆಲಸ ಮಾಡಿದ್ದಾರೆ. ಹೀಗಾಗಿ ನಾನು ಕಿಚನ್​ ಹೋಗಲ್ಲ ಎಂದಿದ್ದಾರೆ ಮಂಜು. ಈ ವಿಚಾರ ದಿವ್ಯಾ ಅವರ ಸಿಟ್ಟಿಗೆ ಕಾರಣವಾಗಿದೆ. ಇಬ್ಬರ ನಡುವೆಯೂ ಈ ವಿಚಾರಕ್ಕೆ ವಾಗ್ವಾದ ಕೂಡ ಏರ್ಪಟ್ಟಿದೆ. ದಿವ್ಯಾ ಸುರೇಶ್​ ನಗೋಕೆ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ.

ಇದನ್ನೂ ಓದಿ: Divya Uruduga: ಬಿಗ್​ ಬಾಸ್​ ಮನೆಯಲ್ಲಿರುವ ದಿವ್ಯಾ ಉರುಡುಗಗೆ ಪ್ರಾಣ ಬೆದರಿಕೆ!

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್