RRR New Poster: ರಾಮ್ ಚರಣ್ ಜನ್ಮದಿನಕ್ಕೂ ಮೊದಲೇ ಸರ್ಪ್ರೈಸ್ ಗಿಫ್ಟ್
ರಾಮ್ ಚರಣ್ ಹಿಂದೆಂದೂ ಕಾಣಿಸಿಕೊಳ್ಳದ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಲ್ಲು-ಬಾಣ ಹಿಡಿದು ಆಗಸದತ್ತ ರಾಮ್ ಚರಣ್ ಮುಖ ಮಾಡಿದ್ದಾರೆ. ಅವರ ಡಿಫರೆಂಟ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
ಟಾಲಿವುಡ್ ನಟ ರಾಮ್ ಚರಣ್ ಶನಿವಾರ (ಮಾರ್ಚ್ 27) 36ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಜನ್ಮದಿನಕ್ಕೂ ಮೊದಲೇ ಅಭಿಮಾನಿಗಳು ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಹುಟ್ಟುಹಬ್ಬಕ್ಕೂ ಮೊದಲೇ ರಾಮ್ ಚರಣ್ಗೆ ಸರ್ಪ್ರೈಸ್ ಗಿಫ್ಟ್ ಒಂದು ಸಿಕ್ಕಿದೆ. ಆರ್ಆರ್ಆರ್ ಚಿತ್ರದಲ್ಲಿ ರಾಮ್ ಚರಣ್ ಪಾತ್ರ ಹೇಗಿರಲಿದೆ ಎಂಬುದನ್ನು ಚಿತ್ರತಂಡ ಅನಾವರಣ ಮಾಡಿದೆ. ರಾಮ್ ಚರಣ್ ಆರ್ಆರ್ಆರ್ ಸಿನಿಮಾದಲ್ಲಿ ಅಲ್ಲುರಿ ಸೀತಾ ರಾಮರಾಜು ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರ ಪಾತ್ರ ಹೇಗಿರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಹೀಗಾಗಿ ರಾಮ್ ಚರಣ್ ಜನ್ಮದಿನಕ್ಕೆ ಆರ್ಆರ್ಆರ್ ಚಿತ್ರದ ನಿರ್ದೇಶಕ ಎಸ್.ಎಸ್. ರಾಜಮೌಳಿ ಫಸ್ಟ್ ಲುಕ್ ಗಿಫ್ಟ್ ಆಗಿ ನೀಡಿದ್ದಾರೆ. ಇದು ರಾಮ್ ಚರಣ್ ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ.
ರಾಮ್ ಚರಣ್ ಹಿಂದೆಂದೂ ಕಾಣಿಸಿಕೊಳ್ಳದ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಲ್ಲು-ಬಾಣ ಹಿಡಿದು ಆಗಸದತ್ತ ರಾಮ್ ಚರಣ್ ಮುಖ ಮಾಡಿದ್ದಾರೆ. ಅವರ ಡಿಫರೆಂಟ್ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಪೋಸ್ಟರ್ ಅನ್ನು ನಟಿ ಆಲಿಯಾ ಭಟ್, ಎಸ್.ಎಸ್. ರಾಜಮೌಳಿ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಚಿತ್ರದಲ್ಲಿ ರಾಮ್ ಚರಣ್ ಹಾಗೂ ಜೂ.ಎನ್ಟಿಆರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜಮೌಳಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಆಲಿಯಾ ಭಟ್, ಅಜಯ್ ದೇವಗನ್ ಕೂಡ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
View this post on Instagram
View this post on Instagram
ಈ ಮೊದಲು ಜೂ.ಎನ್ಟಿಆರ್ ಲುಕ್ ರಿಲೀಸ್ ಆಗಿತ್ತು. ಕೋಮರಾಮ್ ಭೀಮ್ ಆಗಿ ಜೂ.ಎನ್ಟಿಆರ್ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಆಲಿಯಾ ಜನ್ಮದಿನದ ಅಂಗವಾಗಿ ಸೀತಾ ಪಾತ್ರವನ್ನು ರಾಜಮೌಳಿ ಅನಾವರಣ ಮಾಡಿದ್ದರು.
ಇದನ್ನೂ ಓದಿ: ಆಲಿಯಾ ಭಟ್ ಜನ್ಮದಿನಕ್ಕೆ RRR ನಿರ್ದೇಶಕ ರಾಜಮೌಳಿ ಕಡೆಯಿಂದ ಭರ್ಜರಿ ಗಿಫ್ಟ್! ಫ್ಯಾನ್ಸ್ ಫಿದಾ
Published On - 9:17 pm, Fri, 26 March 21