AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Divya Uruduga: ಬಿಗ್​ ಬಾಸ್​ ಮನೆಯಲ್ಲಿರುವ ದಿವ್ಯಾ ಉರುಡುಗಗೆ ಪ್ರಾಣ ಬೆದರಿಕೆ!

ಮನೆ ಮಂದಿಯೆಲ್ಲರೂ ಮಂಜು ಅವರನ್ನು ಕಾಡಿಸುತ್ತಿದ್ದಾರೆ. ಸಿಕ್ಕ ಸಿಕ್ಕಲ್ಲೆಲ್ಲ ಮಂಜುಗೆ ಕಾಟ ಕೊಡಲಾಗುತ್ತಿದೆ .

Divya Uruduga: ಬಿಗ್​ ಬಾಸ್​ ಮನೆಯಲ್ಲಿರುವ ದಿವ್ಯಾ ಉರುಡುಗಗೆ ಪ್ರಾಣ ಬೆದರಿಕೆ!
ದಿವ್ಯಾ ಉರುಡುಗ
ರಾಜೇಶ್ ದುಗ್ಗುಮನೆ
|

Updated on: Mar 26, 2021 | 9:57 PM

Share

ಬಿಗ್​ ಬಾಸ್​ ಮನೆ ಸೇರಿದ್ಮೇಲೆ ಸ್ಪರ್ಧಿಗಳಿಗೆ ಸೇಫ್​ ಎನ್ನುವುದು ತಲೆಯಲ್ಲಿರುತ್ತದೆ. ಏನೇ ಆದರೂ ಬಿಗ್​ ಬಾಸ್​ ನೋಡಕೊಳ್ಳುತ್ತಾರೆ ಎನ್ನುವ ಭರವಸೆ ಇರುತ್ತದೆ. ಹೀಗಾಗಿ, ಬಿಗ್​ ಬಾಸ್​ ಮನೆ ಸೇರಿರುವ ಸ್ಪರ್ಧಿಗಳು ಇದ್ದಷ್ಟು ದಿನ ಹಾಯಾಗಿ ಕಾಲಕಳೆಯುತ್ತಾರೆ. ಆದರೆ, ಬಿಗ್​ ಬಾಸ್ ಮನೆ ಒಳಗೆ ಇರುವ ದಿವ್ಯಾ ಉರುಡುಗಗೆ ಪ್ರಾಣ ಬೆದರಿಕೆ ಬಂದಿದೆ. ಅದೂ ಮನೆಯಲ್ಲಿರುವ ಸ್ಪರ್ಧಿಯಿಂದಲೇ! ಅಷ್ಟಕ್ಕೂ ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾಗೆ ಪ್ರಾಣ ಬೆದರಿಕೆ ಹಾಕಿದವರು ಯಾರು ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್​ ಬಾಸ್​ ಒಂದು ಟಾಸ್ಕ್​ ನೀಡಿದ್ದರು. ಈ ಟಾಸ್ಕ್​ ಅನುಸಾರ ಮನೆಯಲ್ಲಿ ಅತಿ ಹೆಚ್ಚು ಸೈಲೆಂಟ್​ ಇರುವವರಿಗೆ ಮೈಕ್​ ಹಾಗೂ ಅತಿಯಾಗಿ ಮಾತನಾಡುವವರಿಗೆ ಪ್ಲಾಸ್ಟರ್​ ನೀಡಬೇಕಿತ್ತು. ಅತಿ ಹೆಚ್ಚು ಮಾತಾಡೋದು ಮಂಜು ಎಂದು ಮನೆಯ ಬಹುತೇಕರು ಹೇಳಿದ್ದರು. ಹೀಗಾಗಿ, ಮನೆ ಮಂದಿ ಅತಿ ಹೆಚ್ಚು ಪ್ಲಾಸ್ಟರ್​ ನೀಡಿದ್ದು ಮಂಜುಗೆ. ಇನ್ನು, ಬಿಗ್​ ಬಾಸ್​ ಮನೆಯಲ್ಲಿ ನಾಲ್ಕು ವಾರ ಕಳೆದರೂ ವೈಷ್ಣವಿ ಅಷ್ಟಾಗಿ ಮಾತನಾಡುವುದನ್ನು ಕಲಿತಿಲ್ಲ. ಹೀಗಾಗಿ, ವೈಷ್ಣವಿಗೆ ಎಲ್ಲರೂ ಮೈಕ್​ ನೀಡಿದ್ದರು. ಬಿಗ್​ ಬಾಸ್​ ಧ್ವನಿಯಲ್ಲಿ ಆದೇಶವೊಂದು ಬಂದಿತ್ತು. ಇದರ ಅನುಸಾರ, ಮುಂದಿನ ಆದೇಶ ಬರುವವರೆಗೂ ಮಂಜು ಮಾತನಾಡುವ ಹಾಗಿಲ್ಲ. ಯಾರ ಜತೆಯಾದರೂ ಮಾತನಾಡಬೇಕು ಎಂದರೆ ವೈಷ್ಣವಿ ಮೂಲಕವೇ ಮಾತುಕತೆ ನಡೆಯಬೇಕು ಎಂದು ಬಿಗ್​ ಬಾಸ್​ ಹೇಳಿದ್ದರು.

ಇದೇ ವಿಚಾರ ಇಟ್ಟುಕೊಂಡು ಮನೆ ಮಂದಿಯೆಲ್ಲರೂ ಮಂಜು ಅವರನ್ನು ಕಾಡಿಸುತ್ತಿದ್ದಾರೆ. ಸಿಕ್ಕ ಸಿಕ್ಕಲ್ಲೆಲ್ಲ ಮಂಜುಗೆ ಕಾಟ ಕೊಡಲಾಗುತ್ತಿದೆ. ದಿವ್ಯಾ ಉರುಡುಗ ಕೂಡ ಮಂಜುಗೆ ತೊಂದರೆ ಕೊಟ್ಟಿದ್ದಾರೆ. ಅವರನ್ನು ಮಾತನಾಡಿಸೋಕೆ ಪ್ರಯತ್ನಿಸಿದ್ದಾರೆ. ಆಗ ಮಂಜು ಕಟಕಟನೆ ಹಲ್ಲು ಕಡಿದಿದ್ದಾರೆ. ಅಷ್ಟೇ ಅಲ್ಲ, ನಿಮಗೆಲ್ಲಾ ಐತೆ. ಹಲ್ಲಲ್ಲೇ ಎಲ್ಲವನ್ನೂ ಕಡಿದು ಹಾಕಿ ಬಿಡ್ತೇನೆ ಎಂದು ವೈಷ್ಣವಿ ಮೂಲಕ ಹೇಳಿಸಿದ್ದಾರೆ. ಆಗ ದಿವ್ಯಾ, ಬಿಗ್​ ಬಾಸ್​ ನನಗೆ ಪ್ರಾಣ ಬೆದರಿಕೆ ಇದೆ. ದಯವಿಟ್ಟು ರಕ್ಷಣೆ ನೀಡಿ ಎಂದು ನಕ್ಕಿದ್ದಾರೆ.

ಇದನ್ನೂ ಓದಿ: BBK8: ನಿಧಿ-ಶುಭಾ ಬಿಗ್​ ಬಾಸ್​ ಮನೆಯ ಗಾಸಿಪ್​ ರಾಣಿಯರು! ಮಲಗುವ ಮುನ್ನ ಬರೀ ಇಂಥ ಮಾತುಗಳೇ

‘ಸ್ಕರ್ಟ್​ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್​ ಬಾಸ್​ ಚಂದ್ರಕಲಾ ಬದುಕಿನ ಕಹಿ ಘಟನೆ!