ಸ್ಪರ್ಧಿಗಳ ವಿರುದ್ಧ ಸಿಟ್ಟಿಗೆದ್ದ ಪ್ರಶಾಂತ್​; ಬಿಗ್​ ಬಾಸ್​ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ!

ಈ ವಾರ ಅತೀ ಕಳಪೆ ಪ್ರದರ್ಶನ ನೀಡಿದವರು ಯಾರು ಎಂದು ಕೇಳಲಾಯಿತು. ಇದಕ್ಕೆ ಮನೆ ಮಂದಿಯಲ್ಲಿ ಬಹುತೇಕರು ಪ್ರಶಾಂತ್​ ಹೆಸರನ್ನು ತೆಗೆದುಕೊಂಡರು.

ಸ್ಪರ್ಧಿಗಳ ವಿರುದ್ಧ ಸಿಟ್ಟಿಗೆದ್ದ ಪ್ರಶಾಂತ್​; ಬಿಗ್​ ಬಾಸ್​ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ!
ಪ್ರಶಾಂತ್​ ಸಂಬರಗಿ
Follow us
ರಾಜೇಶ್ ದುಗ್ಗುಮನೆ
| Updated By: guruganesh bhat

Updated on: Mar 27, 2021 | 8:46 AM

ಬಿಗ್​ ಬಾಸ್​ ಮನೆಯಲ್ಲಿ ವಾರದ ಅತಿ ಕಳಪೆ ಪ್ರದರ್ಶನ ನೀಡಿದವರನ್ನು ಜೈಲಿಗೆ ಹಾಕಲಾಗುತ್ತದೆ. ಈ ಮೊದಲು ಬಿಗ್​ ಬಾಸ್​ನ ಸಾಕಷ್ಟು ಸ್ಪರ್ಧಿಗಳು ಬಿಗ್​ ಬಾಸ್​ ಮನೆಯಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದಾರೆ. ಈ ವಾರ ಪ್ರಶಾಂತ್ ಸಂಬರಗಿ ಸರದಿ. ಅವರನ್ನು ಈ ವಾರ ಜೈಲಿಗೆ ಹಾಕಲಾಗಿದೆ. ಅಚ್ಚರಿ ಎಂದರೆ, ತಮ್ಮನ್ನು ಕಳಪೆ ಎಂದು ಘೋಷಣೆ ಮಾಡಿದ ಸ್ಪರ್ಧಿಗಳ ವಿರುದ್ಧ ಪ್ರಶಾಂತ್​ ಸಿಟ್ಟಿಗೆದ್ದಿದ್ದಾರೆ. ಅಷ್ಟೇ ಅಲ್ಲ, ಬಿಗ್​ ಬಾಸ್​ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ವಾರ ಅತೀ ಕಳಪೆ ಪ್ರದರ್ಶನ ನೀಡಿದವರು ಯಾರು ಎಂದು ಕೇಳಲಾಯಿತು. ಇದಕ್ಕೆ ಮನೆ ಮಂದಿಯಲ್ಲಿ ಬಹುತೇಕರು ಪ್ರಶಾಂತ್​ ಹೆಸರನ್ನು ತೆಗೆದುಕೊಂಡರು. ಮಂಜು ಪಾವಗಡ, ದಿವ್ಯಾ ಉರುಡುಗ, ರಘು ಗೌಡ, ವೈಷ್ಣವಿ ಗೌಡ, ಶಮಂತ್​, ಶಂಕರ್​ ಅಶ್ವತ್ಥ್​, ನಿಧಿ ಸುಬ್ಬಯ್ಯ ಹಾಗೂ ಕ್ಯಾಪ್ಟನ್​ ವಿಶ್ವನಾಥ್​ ಅವರು ಕಳಪೆ ಎಂದು ಪ್ರಶಾಂತ್​ ಅವರ ಹೆಸರನ್ನು ತೆಗೆದುಕೊಂಡರು. ಪ್ರಶಾಂತ್​ ಈ ವಾರ ಸರಿಯಾಗಿ ಆಟವಾಡಿಲ್ಲ. ಅವರು ಎಲ್ಲರನ್ನೂ ಡಿಮೋಟ್​ ಮಾಡಿದರು. ಅವರು ಕೂಗಾಟ ನಡೆಸಿದರು ಎಂಬಿತ್ಯಾದಿ ಕಾರಣವನ್ನು ಮನೆ ಮಂದಿ ನೀಡಿದರು.

ಇದನ್ನು ಪ್ರಶಾಂತ್​ ಬಳಿ ಸಹಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಎಲ್ಲರ ವಿರುದ್ಧವೂ ಕೂಗಾಡುತ್ತಾ ಬಿಗ್​ ಬಾಸ್​ ಮನೆ ಜೈಲಿನ ಒಳಗೆ ಹೋದರು. ಎಲ್ಲರೂ ಸೇರಿ ನನ್ನ ವಿರುದ್ಧ ಷಢ್ಯಂತರ ಮಾಡುತ್ತಿದ್ದಾರೆ ಎಂದು ಕೂಗಾಡಿದರು. ಮನೆಯ ಗುಂಪುಗಾರಿಕೆ ಸಹಿಸಿಕೊಳ್ಳಲು ನನ್ನ ಬಳಿ ಆಗುತ್ತಿಲ್ಲ. ನಾನು ಮೌನಿಯಾಗಿರುತ್ತೇನೆ. 24 ಗಂಟೆಗಳ ಜೈಲು ವಾಸದಲ್ಲಿ ಉಪವಾಸ ಮಾಡುತ್ತೇನೆ. ಊಟವನ್ನು ಮಾಡುವುದೇ ಇಲ್ಲ ಎಂದು ಬಿಗ್​ ಬಾಸ್​ ಕ್ಯಾಮಾರ ಬಳಿ ತೆರಳಿ ಪ್ರಶಾಂತ್​ ಹೇಳಿದರು.

ಪ್ರಶಾಂತ್​ ನಡವಳಿಕೆ ಬಿಗ್​ ಬಾಸ್​ ಮನೆಯಲ್ಲಿದ್ದ ಯಾರಿಗೂ ಇಷ್ಟವಾಗಿಲ್ಲ. ಅವರ ವಿರುದ್ಧ ಮನೆ ಮಂದಿ ಕೂಡ ಬೇಸರ ಹೊರಹಾಕಿದ್ದಾರೆ. ಅಲ್ಲದೆ, ಪ್ರಶಾಂತ್ ನೀವು ಊಟ ಮಾಡಬೇಕು ಎಂದು ಎಲ್ಲರನ್ನೂ ಮನ ಒಲಿಸುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: Divya Uruduga: ಬಿಗ್​ ಬಾಸ್​ ಮನೆಯಲ್ಲಿರುವ ದಿವ್ಯಾ ಉರುಡುಗಗೆ ಪ್ರಾಣ ಬೆದರಿಕೆ!

‘ಸ್ಕರ್ಟ್​ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್​ ಬಾಸ್​ ಚಂದ್ರಕಲಾ ಬದುಕಿನ ಕಹಿ ಘಟನೆ!

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್