‘ಸ್ಕರ್ಟ್​ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್​ ಬಾಸ್​ ಚಂದ್ರಕಲಾ ಬದುಕಿನ ಕಹಿ ಘಟನೆ!

Bigg Boss Kannada: ಚಂದ್ರಕಲಾ ಮೋಹನ್​ ಅವರು ತಮ್ಮ ಬದುಕಿನ ಒಂದು ಕಹಿ ಘಟನೆಯನ್ನು ಬಿಗ್​ ಬಾಸ್​ನಲ್ಲಿ ಮೆಲುಕು ಹಾಕಿದ್ದಾರೆ. ಅಪ್ಪನ ಬಗ್ಗೆ ಮಾತನಾಡಿದ ಬಳಿಕ, ಇಂಥ ತಂದೆ ಯಾರಿಗೂ ಇರಬಾರದು ಎಂದು ಕಣ್ಣೀರು ಹಾಕಿದ್ದಾರೆ.

‘ಸ್ಕರ್ಟ್​ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್​ ಬಾಸ್​ ಚಂದ್ರಕಲಾ ಬದುಕಿನ ಕಹಿ ಘಟನೆ!
ಚಂದ್ರಕಲಾ ಮೋಹನ್​
Follow us
ಮದನ್​ ಕುಮಾರ್​
|

Updated on:Mar 26, 2021 | 11:29 AM

ಬಿಗ್​ ಬಾಸ್​ನಲ್ಲಿ ಬರೀ ಟಾಸ್ಕ್​ ಮಾತ್ರವಲ್ಲದೆ ಭಾವನೆಗಳಿಗೂ ಹೆಚ್ಚು ಬೆಲೆ ಇರುತ್ತದೆ. ಬದುಕಿನಲ್ಲಿ ಈವರೆಗೂ ಎಲ್ಲರಿಂದಲೂ ಮುಚ್ಚಿಟ್ಟಿರುವ ರಹಸ್ಯಗಳ ಬಗ್ಗೆ ಹೇಳಿಕೊಳ್ಳಲು ಇತ್ತೀಚೆಗೆ ಬಿಗ್​ ಬಾಸ್​ ಒಂದು ವೇದಿಕೆ ನೀಡಿದರು. ಈ ವೇಳೆ ಹಿರಿಯ ನಟಿ ಚಂದ್ರಕಲಾ ಮೋಹನ್​ ಅವರು ಒಂದು ಕರಾಳ ಘಟನೆಯ ಬಗ್ಗೆ ಮಾತನಾಡಿದರು. ಬಾಲ್ಯದಲ್ಲಿ ತಾವು ಸ್ಕರ್ಟ್​ ಧರಿಸಿ ಮಲಗಿದ್ದಾಗ ಸ್ವಂತ ತಂದೆಯೇ ಕೆಟ್ಟದಾಗಿ ನಡೆದುಕೊಂಡರು ಎಂಬ ಕಹಿ ಸತ್ಯವನ್ನು ಚಂದ್ರಕಲಾ ಬಹಿರಂಗ ಪಡಿಸಿದ್ದಾರೆ.

‘ಈ ವಿಷಯ ಹೇಳೋಕೆ ನನಗೆ ತುಂಬ ಕಷ್ಟ ಆಗುತ್ತದೆ. ಆದರೂ ಪರವಾಗಿಲ್ಲ. ಈ ವೇದಿಕೆಯಲ್ಲಿ ಇದನ್ನು ನಾನು ಮುಚ್ಚಿಟ್ಟುಕೊಂಡರೆ ನನಗೆ ನಾನೇ ಮೋಸ ಮಾಡಿಕೊಂಡಂತೆ ಆಗುತ್ತದೆ. ಅದಕ್ಕಾಗಿ ಹೇಳ್ತಾ ಇದ್ದೀನಿ. ಈ ವಿಚಾರವನ್ನು ನಾನು ನನ್ನ ಹೆತ್ತ ತಾಯಿ ಬಳಿಯೂ ಮಾತನಾಡಿಲ್ಲ. ಈ ವಿಷಯ ತನ್ನ ಮಕ್ಕಳಿಗೆ ಗೊತ್ತೇ ಇಲ್ಲ ಎಂದು ಭವಿಷ್ಯ ನಮ್ಮ ಅಮ್ಮ ಅಂದುಕೊಂಡಿರಬಹುದು. ಚಿಕ್ಕ ವಯಸ್ಸಿನಲ್ಲಿ ನಡೆದ ಘಟನೆ ಇದು’ ಎಂದು ಚಂದ್ರಕಲಾ ಮಾತು ಆರಂಭಿಸಿದರು.

‘ಆಗ ನನಗೆ ಹತ್ತು ವರ್ಷ. ನಮ್ಮ ಅಪ್ಪ ತುಂಬ ಕುಡಿಯುತ್ತಿದ್ದರು. ಕುಡಿಯೋದು ಬಿಟ್ಟು ಆತ ಬೇರೆ ಏನೂ ಮಾಡುತ್ತಿರಲಿಲ್ಲ. ಮಕ್ಕಳ ಮುಂದೆಯೇ ಅವರು ಅಮ್ಮನ ಜೊತೆ ತುಂಬ ಅಸಹ್ಯವಾಗಿ ನಡೆದುಕೊಳ್ತಾ ಇದ್ದರು. ಅದು ನಮಗೂ ತುಂಬ ಚೆನ್ನಾಗಿ ನೆನಪಿದೆ. ನಾನು, ನನ್ನ ಅಕ್ಕ ಹಾಗೂ ಇಬ್ಬರು ತಮ್ಮಂದಿರು ಒಂದೇ ಕಡೆ ಮಲಗುತ್ತಿದ್ವಿ. ಅಕ್ಕ-ನಾನು ಸ್ಕರ್ಟ್​ ಹಾಕಿಕೊಂಡು ಮಲಗುತ್ತಿದ್ವಿ. ಒಂದು ದಿನ ರಾತ್ರಿ ನಮ್ಮ ಅಪ್ಪ ಬೇರೆ ರೀತಿ ವರ್ತಿಸಿದರಂತೆ. ಅದನ್ನು ಈಗ ಹೇಳೋದಕ್ಕೆ ನನಗೆ ತುಂಬ ಬೇಜಾರಾಗುತ್ತದೆ’ ಎಂದು ಚಂದ್ರಕಲಾ ಹೇಳುತ್ತಿದ್ದಂತೆಯೇ ಬಿಗ್​ ಬಾಸ್ ಮನೆಯ ಬೇರೆಲ್ಲ ಸದಸ್ಯರ ಕಣ್ಣುಗಳಲ್ಲಿ ನೀರು ಹರಿಯಲಾರಂಭಿಸಿತು.

‘ನೀವು ಪ್ಯಾಂಟ್​ ಹಾಕಿಕೊಳ್ಳಿ. ಹೆಣ್ಮಕ್ಕಳು ಹಾಗೆಯೇ ಮಲಗಬಾರದು ಎಂದು ಅಮ್ಮ ಹೇಳಿದರು. ಪ್ಯಾಂಟ್​ ಹಾಕಿಕೊಂಡರೆ ನಮಗೆ ನಿದ್ದೆ ಬರುವುದಿಲ್ಲ ಎಂದು ನಾವು ಹಠ ಮಾಡಿದೆವು. ನೀವು ಮಲಗಿಕೊಂಡಾಗ ಬಟ್ಟೆ ತುಂಬ ಮೇಲೆ ಹೋಗುತ್ತದೆ. ನಿಮ್ಮ ಅಪ್ಪ ಸರಿಯಿಲ್ಲ! ಹಾಗಾಗಿ ಪ್ಯಾಂಟ್​ ಹಾಕಿಕೊಳ್ಳಿ ಅಂತ ಅಮ್ಮ ಹೇಳಿದರು. ಇನ್ನು ಯಾವ ಮಟ್ಟಕ್ಕೆ ನಮ್ಮ ಅಪ್ಪ ನಮ್ಮ ಹತ್ರ ನಡೆದುಕೊಂಡಿರಬಹುದು’ ಎಂದು ಚಂದ್ರಕಲಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

‘ಇದರಿಂದ ನಮ್ಮ ತಾಯಿಗೆ ತುಂಬ ಕಷ್ಟ ಆಯಿತು. ಇಂಥ ಕಷ್ಟದ ಪರಿಸ್ಥಿತಿಯನ್ನು ನಾವು ದಾಟಿಕೊಂಡು ಬಂದೆವು. ಆ ಘಟನೆ ನಡೆದ ಬಳಿಕ ನಮ್ಮ ತಂದೆ-ತಾಯಿ ನಡುವೆ ಮತ್ತೆ ಮತ್ತೆ ಗಲಾಟೆ ಆಗುತ್ತಲೇ ಇತ್ತು. ನಮ್ಮ ಅಮ್ಮನಿಗೆ ನಮ್ಮ ಅಪ್ಪ ಬೇಡ ಎಂದು ನಾವೆಲ್ಲ ಮಕ್ಕಳು ಸೇರಿ ನಿರ್ಧಾರ ಮಾಡಿದೆವು. ಅದು ನಮಗೆ ತುಂಬ ಕಷ್ಟವಾದಂತಹ ದಿನ. ಇಷ್ಟು ವರ್ಷಗಳಲ್ಲಿ ನಾನು ಈ ವಿಷಯವನ್ನು ಯಾರ ಹತ್ತಿರವೂ ಬಾಯಿ ಬಿಟ್ಟಿಲ್ಲ. ಇವತ್ತು ಹೇಳಿಕೊಳ್ಳಬೇಕು ಅನಿಸಿತು. ಅಂಥ ತಂದೆ ಪ್ರಪಂಚದಲ್ಲಿ ಯಾವ ಮಕ್ಕಳಿಗೂ ಬೇಡ. ನಮ್ಮ ತಾಯಿಯಂತಹ ತಾಯಿ ಎಲ್ಲ ಮಕ್ಕಳಿಗೂ ಸಿಗಲಿ’ ಎಂದು ಮನ ಕಲಕುವ ನೋವಿನ ಸಂಗತಿಯನ್ನು ಚಂದ್ರಕಲಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Bigg Boss Kannada: ‘ಪ್ರಶಾಂತ್​ ಸಂಬರಗಿ ಕ್ಯಾರೆಕ್ಟರ್​ ಸರಿ ಇಲ್ಲ’! ನಿಧಿ ಸುಬ್ಬಯ್ಯ ಹೊರಿಸಿದ ಈ ಗಂಭೀರ ಆರೋಪಕ್ಕೆ ಕಾರಣ ಏನು?

13ನೇ ವಯಸ್ಸಿಗೆ ಮದುವೆ, 14ಕ್ಕೆ ಮಗು! ಇದು ಬಿಗ್​ ಬಾಸ್​ ಚಂದ್ರಕಲಾ ರಿಯಲ್​ ಲೈಫ್​ ಕಷ್ಟದ ಕಥೆ!

Published On - 11:22 am, Fri, 26 March 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್