AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

13ನೇ ವಯಸ್ಸಿಗೆ ಮದುವೆ, 14ಕ್ಕೆ ಮಗು! ಇದು ಬಿಗ್​ ಬಾಸ್​ ಚಂದ್ರಕಲಾ ರಿಯಲ್​ ಲೈಫ್​ ಕಷ್ಟದ ಕಥೆ!

ಕಿರುತೆರೆಯ ಅನುಭವಿ ಕಲಾವಿದೆ ಚಂದ್ರಕಲಾ ಮೋಹನ್​ ಅವರು ಸದ್ಯ ಬಿಗ್​ ಬಾಸ್​ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ನಿಜ ಜೀವನದ ಘಟನೆಗಳು ತುಂಬಾ ಇಂಟ್ರೆಸ್ಟಿಂಗ್​​ ಆಗಿವೆ.

13ನೇ ವಯಸ್ಸಿಗೆ ಮದುವೆ, 14ಕ್ಕೆ ಮಗು! ಇದು ಬಿಗ್​ ಬಾಸ್​ ಚಂದ್ರಕಲಾ ರಿಯಲ್​ ಲೈಫ್​ ಕಷ್ಟದ ಕಥೆ!
ಬಿಗ್​ ಬಾಸ್​ ಮನೆಯಲ್ಲಿ ಚಂದ್ರಕಲಾ ಮೋಹನ್​
ಮದನ್​ ಕುಮಾರ್​
| Edited By: |

Updated on:Mar 13, 2021 | 7:27 AM

Share

ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದವರು ಚಂದ್ರಕಲಾ ಮೋಹನ್​. ತಮ್ಮ ವಯಸ್ಸಿಗೂ ಮೀರಿದ ಪಾತ್ರಗಳ ಮೂಲಕವೇ ಅವರು ಹೆಚ್ಚಾಗಿ ಗುರುತಿಸಿಕೊಂಡರು. ತಾಯಿ ಮತ್ತು ಅಜ್ಜಿ ಪಾತ್ರಗಳಿಗೆ ಅವರು ಫೇಮಸ್​. ಅಚ್ಚರಿ ಎಂದರೆ ನಿಜ ಜೀವನದಲ್ಲಿ ಅವರು ಮದುವೆ ಆಗಿದ್ದು 13ನೇ ವಯಸ್ಸಿನಲ್ಲಿ!

ಚಂದು ಗೌಡ ನಡೆಸಿಕೊಡುವ ಚಾಟ್​ ಕಾರ್ನರ್​ ಶೋನಲ್ಲಿ ಭಾಗವಹಿಸಿದ್ದ ವೇಳೆ ಚಂದ್ರಕಲಾ ಅವರು ಈ ವಿಚಾರದ ಬಗ್ಗೆ ಮನಬಿಚ್ಚಿ ಮಾತನಾಡಿದ್ದರು. ‘ನಾನು 13ನೇ ವಯಸ್ಸಿಗೆ ಮದುವೆ ಆದೆ. 14ನೇ ವಯಸ್ಸಿಗೆ ಮೊದಲ ಮಗುವಿಗೆ ಜನ್ಮ ನೀಡಿದೆ. 19ನೇ ವರ್ಷಕ್ಕೆ 2 ಮಕ್ಕಳು ಆಗಿ ಆಪರೇಷನ್ ಕೂಡ ಆಯಿತು. ಆ ಸಮಯದಲ್ಲಿ ಮಕ್ಕಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದು ಕೂಡ ನನಗೆ ಗೊತ್ತಾಗುತ್ತಿರಲಿಲ್ಲ’ ಎಂದು ಆ ದಿನಗಳನ್ನು ನೆನಪಿಸಿಕೊಂಡರು ಚಂದ್ರಕಲಾ.

ಅಷ್ಟು ಚಿಕ್ಕ ವಯಸ್ಸಿನಲ್ಲಿ ಮದುವೆ ಆದ ಕಾರಣ ತಾವು ತಾಯಿ ಎಂಬ ಭಾವನೆಯೇ ಅವರಿಗೆ ಬರುತ್ತಿರಲಿಲ್ಲ. ಗಂಡ ಫೋನ್​ ಮಾಡಿದಾಗ ಯಾವುದೇ ಫೀಲಿಂಗ್​ ಇಲ್ಲದೆ ಮಾತನಾಡುತ್ತಿದ್ದರಂತೆ. ಅವರಿಗೆ 22ನೇ ಪ್ರಾಯ ಆದಾಗ ಮಕ್ಕಳು, ಪತಿ ಮತ್ತು ಸಂಸಾರದ ಬಗ್ಗೆ ತಿಳಿವಳಿಕೆ ಬಂತು. ಈ ಎಲ್ಲ ವಿವರಗಳನ್ನು ಚಂದ್ರಕಲಾ ಹೇಳಿದ್ದು ಕೇಳಿ ವೀಕ್ಷಕರು ಅಚ್ಚರಿ ಪಡುತ್ತಾರೆ.

ವಿಶೇಷ ಏನೆಂದರೆ, ‘ಪುಟ್ಟ ಗೌರಿ ಮದುವೆ’ ಸೀರಿಯಲ್​ನಲ್ಲಿ ಚಂದ್ರಕಲಾ ಅವರು ಅಜ್ಜಿಯ ಪಾತ್ರ ಮಾಡಿದ್ದರು. ಆ ಧಾರಾವಾಹಿ ಕೂಡ ಬಾಲ್ಯ ವಿವಾಹದ ಕಥೆಯನ್ನು ಹೊಂದಿತ್ತು. ‘ಪುಟ್ಟಗೌರಿ ಮದುವೆ ಶೂಟಿಂಗ್​ ಶುರು ಆಗುವುದಕ್ಕೂ ಮುನ್ನ ನನಗೆ ಆ ಸೀರಿಯಲ್​​ನ ಕಾನ್ಸೆಪ್ಟ್​ ಏನು ಅಂತ ಗೊತ್ತಿರಲಿಲ್ಲ. ಶೂಟಿಂಗ್​ ಮಾಡುತ್ತ ಮಾಡುತ್ತ ನನ್ನ ಕಥೆಯನ್ನೇ ಕದ್ದು ಯಾರಾದರೂ ಸೀರಿಯಲ್​ ಮಾಡುತ್ತಿದ್ದಾರಾ ಅಂತ ಶಾಕ್​ ಆಗಿದ್ದೆ. ಕೆಲವು ಸನ್ನಿವೇಶದಲ್ಲಿ ತುಂಬಾ ಅತ್ತಿದ್ದೇನೆ. ತುಂಬ ಚಿಕ್ಕ ವಯಸ್ಸಿಗೆ ಮದುವೆ ಮಾಡಿಕೊಂಡಾಗ ಯಾವುದೇ ಫೀಲಿಂಗ್​ ಇರಲ್ಲ. ನಾನು ಒಂದಷ್ಟು ವರ್ಷ ಹಾಗೆಯೇ ಇದ್ದೆ’ ಎಂಬುದು ಚಂದ್ರಕಲಾ ಮಾತುಗಳು.

ಇನ್ನು, ಚಂದ್ರಕಲಾ ಅವರು ಮೊದಲು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 1998ರಲ್ಲಿ. ಡಿಡಿ 1 ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ‘ತೇಲಿ ಹೋದ ನೌಕೆ’ ಧಾರಾವಾಹಿಯಲ್ಲಿ 18ರ ಪ್ರಾಯದ ಹುಡುಗಿಯ ತಾಯಿ ಪಾತ್ರದಲ್ಲಿ ಅವರು ಕಾಣಿಸಿಕೊಂಡರು. ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ನಟಿ ಆದ್ದರಿಂದ ಅವರು ಚಿಕ್ಕ ವಯಸ್ಸಿನಲ್ಲಿಯೇ ತಾಯಿ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದರು. ಆದರೆ ನಂತರದ ದಿನಗಳಲ್ಲಿ ಅದೇ ರೀತಿಯ ಪಾತ್ರಗಳಿಗೆ ಅವರನ್ನು ಬ್ರ್ಯಾಂಡ್​ ಮಾಡಲಾಯಿತು!

‘ಎಂಥ ಪರಿಸ್ಥಿತಿಯಲ್ಲೂ ನಾನು ಒಪ್ಪಿಕೊಂಡ ಕೆಲಸವನ್ನು ಬಿಡಲ್ಲ. ಮನೆಯಲ್ಲಿ ಯಾರಾದರೂ ಸತ್ತು ಹೋಗಿದ್ದರೂ ಕೂಡ ಶೂಟಿಂಗ್​ ಮುಗಿಸಿಕೊಂಡು ಬಂದು ಕಾರ್ಯ ಮಾಡೋಣ ಅನ್ನೋ ಮನಸ್ಥಿತಿ ನನ್ನದು. ನಾಳೆ ಹೊಸ ಪ್ರಾಜೆಕ್ಟ್​ಗೆ ಹೋಗುತ್ತೇನೆ ಎಂದರೆ ಈಗಲೂ ಹಿಂದಿನ ರಾತ್ರಿ ನನಗೆ ನಿದ್ದೆ ಬರಲ್ಲ’ ಎಂದು ಕೆಲಸದ ಬಗ್ಗೆ ಈಗಲೂ ತಮಗೆ ಇರುವ ಹಸಿವಿನ ಬಗ್ಗೆ ಚಂದ್ರಕಲಾ ಹೇಳಿಕೊಂಡರು.

ಇದನ್ನೂ ಓದಿ: Bigg Boss Kannada: ಮನುಷ್ಯತ್ವ ಮರೆತರಾ ಬಿಗ್​ ಬಾಸ್​ ಸ್ಪರ್ಧಿಗಳು? ಎರಡೇ ವಾರಕ್ಕೆ ಅಸಲಿ ಮುಖಗಳು ಬಹಿರಂಗ!

Bigg Boss Kannada: ಅಸಭ್ಯ ಪದಗಳಿಂದ ಬೈಯ್ದುಕೊಳ್ಳುವ ಮಟ್ಟಕ್ಕೆ ಇಳಿದಿದ್ದು ಏಕೆ ಬಿಗ್​ ಬಾಸ್​ ಸ್ಪರ್ಧಿಗಳು?

Published On - 7:27 am, Sat, 13 March 21

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ