India vs England: ಹಾರ್ದಿಕ್ ಪಾಂಡ್ಯ ಹೊಡೆತ ಕಂಡು ಬೆರಗಾಗಿರುವ ಐಸಿಸಿ ಅದಕ್ಕೊಂದು ಹೆಸರು ಕೊಡಿ ಅಂತ ಕೇಳಿದೆ!

ಆದರೆ, ಪಾಂಡ್ಯ ಆಡಿದ ಶಾಟ್ ಮಾತ್ರ ಬಣ್ಣನೆಗೆ ಸಿಗದಂಥಧ್ದು. ಆ ಸನ್ನಿವೇಶ ಸೃಷ್ಟಿಯಾಗಿದ್ದು 15ನೇ ಓವರ್​ನಲ್ಲಿ ಮತ್ತು ಅದನ್ನು ಬೌಲ್ ಮಾಡಿದ್ದು ಇಂಗ್ಲೆಂಡ್​ನ ಆಲ್​​ರೌಂಡರ್ ಬೆನ್ ಸ್ಟೋಕ್ಸ್. ಆ ವಿಚಿತ್ರವಾದ ಶಾಟ್​ ಆಡುವುದಕ್ಕಿಂತ ಮೊದಲಿನ ಎಸೆತವನ್ನು ಪಾಂಡ್ಯ ಸಿಕ್ಸರ್​ಗೆ ಎತ್ತಿದ್ದರು

India vs England: ಹಾರ್ದಿಕ್ ಪಾಂಡ್ಯ ಹೊಡೆತ ಕಂಡು ಬೆರಗಾಗಿರುವ ಐಸಿಸಿ ಅದಕ್ಕೊಂದು ಹೆಸರು ಕೊಡಿ ಅಂತ ಕೇಳಿದೆ!
ಹಾರ್ದಿಕ್ ಪಾಂಡ್ಯ
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ಪೃಥ್ವಿಶಂಕರ

Updated on:Mar 13, 2021 | 10:37 AM

ಇಂಗ್ಲೆಂಡ್​ ವಿರುದ್ಧ ಇಂದು ಅಹಮದಾಬಾದಿನಲ್ಲಿ ಶುರುವಾದ ಟಿ20 ಕ್ರಿಕೆಟ್​ ಸರಣಿಯಲ್ಲಿ ಭಾರತ ನಿರಾಶಾದಾಯಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು ನಿಜ. ಆದರೆ, ಮಿಡ್ಲ್ ಆರ್ಡರ್ ಬ್ಯಾಟ್ಸಮನ್ ಹಾರ್ದಿಕ್ ಪಾಂಡ್ಯ ಅವರು ಆಡಿದ ಒಂದು ಹೊಡೆತ ಕ್ರಿಕೆಟ್​ ಪ್ರೇಮಿಗಳಿಗೆ ದಿಗಿಲು ಮೂಡಿಸುವ ಜೊತೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್​ ಸಹ ಪ್ರತಿಕ್ರಿಯಿಸುವಂಥ ಸಂದರ್ಭ ಸೃಷ್ಟಿಸಿದೆ. ಭಾರತದ ವಿಕೆಟ್​ಕೀಪರ್/ಬ್ಯಾಟ್ಸ್​ಮನ್ ರಿಷಭ್ ಪಂತ್ ವೇಗದ ಬೌಲರ್​ ಜೊಫ್ರಾ ಆರ್ಚರ್​ಗೆ ರಿವರ್ಸ್ ಸ್ಕೂಪ್ ಹೊಡೆತದ ಮೂಲಕ ಸಿಕ್ಸರ್​ ಬಾರಿಸಿ ದಿಟ್ಟತನ ಪ್ರದರ್ಶಿಸಿದರು.

ಆದರೆ, ಪಾಂಡ್ಯ ಆಡಿದ ಶಾಟ್ ಮಾತ್ರ ಬಣ್ಣನೆಗೆ ಸಿಗದಂಥಧ್ದು. ಆ ಸನ್ನಿವೇಶ ಸೃಷ್ಟಿಯಾಗಿದ್ದು 15ನೇ ಓವರ್​ನಲ್ಲಿ ಮತ್ತು ಅದನ್ನು ಬೌಲ್ ಮಾಡಿದ್ದು ಇಂಗ್ಲೆಂಡ್​ನ ಆಲ್​​ರೌಂಡರ್ ಬೆನ್ ಸ್ಟೋಕ್ಸ್. ಆ ವಿಚಿತ್ರವಾದ ಶಾಟ್​ ಆಡುವುದಕ್ಕಿಂತ ಮೊದಲಿನ ಎಸೆತವನ್ನು ಪಾಂಡ್ಯ ಸಿಕ್ಸರ್​ಗೆ ಎತ್ತಿದ್ದರು. ನಾವು ಚರ್ಚಿಸುತ್ತಿರುವ ನಿರ್ದಿಷ್ಟವಾದ ಎಸೆತವನ್ನು ಸ್ಟೋಕ್ಸ್ ಶಾರ್ಟ್​ ಆಗಿ ಪಿಚ್​ ಮಾಡಿದರು. ಪ್ರಾಯಶಃ ಇದನ್ನು ನಿರೀಕ್ಷಿಸಿದ್ದ ಬಲಗೈ ಬ್ಯಾಟ್ಸ್​ಮನ್ ಪಾಂಡ್ಯ ಚೆಂಡಿನ ಮೇಲಿನ ತಮ್ಮ ದೃಷ್ಟಿಯನ್ನು ಸರಿಸಿ ಡಕ್ ಮಾಡಿದರಾದರೂ ತಮ್ಮ ಬ್ಯಾಟನ್ನು ಮಾತ್ರ ಚೆಂಡಿನ ಲೈನಲ್ಲೇ ಇಟ್ಟರು. ಸ್ಟೋಕ್ಸ್ ಅವರ ಎಸೆತ ಅವರ ಬ್ಯಾಟಿಗೆ ತಾಕಿ ವಿಕೆಟ್ ಕೀಪರ್ ತಲೆ ಮೇಲಿಂದ ಬೌಂಡರಿಗೆ ಚಿಮ್ಮಿತು!

ಹೊಡೆತವನ್ನು ನೋಡಿ ಬೆರಗಾಗಿರುವ ಐಸಿಸಿ, ಈ ಶಾಟ್​ಗೊಂದು ಹೆಸರು ನೀಡಿ ಅಂತ ಟ್ವೀಟ್ ಮಾಡಿದೆ.

ದುರದೃಷ್ಟವಶಾತ್ ಉತ್ತಮ ಫಾರ್ಮ್​ನಲ್ಲಿ ಕಾಣುತ್ತಿದ್ದ ಪಾಂಡ್ಯ ಬಹಳ ಹೊತ್ತು ಕ್ರೀಸಿನಲ್ಲಿ ಉಳಿಯದೆ ಕೇವಲ 19ರನ್​ ಗಳಿಸಿ ವೇಗದ ಬೌಲರ್ ಕ್ರಿಸ್​ ಜೋರ್ಡನ್​ಗೆ ವಿಕೆಟ್ ಒಪ್ಪಿಸಿದರು. ಭಾರತದ ಪರ ಶ್ರೇಯಸ್​ ಅಯ್ಯರ್​ (67, 48 ಎಸೆತ 8 ಬೌಂಡರಿ,1 ಸಿಕ್ಸ್) ಮಾತ್ರ ಚೆನ್ನಾಗಿ ಆಡಿದರು.

ಟೆಸ್ಟ್​ ಸರಣಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಭಾರತೀಯ ತಂಡದ ಬ್ಯಾಟ್ಸ್​ಮನ್​ಗಳು ಉಡಾಫೆ ಮನೋಭಾವ ಪ್ರದರ್ಶಿಸಿ ವಿಕೆಟ್​ ಕಳೆದುಕೊಂಡರು. ಇದನ್ನು ಆರಂಭಿಸಿದ್ದು ಖುದ್ದು ಟೀಮ್ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ. ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಅವರ ಎಸೆತವೊಂದನ್ನು ಆಫ್​ಸೈಡ್​ನಲ್ಲಿ ಎಳೆದು ಬಾರಿಸುವ ಪ್ರಯತ್ನ ಮಾಡಿದ ಕೊಹ್ಲಿ ಮಿಡ್​ ಆಫ್​ನಲ್ಲಿದ್ದ ಕ್ರಿಸ್ ಜೊರ್ಡನ್​​ಗೆ ಸುಲಭ ಕ್ಯಾಚ್​ ನೀಡಿದರು. ಅವರ ಹೊಡೆತ ನೆಟ್ಸ್​ನಲ್ಲಿ ಕ್ಯಾಚಿಂಗ್ ಅಭ್ಯಾಸ ಮಾಡಿಸಿದಂತಿತ್ತು.

ಮೊದಲ ಪಂದ್ಯವನ್ನು ಪ್ರವಾಸಿ ತಂಡ 8 ವಿಕೆಟ್​ಗಳಿಂದ ಸುಲಭವಾಗಿ ಗೆದ್ದಿದೆ. ಎರಡನೇ ಪಂದ್ಯ ಇದೇ ಮೈದಾನದಲ್ಲಿ ರವಿವಾರದಂದು ನಡೆಯಲಿದೆ.

ಇದನ್ನೂ ಓದಿ: India vs England: ನಾಲ್ಕನೇ ಕ್ರಮಾಂಕದಲ್ಲಿ 360 ಡಿಗ್ರೀ ಕ್ರಿಕೆಟರ್ ಸೂರ್ಯಕುಮಾರ್ ಯಾದವ್​ರನ್ನು ಆಡಿಸುವುದು ಸೂಕ್ತ: ಬ್ರಾಡ್ ಹಾಗ್

Published On - 10:57 pm, Fri, 12 March 21

ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ