India vs England: ನಾಲ್ಕನೇ ಕ್ರಮಾಂಕದಲ್ಲಿ 360 ಡಿಗ್ರೀ ಕ್ರಿಕೆಟರ್ ಸೂರ್ಯಕುಮಾರ್ ಯಾದವ್ರನ್ನು ಆಡಿಸುವುದು ಸೂಕ್ತ: ಬ್ರಾಡ್ ಹಾಗ್
ಈ ಸರಣಿಗೆ ಭಾರತೀಯ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿರುವ ಟೀಮನ್ನು ನೋಡಿದ್ದೇಯಾದರೆ, 4ನೇ ಕ್ರಮಾಂಕದಲ್ಲಿ ಆಡಲು ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಷನ್ ಸಹ ಉಮೇದುವಾರರಾಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಗ್ ಅವರ ದೃಷ್ಟಿಯಲ್ಲಿ ಈ ಸ್ಥಾನಕ್ಕೆ ಮುಂಬೈನ ಸೂರ್ಯಕುಮಾರ ಯಾದವ್ ಬೇರೆಯವರಿಗಿಂತ ಜಾಸ್ತಿ ಸೂಟ್ ಆಗುತ್ತಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದಿನಿಂದ (ಶುಕ್ರವಾರ) ಮೊಟೆರಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶುರುವಾಗಲಿರುವ5-ಟಿ20ಪಂದ್ಯಗಳ ಸರಣಿಯಲ್ಲಿ ಅತಿಥೇಯ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ತಂಡದ ಇನ್ನಿಂಗ್ಸ್ ಯಾರು ಆರಂಭಿಸಲಿದ್ದಾರೆ ಅನ್ನುವುದನ್ನು ಈಗಾಗಲೇ ನಿರ್ಧಸಿರಬಹುದು. ಹಾಗೆಯೇ ಮೂರನೇ ಕ್ರಮಾಂಕದಲ್ಲಿ ಕೊಹ್ಲಿ ಆಡುವುದು ಶತಸಿದ್ಧ. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಯಾರನ್ನು ಆಡಿಸಬೇಕೆನ್ನುವುದು ಟೀಮ್ ಮ್ಯಾನೇಜ್ಮೆಂಟ್ಗೆ ದೊಡ್ಡ ತಲೆನೋವಾಗಿದೆ.
ಸಾಮಾನ್ಯವಾಗಿ, ಈ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡುತ್ತಾರೆ ಮತ್ತು ಇಂದಿನ ಪಂದ್ಯದಲ್ಲೂ ಅವರೇ ಆಡಿದರೆ ಆಶ್ಚರ್ಯಪಡಬೇಕಿಲ್ಲ. ಆದರೆ, ಈ ಸರಣಿಗೆ ಭಾರತೀಯ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿರುವ ಟೀಮನ್ನು ನೋಡಿದ್ದೇಯಾದರೆ, 4ನೇ ಕ್ರಮಾಂಕದಲ್ಲಿ ಆಡಲು ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಷನ್ ಸಹ ಉಮೇದುವಾರರಾಗಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಗ್ ಅವರ ದೃಷ್ಟಿಯಲ್ಲಿ ಈ ಸ್ಥಾನಕ್ಕೆ ಮುಂಬೈನ ಸೂರ್ಯಕುಮಾರ ಯಾದವ್ ಬೇರೆಯವರಿಗಿಂತ ಜಾಸ್ತಿ ಸೂಟ್ ಆಗುತ್ತಾರೆ.
ತಮ್ಮ ಯೂಟ್ಯೂಬ್ ಚ್ಯಾನೆಲ್ನಲ್ಲಿ ಯಾದವ್ ಬಗ್ಗೆ ಮಾತಾಡಿರುವ ಬ್ರಾಡ್, ‘ನಿಸಂದೇಹವಾಗಿ 4ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಆಡಬೇಕು. ಅವರು ಅಕ್ರಮಣಕಾರಿ ಆಟಗಾರರಾಗಿರುವ ಜೊತೆಗೆ 360 ಡಿಗ್ರೀ ಕ್ರಿಕೆಟರ್ ಆಗಿದ್ದಾರೆ. ಈ ಪ್ರಚಂಡ ಪ್ರತಿಭಾವಂತ ಆಟಗಾರನಿಗೆ ಬೌಲ್ ಮಾಡುವುದು ಕಷ್ಟ,’ ಎಂದು ಹೇಳಿದ್ದಾರೆ.
ಟಿ20 ಪಂದ್ಯಗಳಿಗೆ ಬೌಲರ್ಗಳ ಆಯ್ಕೆಯೂ ಭಾರತದ ಟೀಮ್ ಮ್ಯಾನೇಜ್ಮೆಂಟ್ಗೆ ತಲೆನೋವಾಗಬಹುದು. ಮೊಟೆರಾ ಪಿಚ್ ಸಂಪೂರ್ಣವಾಗಿ ಸ್ಪಿನ್ನರ್ಗಳಿಗೆ ನೆರವಾಗಿದ್ದು ಎಲ್ಲರಿಗೂ ಗೊತ್ತಿದೆ. ಭಾರತದ ರವಿಚಂದ್ರನ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಗೊಂಚಲುಗಳಲ್ಲಿ ವಿಕೆಟ್ ಪಡೆದರು. ಟಿ20 ಕ್ರಿಕೆಟ್ಗೆ ಪಿಚ್ ಭಿನ್ನವಾಗಿರಬಹುದು. ಯಾಕೆಂದರೆ ಸಾಮಾನ್ಯವಾಗಿ ಈ ಆವೃತ್ತಿಯ ಪಂದ್ಯಗಳಿಗಾಗಿ ಬ್ಯಾಟ್ಸ್ಮನ್ಗಳಿಗೆ ಸ್ವರ್ಗ ಎನಿಸುವಂಥ ಪಿಚ್ಗಳನ್ನು ತಯಾರಿಸುತ್ತಾರೆ. ಹಾಗಾದರೆ, ಭಾರತ ಯಾವ ಬೌಲಿಂಗ್ ಕಾಂಬಿನೇಷನ್ ಜೊತೆ ಮೈದಾನಕ್ಕಿಳಿಯಲಿದೆ? ಟಿ20 ಪಂದ್ಯಗಳಲ್ಲೂ ಮೂವರು ಸ್ಪಿನ್ನರ್ಗಳು ಆಡಬಹುದೆ ಎನ್ನುವುದು ಕುತೂಹಲಕಾರಿ ವಿಷಯವಾಗಿದೆ. ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ತಂಡಕ್ಕೆ ಆರಿಸಲಾಗಿದೆ, ಅವರಿಗೆ ಆಡುವ ಅವಕಾಶ ಸಿಗಬಹುದೇ? ಅಥವಾ ಈ ಫಾರ್ಮಾಟ್ನಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ಬಂದಿರುವ ದೀಪಕ್ ಚಹರ್ ಅವರನ್ನೇ ಮುಂದುವರಿಸಲಾಗುವುದೇ?
ಈ ಸಂದೇಹಗಳನ್ನು ನಿವಾರಿಸುವ ಪ್ರಯತ್ನವನ್ನು ಬ್ರಾಡ್ ಮಾಡಿದ್ದಾರೆ.
‘ವಾಷಿಂಗ್ಟನ್ ಸುಂದರ್ ಮತ್ತು ಯುಜ್ವೇಂದ್ರ ಚಹಲ್ ಕಡಿಮೆ ಎತ್ತರದ ಬೌಲರ್ಗಳಾಗಿದ್ದಾರೆ, ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ಗಿಂತ ಅವರಿಬ್ಬರೂ ಕುಳ್ಳರು. ಈ ಹಿನ್ನೆಲೆಯಲ್ಲಿ ಇಂಡಿಯ ಮೂವರು ಸ್ಪಿನ್ನರ್ಗಳೊಂದಿಗೆ ಕಣಕ್ಕಿಳಿಯುವ ನಿರ್ಧಾರ ಮಾಡಿದರೆ ನನ್ನ ಆಯ್ಕೆ ಪಟೇಲ್ ಆಗಲಿದ್ದಾರೆ,’ ಎಂದು ಬ್ರಾಡ್ ಹೇಳಿದ್ದಾರೆ.
‘ಇಂಗ್ಲಿಷ್ ಆಟಗಾರರು ಪಟೇಲ್ ವಿರುದ್ಧ ಸ್ವೀಪ್ ಶಾಟ್ ಆಡುವ ಪ್ರಯತ್ನ ಮಾಡಲಿಲ್ಲ. ಹಾಗಾಗಿ ಅವರನ್ನು ಆಡಿಸುವುದೇ ಸೂಕ್ತ. ಇಂಡಿಯಾ ಮೂವರು ಸ್ಪಿನ್ನರ್ಗಳೊಂದಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಮೂರನೇ ಸೀಮರ್ ಅಗಿ ಉಪಯೋಗಿಸಿದರೆ ಚೆನ್ನಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ,’ ಎಂದು ಬ್ರಾಡ್ ಹೇಳಿದ್ದಾರೆ.
ಇದನ್ನೂ ಓದಿ: India vs England: ಮೊದಲ T20 ಪಂದ್ಯದಲ್ಲಿ ರೋಹಿತ್- ರಾಹುಲ್ ಆರಂಭಿಕರಾಗಿ ಕಣಕ್ಕೆ.. ಕೊಹ್ಲಿಯ ಈ ನಿರ್ಧಾರಕ್ಕೆ ಕಾರಣವೇನು?
Published On - 8:08 pm, Fri, 12 March 21