Sign In

By signing in or creating an account, you agree with Associated Broadcasting Company's Terms & Conditions and Privacy Policy.

BCCI ಫಿಟ್ನೆಸ್‌ ಪರೀಕ್ಷೆಯಲ್ಲಿ ವರುಣ್ ಚಕ್ರವರ್ತಿ ಫೇಲ್​.. ಯುವ ಆಟಗಾರರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕ್ಯಾಪ್ಟನ್​ ಕೊಹ್ಲಿ

ಶ್ರೇಷ್ಠ ಮಟ್ಟದ ಫಿಟ್ನೆಸ್‌ ಇದ್ದರೆ ಮಾತ್ರ ಇಲ್ಲಿ ಅವಕಾಶ. ಟೀಂ ಇಂಡಿಯಾವನ್ನು ಪ್ರತಿನಿಧಿಸಲು ಬೇಕಿರುವ ಫಿಟ್ನೆಸ್‌ ಹೊಂದುವುದು ಪ್ರತಿಯೊಬ್ಬ ಆಟಗಾರನ ಕರ್ತವ್ಯ. ಇದರಲ್ಲಿ ರಿಯಾಯಿತಿ ಯಾರಿಗೂ ಸಿಗುವುದಿಲ್ಲ.

BCCI ಫಿಟ್ನೆಸ್‌ ಪರೀಕ್ಷೆಯಲ್ಲಿ ವರುಣ್ ಚಕ್ರವರ್ತಿ ಫೇಲ್​.. ಯುವ ಆಟಗಾರರಿಗೆ ಖಡಕ್ ವಾರ್ನಿಂಗ್ ಕೊಟ್ಟ ಕ್ಯಾಪ್ಟನ್​ ಕೊಹ್ಲಿ
ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on: Mar 12, 2021 | 5:35 PM

ಭಾರತೀಯ ಕ್ರಿಕೆಟ್ ತಂಡದಲ್ಲಿ ಪ್ರವೇಶ ಪಡೆಯಬೇಕು ಎಂಬುದು ಪ್ರತಿಯೊಬ್ಬ ಕ್ರಿಕೆಟಿಗನ ಮಹದಾಸೆಯಾಗಿರುತ್ತದೆ. ಅದಕ್ಕಾಗಿ ಯುವ ಆಟಗಾರರು ದೇಶಿ ಕ್ರಿಕೆಟ್​ನಲ್ಲಿ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಆದರೆ ಟೀಂ ಇಂಡಿಯಾಕ್ಕೆ ಪ್ರವೇಶ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಆಟಗಾರರು ತಂಡಕ್ಕೆ ಸೇರ್ಪಡೆಗೊಳ್ಳಬೇಕೆಂದರೆ, ಬಿಸಿಸಿಐ ರೂಪಿಸಿರುವ ಕೆಲವು ಫಿಟ್ನೆಸ್‌ ಪರೀಕ್ಷೆಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು. ಫಿಟ್ನೆಸ್‌ಗೆ ನಿಗದಿಪಡಿಸಿದ ಮಾನದಂಡಗಳಲ್ಲಿ ವಿಫಲವಾದ ಬಳಿಕ, ಯುವರಾಜ್ ಸಿಂಗ್ ಅವರಂತಹ ಅನುಭವಿ ಆಟಗಾರರನ್ನು ಸಹ ತಂಡದಿಂದ ಕೈಬಿಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ತಂಡಕ್ಕೆ ಸೇರಬೇಕೆನ್ನುವ ಹೊಸ ಆಟಗಾರನಿಗೆ ಫಿಟ್ನೆಸ್‌ ಪರೀಕ್ಷೆ ಬಹಳ ಮುಖ್ಯವಾಗುತ್ತದೆ.

ವಿರಾಟ್ ಕೊಹ್ಲಿ ನಿರಾಶೆಗೆ ಕಾರಣವಾಗಿದೆ.. ಇತ್ತೀಚಿಗೆ ನಡೆದ ಫಿಟ್ನೆಸ್‌ ಪರೀಕ್ಷೆಯಲ್ಲಿ ಸ್ಪಿನ್ನರ್ ವರುಣ್ ಚಕ್ರವರ್ತಿ ಉತ್ತೀರ್ಣರಾಗಲು ವಿಫಲರಾಗಿದ್ದರೂ ಸಹ, ಇಂದಿನಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಟಿ 20 ಸರಣಿಗೆ ಸೆಲೆಕ್ಟರ್‌ಗಳು ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಆದರಿಂದ ಈ ಇಡೀ ಘಟನೆ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ನಿರಾಶೆಗೆ ಕಾರಣವಾಗಿದೆ. ಹೀಗಾಗಿ ಕೊಹ್ಲಿ ತಂಡದಲ್ಲಿ ಸ್ಥಾನ ಪಡೆಯಲು ತವಕಿಸುತ್ತಿರುವ ಎಲ್ಲ ಆಟಗಾರರಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಟೀಂ ಇಂಡಿಯಾ ಪ್ರವೇಶಿಸಲು ಆಟಗಾರರಿಗೆ ಫಿಟ್ನೆಸ್‌ ಬಹಳ ಮುಖ್ಯವಾದ ಅಂಶವಾಗಿದೆ. ವಿಶ್ವದ ಅತ್ಯುತ್ತಮ ತಂಡ ಎಂಬ ಹೆಗ್ಗಳಿಕೆ ಪಡೆದಿರುವ ಟೀಂ ಇಂಡಿಯಾಕ್ಕೆ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಫಿಟ್ನೆಸ್‌ಗೆ ಸಂಬಂಧಿಸಿದಂತೆ ಕಠಿಣ ಮಾನದಂಡಗಳನ್ನು ನಿಗದಿಪಡಿಸಿದೆ. ಇದರ ಅಡಿಯಲ್ಲಿ, ಪ್ರತಿಯೊಬ್ಬ ಆಟಗಾರನು ಯೋ-ಯೋ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.

ಹಾಗೆಯೇ, ಎರಡು ಕಿಲೋಮೀಟರ್ ಓಟವನ್ನು ಎಂಟೂವರೆ ನಿಮಿಷಗಳಲ್ಲಿ ಪೂರ್ಣಗೊಳಿಸುವ ಹೊಸ ಪರೀಕ್ಷೆಯನ್ನು ಇತ್ತೀಚೆಗೆ ಸೇರಿಸಿದೆ. ಯೋ-ಯೋ ಪರೀಕ್ಷೆಯ 20 ಅಂಕಗಳಲ್ಲಿ ಕನಿಷ್ಠ 17.1 ಅಂಕಗಳನ್ನು ಗಳಿಸಬೇಕಾಗಿದೆ. ಆಟಗಾರರು ಈ ಎರಡು ಪರೀಕ್ಷೆಗಳಲ್ಲಿ ಯಾವುದಾದರೂ ಒಂದರಲ್ಲಾದರೂ ಉತ್ತೀರ್ಣರಾಗುವುದು ಮುಖ್ಯವಾಗಿರುತ್ತದೆ.

ಟೀಂ ಇಂಡಿಯಾಕ್ಕೆ ಫಿಟ್ನೆಸ್‌ ಇರುವ ಆಟಗಾರರು ಬೇಕು ಟೀಂ ಇಂಡಿಯಾ ಪರ ಆಡುವ ಸಲುವಾಗಿ ನಿಗದಿ ಪಡಿಸಲಾಗಿರುವ ಗುಣಮಟ್ಟದ ಪರೀಕ್ಷೆಗಳ ಕುರಿತಾಗಿ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಶ್ರೇಷ್ಠ ಮಟ್ಟದ ಫಿಟ್ನೆಸ್‌ ಇದ್ದರೆ ಮಾತ್ರ ಇಲ್ಲಿ ಅವಕಾಶ. ಟೀಂ ಇಂಡಿಯಾವನ್ನು ಪ್ರತಿನಿಧಿಸಲು ಬೇಕಿರುವ ಫಿಟ್ನೆಸ್‌ ಹೊಂದುವುದು ಪ್ರತಿಯೊಬ್ಬ ಆಟಗಾರನ ಕರ್ತವ್ಯ. ಇದರಲ್ಲಿ ರಿಯಾಯಿತಿ ಯಾರಿಗೂ ಸಿಗುವುದಿಲ್ಲ ಎಂದು ಶುಕ್ರವಾರ ನಡೆಯಲಿರುವ ಇಂಗ್ಲೆಂಡ್‌ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದ ಬಗ್ಗೆ ಪಂದ್ಯಪೂರ್ವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಹ್ಲಿ ಹೇಳಿದ್ದಾರೆ.

varun chakravarthy ಫಿಟ್ನೆಸ್‌ ಪರೀಕ್ಷೆಯಲ್ಲಿ ವರುಣ್ ವಿಫಲ ಕಳೆದ ತಿಂಗಳು ಆಯ್ಕೆಯಾದ ತಂಡದಲ್ಲಿ ವರುಣ್ ಚಕ್ರವರ್ತಿ ಸಹ ಸೇರಿದ್ದರು. ಇದರ ನಂತರ, ವರುಣ್ ಸೇರಿದಂತೆ ಕೆಲವು ಹೊಸ ಆಟಗಾರರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಈ ಎರಡೂ ಪರೀಕ್ಷೆಗಳಿಗೆ ಒಳಗಾಗಬೇಕಾಯಿತು. ಈ ಎರಡೂ ಪರೀಕ್ಷೆಗಳಲ್ಲಿ ವರುಣ್ ಚಕ್ರವರ್ತಿ ವಿಭಿನ್ನ ಸಂದರ್ಭಗಳಲ್ಲಿ ವಿಫಲರಾದರು. ಜೊತೆಗೆ ಅವರ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ:India vs England: 2ನೇ ಬಾರಿಗೆ ಫಿಟ್ನೆಸ್‌ ಟೆಸ್ಟ್ ಫೇಲಾದ ವರುಣ್​ ಚಕ್ರವರ್ತಿ, ಇಂಜುರಿಯಿಂದ ಬಳಲುತ್ತಿರುವ ಟಿ ನಟರಾಜನ್‌ ಆಡೋದು ಡೌಟು!

ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಧನ್ವೀರ್ ಜೊತೆ ಸಿನಿಮಾ ಮಾಡ್ತಾರೆ ದರ್ಶನ್; ಸೂಚನೆ ಕೊಟ್ಟ ದಾಸ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು