ತಾನು ಮಹಿಳಾ ಕ್ರಿಕೆಟ್ನ ಸಚಿನ್ ತೆಂಡೂಲ್ಕರ್ ಎನ್ನುವುದನ್ನು ಸಾಬೀತು ಮಾಡಿದ ಮಿಥಾಲಿ ರಾಜ್!
ಭಾರತದ ಪರ 10 ಟೆಸ್ಟ್ಗಳಲ್ಲಿ ಕಾಣಿಸಿಕೊಂಡಿರುವ ಮಿಥಾಲಿ 51ರ ಸರಾಸರಿಯಲ್ಲಿ 663 ರನ್ ಗಳಿಸಿದ್ದಾರೆ. ಈ ಆವೃತ್ತಿಯಲ್ಲಿ ಅವರ ಗರಿಷ್ಠ ಸ್ಕೊರ್ 214 ಆಗಿದೆ. ಹಾಗೆಯೇ, 89 ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಅವರು 37.52 ಸರಾಸರಿಯಲ್ಲಿ 2,364 ರನ್ ಗಳಿಸಿದ್ದಾರೆ.
ಲಖನೌ: ಆಕೆಯನ್ನು ಮಹಿಳಾ ಕ್ರಿಕೆಟ್ನ ಸಚಿನ್ ತೆಂಡೂಲ್ಕರ್ ಎಂದು ಕರೆಯುತ್ತಾರೆ. ವಯಸ್ಸು 38 ಅದರೂ ಅಕೆಯಲ್ಲಿ ರನ್ ಗಳಸುವ ಉತ್ಸಾಹ ಮತ್ತು ಹುಮ್ಮಸ್ಸು ಕೊಂಚವೂ ತಗ್ಗಿಲ್ಲ. ಎರಡು ದಶಕಗಳಿಗಿಂತಲೂ ಹೆಚ್ಚಿನ ಸಮಯದಿಂದ ಆಕೆ ರಾಷ್ಟ್ರೀಯ ಮಹಿಳಾ ತಂಡಕ್ಕೆ ಸೇವೆ ಸಲ್ಲಿಸುತ್ತಿದ್ದರೂ ದಣಿವೆನ್ನುವುದು ಅವರ ಹತ್ತಿರಕ್ಕೆ ಸುಳಿದಿಲ್ಲ. ಪುರುಷರ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ಟೆಸ್ಟ್ ಮತ್ತು ಒಂದು ದಿನದ ಪಂದ್ಯಗಳ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಿ ಕ್ರಿಕೆಟ್ಗೆ ವಿದಾಯ ಹೇಳಿದರೆ ಆಕೆಯೂ ಮಹಿಳೆಯರ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಶುಕ್ರವಾರದಂದು10,000 ರನ್ಗಳನ್ನು ಪೂರೈಸಿ ಈ ಸಾಧನೆ ಮಾಡಿರುವ ಭಾರತದ ಮೊದಲ ಮತ್ತು ವಿಶ್ವದ ಕೇವಲ ಎರಡನೇ ಮಹಿಳೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ನೀವು ಆಕೆಯ ಹೆಸರನ್ನು ಈಗಾಗಲೇ ಊಹಿಸಿರಲಿಕ್ಕೂ ಸಾಕು. ಹೌದು, ಮಹಿಳಾ ಟೀಮ್ ಇಂಡಿಯಾದ ನಾಯಕಿ ಮಿಥಾಲಿ ರಾಜ್ ತನಗೆ ಮಹಿಳೆಯರ ಸಚಿನ್ ತೆಂಡೂಲ್ಕರ್ ಅಂತ ಕರೆಯುವುದರಲ್ಲಿ ತಪ್ಪೇನೂ ಇಲ್ಲ ಅಂತ ಇಂದು ಸಾಬೀತು ಮಾಡಿದರು.
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಒಂದು ದಿನ ಪಂದ್ಯಗಳ ಸರಣಿಯ ಮೂರನೇ ಪಂದ್ಯದಲ್ಲಿ ಮಿಥಾಲಿ ಈ ವಿಕ್ರಮ ಸಾಧಿಸಿದ್ದಾರೆ. ಇದು ಅವರ ವೃತ್ತಿಬದುಕಿನ 212ನೇ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯ. ಪ್ರವಾಸಿ ತಂಡದ ಆನಿ ಬೋಶ್ ಅವರ ಎಸೆತವೊಂದನ್ನು ಬೌಂಡರಿಗಟ್ಟ್ಟಿ ಅವರು 10,000 ರನ್ ಗಡಿ ದಾಟಿದರು. ಆದರೆ ದುರದೃಷ್ಟವಶಾತ್ ಮರು ಎಸೆತದಲ್ಲೇ ಆಕೆ ಔಟಾದರು.
ಭಾರತದ ಪರ 10 ಟೆಸ್ಟ್ಗಳಲ್ಲಿ ಕಾಣಿಸಿಕೊಂಡಿರುವ ಮಿಥಾಲಿ 51ರ ಸರಾಸರಿಯಲ್ಲಿ 663 ರನ್ ಗಳಿಸಿದ್ದಾರೆ. ಈ ಆವೃತ್ತಿಯಲ್ಲಿ ಅವರ ಗರಿಷ್ಠ ಸ್ಕೊರ್ 214 ಆಗಿದೆ. ಹಾಗೆಯೇ, 89 ಟಿ20ಐ ಕ್ರಿಕೆಟ್ ಪಂದ್ಯಗಳಲ್ಲಿ ಅವರು 37.52 ಸರಾಸರಿಯಲ್ಲಿ 2,364 ರನ್ ಗಳಿಸಿದ್ದಾರೆ. ಒಂದು ದಿನದ ಪಂದ್ಯಗಳಲ್ಲಿ ಆಕೆಯ ಸಾಧನೆ ಅದ್ವಿತೀಯವಾಗಿದೆ. ಇಂದಿನವರೆಗೆ ಆಡಿರುವ 212 ಪಂದ್ಯಗಳಲ್ಲಿ ಆಕೆ 7 ಶತಕ ಮತ್ತು 54 ಅರ್ಧ ಶತಕಗಳೊಂದಿಗೆ 6,974 ರನ್ ಗಳಿಸಿದ್ದಾರೆ.
What a champion cricketer! ??
First Indian woman batter to score 10K international runs. ? ?
Take a bow, @M_Raj03! ??@Paytm #INDWvSAW #TeamIndia pic.twitter.com/6qWvYOY9gC
— BCCI Women (@BCCIWomen) March 12, 2021
ಆಗಲೇ ಹೇಳಿದಂತೆ ಮಿಥಾಲಿ ಮಹಿಳಾ ಕ್ರಿಕೆಟ್ನಲ್ಲಿ 10,000 ರನ್ ಗಳಿಸಿರುವ 2ನೇ ಅಟಗಾರ್ತಿಯಾಗಿದ್ದಾರೆ, ಅವರಿಗಿಂತ ಮೊದಲು ಇಂಗ್ಲೆಂಡ್ನ ಶಾರ್ಲೆಟ್ ಎಡ್ವರ್ಡ್ಸ್ ಈ ಮೈಲಿಗಲ್ಲು ಸ್ಥಾಪಿಸಿದ್ದರು. 309 ಪಂದ್ಯಗಳನ್ನು ಆಡಿದ ಆಕೆ 10,273 ರನ್ ಗಳಿಸಿ ರಿಟೈರಾದರು. ಶಾರ್ಲೆಟ್ ತಮ್ಮ ವೃತ್ತಿಬದುಕಿನಲ್ಲಿ 13 ಶತಕ ನತ್ತು 67 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್ನ ಸೂಜೀ ಬೇಟ್ಸ್ ಇದ್ದು, ಆಕೆ 247 ಪಂದ್ಯಗಳಲ್ಲಿ 7,849 ರನ್ ಗಳಿಸಿದ್ದಾರೆ.
ಶಾರ್ಲೆಟ್ ಈಗ ರಿಟೈರಾಗಿರುವುದರಿಂದ ಮಿಥಾಲಿ ರಾಜ್ಗೆ ಆಕೆ ದಾಖಲೆಯನ್ನು ಹಿಂದಿಕ್ಕುವ ಅವಕಾಶವಿದೆ. ಮಿಥಾಲಿ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದುವರೆಗೆ 75 ಅರ್ಧ ಶತಕ ಮತ್ತು 8 ಶತಕಗಳನ್ನು ಬಾರಿಸಿದ್ದಾರೆ.
ಇದನ್ನೂ ಓದಿ: India vs England: ಹೊಸ ವಾರ, ಹೊಸ ಫಾರ್ಮಟ್ ಆದರೆ ಮಿಷನ್ ಅದೇ ಎಂದ ವಿರಾಟ್ ಕೊಹ್ಲಿ