India vs England 2021, 1st T20, LIVE Score: ಮೊದಲ T20 ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್, ಭಾರತಕ್ಕೆ ಹೀನಾಯ ಸೋಲು
India vs England 2021: ಭಾರತ ಮತ್ತು ಇಂಗ್ಲೆಂಡ್ ನಡುವಿನ 5-ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಅಹಮದಾಬಾದಿನ ಮೊಟೆರಾ ಮೈದಾನದಲ್ಲಿ ಆರಂಭವಾಗಿದೆ. ಪ್ರವಾಸಿ ತಂಡವನ್ನು ಟೆಸ್ಟ್ ಸರಣಿಯಲ್ಲಿ 3-1ಅಂತರದಿಂದ ಸುಲಭವಾಗಿ ಸೋಲಿಸಿರುವ ವಿರಾಟ್ ಕೊಹ್ಲಿ ಪಡೆಯ ಆತ್ಮವಿಶ್ವಾಸ ಮುಗಿಲೆತ್ತರದಲ್ಲಿದೆ.
ಅಹಮದಾಬಾದ್: ಅಹಮದಾಬಾದ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 7 ವಿಕೆಟ್ ಕಳೆದುಕೊಂಡು ಕೇವಲ 124 ರನ್ ಗಳಿಸಿತು. ಭಾರತದ ಎಲ್ಲಾ ಪ್ರಮುಖ ಬ್ಯಾಟ್ಸ್‌ಮನ್‌ಗಳು ಇಂಗ್ಲೆಂಡ್ ಎದುರು ಸುಲಭವಾಗಿ ಶರಣಾದರು. ತಂಡದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಆಡುತ್ತಿದ್ದ ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧ ದೃಢವಾಗಿ ನಿಂತು 48 ಎಸೆತಗಳಲ್ಲಿ 67 ರನ್ ಗಳಿಸಿದರು ಮತ್ತು ಕೊನೆಯ ಓವರ್ನಲ್ಲಿ ಔಟಾದರು.
ಭಾರತ ನೀಡಿದ 125 ರನ್ಗಳ ಅಲ್ಪ ಟಾರ್ಗೆಟನ್ನು ಸುಲಭವಾಗಿ ಬೆನ್ನತ್ತಿದ ಇಂಗ್ಲೆಂಡ್ ತಂಡ ಕೇವಲ 2 ವಿಕೆಟ್ ಕಳೆದುಕೊಂಡು 15.3 ಓವರ್ಗಳಲ್ಲಿ ಗೆಲುವಿನ ಗಡಿ ತಲುಪಿತು. ಇಂಗ್ಲೆಂಡ್ ಪರ ಅಬ್ಬರಿಸಿದ ಜೇಸನ್ ರಾಯ್ ಸ್ಪೋಟಕ 49 ರನ್ ಸಿಡಿಸಿದರು. ಇವರ ಈ ಆಟದಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸೇರಿದ್ದವು. ನಂತರ ಬಂದ ಡೇವಿಡ್ ಮಲನ್ ಹಾಗೂ ಬೈರ್‌ಸ್ಟೋವ್ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.
LIVE NEWS & UPDATES
-
ಮೊದಲ ಟಿ20 ಗೆದ್ದ ಇಂಗ್ಲೆಂಡ್
ಕೇವಲ 15.3 ಓವರ್ಗಳಲ್ಲಿ ಇಂಗ್ಲೆಂಡ್ ತಂಡ ಭಾರತ ನೀಡಿದ 125 ರನ್ಗಳ ಅಲ್ಪಮೊತ್ತದ ಗಡಿತನ್ನು ಡಾಟಿತು. ಕೇವಲ 2 ವಿಕೆಟ್ ಕಳೆದುಕೊಂಡ ಇಂಗ್ಲೆಂಡ್ ಡೇವಿಡ್ ಮಲನ್ ಅವರ ಅದ್ಭುತ ಸಿಕ್ಸರ್ನೊಂದಿಗೆ ಜಯದ ಮಾಲೆ ಧರಿಸಿತು.
-
ಬೈರ್‌ಸ್ಟೋವ್ ಸಿಕ್ಸರ್
ಗೆಲುವಿನ ಸನಿಹದಲ್ಲಿರುವ ಇಂಗ್ಲೆಂಡ್ ತಂಡವನ್ನು ಬೇಗ ದಡ ಸೇರಿಸಲು ನಿರ್ಧರಿಸಿರುವ ಬೈರ್‌ಸ್ಟೋವ್ ಚಾಹಲ್ ಅವರ ಓವರ್ನಲ್ಲಿ 2 ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು 100 ರ ಗಡಿ ದಾಟಿಸಿದ್ದಾರೆ.
-
49 ರನ್ಗೆ ರಾಯ್ ಔಟ್, ಇಂಗ್ಲೆಂಡ್ 89/2
49 ರನ್ಗಳಿಸಿ ಇಂಗ್ಲೆಂಡ್ ತಂಡವನ್ನು ಗೆಲುವಿನ ಸನಿಹಕ್ಕೆ ತಂದ ಜೇಸನ್ ರಾಯ್, ಸುಂದರ್ ಬೌಲಿಂಗ್ನಲ್ಲಿ ಕ್ಲಿನ್ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಔಟಾಗುವುದಕ್ಕೂ ಮುನ್ನ ರಾಯ್ 4 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿದ್ದರು
ಬಟ್ಲರ್ ಔಟ್, ಇಂಗ್ಲೆಂಡ್ 72/1
28 ರನ್ಗಳಿಸಿ ಆಡುತ್ತಿದ್ದ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಬಟ್ಲರ್ ಚಾಹಲ್ ಓವರ್ನಲ್ಲಿ ಕ್ಲಿನ್ LBWಗೆ ಔಟಾದರು. ಈ ಮೂಲಕ ಭಾರತಕ್ಕೆ ಮೊದಲ ಯಶಸ್ಸು ಸಿಕ್ಕಿದೆ. ಆದರೆ ಇಂಗ್ಲೆಂಡ್ ತಂಡದ ಗೆಲುವಿನ ಸನಿಹದಲ್ಲಿದೆ.
ರಾಯ್ ಬೌಂಡರಿ, ಸಿಕ್ಸರ್ ಸುರಿಮಳೆ
8ನೇ ಓವರ್ ಎಸೆಯಲು ಬಂದ ಚಾಹಲ್ ಅವರಿಗೆ ರಾಯ್ ಬೌಂಡರಿ ಹಾಗೂ ಸಿಕ್ಸರ್ನ ಉಡುಗೂರೆ ನೀಡಿದ್ದಾರೆ. 44 ರನ್ ಗಳಿಸಿ ಆಡುತ್ತಿರುವ ರಾಯ್ ಇಂಗ್ಲೆಂಡ್ ತಂಡವನ್ನು ಗೆಲುವಿನ ಸನಿಹಕ್ಕೆ ಕೊಂಡೊಯ್ದಿದ್ದಾರೆ.
50 ರನ್ ಪೂರೈಸಿದ ಇಂಗ್ಲೆಂಡ್
6 ಓವರ್ ಮುಕ್ತಾಯಕ್ಕೆ ಇಂಗ್ಲೆಂಡ್ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 50 ರನ್ಗಳಿಸಿದೆ. ಅಲ್ಲದೆ ಬ್ಯಾಟಿಂಗ್ ಪವರ್ ಪ್ಲೆ ಸಹ ಮುಗಿದಿದೆ. ಇಂಗ್ಲೆಂಡ್ ಪರ ಬಟ್ಲರ್ ಹಾಗೂ ರಾಯ್ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಬಟ್ಲರ್ ಅಬ್ಬರ
5ನೇ ಓವರ್ ಎಸೆದ ಅಕ್ಷರ್ ಓವರ್ನಲ್ಲಿ ತಲಾ 1 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸುವ ಮೂಲಕ ಬಟ್ಲರ್ ತಂಡಕ್ಕೆ ಅಮೂಲ್ಯ ರನ್ ಕೊಡುಗೆ ನೀಡಿದರು. ಇದಕ್ಕೂ ಮೊದಲ ಬಟ್ಲರ್ ಅವರು LBW ಆಗಿದ್ದಾರೆ ಎಂದು ಟೀಂ ಇಂಡಿಯಾ DRS ಮೊರೆ ಹೋಯಿತು. drsನಲ್ಲಿ ಅದು ಔಟಾಗಿತ್ತು. ಆದರೆ ಅದು ಅಂಪೈರ್ ಕಾಲ್ ಆಗಿದ್ದರಿಂದ ನಾಟ್ಔಟ್ ಎಂದು ತೀರ್ಮಾನ ಹೊರಬಿತ್ತು.
ರಾಯ್ ಬೌಂಡರಿ
4ನೇ ಓವರ್ ಎಸೆದ ಠಾಕೂರ್ ಅವರ ಕೊನೆಯ ಎಸೆತವನ್ನು ಲಾಂಗ್ ಆಫ್ ಕಡೆ ಬಾರಿಸಿ ರಾಯ್ ಅದ್ಭುತ ಬೌಂಡರಿ ಪಡೆದರು. ಇಂಗ್ಲೆಂಡ್ ಯಾವುದೇ ವಿಕೆಟ್ ನಷ್ಟವಿಲ್ಲದೆ 29 ರನ್ ಗಳಿಸಿದೆ
ರಾಯ್ ಸಿಕ್ಸರ್
3ನೇ ಓವರ್ ಎಸೆಯಲು ಬಂದ ಚಾಹಲ್ ಅವರ ಮೊದಲ ಎಸೆತವನ್ನು ರಾಯ್ ಸೀದಾ ಸಿಕ್ಸರ್ಗೆ ಅಟ್ಟಿದ್ದಾರೆ. ಭಾರತ ನೀಡಿರುವ ಅಲ್ಪ ಮೊತ್ತವನ್ನು ಬೆನ್ನತ್ತಿರುವ ಇಂಗ್ಲೆಂಡ್ ಉತ್ತಮ ಆರಂಭ ಪಡೆದಿದೆ
ರಾಯ್ ಮೊದಲ ಬೌಂಡರಿ
ಭುವನೇಶ್ವರ್ ಎಸೆದ 2ನೇ ಓವರ್ನ 2ನೇ ಎಸೆತವನ್ನು ಇಂಗ್ಲೆಂಡ್ನ ಜೇಸನ್ ರಾಯ್ ಸೀದಾ ಬೌಂಡರಿಗಟ್ಟಿದ್ದಾರೆ.
ಬೌಲಿಂಗ್ ಆರಂಭಿಸಿದ ಅಕ್ಷರ್
ಭಾರತದ ಪರ ಬೌಲಿಂಗ್ ಆರಂಭಿಸಿದ ಅಕ್ಷರ್ ಪಟೇಲ್ ಯಾವುದೇ ವಿಕೆಟ್ ಪಡೆಯದೇ 3 ರನ್ ನೀಡಿದ್ದಾರೆ. ರಾಯ್ 1 ರನ್ಗಳಿಸಿದರೆ, ಬಟ್ಲರ್ 2 ರನ್ಗಳಿಸಿದರು.
ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್
ಭಾರತ ನೀಡಿರುವ 125 ರನ್ಗಳ ಅಲ್ಪ ಮೊತ್ತವನ್ನು ಬೆನ್ನತ್ತುವ ಸಲುವಾಗಿ ಇಂಗ್ಲೆಂಡ್ ಪರ ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಇನ್ನಿಂಗ್ಸ್ ಆರಂಭಿಸಿದ್ದಾರೆ.
125 ರನ್ ಟಾರ್ಗೆಟ್ ನೀಡಿದ ಭಾರತ
ಅಂತಿಮ ಓವರ್ ಮುಕ್ತಾಯಕ್ಕೆ 7 ವಿಕೆಟ್ ಕಳೆದುಕೊಂಡ ಭಾರತ, ಇಂಗ್ಲೆಂಡ್ಗೆ ಗೆಲ್ಲಲು 125 ರನ್ಗಳ ಟಾರ್ಗೆಟ್ ನೀಡಿದೆ.
ಶ್ರೇಯಸ್ ಔಟ್
ಅಂತಿಮ ಓವರ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಶ್ರೇಯಸ್, ಜೋರ್ಡಾನ್ ಎಸೆತವನ್ನು ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ ಬೌಂಡರಿ ಗೆರೆಯಲ್ಲಿದ್ದ ಡೇವಿಡ್ ಮಲನ್ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಶ್ರೇಯಸ್ಗೆ ಪೆವಿಲಿಯನ್ ದಾರಿ ತೋರಿಸಿದರು. ಔಟಾಗುವುದಕ್ಕೂ ಮುನ್ನ ಶ್ರೇಯಸ್ 67 ರನ್ ಗಳಿಸಿದ್ದರು.
ಶೂನ್ಯಕ್ಕೆ ಠಾಕೂರ್ ಔಟ್
ಪಾಂಡ್ಯ ವಿಕೆಟ್ ಬಳಿಕ ಬಂದ ಶಾರ್ದೂಲ್ ಠಾಕೂರ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ಪಾಂಡ್ಯ ಔಟ್, ಭಾರತ 102/5
19 ರನ್ ಗಳಿಸಿದ್ದ ಹಾರ್ದಿಕ್ ಪಾಂಡ್ಯ ಆರ್ಚರ್ ಬೌಲಿಂಗ್ನಲ್ಲಿ ಜೋರ್ಡಾನ್ಗೆ ಕ್ಯಾಚಿತ್ತು ಔಟಾಗಿದ್ದಾರೆ. ಈ ಮೂಲಕ ಭಾರತ ತನ್ನ 5 ವಿಕೆಟ್ ಕಳೆದುಕೊಂಡಿದೆ. ಭಾರತ 102 ರನ್ ಗಳಿಸಿದೆ
100 ರನ್ ಪೂರೈಸಿದ ಭಾರತ
ಶ್ರೇಯಸ್ ಅವರ ಅದ್ಭುತ ಸಿಕ್ಸರ್ನೊಂದಿಗೆ ಟೀಂ ಇಂಡಿಯಾ 100 ರನ್ಗಳ ಗಡಿ ದಾಟಿದೆ. ಭಾರತಕ್ಕೆ ಕೊನೆಯ 3 ಓವರ್ಗಳು ಬಾಕಿ ಇದ್ದು ಎಷ್ಟು ರನ್ ಗಳಿಸುತ್ತದೆ ಎಂಬುದು ಕುತೂಹಲ ಹುಟ್ಟಿಸಿದೆ.
ಶ್ರೇಯಸ್ ಅರ್ಧ ಶತಕ
ಆರಂಭದಿಂದಲೂ ವಿಕೆಟ್ ಉರುಳುತ್ತಿದ್ದರು ಉತ್ತಮ ಆಟ ಆಡುತ್ತಿರುವ ಶ್ರೇಯಸ್ ಅಬ್ಬರದ 50 ರನ್ ಪೂರೈಸಿದ್ದಾರೆ. ಶ್ರೇಯಸ್ ಅವರ ಈ ಅರ್ಧ ಶತಕದಲ್ಲಿ ಅಮೂಲ್ಯವಾದ 7 ಬೌಂಡರಿಗಳು ಸೇರಿವೆ
ಹಾರ್ದಿಕ್ ಸಿಕ್ಸರ್, ಭಾರತ 83/4
ತಾಳ್ಮೆಯ ಆಟಕ್ಕೆ ಮುಂದಾಗಿದ್ದ ಹಾರ್ದಿಕ್ ಪಾಂಡ್ಯ ಸ್ಟೋಕ್ಸ್ ಎಸೆತವನ್ನು ಲಾಂಗ್ ಆಫ್ ತಲೆ ಮೇಲೆ ಸೀದಾ ಸಿಕ್ಸರ್ಗೆ ಅಟ್ಟಿದರು. ನಂತರದ ಎಸೆತವನ್ನು ಸ್ಲಿಪ್ ಕಡೆ ಬಾರಿಸಿದ ಪಾಂಡ್ಯ ಅದ್ಭುತ ಬೌಂಡರಿಯನ್ನು ಪಡೆದರು. ಈ ಮೂಲಕ ಟೀಂ ಇಂಡಿಯಾ 15 ಓವರ್ ಮುಕ್ತಾಯಕ್ಕೆ 4 ವಿಕೆಟ್ ಕಳೆದುಕೊಂಡು 83 ರನ್ ಗಳಿಸಿದೆ
13ನೇ ಓವರ್ ಮುಕ್ತಾಯ, ಇಂಡಿಯಾ 63/4
ಮುಕ್ಕಾಲು ಬಾಗ ಆಟ ಮುಗಿಸಿರುವ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು ಕೇವಲ 63 ರನ್ ಗಳಿಸಿದೆ. ಶ್ರೇಯಸ್ ಹಾಗೂ ಹಾರ್ದಿಕ್ ಕಣದಲ್ಲಿದ್ದಾರೆ. ಇನ್ನ 7 ಓವರ್ಗಳ ಆಟ ಬಾಗಿ ಇದ್ದು, ಟೀಂ ಇಂಡಿಯಾದ ರನ್ ಎಲ್ಲಿಗೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಪಂತ್ ಔಟ್
10 ಓವರ್ ಮುಗಿಯುವುದರೊಳಗೆ ಟೀಂ ಇಂಡಿಯಾದ ಪ್ರಮುಖ 4 ವಿಕೆಟ್ ಉರಿಳಿವೆ. ತಂಡಕ್ಕೆ ಆಧಾರವಾಗಿದ್ದ ರಿಶಭ್ ಪಂತ್ ಸ್ಟೋಕ್ಸ್ ಎಸೆತವನ್ನು ಸಿಕ್ಸರ್ ಬಾರಿಸುವ ಯತ್ನದಲ್ಲಿ ಬೌಂಡರಿಯಲ್ಲಿ ನಿಂತಿದ್ದ ಬೈರ್ಸ್ಟೋವ್ಗೆ ಕ್ಯಾಚ್ ನೀಡಿ ಔಟಾದರು.
ಶ್ರೇಯಸ್ ಬೌಂಡರಿ, ಭಾರತ 48/4
ಸ್ಟೋಕ್ಸ್ ಎಸೆತವನ್ನು ಡೀಪ್ ಬ್ಯಾಕ್ವರ್ಡ್ ಕಡೆ ಬಾರಿಸಿದ ಶ್ರೇಯಸ್ ಬೌಂಡರಿ ಪಡೆದರು. ತಂಡಕ್ಕೆ ಈಗ ಕೊಂಚ ಚೇತರಿಕೆ ನೀಡುತ್ತಿರುವ ಈ ಜೋಡಿ, ಬೃಹತ್ ರನ್ ಪೇರಿಸುವತ್ತಾ ಸಾಗಬೇಕಿದೆ.
ಶ್ರೇಯಸ್- ಪಂತ್ ತಾಳ್ಮೆಯ ಆಟ
ಆರಂಭಿಕವಾಗಿ 3 ವಿಕೆಟ್ ಉರುಳಿದ ಬಳಿಕ ಟೀಂ ಇಂಡಿಯಾ ಆಟಗಾರರಾದ ಶ್ರೇಯಸ್ ಹಾಗೂ ಪಂತ್ ತಾಳ್ಮೆಯ ಆಟಕ್ಕೆ ಮುಂದಾಗಿದ್ದಾರೆ. ಈಗಾಗಲೇ 9 ಓವರ್ ಮುಗಿದಿವೆ. ಆದರೆ ಭಾರತದ ರನ್ ತೀರ ಕಡಿಮೆ ಇದೆ.
ಶ್ರೇಯಸ್ ಬೌಂಡರಿ. ಇಂಡಿಯಾ 29/1
ಮಾರ್ಕ್ವುಡ್ ಎಸೆದ 7ನೇ ಓವರ್ನ 4ನೇ ಎಸೆತವನ್ನು ಲೆಗ್ ಸ್ಲಿಪ್ ಕಡೆ ಬಾರಿಸಿದ ಶ್ರೇಯಸ್ ತಂಡಕ್ಕೆ 4 ರನ್ ತಂದುಕೊಟ್ಟರು. ಭಾರತ 7ನೇ ಓವರ್ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 29 ರನ್ ಗಳಿಸಿದೆ.
ಧವನ್ ಔಟ್
ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಾ ಬರುತ್ತಿರುವ ಟೀಂ ಇಂಡಿಯಾ ಕೇವಲ 5 ಓವರ್ ಮುಗಿಯುವುದರೊಳಗೆ ಪ್ರಮುಖ 3 ವಿಕೆಟ್ ಕಳೆದುಕೊಂಡಿದೆ. ಮಾರ್ಕ್ವುಡ್ ಎಸೆತವನ್ನು ಬಾರಿಸಲು ಯತ್ನಿಸಿದ ಧವನ್ ಕ್ಲಿನ್ ಬೋಲ್ಡ್ ಆಗಿ ಪೆವಿಲಿಯನ್ ಸೇರಿದ್ದಾರೆ.
ಪಂತ್ ಸಿಕ್ಸರ್
ಆರ್ಚರ್ ಎಸೆತವನ್ನು ರಿವರ್ಸ್ ಶಾಟ್ ಆಡುವ ಮೂಲಕ ಪಂತ್, ಕೀಪರ್ ತಲೆಯ ಮೇಲೆ ಸಿಕ್ಸರ್ ಬಾರಿಸಿದರು. ಹಾಗೆಯೇ ನಂತರದ ಎಸೆತವನ್ನು ಬೌಂಡರಿಗಟ್ಟಿ ತಂಡದ ಮೊತ್ತವನ್ನು ಹೆಚ್ಚಿಸಿದರು.
ಪಂತ್ ಬೌಂಡರಿ
ಕೊಹ್ಲಿ ವಿಕೆಟ್ ಬಳಿಕ ಬಂದ ಪಂತ್ ರಶೀದ್ ಬೌಲಿಂಗ್ನ ಕೊನೆಯ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಇನ್ನಿಂಗ್ಸ್ನ ಮೊದಲ ಬೌಂಡರಿ ಬಾರಿಸಿದರು.
ಶೂನ್ಯಕ್ಕೆ ಕೊಹ್ಲಿ ಔಟ್
ರಶೀದ್ ಎಸೆದ 3ನೇ ಓವರ್ನ 3ನೇ ಎಸೆತವನ್ನು ಮಿಡ್ ಆಫ್ ತಲೆ ಮೇಲೆ ಹೊಡೆಯಲು ಯತ್ನಿಸಿದ ಕೊಹ್ಲಿ ಜೋರ್ಡಾನ್ ಕೈಗೆ ಕ್ಯಾಚ್ ನೀಡಿ ಔಟಾಗಿದ್ದಾರೆ.
ರಾಹುಲ್ ಔಟ್, ಇಂಡಿಯಾ 2/1
1 ರನ್ ಗಳಿಸಿದ್ದ ರಾಹುಲ್, ಆರ್ಚರ್ ಎಸೆದ 2ನೇ ಓವರ್ನ 2ನೇ ಎಸೆತದಲ್ಲಿ ಬೋಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ಆರ್ಚರ್ ಎಸೆದ ವೇಗದ ಎಸೆತವನ್ನು ಡಿಫೆಂಡ್ ಮಾಡಲು ಹೋದ ರಾಹುಲ್, ಬಾಲ್ಗೆ ಬ್ಯಾಟ್ ತಾಗಿಸಿದರು. ಆದರೆ ಬ್ಯಾಟ್ಗೆ ಸರಿಯಾಗಿ ಸಿಗದ ಬಾಲ್, ಬ್ಯಾಟ್ಗೆ ಟಚ್ ಆಗಿ ನಂತರ ವಿಕೆಟ್ಗೆ ಬಡಿಯಿತು.
ಬೌಲಿಂಗ್ ಆರಂಭಿಸಿದ ಆದಿಲ್ ರಶೀದ್
ಇಂಗ್ಲೆಂಡ್ ಪರ ಬೌಲಿಂಗ್ ಆರಂಭಿಸಿದ ರಶೀದ್ ಮೊದಲ ಓವರ್ನಲ್ಲಿ 2 ರನ್ ನೀಡಿದರು. ಬ್ಯಾಟಿಂಗ್ ಆರಂಬಿಸಿದ ಧವನ್ 3 ಬಾಲ್ಗಳ ನಂತರ 1 ರನ್ ತೆಗೆದುಕೊಂಡರೆ, ರಾಹುಲ್ 2 ಬಾಲ್ ಎದುರಿಸಿ 1 ರನ್ ಗಳಿಸಿದರು.
ಆರಂಭಿಕರಾಗಿ ಧವನ್- ರಾಹುಲ್
ಬ್ಯಾಟಿಂಗ್ಗೆ ಇಳಿದಿರುವ ಟೀಂ ಇಂಡಿಯಾ ಪರ ಆರಂಭಿಕರಾಗಿ ಕನ್ನಡಿಗ ರಾಹುಲ್ ಹಾಗೂ ಧವನ್ ಕಣಕ್ಕಿಳಿದಿದ್ದಾರೆ.
ಟಾಸ್ ಪ್ರಕ್ರಿಯೆ
Toss Update:
England have won the toss & elected to bowl against #TeamIndia in the first @Paytm #INDvENG T20I.
Follow the match ? https://t.co/XYV4KmdfJk pic.twitter.com/RiliiglyRM
— BCCI (@BCCI) March 12, 2021
ಇಂಗ್ಲೆಂಡ್ ಆಡುವ ಹನ್ನೊಂದರ ಬಳಗ
ಜೆಸನ್ ರಾಯ್, ಜೋಶ್ ಬಟ್ಲರ್, ಡೆವಿಡ್ ಮಲನ್, ಜಾನಿ ಬೈರ್‌ಸ್ಟೋವ್, ಇಯಾನ್ ಮೋರ್ಗಾನ್, ಬೆನ್ ಸ್ಟೋಕ್ಸ್, ಸ್ಯಾಮ್ ಕರ್ರನ್, ಚೋಪ್ರಾ ಆರ್ಚರ್, ಕ್ರಿಸ್ ಜೋರ್ಡಾನ್, ಅದೀಲ್ ರಶೀದ್, ಮಾರ್ಕ್ ವುಡ್
1st T20I. England XI: J Roy, J Buttler, D Malan, J Bairstow, E Morgan, B Stokes, S Curran, J Archer, C Jordan, A Rashid, M Wood https://t.co/XYV4KlVERM #INDvENG @Paytm
— BCCI (@BCCI) March 12, 2021
ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗ
ಕೆ ಎಲ್ ರಾಹುಲ್, ಶಿಖರ್ ಧವನ್, ವಿರಾಟ್ ಕೊಹ್ಲಿ, ರಿಶಭ್ ಪಂತ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್
1st T20I. India XI: KL Rahul, S Dhawan, V Kohli, S Iyer, R Pant, H Pandya, A Patel, W Sundar, B Kumar, S Thakur, Y Chahal https://t.co/XYV4KlVERM #INDvENG @Paytm
— BCCI (@BCCI) March 12, 2021
ರೋಹಿತ್ ತಂಡದಲಿಲ್ಲ
ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮೊದಲ ಟಿ20 ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಪರ ಆರಂಭಿಕರಾಗಿ ಧವನ್ ಹಾಗೂ ರಾಹಲ್ ಕಣಕ್ಕಿಳಿಯಲ್ಲಿದ್ದಾರೆ.
ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ
ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಬೌಲಿಂಗ್ ಆಯ್ದುಕೊಂಡಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಲಿದೆ. ಈ ಬಗ್ಗೆ ಮಾತಾನಾಡಿದ ಕೊಹ್ಲಿ ಟಾಸ್ ಗೆದ್ದಿದ್ದರೆ ನಾವು ಸಹ ಮೊದಲು ಬೌಲಿಂಗ್ ಮಾಡುತ್ತಿದ್ದೇವು ಎಂದಿದ್ದಾರೆ.
1st T20I. England win the toss and elect to field https://t.co/XYV4KlVERM #INDvENG @Paytm
— BCCI (@BCCI) March 12, 2021
ಇಂಡಿಯಾ- ಇಂಗ್ಲೆಂಡ್ ಮುಖಾಮುಖಿ
ಈ ಸ್ವರೂಪದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು 14 ಬಾರಿ ಪರಸ್ಪರ ಮುಖಾಮುಖಿಯಾಗಿವೆ ಮತ್ತು ಉಭಯ ತಂಡಗಳು ಕಠಿಣ ಹಣಾಹಣಿ ನಡೆಸಿವೆ. ಉಭಯ ತಂಡಗಳು ಪರಸ್ಪರ 7 ಪಂದ್ಯಗಳಲ್ಲಿ ಜಯ ಸಾಧಿಸಿವೆ.
ಟೀಂ ಇಂಡಿಯಾ ತಯಾರಿ
Hello & good evening from Ahmedabad! ??@GCAMotera @Paytm #INDvENG #TeamIndia pic.twitter.com/qCACRJRUJp
— BCCI (@BCCI) March 12, 2021
ಟೀಂ ಇಂಡಿಯಾ ಮೊದಲ ಸ್ಥಾನಕ್ಕೇರುವ ಅವಕಾಶ
ಭಾರತ ಮತ್ತು ಇಂಗ್ಲೆಂಡ್ ತಂಡಗಳು ಪ್ರಸ್ತುತ ಐಸಿಸಿ ಶ್ರೇಯಾಂಕದಲ್ಲಿ ಮೊದಲ ಎರಡು ಸ್ಥಾನಗಳಲ್ಲಿವೆ. ಕೆಲವು ಸಮಯದಿಂದ ಇಂಗ್ಲೆಂಡ್ ತಂಡ ಮೊದಲ ಸ್ಥಾನದಲ್ಲಿದ್ದರೆ, ಭಾರತ ತಂಡ ಇತ್ತೀಚೆಗೆ ಎರಡನೇ ಸ್ಥಾನವನ್ನು ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತಕ್ಕೆ ಈ ಸರಣಿಯಲ್ಲಿ ಪ್ರಥಮ ಸ್ಥಾನ ಗಳಿಸುವ ಅವಕಾಶವಿದೆ. ಅದಕ್ಕಾಗಿ ಟೀಮ್ ಇಂಡಿಯಾ ಸರಣಿಯನ್ನು 4-1 ಅಥವಾ 4-0 ಅಂತರದಿಂದ ಗೆಲ್ಲಬೇಕಾಗುತ್ತದೆ.
Published On - Mar 12,2021 10:12 PM