India vs England: ಗಂಗೂಲಿ ಬಳಿಯಿದ್ದ ಆ ಕೆಟ್ಟ ದಾಖಲೆಯನ್ನೂ ಬಿಡದ ಕೊಹ್ಲಿ.. ಏನದು ಈ ಶೂನ್ಯ ಸಂಪಾದಕನ ವಿರಾಟ ದಾಖಲೆ?

India vs England : ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಯಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ನಾಯಕನಾಗಿ ಸೌರವ್​ ಗಂಗೂಲಿ ಮಾಡಿದ್ದ ದಾಖಲೆಯನ್ನು ಮುರಿದರು. ಕೊಹ್ಲಿಯ ಈ ದಾಖಲೆಯನ್ನು ನೋಡಿ ಕ್ರಿಕೆಟ್​ ಅಭಿಮಾನಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.

India vs England: ಗಂಗೂಲಿ ಬಳಿಯಿದ್ದ ಆ ಕೆಟ್ಟ ದಾಖಲೆಯನ್ನೂ ಬಿಡದ ಕೊಹ್ಲಿ.. ಏನದು ಈ ಶೂನ್ಯ ಸಂಪಾದಕನ ವಿರಾಟ ದಾಖಲೆ?
ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on: Mar 13, 2021 | 1:46 PM

ಅಹಮದಬಾದ್​: ಸೊನ್ನೆ.. ಅದನ್ನು ಒಂದು ಅಂಕಿಯ ಮುಂದೆ ಹಾಕಿದರೆ, ಅದು ಅದರ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ಆದರೆ ಅದೇ ಸೊನ್ನೆ ಯಾವುದೇ ಅಂಕಿಗಳ ಜೊತೆ ಸೇರದಿದ್ದರೆ ಅದಕ್ಕಿರುವ ಅಷ್ಟೂ ಗೌರವವನ್ನು ಕಳೆದುಕೊಂಡು ಬಿಡುತ್ತದೆ. ಈಗ ಟೀಂ ಇಂಡಿಯಾ ನಾಯಕ ಕೊಹ್ಲಿ ಸ್ಥಿತಿಯೂ ಸಹ ಯಾವುದೇ ಅಂಕಿಗಳಿಲ್ಲದ ಒಬ್ಬಂಟಿ ಸೊನ್ನೆಯಂತ್ತಾಗಿದೆ. ಕಳೆದೊಂದು ವರ್ಷದಿಂದ ಅದ್ಯಾಕೋ ಕೊಹ್ಲಿ ನಸೀಬು ಸರಿ ಇಲ್ಲ ಎಂದು ಕಾಣಿಸುತ್ತದೆ. ಕೊಹ್ಲಿ ಕ್ರಿಕೆಟ್​ ಆರಂಭಿಸಿದ ದಿನಗಳಲ್ಲಿ ಮುಟ್ಟಿದೆಲ್ಲಾ ಚಿನ್ನವಾಗುತ್ತಿತ್ತು. ಆದರೆ ಈಗ ಕೊಹ್ಲಿಗೆ ದುರಾದೃಷ್ಟ ಎಂಬುದು ಬೆನ್ನತ್ತಿದ ಬೇತಾಳವಾಗಿದೆ. ಬ್ಯಾಟಿಂಗ್​ಗೆ ಇಳಿದರೆ, ಒಂದು ಶತಕ ಅಥವಾ ಅರ್ಧಶತಕವನ್ನು ಬಾರಿಸದೆ ಮೈದಾನದಿಂದ ಹೊರನಡೆಯದ ಕೊಹ್ಲಿಯ ಈಗಿನ ಸ್ಥಿತಿ ಹೋದ ಪುಟ್ಟ, ಬಂದ ಪುಟ್ಟ ಎಂಬಂತ್ತಾಗಿದೆ. ಈ ಮಾತುಗಳನ್ನು ನಾವು ಸುಮ್ಮನೆ ಹೇಳುತ್ತಿಲ್ಲಾ. ಬದಲಿಗೆ, ಕೊಹ್ಲಿಯ ಇತ್ತೀಚಿನ ಆಟದ ಅಂಕಿಅಂಶಗಳ ಆಧಾರದ ಮೇಲೆ ಈ ಮಾತುಗಳು ಹೊರ ಬರುತ್ತಿವೆ.

ನಿನ್ನೆ ಅಹಮದಬಾದ್​ನ ನರೇಂದ್ರ ಮೋದಿ ಕ್ರಿಕೆಟ್‌ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ 20 ಯಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ 5 ಎಸೆತಗಳನ್ನು ಎದುರಿಸಿ ಯಾವುದೇ ರನ್​ ಗಳಿಸದೆ ಶೂನ್ಯಕ್ಕೆ ಔಟಾದರು. ಈ ಮೂಲಕ ಕೊಹ್ಲಿ, ಟೀಂ ಇಂಡಿಯಾದ ನಾಯಕರಲ್ಲಿ ಅತೀ ಹೆಚ್ಚು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾದ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲಲು ಕಾರಣಕರ್ತರಾದ ಆರಂಭಿಕ ಬ್ಯಾಟ್ಸ್​ಮನ್​ಗಳ ವೈಫಲ್ಯದಲ್ಲಿ ಕೊಹ್ಲಿಯ ಕೊಡುಗೆಯು ಸಹ ಸೇರಿದೆ.

ಸೌರವ್ ಗಂಗೂಲಿ ದಾಖಲೆ ಮುರಿದ ವಿರಾಟ್ ಕೊಹ್ಲಿ ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಯಲ್ಲಿ ಶೂನ್ಯಕ್ಕೆ ಔಟ್ ಆಗುವ ಮೂಲಕ ನಾಯಕನಾಗಿ ಸೌರವ್​ ಗಂಗೂಲಿ ಮಾಡಿದ್ದ ದಾಖಲೆಯನ್ನು ಮುರಿದರು. ಕೊಹ್ಲಿಯ ಈ ದಾಖಲೆಯನ್ನು ನಾಚಿಕೆಗೇಡು ಎಂದು ಕರೆಯುವುದು ಹೆಚ್ಚು ಸೂಕ್ತವಾಗಿರುತ್ತದೆ. ಈ ಹಿಂದೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ದಾಖಲೆ ಸೌರವ್​ ಗಂಗೂಲಿ ಹೆಸರಲ್ಲಿತ್ತು.

ಗಂಗೂಲಿ ಬಳಿ ಈ ದಾಖಲೆ ಇರುವುದನ್ನು ಸಹಿಸಿಕೊಳ್ಳದ ಕೊಹ್ಲಿ, ಆ ದಾಖಲೆಯನ್ನು ಸಹ ತಮ್ಮ ಖಾತೆಗೆ ವರ್ಗಾಹಿಸಿಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14 ನೇ ಬಾರಿಗೆ ಶೂನ್ಯಕ್ಕೆ ಔಟಾಗುವ ಮೂಲಕ ವಿರಾಟ್ ಕೊಹ್ಲಿ ಈಗ ನಂಬರ್​ 1 ಸ್ಥಾನಕ್ಕೆ ಏರಿದ್ದಾರೆ. ಈ ಹಿಂದೆ ಸೌರವ್ ಗಂಗೂಲಿ 13 ಬಾರಿ ಶೂನ್ಯಕ್ಕೆ ಔಟಾಗಿದ್ದರು.

ಕೊಹ್ಲಿ ಔಟ್​ ಆಗುತ್ತಿದಂತೆ, ಕ್ರಿಕೆಟ್ ಪ್ರೇಮಿಗಳು sarcastic ಆಗಿ ಇನಸ್ಟಾಗ್ರಾಮ್​ನಲ್ಲಿ ಸಂದೇಶ ಹಾಕಿದ್ದಾರೆ. ನಮ್ಮ ಇನಸ್ಟಾಗ್ರಾಂನ ರೂಪದರ್ಶಿ ಕೊಹ್ಲಿ ಅವರ ಕ್ರಿಕೆಟ್​ ಆಟದ ಬಗ್ಗೆ ನಾವೇನು ತಲೆಕೆಡಿಸಿಕೊಳ್ಳೊಲ್ಲ ಎಂದು ಸಂದೇಶ ಹಾಕಿ ಟ್ರೋಲ್​ ಮಾಡಿದ್ದಾರೆ. ಅದರ ಅರ್ಥ ಏನೆಂದರೆ, ಇತ್ತೀಚೆಗೆ ಕೊಹ್ಲಿ ತಮ್ಮ ಪತ್ನಿ ಜೊತೆ ಇರುವ ಫೋಟೋಗಳನ್ನು ಇನಸ್ಟಾಗ್ರಾಂನಲ್ಲಿ ಹಾಕುವ ಕೆಲಸದಲ್ಲಿ ತೊಡಗಿದ್ದಾರೆ. ಕ್ರಿಕೆಟ್​ ಈಗ ಅವರ ಎರಡನೇ ಕೆಲಸ ಎಂದು ಕಾಲೆಳೆದಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶೂನ್ಯಕ್ಕೆ ಔಟಾದ ಭಾರತೀಯ ನಾಯಕರು ವಿರಾಟ್ ಕೊಹ್ಲಿ 14 ಬಾರಿ ಸೌರವ್ ಗಂಗೂಲಿ 13 ಬಾರಿ ಎಂ.ಎಸ್.ಧೋನಿ 11 ಬಾರಿ ಕಪಿಲ್ ದೇವ್ 10 ಬಾರಿ ಎಂಎಕೆ ಪಟೌಡಿ 8 ಬಾರಿ

ಇದನ್ನೂ ಓದಿ: India vs England 2021, 1st T20, LIVE Score: ಮೊದಲ T20 ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್​, ಭಾರತಕ್ಕೆ ಹೀನಾಯ ಸೋಲು

ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ