ಮಧ್ಯಾಹ್ನ ಬಿಸಿಯೂಟಕ್ಕೆ ಕಾದಿದ್ದ ವಿದ್ಯಾರ್ಥಿಗಳಿಗೆ ಶಾಕ್: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಹುಬ್ಬಳ್ಳಿ ತಾಲೂಕಿನ ತಾರಿಹಾಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟದ ಸಾಂಬಾರಿನಲ್ಲಿ ನುಸಿ ಹುಳಗಳು ಪತ್ತೆಯಾಗಿವೆ. ಖಾಸಗಿ ಸಂಸ್ಥೆ ಪೂರೈಸಿದ್ದ ಊಟದಲ್ಲಿ ನುಸಿ ಕಂಡು ವಿದ್ಯಾರ್ಥಿಗಳು ಊಟ ತ್ಯಜಿಸಿ ಮನೆಗೆ ತೆರಳಿದ್ದಾರೆ. ಈ ಘಟನೆ ಪೋಷಕರ ಆಕ್ರೋಶಕ್ಕೆ ಕಾರಣವಾಗಿದ್ದು, ಆಹಾರ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಹುಬ್ಬಳ್ಳಿ, ಫೆಬ್ರವರಿ 02: ಹುಬ್ಬಳ್ಳಿ ತಾಲೂಕಿನ ತಾರಿಹಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟದ ಸಾಂಬಾರಿನಲ್ಲಿ ನುಸಿ ಹುಳ ಪತ್ತೆ ಆಗಿರುವಂತಹ ಘಟನೆ ನಡೆದಿದೆ. ತಾರಿಹಾಳ ಸೇರಿ ವಿವಿಧ ಶಾಲೆಗೆ ಮಧ್ಯಾಹ್ನ ಬಿಸಿ ಊಟ ಅನ್ನ ಮತ್ತು ಸಾಂಬಾರು ಪೂರೈಕೆ ಮಾಡಲಾಗಿತ್ತು. ಬಹುತೇಕ ಶಾಲೆಗಳಿಗೆ ಪೂರೈಕೆ ಮಾಡಿದ್ದ ಸಾಂಬಾರನಲ್ಲಿ ನುಸಿ ಹುಳ ಪತ್ತೆ ಆಗಿದೆ. ಸಾಂಬಾರಿನಲ್ಲಿ ನುಸಿ ನೋಡಿದ ವಿದ್ಯಾರ್ಥಿಗಳು ಊಟ ಬಿಟ್ಟು ಮನೆಗೆ ಹೋಗಿ ಊಟ ಮಾಡಿ ಬಂದಿದ್ದಾರೆ. ಊಟ ಪೂರೈಸುವ ಸಂಸ್ಥೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
