India vs England | ಸದಾ ನೆಚ್ಚಿಕೊಳ್ಳಬಹುದಾದ ಬೌಲರ್ ಭುವಿ ತಂಡಕ್ಕೆ ವಾಪಸ್ಸಾಗಿರುವುದು ಸಂತಸ ನೀಡಿದೆ: ವಿರಾಟ್ ಕೊಹ್ಲಿ

ಭುವನೇಶ್ವರ್ ಅವರು ಸಯ್ಯದ್ ಮುಷ್ತಾಕ್ ಅಲಿ ಮತ್ತು ವಿಜಯ ಹಜಾರೆ ಟ್ರೋಫಿಯಲ್ಲಿ ಉತ್ತರ ಪ್ರದೇಶದ ಪರ ಆಡಿ ತಮ್ಮ ಫಿಟ್ನೆಸ್ ಸಾಬೀತು ಮಾಡಿದ್ದಾರೆ. ಈ ಸರಣಿಯಲ್ಲಿ ದೀಪಕ್ ಚಹರ್, ಟಿ ನಟರಾಜನ್, ನವದೀಪ್ ಸೈನಿ ಮತ್ತು ಶಾರ್ದುಲ್ ಠಾಕೂರ್​ ಅವರನ್ನೊಳಗೊಂಡ ವೇಗದ ಬೌಲರ್​ಗಳ ಪಡೆಯ ನೇತೃತ್ವವನ್ನು ಭುವಿ ವಹಿಸಿಕೊಳ್ಳಲಿದ್ದಾರೆ.

India vs England | ಸದಾ ನೆಚ್ಚಿಕೊಳ್ಳಬಹುದಾದ ಬೌಲರ್ ಭುವಿ ತಂಡಕ್ಕೆ ವಾಪಸ್ಸಾಗಿರುವುದು ಸಂತಸ ನೀಡಿದೆ: ವಿರಾಟ್ ಕೊಹ್ಲಿ
ಭುವನೇಶ್ವರ್ ಕುಮಾರ್
Follow us
ಅರುಣ್​ ಕುಮಾರ್​ ಬೆಳ್ಳಿ
|

Updated on: Mar 12, 2021 | 8:06 PM

ಅಹಮದಾಬಾದ: ವೇಗದ ಬೌಲರ್ ಭುವನೇಶ್ವರ್ ಕುಮಾರ್ ತಂಡಕ್ಕೆ ವಾಪಸ್ಸಾಗಿರುವುದಕ್ಕೆ ಅಪಾರ ಸಂತಸ ವ್ಯಕ್ತಪಡಿಸಿರುವ ಟೀಮ್ ಕ್ಯಾಪ್ಟನ್ ವಿರಾಟ್ ಕೊಹ್ಲಿ. ಅವರು ನೆಚ್ಚಿಕೊಳ್ಳಬಹುದಾದ ಬೌಲರ್ ಅಗಿದ್ದಾರೆ ಎಂದು ಹೇಳಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಶುಕ್ರವಾರದಂದು ಶುರುವಾದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭುವಿ ಅಡುತ್ತಿದ್ದಾರೆ. ಹಾಗೆ ನೋಡಿದರೆ ಸುಮಾರು 15 ತಿಂಗಳ ನಂತರ ಅವರು ಟೀಮ್ ಇಂಡಿಯಾಗೆ ಆಡುತ್ತ್ತಿದ್ದಾರೆ. ಕೊವಿಡ್ ನಂತರ ಆರಂಭವಾಗಿರುವ ರಾಷ್ಟ್ರೀಯ ತಂಡದ ಕ್ರಿಕೆಟ್ ಚಟುವಟಿಕೆಗಳಲ್ಲಿ ಅವರು ಇದೇ ಪ್ರಥಮ ಬಾರಿಗೆ ಭಾಗಿಯಾಗಿದ್ದಾರೆ. ನಿಖರವಾಗಿ ಯಾರ್ಕರ್​ಗಳನ್ನು ಎಸೆಯುವ ಅವರು ತಂಡಕ್ಕೆ ವಾಪಸ್ಸಾಗಿರುವುದು ಸಹಜವಾಗಿಯೇ ಕೊಹ್ಲಿ ಅವರಲ್ಲಿ ಸಂತಸ ಮೂಡಿಸಿದೆ.

‘ಭುವಿ ಪುನ: ಅಂತರಾಷ್ಟ್ರೀಯ ಪಂದ್ಯಗಳನ್ನಾಡಲು ಸಂಪೂರ್ಣವಾಗಿ ತಯಾರಾಗಿದ್ದಾರೆ. ನಾವೆಲ್ಲ ಹಿಂದೆ ನೋಡಿರುವಂತೆ ಅವರು ಚಾಣಾಕ್ಷ ಬೌಲರ್ ಆಗಿದ್ದಾರೆ. ತಾನೇನು ಮಾಡಬೇಕಿದೆ, ತನ್ನ ಮೇಲಿರುವ ಜವಾಬ್ದಾರಿಯನ್ನು ಏನು ಅನ್ನುವುದನ್ನು ಚೆನ್ನಾಗಿ ಗ್ರಹಿಸಿಕೊಳ್ಳುವ ಅವರು ನಮ್ಮ ಟಿ20 ಬೌಲರ್​ಗಳ ಪೈಕಿ ಅತ್ಯಂತ ಅನುಭವಿ ಆಗಿದ್ದಾರೆ. ಪಂದ್ಯದ ಯಾವುದೇ ಹಂತದಲ್ಲಿ ನೆಚ್ಚಿಕೊಳ್ಳಬಹುದಾದ ಬೌಲರ್ ತಂಡಕ್ಕೆ ವಾಪಸ್ಸಾಗಿರುವುದು ಬಹಳ ಸಂತೋಷವನ್ನುಂಟು ಮಾಡಿದೆ,’ ಎಂದು ಕೊಹ್ಲಿ ಶುಕ್ರವಾರದ ಪಂದ್ಯಕ್ಕೆ ಮೊದಲು ಆಹಮದಾಬಾದಿನಲ್ಲಿ ನಡೆದ ವರ್ಚ್ಯುಯಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಭುವನೇಶ್ವರ್ ಅವರು ಸಯ್ಯದ್ ಮುಷ್ತಾಕ್ ಅಲಿ ಮತ್ತು ವಿಜಯ ಹಜಾರೆ ಟ್ರೋಫಿಯಲ್ಲಿ ಉತ್ತರ ಪ್ರದೇಶದ ಪರ ಆಡಿ ತಮ್ಮ ಫಿಟ್ನೆಸ್ ಸಾಬೀತು ಮಾಡಿದ್ದಾರೆ. ಈ ಸರಣಿಯಲ್ಲಿ ದೀಪಕ್ ಚಹರ್, ಟಿ ನಟರಾಜನ್ (ಮೊದಲ ಪಂದ್ಯಕ್ಕೆ ಲಭ್ಯರಿಲ್ಲ), ನವದೀಪ್ ಸೈನಿ ಮತ್ತು ಶಾರ್ದುಲ್ ಠಾಕೂರ್​ ಅವರನ್ನೊಳಗೊಂಡ ವೇಗದ ಬೌಲರ್​ಗಳ ಪಡೆಯ ನೇತೃತ್ವವನ್ನು ಭುವಿ ವಹಿಸಿಕೊಳ್ಳಲಿದ್ದಾರೆ.

‘ಒಂದು ನಿರ್ದಿಷ್ಟವಾದ ಆಯಾಮದೊಂದಿಗೆ ನಾವು ಆಡುತ್ತಾ ಬಂದಿದ್ದೇವೆ. ಬಹಳ ದಿನಗಳಿಂದ ನಾವು ಯಾವುದೇ ದೊಡ್ಡ ಟೂರ್ನಮೆಂಟ್​ ಆಡಿರಲಿಲ್ಲ. ಈ ಸರಣಿಗೆ ಆಯ್ಕೆಯಾಗಿರುವ ತಂಡವನ್ನು ನೋಡಿದ್ದೇಯಾದರೆ, ಕೆಲ ನಿರ್ದಿಷ್ಟವಾದ ಸಮಸ್ಯೆ ಮತ್ತು ನ್ಯೂನತೆಗಳನ್ನು ಸರಿಮಾಡಿಕೊಳ್ಳುವ ಉದ್ದೇಶದಿಂದ ಆಟಗಾರರನ್ನು ಆರಿಸಲಾಗಿದೆ,’ ಎಂದು ಕೊಹ್ಲಿ ಹೇಳಿದರು.

ಟೀಮಿಗೆ ಆಯ್ಕೆಯಾಗಿರುವ ಯುವ ಆಟಗಾರರ ಬಗ್ಗೆ ಕಾಮೆಂಟ್ ಮಾಡಿದ ಕೊಹ್ಲಿ, ಅವರಲ್ಲಿರುವ ಎಕ್ಸ್-ಪ್ಯಾಕ್ಟರ್​ಗಾಗಿ ಟೀಮಿಗೆ ಸೇರಿಸಲಾಗಿದೆ ಎಂದು ಹೇಳಿದರು.

‘ಟಿ20 ಕ್ರಿಕೆಟ್​ಗೆ ಬೇಕಾಗುವ ಎಕ್ಸ್-ಫ್ಯಾಕ್ಟರ್​ ಅನ್ನು ಈ ಯುವ ಆಟಗಾರರು ಟೀಮಿಗೆ ತರುತ್ತಾರೆ ಮತ್ತು ಈ ಅದು ಫಾರ್ಮಾಟ್​ಗೆ ಅತ್ಯವಶ್ಯಕವಾಗಿದೆ. ಇವರೆಲ್ಲ ಇಂಡಿಯನ್ ಪ್ರಿಮೀಯರ್​ ಲೀಗ್​ನಲ್ಲಿ ತಮ್ಮ ಸಾಮರ್ಥ್ಯವನ್ನು ಸತತವಾಗಿ ಸಾಬೀತು ಮಾಡಿದ್ದಾರೆ. ಎಲ್ಲ ನ್ಯೂನತೆಗಳನ್ನು ಕವರ್ ಮಾಡುವ ಪ್ರಯತ್ನ ಮಾಡಲಾಗಿದೆ. ಇನ್ನು ಮುಂದೆ ನಡೆಯುವ 5 ಪಂದ್ಯಗಳಲ್ಲಿ ಅವರು ಹೇಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ಧಾರೆ ಎನ್ನುವುದು ಕಾದು ನೋಡಬೇಕು,’ ಎಂದು ಕೊಹ್ಲಿ ಹೇಳಿದರು.

ಆಟಗಾರರ ಸಾಮರ್ಥ್ಯವನ್ನು ಪರೀಕ್ಷಿಸಲು ಕಳೆದ ವರ್ಷ ಅವಕಾಶಗಳು ಇಲ್ಲದೆ ಹೋದ ಕಾರಣ ತಮಗೆ ಈಗ ನೀಡಿರುವ ತಂಡದ ಬಗ್ಗೆ ಕೊಹ್ಲಿ ತೃಪ್ತಿ ವ್ಯಕ್ತಪಡಿಸಿದ್ದಾರೆ.

‘ವಿಶ್ವಕಪ್​ಗೆ ಮೊದಲು ನಮಗೆ ಈ ಪಂದ್ಯಗಳು ಮಾತ್ರ ಇರೋದು. ಹಾಗಾಗೇ ಈಗ ತಂಡದಲ್ಲಿರುವ ಆಟಗಾರರು ಹೇಗೆ ಪರ್ಫಾರ್ಮ್ ಮಾಡುತ್ತಾರೆನ್ನುವುದನ್ನು ನೋಡಬೇಕಿದೆ. ಜದ್ದು (ರವೀಂದ್ರ ಜಡೇಜಾ) ಅವರಿಲ್ಲ ಎನ್ನುವುದನ್ನು ಬಿಟ್ಟರೆ, ಈ ತಂಡ ನನಗೆ ಪರಿಪೂರ್ಣವೆನಿಸುತ್ತಿದೆ. ಜದ್ದು ಫಿಟ್ ಆದ ತಕ್ಷಣ ಟೀಮಿಗೆ ಮರಳುತ್ತಾರೆ. ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಲು ಸಾಕಷ್ಷು ಆಪ್ಷನ್​ಗಳಿರುವುದರಿಂದ ಇದೊಂದು ಸಮತೋಲಿತ ತಂಡವಾಗಿದೆ,’ ಎಂದು ಕೊಹ್ಲಿ ಹೇಳಿದರು.

ಇದನ್ನೂ ಓದಿ: India vs England: ಹೊಸ ವಾರ, ಹೊಸ ಫಾರ್ಮಟ್ ಆದರೆ ಮಿಷನ್ ಅದೇ ಎಂದ ವಿರಾಟ್ ಕೊಹ್ಲಿ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ