India vs England: 2ನೇ ಬಾರಿಗೆ ಫಿಟ್ನೆಸ್‌ ಟೆಸ್ಟ್ ಫೇಲಾದ ವರುಣ್​ ಚಕ್ರವರ್ತಿ, ಇಂಜುರಿಯಿಂದ ಬಳಲುತ್ತಿರುವ ಟಿ ನಟರಾಜನ್‌ ಆಡೋದು ಡೌಟು!

India vs England: ವರುಣ್ ಅವರಲ್ಲದೆ, ಮೊಣಕಾಲು ಹಾಗೂ ಭುಜದ ನೋವಿನಿಂದ ಬಳಲುತ್ತಿರುವ ಟಿ ನಟರಾಜನ್‌ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಅವರು ಗುಣಮುಖರಾದರೆ ಖಂಡಿತಾ ಅವರನ್ನು ಟಿ20 ಸರಣಿಗೆ ಪರಿಗಣಿಸಬಹುದು ಎಂದು ಮೂಲಗಳು ಹೇಳಿವೆ.

India vs England: 2ನೇ ಬಾರಿಗೆ ಫಿಟ್ನೆಸ್‌ ಟೆಸ್ಟ್ ಫೇಲಾದ ವರುಣ್​ ಚಕ್ರವರ್ತಿ, ಇಂಜುರಿಯಿಂದ ಬಳಲುತ್ತಿರುವ ಟಿ ನಟರಾಜನ್‌ ಆಡೋದು ಡೌಟು!
Follow us
ಪೃಥ್ವಿಶಂಕರ
|

Updated on: Mar 10, 2021 | 4:15 PM

ಅಹಮದಾಬಾದ್‌: ಭಾರತ ಮತ್ತು ಇಂಗ್ಲೆಂಡ್ ನಡುವೆ ಐದು ಟಿ 20 ಪಂದ್ಯಗಳ ಸರಣಿ ಮಾರ್ಚ್​ 12ರಿಂದ ಆರಂಭವಾಗಲಿದೆ. ಆದರೆ ಸರಣಿ ಪ್ರಾರಂಭವಾಗುವ ಮೊದಲು ಭಾರತಕ್ಕೆ ಆಘಾತ ಎದುರಾಗಿದೆ. ಅದೆನೆಂದರೆ, ತಂಡದ ಲೆಗ್ ಸ್ಪಿನ್ನರ್ ವರುಣ್ ಚಕ್ರವರ್ತಿ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದಾರೆ. ವರುಣ್​ ಎರಡನೇ ಬಾರಿಗೆ ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾಗಿದ್ದಾರೆ. ಹೀಗಾಗಿ ವರುಣ್ ಶುಕ್ರವಾರದಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದು ಟಿ 20 ಅಂತರರಾಷ್ಟ್ರೀಯ ಸರಣಿಯಿಂದ ಹೊರಗುಳಿಯಲ್ಲಿದ್ದಾರೆ.

ವರುಣ್ ಅವರಲ್ಲದೆ, ಮೊಣಕಾಲು ಹಾಗೂ ಭುಜದ ನೋವಿನಿಂದ ಬಳಲುತ್ತಿರುವ ಟಿ ನಟರಾಜನ್‌ ಅವರಿಗೆ ತೀವ್ರ ಹಿನ್ನಡೆಯಾಗಿದೆ. ಅವರು ಗುಣಮುಖರಾದರೆ ಖಂಡಿತಾ ಅವರನ್ನು ಟಿ20 ಸರಣಿಗೆ ಪರಿಗಣಿಸಬಹುದು ಎಂದು ಮೂಲಗಳು ಹೇಳಿವೆ. ಸರಣಿಯಲ್ಲಿ ಇಬ್ಬರೂ ಆಟಗಾರರ ಅನುಪಸ್ಥಿತಿಯು ಭಾರತಕ್ಕೆ ಕೊಂಚ ಕಷ್ಟಕರವಾಗಬಹುದು. ಆಸ್ಟ್ರೇಲಿಯಾ ವಿರುದ್ಧದ ಟಿ 20 ಸರಣಿಯಲ್ಲಿ ಪಾದಾರ್ಪಣೆ ಮಾಡಿದ ಟಿ ನಟರಾಜನ್ ಉತ್ತಮ ಪ್ರದರ್ಶನ ನೀಡಿದ್ದರು.

ಟಿ ನಟರಾಜನ್

ಫಿಟ್ನೆಸ್ ಪರೀಕ್ಷೆಯಲ್ಲಿ ಎರಡನೇ ಬಾರಿಗೆ ವರುಣ್ ವಿಫಲ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ನಡೆದ ಫಿಟ್‌ನೆಸ್ ಪರೀಕ್ಷೆಗಳಲ್ಲಿ ಸತತವಾಗಿ 2ನೇ ಬಾರಿಗೆ ಉತ್ತೀರ್ಣರಾಗಲು ವರುಣ್ ವಿಫಲರಾಗಿದ್ದಾರೆ. ವರುಣ್ ಚಕ್ರವರ್ತಿ ಭುಜದ ಗಾಯದಿಂದ ಚೇತರಿಸಿಕೊಂಡಿದ್ದರಿಂದ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆಗಿದ್ದರೂ ಸಹ,ವರುಣ್​ ಯೋ-ಯೋ ಪರೀಕ್ಷೆಯಲ್ಲಿ ಎರಡನೇ ಬಾರಿಗೆ ಉತ್ತೀರ್ಣರಾಗಲು ವಿಫಲರಾದರು.

ವರುಣ್‌ ಚಕ್ರವರ್ತಿ ಅವರು ಫಿಟ್ನೆಸ್‌ ಟೆಸ್ಟ್ ಪಾಸ್‌ ಮಾಡದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ರಾಹುಲ್‌ ಚಹರ್‌ ಅವರನ್ನು ಆಯ್ಕೆ ಮಾಡಲಾಗಿದೆ. ಚಹರ್‌ ಈಗಾಗಲೇ ಟೆಸ್ಟ್ ಸರಣಿಯಲ್ಲಿ ತಂಡದ ಜತೆ ಮೀಸಲು ಆಟಗಾರನಾಗಿ ಕಾಣಿಸಿಕೊಂಡಿದ್ದರು. ಮಂಗಳವಾರ ನಡೆದಿದ್ದ ಮತ್ತೊಂದು ಸುತ್ತಿನ ಫಿಟ್ನೆಸ್‌ ಟೆಸ್ಟ್‌ನಲ್ಲಿ ಚಕ್ರವರ್ತಿ ವಿಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ರಾಹುಲ್‌ ಚಹರ್​ಗೆ ಸ್ಥಾನ ನಿಡುವುದು ಸ್ಪಷ್ಟವಾಗಿದೆ.

ಒಂದು ವೇಳೆ ನಟರಾಜನ್‌ ಅವರು ಟಿ20 ಸರಣಿಯಿಂದ ಅಧೀಕೃತವಾಗಿ ಹೊರ ನಡೆದರೆ, ಟೀಂ ಇಂಡಿಯಾಗೆ ಹಿನ್ನಡೆಯಾಗಬಹುದು. ಆದರೆ, ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಮಂಗಳವಾರ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡುತ್ತಿರುವ ವಿಡಿಯೊವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಹಾಗಾಗಿ, ತಂಡದ ಬೌಲಿಂಗ್‌ ಆಯ್ಕೆಗೆ ಪಾಂಡ್ಯ ಲಭ್ಯವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: India vs England: T20 ಸರಣಿ ಆರಂಭಕ್ಕೂ ಮುನ್ನ ಕೊಹ್ಲಿಗೆ ಎದುರಾಯ್ತು ಆಟಗಾರರ ಆಯ್ಕೆ ಸಮಸ್ಯೆ.. ವಿರಾಟ್​ ಯಾರ ಕೈಹಿಡಿಯಲ್ಲಿದ್ದಾರೆ?

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್