ICC T20 Rankings: ಯಾವುದೇ ಪಂದ್ಯವನ್ನಾಡದೆ 2ನೇ ಸ್ಥಾನಕ್ಕೇರಿದ ಭಾರತ, 3ನೇ ಸ್ಥಾನಕ್ಕಿಳಿದ ರಾಹುಲ್.. ಕೊಹ್ಲಿ ಸ್ಥಾನಕ್ಕೆ ಭಂಗವಿಲ್ಲ!
ICC T20 Rankings: ಟೀಂ ಇಂಡಿಯಾ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಎರಡನೇ ರ್ಯಾಂಕ್‌ನಿಂದ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ರಾಹುಲ್ ಅವರನ್ನು ಹಿಂದಕ್ಕೆ ತಳ್ಳುವ ಕೆಲಸವನ್ನು ಆಸ್ಟ್ರೇಲಿಯಾ ನಾಯಕ ಆರನ್ ಫಿಂಚ್ ಮಾಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಸರಣಿಯು ಮಾರ್ಚ್ 12 ರಂದು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಈ ಸರಣಿ ಎರಡು ತಂಡಗಳಿಗೂ ಪ್ರತಿಷ್ಟೆಯ ಕಣವಾಗಿದೆ. ಏಕೆಂದರೆ ಪ್ರಸ್ತುತ ಇಂಗ್ಲೆಂಡ್ ಆಕ್ರಮಿಸಿಕೊಂಡಿರುವ ಐಸಿಸಿ ಟಿ20 ಶ್ರೇಯಾಂಕದಲ್ಲಿನ ಉನ್ನತ ಸ್ಥಾನವನ್ನು, ಈ ಸರಣಿಯನ್ನು ಟೀಂ ಇಂಡಿಯಾ ಗೆಲ್ಲುವ ಮೂಲಕ ನಂಬರ್ 1 ಸ್ಥಾನಕ್ಕೆ ಲಗ್ಗೆ ಇಡಲು ಕಾತುರದಿಂದ ಕಾಯುತ್ತಿದೆ. ಆದರೂ ಸರಣಿ ಪ್ರಾರಂಭವಾಗುವ ಮೊದಲು, ಟೀಂ ಇಂಡಿಯಾಕ್ಕೆ ಸಮಾದಾನಕರ ಸುದ್ದಿ ಕೇಳಿಬಂದಿದೆ. ಅದೆನೆಂದರೆ, ಬುಧವಾರ ಬಿಡುಗಡೆಯಾದ ಐಸಿಸಿಯ ಇತ್ತೀಚಿನ ಟಿ20 ಶ್ರೇಯಾಂಕದಲ್ಲಿ, ಭಾರತ ತಂಡವು ಯಾವುದೇ ಪಂದ್ಯಗಳನ್ನು ಆಡದೆ ಎರಡನೇ ಸ್ಥಾನವನ್ನು ತಲುಪಿದೆ. ಈಗ ಮೂರನೇ ಸ್ಥಾನಕ್ಕೆ ಕುಸಿದಿರುವ ಆಸ್ಟ್ರೇಲಿಯಾದ ಸೋಲಿನಿಂದ ಭಾರತಕ್ಕೆ ಈ ಲಾಭವಾಗಿದೆ.
275 ಅಂಕಗಳೊಂದಿಗೆ ಇಂಗ್ಲೆಂಡ್ ಅಗ್ರಸ್ಥಾನದಲ್ಲಿದೆ.. ಮಾರ್ಚ್ 12 ಶುಕ್ರವಾರದಿಂದ ಅಹಮದಾಬಾದ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಭಾರತ ತಂಡ ಪ್ರಾರಂಭಿಸಲಿದೆ. ಆದರೆ, ಇದಕ್ಕೂ ಮುನ್ನ ತಂಡಕ್ಕೆ ಒಳ್ಳೆಯ ಸುದ್ದಿ ಬಂದಿದೆ. ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ 3-2ರ ಅಂತರದ ಸೋಲಿನ ನಂತರ, ಎರಡನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೆ ತಲುಪಿದೆ. ಇದರಿಂದಾಗಿ ಮೂರನೇ ಸ್ಥಾನದಲ್ಲಿರುವ ಭಾರತ 268 ಅಂಕಗಳೊಂದಿಗೆ ಎರಡನೇ ರ್ಯಾಂಕ್ಗೆ ತಲುಪಿದೆ. 275 ಅಂಕಗಳೊಂದಿಗೆ ಇಂಗ್ಲೆಂಡ್ ಅಗ್ರಸ್ಥಾನದಲ್ಲಿದೆ. ಟಿ20 ಸರಣಿಯಲ್ಲಿ ಭಾರತ ಇಂಗ್ಲೆಂಡ್‌ನ್ನು 4-1ರಿಂದ ಸೋಲಿಸಿದರೆ, ಟೀಂ ಇಂಡಿಯಾ ಮೊದಲ ಸ್ಥಾನವನ್ನು ತಲುಪಲ್ಲಿದೆ.
3ನೇ ಸ್ಥಾನಕ್ಕೆ ಕುಸಿದ ರಾಹುಲ್, ವಿರಾಟ್ ಸ್ಥಾನದಲ್ಲಿ ಬದಲಾವಣೆ ಇಲ್ಲ ಟೀಂ ಇಂಡಿಯಾ ಸೂಪರ್‌ಸ್ಟಾರ್ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಎರಡನೇ ರ್ಯಾಂಕ್‌ನಿಂದ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ರಾಹುಲ್ ಅವರನ್ನು ಹಿಂದಕ್ಕೆ ತಳ್ಳುವ ಕೆಲಸವನ್ನು ಆಸ್ಟ್ರೇಲಿಯಾ ನಾಯಕ ಆರನ್ ಫಿಂಚ್ ಮಾಡಿದ್ದಾರೆ. ಪಿಂಚ್ ನ್ಯೂಜಿಲೆಂಡ್ ವಿರುದ್ಧದ ಟಿ 20 ಸರಣಿಯಲ್ಲಿ ಸತತ ಎರಡು ಅತ್ಯುತ್ತಮ ಅರ್ಧಶತಕಗಳನ್ನು ಗಳಿಸಿದ್ದರು. ಆದರೆ, ಭಾರತದ ನಾಯಕ ವಿರಾಟ್ ಕೊಹ್ಲಿ ಆರನೇ ಸ್ಥಾನವನ್ನು ಉಳಿಸಿಕೊಂಡರೆ, ಇಂಗ್ಲೆಂಡ್ ತಂಡದ ಡೇವಿಡ್ ಮಲನ್ ಇನ್ನೂ ನಂಬರ್ ಒನ್ ಸ್ಥಾನದಲ್ಲಿ ಮುಂದುವರೆದಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಟಾಪ್ -10 ರಲ್ಲಿ ಯಾರೂ ಇಲ್ಲ. ಬೌಲಿಂಗ್ ವಿಭಾಗದಲ್ಲಿ ಭಾರತಕ್ಕೆ ಯಾವುದೇ ಒಳ್ಳೆಯ ಸುದ್ದಿ ಇಲ್ಲ. ಈ ಶ್ರೇಯಾಂಕದಲ್ಲಿ ಅಗ್ರ 10 ರಲ್ಲಿ ಯಾವುದೇ ಭಾರತೀಯ ಬೌಲರ್ ಕಾಣಿಸಿಕೊಂಡಿಲ್ಲ. ಇಲ್ಲಿ, ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಪ್ರಥಮ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಸ್ಪಿನ್ನರ್ ಆಷ್ಟನ್ ಅಗರ್ ಉತ್ತಮ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಅಂತೆಯೇ, ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ಯಾವೊಬ್ಬ ಭಾರತೀಯ ಆಟಗಾರನೂ ಮೊದಲ 10ರಲ್ಲಿ ಸ್ಥಾನ ಗಳಿಸಿಲ್ಲ. ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ನಂಬರ್ ಒನ್ ಆಲ್‌ರೌಂಡರ್ ಆಗಿ ಆಯ್ಕೆಯಾಗಿದ್ದಾರೆ.
Published On - 5:28 pm, Wed, 10 March 21