AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಪಿ ಹೊಡೆದು ಡಿಬಾರ್​ ಆಗಿದ್ದಕ್ಕೆ ಕೋರ್ಟ್ ಮೆಟ್ಟಿಲೇರಿದ್ದ ಪ್ರಶಾಂತ್​ ಸಂಬರಗಿ

ನಾನು ಪರೀಕ್ಷೆಯಲ್ಲಿ ಕಾಪಿ ಮಾಡೇ ಇಲ್ಲ ಎಂದು ಕೋರ್ಟ್​ಗೆ ಚಾಲೆಂಜ್​ ಮಾಡಿದ್ದೆ. ಇದುವೇ ಕೋರ್ಟ್​ನಲ್ಲಿ ನನ್ನ ಮೊದಲ ಪ್ರಕರಣ ಎಂದು ಪ್ರಶಾಂತ್​ ಹೇಳುತ್ತಿದ್ದಂತೆ ಎಲ್ಲರೂ ಚಪ್ಪಾಳೆ ಹೊಡೆದರು.

ಕಾಪಿ ಹೊಡೆದು ಡಿಬಾರ್​ ಆಗಿದ್ದಕ್ಕೆ ಕೋರ್ಟ್ ಮೆಟ್ಟಿಲೇರಿದ್ದ ಪ್ರಶಾಂತ್​ ಸಂಬರಗಿ
ಪ್ರಶಾಂತ್​ ಸಂಬರಗಿ
Follow us
ರಾಜೇಶ್ ದುಗ್ಗುಮನೆ
|

Updated on: Mar 26, 2021 | 7:29 PM

ಬಿಗ್​ ಬಾಸ್​ ಮನೆಯಲ್ಲಿ ಮಾರ್ಚ್​ 25ರ ಎಪಿಸೋಡ್​ನಲ್ಲಿ ಎಲ್ಲರೂ ತಾವು ಅನುಭವಿಸಿದ ಕಷ್ಟದ ಬಗ್ಗೆ ಹೇಳಿಕೊಂಡಿದ್ದರು. ಪ್ರತಿಯೊಬ್ಬರ ಕಥೆಗಳು ವೀಕ್ಷಕರಿಗೆ ಕಣ್ಣೀರು ತರಿಸಿದ್ದವು. ಮನೆಯಲ್ಲಿರುವ 14 ಸದಸ್ಯರ ಪೈಕಿ ಪ್ರಶಾಂತ್​ ಸಂಬರಗಿ ಮಾತ್ರ ತಮ್ಮ ಜೀವನದಲ್ಲಿ ನಡೆದ ವಿಚಿತ್ರ ಘಟನೆ ಬಗ್ಗೆ ಹೇಳಿಕೊಂಡರು. ಈ ಕಥೆ ಕೇಳಿ ಮನೆ ಮಂದಿಯೆಲ್ಲ ಬಿದ್ದು ಬಿದ್ದು ನಕ್ಕಿದ್ದಾರೆ. ಏಕೆಂದರೆ, ಪ್ರಶಾಂತ್ ಸಂಬರಗಿ ಪಿಯುಸಿ ಪರೀಕ್ಷೆ ಬರೆಯುವಾಗ ಹೆಚ್ಚು ಮಾರ್ಕ್ಸ್​ ಗಳಿಸ ಬೇಕು ಎಂದು ​ಕಾಪಿ ಹೊಡೆದು ಡಿಬಾರ್​ ಆಗಿದ್ದು ಮಾತ್ರವಲ್ಲ, ಕೋರ್ಟ್​ಗೆ ಮೇಲ್ಮನವಿ ಕೂಡ ಸಲ್ಲಿಕೆ ಮಾಡಿದ್ದರಂತೆ. ವೇದಿಕೆ ಮೇಲೆ ಬಂದು ಮಾತನಾಡಿರುವ ಪ್ರಶಾಂತ್ ಸಂಬರಗಿ, ನನ್ನ ಗುಟ್ಟುಗಳು ಅನೇಕ ಇವೆ. 1994-95ರಲ್ಲಿ ಸೆಕೆಂಡ್ ಪಿಯುಸಿ ಪರೀಕ್ಷೆ ಬರೆಯುವಾಗ ಕಾಪಿ ಹೊಡೆದು ಡಿಬಾರ್ ಆದ ವ್ಯಕ್ತಿ ನಾನು. ಡಿಬಾರ್​ ಆಗಿದ್ದು ಮಾತ್ರವಲ್ಲ ಈ ಪ್ರಕರಣವನ್ನು ಕೋರ್ಟ್​​ನಲ್ಲಿ ಚಾಲೆಂಜ್​ ಮಾಡಿದ್ದೆ ಎಂದು ಅವರು ಮಾತು ಆರಂಭಿಸಿದ್ದಾರೆ.

ನಾನು ಪರೀಕ್ಷೆಯಲ್ಲಿ ಕಾಪಿ ಮಾಡೇ ಇಲ್ಲ ಎಂದು ಕೋರ್ಟ್​ಗೆ ಚಾಲೆಂಜ್​ ಮಾಡಿದ್ದೆ. ಇದುವೇ ಕೋರ್ಟ್​ನಲ್ಲಿ ನನ್ನ ಮೊದಲ ಪ್ರಕರಣ ಎಂದು ಪ್ರಶಾಂತ್​ ಹೇಳುತ್ತಿದ್ದಂತೆ ಎಲ್ಲರೂ ಚಪ್ಪಾಳೆ ಹೊಡೆದರು. ಮಾವ ನೀವು ಗ್ರೇಟ್​ ಎಂದು ಹರ್ಷೋದ್ಘಾರ ವ್ಯಕ್ತಪಡಿಸಿದರು.

ಡಿಬಾರ್​ ಆದ ನಂತರ ಏನಾಯ್ತು ಎನ್ನುವ ಬಗ್ಗೆಯೂ ಪ್ರಶಾಂತ್​ ವಿವರಿಸಿದ್ದಾರೆ. ಈ ಎಲ್ಲಾ ವಿಚಾರಗಳನ್ನು ನಾನು ಕ್ಲಿಯರ್​ ಮಾಡಿಕೊಂಡು ಡಿಗ್ರಿಗೆ ಬಂದಿದ್ದೆ. ಆಗ ನನ್ನ ಪಿಯುಸಿ ಕ್ಲಾಸ್​ಮೇಟ್ಸ್​ ಅಂತಿಮ ವರ್ಷದ ಪದವಿಯಲ್ಲಿದ್ರು. ಹೀಗಾಗಿ ಅವರೆಲ್ಲ ನನಗೆ ಡ್ಯಾಡಿ ಅಂತಿದ್ರು ಎಂದು ನಕ್ಕರು. ಅಲ್ಲದೆ, ಈ ಗುಟ್ಟು ನಿಮ್ಮಲ್ಲೇ ಇರಲಿ ಎಂದು ಕೂಡ ಹೇಳಿದರು.

ಬಿಗ್​ ಬಾಸ್​ ಮನೆಯಲ್ಲಿ ತುಪ್ಪ ಖಾಲಿ ಮಾಡಿದ್ದ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು. ಪ್ರಶಾಂತ್​ ತುಪ್ಪ ತಿಂದೂ ಕೂಡ ತಾಯಾಣೆ ನಾನು ತುಪ್ಪ ತಿಂದಿಲಲ್ಲ ಎಂದು ಆಣೆ ಪ್ರಮಾಣ ಮಾಡಿದ್ದರು. ಇದೇ ವಿಚಾರವನ್ನು ಇದಕ್ಕೆ ಹೋಲಿಕೆ ಮಾಡಿ ಅರವಿಂದ್ ಅವರು ಪ್ರಶಾಂತ್​ ಕಾಲೆಳೆದಿದ್ದಾರೆ. ಈಗ ಸ್ಟೇಜ್​ನಿಂದ ಇಳಿದ ನಂತರ ಪ್ರಶಾಂತ್​ ನಾನು ತಾಯಾಣೆ ಕಾಪಿ ಹೊಡೆದಿಲ್ಲ ಎನ್ನುತ್ತಾರೆ ಎಂದರು.

ಇದನ್ನೂ ಓದಿ: ನನ್ನ ಬಾಯಿ ಬಚ್ಚಲು ಮನೆ ಇದ್ದಂಗೆ; ಮಂಜು ಪಾವಗಡ ಹೀಗೆ ಹೇಳಿದ್ದು ಯಾಕೆ?

‘ಸ್ಕರ್ಟ್​ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್​ ಬಾಸ್​ ಚಂದ್ರಕಲಾ ಬದುಕಿನ ಕಹಿ ಘಟನೆ!

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಕೊಹ್ಲಿಯ ಕೊನೆ ಟೆಸ್ಟ್ ಶತಕದ ವಿಡಿಯೋ ಹಂಚಿಕೊಂಡ ಆರ್​ಸಿಬಿ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ
ಭಾರತೀಯ 3 ಸೇನಾಪಡೆ ಮುಖ್ಯಸ್ಥರ ಸುದ್ದಿಗೋಷ್ಠಿ ನೇರಪ್ರಸಾರ