ನನ್ನ ಬಾಯಿ ಬಚ್ಚಲು ಮನೆ ಇದ್ದಂಗೆ; ಮಂಜು ಪಾವಗಡ ಹೀಗೆ ಹೇಳಿದ್ದು ಯಾಕೆ?

ಸಾಮಾನ್ಯವಾಗಿ ಜಗಳ ಮಾಡುವಾಗ ಕೆಟ್ಟ ಶಬ್ದ ಪ್ರಯೋಗ ಮಾಡುವಾಗ ನನ್ನ ಬಾಯಿ ಬಚ್ಚಲ ಮನೆ ಇದ್ದಂತೆ ಎನ್ನುತ್ತಾರೆ. ಆದರೆ, ಮಂಜು ಬೇರೆಯದೇ ರೀತಿ ಬಳಸಿದ್ದಾರೆ.

ನನ್ನ ಬಾಯಿ ಬಚ್ಚಲು ಮನೆ ಇದ್ದಂಗೆ; ಮಂಜು ಪಾವಗಡ ಹೀಗೆ ಹೇಳಿದ್ದು ಯಾಕೆ?
ಮಂಜು ಪಾವಗಡ
Follow us
ರಾಜೇಶ್ ದುಗ್ಗುಮನೆ
|

Updated on: Mar 26, 2021 | 5:45 PM

ಬಿಗ್​ ಬಾಸ್​ ಮನೆಯಲ್ಲಿ ಮಂಜು ಸದಾ ನಗುತ್ತಿರುತ್ತಾರೆ. ಅವರು ಮನೆಯಲ್ಲಿ ರೇಗಾಡಿದ್ದು ಕಡಿಮೆ. ಅವರು ಹೆಚ್ಚು ಜಗಳ ಮಾಡಿಕೊಂಡಿದ್ದು ಎಂದರೆ ಅದು ಪ್ರಶಾಂತ್​ ಸಂಬರಗಿ ಜತೆ ಮಾತ್ರ. ಈ ಮಧ್ಯೆ ಮಂಜು ನನ್ನ ಬಾಯಿ ಬಚ್ಚಲ ಮನೆ ಇದ್ದಂತೆ ಎಂದಿದ್ದಾರೆ. ಅಷ್ಟಕ್ಕೂ ಅವರು ಹೇಳಿದ್ದು ಯಾರಿಗೆ? ರೇಗಾಡಿ ಅವರು ಹೀಗೆ ಹೇಳಿದ್ದಾರಾ ಎನ್ನುವ ಪ್ರಶ್ನೆ ಮೂಡೋದು ಸಹಜ. ಅದಕ್ಕೆ ಉತ್ತರ ಈ ಸ್ಟೋರಿಯಲ್ಲಿದೆ. ಸಾಮಾನ್ಯವಾಗಿ ಜಗಳ ಮಾಡುವಾಗ ಕೆಟ್ಟ ಶಬ್ದ ಪ್ರಯೋಗ ಮಾಡುವಾಗ ನನ್ನ ಬಾಯಿ ಬಚ್ಚಲ ಮನೆ ಇದ್ದಂತೆ ಎನ್ನುತ್ತಾರೆ. ಬಚ್ಚಲಮನೆಯಲ್ಲಿ ಕೊಳೆ ಇರುವುದರಿಂದ ಈ ರೀತಿ ಪ್ರಯೋಗ ಮಾಡಲಾಗುತ್ತದೆ. ಆದರೆ, ಮಂಜು ಬಳಕೆ ಮಾಡಿದ್ದ ಅರ್ಥ ಬೇರೆ ರೀತಿಯಲ್ಲಿದೆ. ಅವರು ಬಯ್ಯುವಾಗ ಈ ಶಬ್ದ ಬಳಕೆ ಮಾಡಿಲ್ಲ. ಮಂಜು ಹೀಗೆ ಹೇಳುವುದಕ್ಕೆ ಬೆರೆಯದೇ ಕಾರಣ ಇದೆ.

ಬಿಗ್​ ಬಾಸ್​ ಮನೆಯಲ್ಲಿ ಶುಭಾ ಹಾಗೂ ನಿಧಿ ಸದಾ ಗಾಸಿಪ್​ ಮಾಡುತ್ತಿರುತ್ತಾರೆ. ರಾತ್ರಿ ವೇಳೆ ಮಲಗಿದ್ದಾಗ ಇಬ್ಬರೂ ಮನೆಯ ಎಲ್ಲಾ ಸದಸ್ಯರ ಬಗ್ಗೆ ತಮಗಿಷ್ಟ ಬಂದಂತೆ, ತಾವು ಕಂಡಂತೆ ಹೇಳುತ್ತಾರೆ. ಈಗ ಮಂಜು ಜತೆ ಸೇರಿ ಬಿಗ್​ ಬಾಸ್​ ಮನೆಯ ಗಾಸಿಪ್​ ಬಗ್ಗೆ ಶುಭಾ ಮಾತನಾಡಿದ್ದಾರೆ.

ಮಂಜು ಶುಭಾ ಇಬ್ಬರೂ ಕೂತಿದ್ದರು. ಈ ವೇಳೆ ಮಾತು ಆರಂಭಿಸಿದ ಮಂಜು, ಬೇರೆಯವರ ಬಾಯಿ ವಿಚಾರ ಹಾಗಿರಲಿ. ನನ್ನ ಬಾಯಿ ಗೊತ್ತಲ್ಲ ಬಚ್ಚಲ ಮನೆ ಇದ್ದಂತೆ. ಬಿಗ್​ ಬಾಸ್​ ಮನೆಯಲ್ಲಿ ಅವರ ಬಗ್ಗೆ ಇವರು, ಇವರ ಬಗ್ಗೆ ಅವರು ಮಾತನಾಡುತ್ತಾ ಇರುತ್ತಾರೆ. ಬಿಗ್​ ಬಾಸ್​ ಮನೆಯಲ್ಲಿ ಮಾತನಾಡೋಕೆ ಏನೂ ಇಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಬಿಗ್​ ಬಾಸ್ ಮನೆಯಲ್ಲಿ ಗಾಸಿಪ್​ ಹೇಗಾಗುತ್ತದೆ ಎಂಬುದನ್ನೂ ವಿವರಿಸಿದ್ದಾರೆ. ಇದೆಲ್ಲವುದಕ್ಕೂ ಶುಭಾ ತಲೆ ಆಡಿಸಿದ್ದಾರೆ.

ಇದನ್ನೂ ಓದಿ: BBK8: ’ಮಂಜುನ ಮದ್ವೆ ಆಗೋಕೆ ಚಾನ್ಸೇ ಇಲ್ಲ’: ಸಂಬರಗಿ ಬಳಿ ಎಲ್ಲವನ್ನೂ ಬಿಚ್ಚಿಟ್ಟ ದಿವ್ಯಾ ಸುರೇಶ್​

‘ಸ್ಕರ್ಟ್​ ಹಾಕ್ಕೊಂಡು ಮಲಗಿದ್ದಾಗ ನಮ್ಮ ತಂದೆಯೇ ಕೆಟ್ಟದಾಗಿ ನಡೆದುಕೊಂಡ್ರು’: ಬಿಗ್​ ಬಾಸ್​ ಚಂದ್ರಕಲಾ ಬದುಕಿನ ಕಹಿ ಘಟನೆ!

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್