AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK8: ’ಮಂಜುನ ಮದ್ವೆ ಆಗೋಕೆ ಚಾನ್ಸೇ ಇಲ್ಲ’: ಸಂಬರಗಿ ಬಳಿ ಎಲ್ಲವನ್ನೂ ಬಿಚ್ಚಿಟ್ಟ ದಿವ್ಯಾ ಸುರೇಶ್​

Bigg Boss Kannada: ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ತಮ್ಮ ನಿಜವಾದ ಆಟ ಶುರು ಮಾಡಿದ್ದಾರೆ. ಮಂಜು ವಿರುದ್ಧ ಎಲ್ಲರನ್ನೂ ಎತ್ತಿಕಟ್ಟುತ್ತಿದ್ದಾರೆ. ಮಂಜು ಆಪ್ತೆ ಎನಿಸಿಕೊಂಡ ದಿವ್ಯಾ ಸುರೇಶ್​ ಬಳಿಯೂ ಚಾಡಿ ಹೇಳುವ ಕೆಲಸ ಮಾಡಿದ್ದಾರೆ.

BBK8: ’ಮಂಜುನ ಮದ್ವೆ ಆಗೋಕೆ ಚಾನ್ಸೇ ಇಲ್ಲ’: ಸಂಬರಗಿ ಬಳಿ ಎಲ್ಲವನ್ನೂ ಬಿಚ್ಚಿಟ್ಟ ದಿವ್ಯಾ ಸುರೇಶ್​
ಪ್ರಶಾಂತ್​-ದಿವ್ಯಾ
ರಾಜೇಶ್ ದುಗ್ಗುಮನೆ
| Edited By: |

Updated on: Mar 26, 2021 | 7:09 AM

Share

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಗೆಲ್ಲೋಕೆ ಏನೆಲ್ಲ ಬೇಕೋ ಅದೆಲ್ಲ ಟೆಕ್ನಿಕ್​ಅನ್ನು ಉಪಯೋಗಿಸುತ್ತಿದ್ದಾರೆ. ದಿವ್ಯಾ ಸುರೇಶ್​ ಅವರು ಮಂಜು ಪಾವಗಡ ಜತೆ ಆಡುತ್ತಿರುವ ಪ್ರೀತಿ ನಾಟಕ ಕೂಡ ಒಂದು. ಈ ಬಗ್ಗೆ ಸ್ವತಃ ದಿವ್ಯಾ ಅವರೇ ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ನಾನು ಅವರನ್ನು ಮದುವೆ ಆಗೋಕೆ ಚಾನ್ಸೇ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ ತಮ್ಮ ನಿಜವಾದ ಆಟ ಶುರು ಮಾಡಿದ್ದಾರೆ. ಮಂಜು ವಿರುದ್ಧ ಎಲ್ಲರನ್ನೂ ಎತ್ತಿಕಟ್ಟುತ್ತಿದ್ದಾರೆ. ಮಂಜು ಆಪ್ತೆ ಎನಿಸಿಕೊಂಡ ದಿವ್ಯಾ ಸುರೇಶ್​ ಬಳಿಯೂ ಚಾಡಿ ಹೇಳುವ ಕೆಲಸ ಮಾಡಿದ್ದಾರೆ. ಹೀಗೆ ಮಾತನಾಡುವಾಗ, ದಿವ್ಯಾಗೆ ಸಾಕಷ್ಟು ವಿಚಾರಗಳ ಬಗ್ಗೆ ತಿಳಿ ಹೇಳಿದ್ದಾರೆ ಪ್ರಶಾಂತ್​.

ತಂದೆಯಂತೆ ಅಡ್ವೈಸ್​ ಮಾಡ್ತಾ ಇದೀನಿ. ನಿನ್ನನ್ನು ಮನೆಯಲ್ಲಿ ಕೆಲವರು ಯೂಸ್​ ಮಾಡಿಕೊಳ್ಳುತ್ತಿದ್ದಾರೆ ಎಂದು ನನಗೆ ಅನ್ನಿಸಿತು. ಅವರು ಫೇಮಸ್ ಆಗೋಕೆ ನಿನ್ನನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದಿವ್ಯಾಗೆ ಹೇಳುವ ಮೂಲಕ ಮಂಜು ವಿಚಾರ ಪಸ್ತಾಪ ಮಾಡಿದ್ದಾರೆ ಪ್ರಶಾಂತ್​.

ನಾನು ವೀಕ್​ ಅನಿಸೋ ತರ ಫೀಲ್​ ಆಯ್ತು. ಮಂಜುನ ಜೊತೆ ಫ್ರೆಂಡ್​ಶಿಪ್​ ಜಾಸ್ತಿ ಆಗಿ, ಉಳಿದವರ ಜತೆ ಫ್ರೆಂಡ್​ಶಿಪ್​ ಕಡಿಮೆ ಆಗಿರುವುದಕ್ಕೆ ಹಾಗನ್ನಿಸಿತೋ ನನಗೆ ಗೊತ್ತಿಲ್ಲ ಎಂದರು ದಿವ್ಯಾ. ಆಗ ಪ್ರಶಾಂತ್​, ಮಂಜು ನಿನಗೆ ಲೈಫ್​ ಲಾಂಗ್​ ಫ್ರೆಂಡ್​ ಆಗಿಯೇ ಇರ್ತಾನೆ. ಅವನನ್ನು ಮದುವೆ ಆಗ್ತೀಯಾ ಎಂದು ನೇರವಾಗಿ ಕೇಳಿದ್ದಾರೆ. ನಾನು ಮಂಜುನ ಮದ್ವೇ ಆಗೋಕೆ ಚಾನ್ಸೇ ಇಲ್ಲ. ನನಗೆ ಆತ ಬೆಸ್ಟ್​ ಫ್ರೆಂಡ್​ ಅಷ್ಟೇ ಎಂದು ಸ್ಪಷ್ಟಪಡಿಸಿದರು ದಿವ್ಯಾ.

ಎಲ್ಲರೂ ಒಂದು ಒಂದೊಂದು ಐಡೆಂಟಿಟಿ ಹೊಂದಿದ್ದಾರೆ. ಶುಭಾಗೆ ಅವರದ್ದೇ ಆದ ಚಾರ್ಮ್​ ಇದೆ. ಮಹಿಳೆಯರಲ್ಲಿ ನೀನೇ ಸ್ಟ್ರಾಂಗ್​. ಆದರೆ, ನೀನು ಮಂಜುನ ಬಾಲ ಆಗ್ತಾ ಇದೀಯಾ. ನೆರಳಲ್ಲಿ ಬದುಕುಬೇಡ. ನೀನು ಒಬ್ಬರ ಪ್ರಾಪರ್ಟಿ ಆಗಬಾರದು ಎಂದು ಬುದ್ಧಿ ಹೇಳಿದರು. ಇದನ್ನು ದಿವ್ಯಾ ಕೂಡ ಒಪ್ಪಿಕೊಂಡರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಂಬರಗಿ-ಮಂಜು ನಡುವೆ ಘನಘೋರ ಫೈಟ್​; ಕಾರಣ ಮಾತ್ರ ವಿಚಿತ್ರ!

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More