ಅನ್ನಕ್ಕೆ ವಿಷ ಹಾಕಿ ತಂದೆಯೇ ನನ್ನನ್ನು ಮುಗಿಸಲು ಹೊರಟಿದ್ದರು; ಬಿಗ್​ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ದಿವ್ಯಾ

ದಿವ್ಯಾ ತಂದೆ ಅನ್ನಕ್ಕೆ ವಿಷ ಹಾಕಿ ಊಟ ಮಾಡಿಸಿದ್ದರಂತೆ. ಕೇವಲ ದಿವ್ಯಾಗೆ ಮಾತ್ರವಲ್ಲ, ಅವರ ಅಣ್ಣನಿಗೂ ಊಟ ತಿನ್ನಿಸಿದ್ದರಂತೆ.

ಅನ್ನಕ್ಕೆ ವಿಷ ಹಾಕಿ ತಂದೆಯೇ ನನ್ನನ್ನು ಮುಗಿಸಲು ಹೊರಟಿದ್ದರು; ಬಿಗ್​ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ದಿವ್ಯಾ
ದಿವ್ಯಾ ಸುರೇಶ್
Follow us
ರಾಜೇಶ್ ದುಗ್ಗುಮನೆ
|

Updated on: Mar 25, 2021 | 8:03 PM

ಬಿಗ್​ ಬಾಸ್ ಮನೆಯಲ್ಲಿ ಎಲ್ಲಾ ಸ್ಪರ್ಧಿಗಳು ನಗುತ್ತಾ ಕಾಲ ಕಳೆಯುತ್ತಿದ್ದಾರೆ. 14 ಸ್ಪರ್ಧಿಗಳ ನಡುವೆ ಉತ್ತಮ ಬಾಂಡಿಂಗ್​ ಬೆಳೆದಿದ್ದು, ಒಂದು ಫ್ಯಾಮಿಲಿಯಂತೆ ಆಗಿದ್ದಾರೆ. ಆದರೆ, ಎಲ್ಲರ ಹಿಂದೆಯೂ ಒಂದು ನೋವಿನ ಕಥೆ ಇದೆ. ಈ ನೋವಿನ ಕಥೆ ಒಂದೊಂದಾಗೇ ಹೊರ ಬರುತ್ತಿದೆ. ಅವರ ಕಣ್ಣೀರ ಕಥೆ ಕೇಳಿದಾಗೆಲ್ಲ, ಎಲ್ಲರೂ ನಗುವಿನ ಮುಖವಾಡ ಧರಿಸಿದ್ದಾರೆಯೇ ಎನ್ನುವ ಅನುಮಾನ ಮೂಡುತ್ತಿರುವುದಂತೂ ಸುಳ್ಳಲ್ಲ. ಬಿಗ್ ಬಾಸ್ ಸೀಸನ್​ 8ರ ಆರಂಭದಲ್ಲಿ ರಘು ಗೌಡ ಅವರು ತಮ್ಮ ಕಣ್ಣೀರ ಕಥೆ ಹೇಳಿಕೊಂಡಿದ್ದರು. ತಂದೆ-ತಾಯಿ ಕಣ್ಣೆದುರೇ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಹೇಳಿಕೊಂಡು ಅತ್ತಿದ್ದರು. ಇದಾದ ನಂತರ ಮಂಜು ಪಾವಗಡ ತಾವು ಅನುಭವಿಸಿದ ಕಷ್ಟದ ದಿನದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈಗ ದಿವ್ಯಾ ಸುರೇಶ್​ ಅವರ ಸರದಿ. ಅವರು ಹೇಳಿರುವ ಕಹಿ ಘಟನೆ ವೀಕ್ಷಕರ ಕಣ್ಣಲ್ಲಿ ನೀರು ತರಿಸುವುದಂತೂ ಗ್ಯಾರಂಟಿ.

ದಿವ್ಯಾ ತಂದೆ ಅನ್ನಕ್ಕೆ ವಿಷ ಹಾಕಿ ಊಟ ಮಾಡಿಸಿದ್ದರಂತೆ. ಕೇವಲ ದಿವ್ಯಾಗೆ ಮಾತ್ರವಲ್ಲ, ಅವರ ಅಣ್ಣನಿಗೂ ಊಟ ತಿನ್ನಿಸಿದ್ದರಂತೆ. ಈ ಭಯಾನಕ ಘಟನೆ ಬಗ್ಗೆ ಅವರು ಬಿಗ್​ ಬಾಸ್​ ಮನೆಯಲ್ಲಿ ಇಂಚಿಚೂ ವಿವರಿಸಿದ್ದಾರೆ.

ನನ್ನ ತಂದೆ ಯಾವಾಗಲೂ ಊಟ ಕಲಸಿ ಕೊಟ್ಟಿಲ್ಲ. ಆದಿನ ಅವರು ಕುಡಿದುಕೊಂಡು ಬಂದಿದ್ದರು. ಆದಾಗ್ಯೂ ಊಟವನ್ನು ಕಲಸಿಕೊಂಡು ಬಂದ್ರು. ನನಗೆ ಮತ್ತು ನನ್ನ ಅಣ್ಣನಿಗೆ ಅಪ್ಪ ಊಟ ಕೊಟ್ಟರು. ಊಟ ಮಾಡುತ್ತಿದ್ದಂತೆ ಅಪ್ಪ ವಾಂತಿ ಮಾಡಿಕೊಂಡರು. ನಂತರ ನಮ್ಮ ಅಣ್ಣ ವಾಂತಿ ಮಾಡಿಕೊಂಡರು. ನಂತರ ನಾನು. ಮೂರು ಜನನೂ ಬದುಕಿರಬಾರದು ಎಂದು ಅಪ್ಪ ಊಟಕ್ಕೆ ವಿಷ ಬೆರೆಸಿಕೊಟ್ಟಿದ್ದರು. ಅವರು ಕೂಡ ಅದೇ ಊಟ ಮಾಡಿದ್ದರು ಎಂದು ದಿವ್ಯಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಅಂದಹಾಗೆ, ಅವರು ನಂತರ ಹೇಗೆ ಉಳಿದುಕೊಂಡರು, ಮುಂದೇನಾಯ್ತು ಎನ್ನುವ ಬಗ್ಗೆ ಇಂದಿನ (ಮಾರ್ಚ್​ 25) ಸಂಚಿಕೆಯಲ್ಲಿ ಗೊತ್ತಾಗಲಿದೆ.

ಇದನ್ನೂ ಓದಿ: Bigg Boss Kannada: ‘ದಿವ್ಯಾ ಜೊತೆ ಮದುವೆ ಆಗೋಕೆ ನಮ್ಮ ಮನೆಯಲ್ಲಿ ಒಪ್ಪಿಗೆ ಸಿಗತ್ತೆ’; ಎಲ್ಲವನ್ನೂ ಒಪ್ಪಿಕೊಂಡ ಅರವಿಂದ್​!

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ