AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಪ್ರಶಾಂತ್​ ಸಂಬರಗಿ ಬರೆದ ಈ ಪುಸ್ತಕ 1 ಲಕ್ಷ ಪ್ರತಿ ಮಾರಾಟ ಆಗಿದೆಯಂತೆ!

ಅಷ್ಟಕ್ಕೂ ಯಾವುದು ಈ ಪುಸ್ತಕ? ‘ತುಪ್ಪಾ ತಿಂದಿದ್ದೇ ತಪ್ಪಾ?’ ಎನ್ನುವುದೇ ಇದರ ಟೈಟಲ್​! ಈ ಪುಸ್ತಕ ಒಂದು ಲಕ್ಷ ಕಾಪಿ ಮಾರಾಟ ಆಗಿದೆಯಂತೆ.

Bigg Boss Kannada: ಪ್ರಶಾಂತ್​ ಸಂಬರಗಿ ಬರೆದ ಈ ಪುಸ್ತಕ 1 ಲಕ್ಷ ಪ್ರತಿ ಮಾರಾಟ ಆಗಿದೆಯಂತೆ!
ಪ್ರಶಾಂತ್​ ಸಂಬರಗಿ
Follow us
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​

Updated on: Mar 26, 2021 | 7:20 AM

ಪ್ರಶಾಂತ್​ ಸಂಬರಗಿ ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡವರು. ಅವರು ಮನೆಗೆ ಹೋಗುವುದಕ್ಕೂ ಮೊದಲು ಸಾಕಷ್ಟು ವಿಚಾರಗಳ ಬಗ್ಗೆ ಧ್ವನಿ ಎತ್ತಿದ್ದಾರೆ. ಸಾಕಷ್ಟು ವಿವಾದಗಳನ್ನು ಕೂಡ ಮೈಮೇಲೆ ಎಳೆದುಕೊಂಡಿದ್ದಾರೆ. ಹೀಗಾಗಿ, ಬಿಗ್​ ಬಾಸ್​ ಮನೆಗೆ ಸೇರಿದ ನಂತರ ಅವರು ವಿವಾದ ಮಾಡಿಯೇ ಮಾಡುತ್ತಾರೆ ಎನ್ನುವುದು ಅನೇಕರ ನಂಬಿಕೆ ಆಗಿತ್ತು. ಮನೆಯಲ್ಲಿ ಸದಾ ಧ್ವನಿ ಏರಿಸಿಕೊಂಡು ಮಾತನಾಡುವ ಪ್ರಶಾಂತ್​ ಈಗ ತಾವು ಬರೆದ ಪುಸ್ತಕವೊಂದರ ಬಗ್ಗೆ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಪುಸ್ತಕ ಭಾರಿ ಸೇಲ್​ ಕೂಡ ಆಗಿದೆಯಂತೆ. ಅಷ್ಟಕ್ಕೂ ಯಾವುದು ಈ ಪುಸ್ತಕ? ತುಪ್ಪಾ ತಿಂದಿದ್ದು ತಪ್ಪಾ? ಎನ್ನುವುದೇ ಇದರ ಟೈಟಲ್​! ಈ ಪುಸ್ತಕ ಒಂದು ಲಕ್ಷ ಕಾಪಿ ಮಾರಾಟ ಆಗಿದೆಯಂತೆ. ಅಂದಹಾಗೆ, ಪ್ರಶಾಂತ್​ ಈ ಬಗ್ಗೆ ತುಂಬಾನೇ ಗಂಭೀರವಾಗಿ ಹೇಳಿಲ್ಲ. ಅವರು ಹೀಗೆ ಹೇಳಿದ್ದು ನಾಟಕೀಯವಾಗಿ.

ದೊಡ್ಮನೆಯ ಅಡುಗೆ ಮನೆಯಲ್ಲಿದ್ದ ತುಪ್ಪವನ್ನು ವಿಶ್ವ ಖಾಲಿ ಮಾಡಿದ್ದರು. ಪ್ರಶಾಂತ್​ ಎರಡು ಚಮಚ ತುಪ್ಪ​ ಮಾತ್ರ ತಿಂದಿದ್ದರೂ. ಆದರೂ, ಬಿಗ್​ ಬಾಸ್​ ಮನೆಯಲ್ಲಿ ತುಪ್ಪ ಖಾಲಿ ಮಾಡಿದ್ದಾರೆ ಎನ್ನುವ ಆರೋಪ ಪ್ರಶಾಂತ್​ ಸಂಬರಗಿ ಅವರ ಮೇಲೆ ಬಂದಿತ್ತು. ಅಲ್ಲದೆ, ಮನೆಯಲ್ಲಿ ಎರಡು ದಿನ ಈ ವಿಚಾರ ಭಾರೀ ಚರ್ಚೆ ಆಗಿದೆ. ಇದಕ್ಕೆ ಪ್ರಶಾಂತ್​ ತುಂಬಾನೇ ಬೇಸರಗೊಂಡಿದ್ದರು. ಅಷ್ಟೇ ಅಲ್ಲ, ತುಪ್ಪಾ ತಿಂದಿದ್ದೇ ತಪ್ಪಾ? ಎನ್ನುವ ಪುಸ್ತಕ ಬರೆಯುವುದಾಗಿ ಹೇಳಿದ್ದರು.

ತುಪ್ಪಾ ತಿಂದಿದ್ದು ತಪ್ಪಾ? ಪುಸ್ತಕ ಒಂದು ಲಕ್ಷ ಪ್ರತಿ ಸೇಲ್​ ಆಗೋಯ್ತು. ನಾನು ಪುಸ್ತಕದಲ್ಲಿ ಎಲ್ಲವನ್ನೂ ವಿವರವಾಗಿ ಬರೆದಿದ್ದೇನೆ. ಎರಡು ಗ್ರಾಂ ತುಪ್ಪ ತಿಂದಿದ್ದಕ್ಕೆ ಎರಡು ದಿನ ಮನೆಯಲ್ಲಿ ಮನಸ್ತಾಪ ಉಂಟಾಯಿತು ಎನ್ನುವುದನ್ನು ಉಲ್ಲೇಖ ಮಾಡಿದ್ದೇನೆ ಎಂದರು. ಇದನ್ನು ಕೇಳಿ ಮನೆಯವರೆಲ್ಲರೂ ನಕ್ಕಿದ್ದಾರೆ. ರಘು ಸೇರಿದಂತೆ ಅನೇಕರಿಗೆ ತುಪ್ಪ ಖಾಲಿ ಮಾಡಿದ್ದು ಪ್ರಶಾಂತ್​ ಅವರೇ ಎನ್ನುವ ಅನುಮಾನ ಈಗಲೂ ಇದೆ.

ಇದನ್ನೂ ಓದಿ: ಕುದುರೆ ಅಂದ್ರೆ ಅಶ್ವ, ಕ್ಯಾಪ್ಟನ್​ ಅಂದ್ರೆ ವಿಶ್ವ; ಕಳಪೆ ಎಂದವರಿಗೆ ಕ್ಯಾಪ್ಟನ್​ ಆಗುವ ಮೂಲಕ ಕೊಟ್ರು ಉತ್ತರ

ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಉಗ್ರರ ವಿರುದ್ಧ ಕ್ರಮಕೈಗೊಳ್ಳಿ, ಮೋದಿ ಜೊತೆ ನಾವಿದ್ದೇವೆ: ಮುಸ್ಲಿಂ ಮುಖಂಡರು
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಪಾಕಿಸ್ತಾನಕ್ಕೆ ಉತ್ತರ ನೀಡುವ ಕೆಲಸ ವರಿಷ್ಠರು ಮಾಡುತ್ತಿದ್ದಾರೆ: ಯದುವೀರ್
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ
ಟಿವಿಯಲ್ಲಿ ಬರತ್ತಿದ್ದ ಸುದ್ದಿ ಸುಳ್ಳಾಗಲಿ ಅಂತ ಪ್ರಾರ್ಥಿಸುತ್ತಿದ್ದೆ:ಸುಮತಿ