ಕುದುರೆ ಅಂದ್ರೆ ಅಶ್ವ, ಕ್ಯಾಪ್ಟನ್​ ಅಂದ್ರೆ ವಿಶ್ವ; ಕಳಪೆ ಎಂದವರಿಗೆ ಕ್ಯಾಪ್ಟನ್​ ಆಗುವ ಮೂಲಕ ಕೊಟ್ರು ಉತ್ತರ

ಎರಡನೇ ವಾರದ ಎಲಿಮಿನೇಷನ್​ ವೇಳೆ ವಿಶ್ವನಾಥ್​ ಜಸ್ಟ್ ಮಿಸ್​ ಆಗಿದ್ದರು. ಅವರು ಅದೃಷ್ಟದಿಂದ ಬಿಗ್​ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು.

ಕುದುರೆ ಅಂದ್ರೆ ಅಶ್ವ, ಕ್ಯಾಪ್ಟನ್​ ಅಂದ್ರೆ ವಿಶ್ವ; ಕಳಪೆ ಎಂದವರಿಗೆ ಕ್ಯಾಪ್ಟನ್​ ಆಗುವ ಮೂಲಕ ಕೊಟ್ರು ಉತ್ತರ
ವಿಶ್ವನಾಥ್​
Follow us
ರಾಜೇಶ್ ದುಗ್ಗುಮನೆ
|

Updated on:Mar 25, 2021 | 11:16 PM

ವಿಶ್ವ ಒಳ್ಳೆಯ ಹಾಡುಗಾರನಾಗಿದ್ದರೂ ಕೂಡ ಆ ಸಾಮರ್ಥ್ಯವನ್ನು ಅವರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಬಿಗ್​ ಬಾಸ್​ ಮನೆಯೊಳಗೆ ಅವರು ಸೂಕ್ತ ಮನರಂಜನೆ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಸುದೀಪ್​ ಎಚ್ಚರಿಕೆ ಕೂಡ ನೀಡಿದ್ದರು. ಕಳಪೆ ಎಂದವರಿಗೆ ಕ್ಯಾಪ್ಟನ್​ ಆಗುವ ಮೂಲಕ ವಿಶ್ವ ತಿರುಗೇಟು ನೀಡಿದ್ದಾರೆ. ಎರಡನೇ ವಾರದ ಎಲಿಮಿನೇಷನ್​ ವೇಳೆ ವಿಶ್ವನಾಥ್​ ಜಸ್ಟ್ ಮಿಸ್​ ಆಗಿದ್ದರು. ಅವರು ಅದೃಷ್ಟದಿಂದ ಬಿಗ್​ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಎರಡನೇ ವಾರದ ವೇದಿಕೆ ಮೇಲೆ ಸುದೀಪ್​ ಈ ಬಗ್ಗೆ ನೇರವಾಗಿಯೇ ಎಚ್ಚರಿಕೆ ನೀಡಿದ್ದರು. ಇದನ್ನು ಅರಿತ ವಿಶ್ವ ಆಟದ ವೈಖರಿ ಬದಲಾಯಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈಗ ಮನೆಯ ಕ್ಯಾಪ್ಟನ್​ ಕೂಡ ಆಗಿದ್ದಾರೆ.

ಚದುರಂಗದ ಆಟದಲ್ಲಿ ಬಿಳಿ ತಂಡ ಗೆದ್ದಿತ್ತು. ಈ ಮೂಲಕ ಕ್ಯಾಪ್ಟನ್ಸಿ ಟಾಸ್ಕ್​ಗೆ ಬಿಳಿ ತಂಡದವರು ಅರ್ಹರಾಗಿದ್ದರು. ಗೆದ್ದ ಬಿಳಿ ತಂಡದವರಿಗೆ  ಶಬ್ದವೇಧಿ ಹೆಸರಿನ ಟಾಸ್ಕ್​ ನೀಡಲಾಗಿತ್ತು. ಈ ಟಾಸ್ಕ್ ಪ್ರಕಾರ ಒಂದಷ್ಟು ಪ್ರಾಣಿಗಳ ಶಬ್ದ ಕೇಳುತ್ತದೆ. ಇದನ್ನು ನೆನಪಿಟ್ಟುಕೊಂಡು ಶಬ್ದದ ಪ್ರಕಾರ ಫೋಟೋ ಜೋಡಿಸಬೇಕು. ಈ ವೇಳೆ ವಿಶ್ವನಾಥ್​ ಎಲ್ಲವನ್ನೂ ಸರಿಯಾಗಿ ನೆನಪಿಟ್ಟುಕೊಂಡು ಸರಿಯಾಗಿ ಜೋಡಿಸಿದ್ದರು. ಈ ಮೂಲಕ ನಾಲ್ಕನೇ ವಾರ ಬಿಗ್​ ಬಾಸ್​ ಮನೆಯ ಕ್ಯಾಪ್ಟನ್​ ಆದರು. ಅವರು ಕ್ಯಾಪ್ಟನ್​ ಆಗುತ್ತಿದ್ದಂತೆ, ಕುದುರೆ ಅಂದ್ರೆ ಅಶ್ವ ಕ್ಯಾಪ್ಟನ್​ ಅಂದ್ರೆ ವಿಶ್ವ ಎಂದು ರಘು ಘೋಷಣೆ ಕೂಗಿದ್ದಾರೆ.

ವಿಶ್ವ ಕ್ಯಾಪ್ಟನ್​ ಆಗುತ್ತಿದ್ದಂತೆಯೇ ಅವರ ತಾಯಿಯ ವಾಯ್ಸ್​ ಬಿಗ್​ ಬಾಸ್​ ಮನೆಯಲ್ಲಿ ಕೇಳಿದೆ. ನಾವು ಟಿವಿಲಿ ನೋಡ್ತೀವಿ. ನೀನು ಆಡೋದು ತುಂಬಾನೇ ಖುಷಿ ನೀಡಿದೆ. ನೀನು ಇಲ್ಲ ಎನ್ನುವ ಕಾರಣಕ್ಕೆ ಮೆತ್ತಿ ಮೇಲಿರುವ ನಿನ್ನ ಸ್ಟುಡಿಯೋಗೆ ಹೋಗಿಲ್ಲ ಎಂದು ಅವರ ತಾಯಿ ಹೇಳುತ್ತಿದ್ದಂತೆ ವಿಶ್ವ ಅತ್ತಿದ್ದಾರೆ. ನಂತರ ಮನೆಯವರೆಲ್ಲರೂ ಬಂದು ವಿಶ್ವ ಅವರನ್ನು ಸಮಾಧಾನ ಮಾಡಿದ್ದಾರೆ.

ಕಳೆದ ವಾರ ಅರವಿಂದ್​ ಕೆಪಿ ಬಿಗ್​ ಬಾಸ್​ ಮನೆ ಕ್ಯಾಪ್ಟನ್​ ಆಗಿದ್ದರು. ಹೀಗಾಗಿ, ಅವರು ಈ ಬಾರಿಯ ಎಲಿಮಿನೇಷನ್​ನಿಂದ ಬಚಾವ್​ ಆಗಿದ್ದಾರೆ. ಈ ಬಾರಿಯ ಡೇಂಜರ್​ ಜೋನ್​ನಲ್ಲಿ ವಿಶ್ವ ಕೂಡ ಇದ್ದಾರೆ. ಈಗ ಅವರು ಕ್ಯಾಪ್ಟನ್​ ಆಗಿರುವುದರಿಂದ ಈ ಬಾರಿ ಅವರು ಬಚಾವ್​ ಆಗುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: ಅನ್ನಕ್ಕೆ ವಿಷ ಹಾಕಿ ತಂದೆಯೇ ನನ್ನನ್ನು ಮುಗಿಸಲು ಹೊರಟಿದ್ದರು; ಬಿಗ್​ ಬಾಸ್ ಮನೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತ ದಿವ್ಯಾ

Published On - 10:09 pm, Thu, 25 March 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ