AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ‘ದಿವ್ಯಾ ಜೊತೆ ಮದುವೆ ಆಗೋಕೆ ನಮ್ಮ ಮನೆಯಲ್ಲಿ ಒಪ್ಪಿಗೆ ಸಿಗತ್ತೆ’; ಎಲ್ಲವನ್ನೂ ಒಪ್ಪಿಕೊಂಡ ಅರವಿಂದ್​!

BBK8: ಬಿಗ್​ ಬಾಸ್​ ಮನೆಯಲ್ಲಿ ಸಿಕ್ಕಾಪಟ್ಟೆ ಆಪ್ತವಾಗಿರುವ ನಟಿ ದಿವ್ಯಾ ಉರುಡುಗ ಮತ್ತು ಬೈಕ್​ ರೇಸರ್​ ಅರವಿಂದ್​ ಕೆ.ಪಿ. ಮದುವೆ ಆಗುವ ಸಾಧ್ಯತೆ ದಟ್ಟವಾಗುತ್ತಿದೆ. ಅದಕ್ಕೆ ಪೂರಕವಾಗುವಂತೆ ಅರವಿಂದ್​ ಕೆಲವೊಂದು ವಿಚಾರ ಬಾಯಿ ಬಿಟ್ಟಿದ್ದಾರೆ.

Bigg Boss Kannada: ‘ದಿವ್ಯಾ ಜೊತೆ ಮದುವೆ ಆಗೋಕೆ ನಮ್ಮ ಮನೆಯಲ್ಲಿ ಒಪ್ಪಿಗೆ ಸಿಗತ್ತೆ’; ಎಲ್ಲವನ್ನೂ ಒಪ್ಪಿಕೊಂಡ ಅರವಿಂದ್​!
ಅರವಿಂದ್​ ಕೆಪಿ - ದಿವ್ಯಾ ಉರುಡುಗ
ಮದನ್​ ಕುಮಾರ್​
| Edited By: |

Updated on: Mar 25, 2021 | 2:48 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಅರವಿಂದ್​ ಕೆ.ಪಿ. ಮತ್ತು ದಿವ್ಯಾ ಉರುಡುಗ ನಡುವೆ ಪ್ರೀತಿ ಚಿಗುರಿದೆ ಎಂಬುದು ಬಹುತೇಕರ ಅಭಿಪ್ರಾಯ. ಅವರಿಬ್ಬರ ಮಧ್ಯೆ ಇರುವ ಆಪ್ತತೆ ನೋಡಿದರೆ ಎಂಥವರಿಗೂ ಈ ಅನುಮಾನ ಮೂಡುವುದು ಸಹಜ. ಅಷ್ಟೇ ಅಲ್ಲದೇ, ನಟಿ ಶುಭಾ ಪೂಂಜಾ ಅವರಂತೂ ಈ ವಿಚಾರವನ್ನು ಬಿಗ್​ ಬಾಸ್​ ಮನೆಯಲ್ಲಿ ಪದೇ ಪದೇ ಪ್ರಸ್ತಾಪ ಮಾಡುತ್ತಿದ್ದಾರೆ. ಅದಕ್ಕೆ ಅರವಿಂದ್​ ಕೂಡ ಹೂಂ ಎಂಬಂತೆ ತಲೆ ಅಲ್ಲಾಡಿಸಿದ್ದಾರೆ.

ದಿವ್ಯಾ-ಅರವಿಂದ್​ಗೆ ಮದುವೆ ಮಾಡಿಸುವ ಬಗ್ಗೆ ಶುಭಾ ಆಸಕ್ತಿ ತೋರಿಸಿದ್ದಾರೆ. ‘ಈ ಮದುವೆಗೆ ನಿಮ್ಮ ಮನೆಯಲ್ಲಿ ಒಪ್ಪುತ್ತಾರಾ ಎಂದು ನಾನು ಅವಳಿಗೆ ಕೇಳಿದೆ. ಅವಳಿಗೆ ಇಷ್ಟ ಆದ್ರೆ ಮನೆಯವರು ಒಪ್ಪುತ್ತಾರಂತೆ. ಹಾಗಾದರೆ ಅರವಿಂದ್​ಗೂ ಕೇಳು ಅಂತ ಹೇಳಿದ್ದೇನೆ. ಅದಕ್ಕೂ ಒಂದು ಟೈಮ್​ ಬರತ್ತೆ ಎಂದು ದಿವ್ಯಾ ಹೇಳಿದಾಳೆ’ ಎಂದು ಅರವಿಂದ್​ ಬಳಿ ಶುಭಾ ಪೂಂಜಾ ಶಂಕ ಊದಿದ್ದಾರೆ. ಆ ಮಾತಿಗೆ ಅರವಿಂದ್​ ವಿರೋಧ ವ್ಯಕ್ತಪಡಿಸಿಲ್ಲ!

‘ನಿಮ್ಮಿಬ್ಬರಿಗೂ ನಾನು ಸಲಹೆ ನೀಡುವುದು ಏನೆಂದರೆ, ಬಿಗ್​ ಬಾಸ್​ ಮನೆಯೊಳಗೆ ನೀವು ಪರಸ್ಪರ ಇಷ್ಟಪಟ್ಟಿದ್ದರೂ ಸಹ, ಹೊರಗಡೆ ಹೋದ ಬಳಿಕ 4 ತಿಂಗಳು ಒಟ್ಟಿಗೆ ಕಳೆಯಿರಿ. ಯಾಕೆಂದರೆ ಇಲ್ಲಿ ವಾತಾವರಣ ಬೇರೆ ಇರುತ್ತದೆ. ದಿವ್ಯಾ ನಿನಗೆ ನಿಜಕ್ಕೂ ಇಷ್ಟ ಆಗಿದ್ದರೆ ನಿಮ್ಮ ಮನೆಯಲ್ಲಿ ಒಪ್ಪುತ್ತಾರಾ?’ ಎಂದು ಅರವಿಂದ್​ಗೆ ಶುಭಾ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಅರವಿಂದ್​, ‘ಖಂಡಿತಾ ಒಪ್ಪಿಕೊಳ್ಳುತ್ತಾರೆ. ಅಂತಿಮವಾಗಿ ನಮಗೆ ಇಷ್ಟ ಆಗಿದೆ ಎಂಬುದು ಮುಖ್ಯವಾಗುತ್ತದೆ’ ಎಂದಿದ್ದಾರೆ.

ದಿವ್ಯಾ ಮತ್ತು ಅರವಿಂದ್​ ತಂದೆ-ತಾಯಿ ಈ ಎಪಿಸೋಡ್​ಗಳನ್ನು ನೋಡುತ್ತಿದ್ದಾರೆ. ಅವರ ತಲೆಯಲ್ಲಿ ಏನು ಓಡುತ್ತಿದೆಯೋ ಗೊತ್ತಿಲ್ಲ. ಸದ್ಯ ಬಿಗ್​ ಬಾಸ್​ ಮನೆಯಲ್ಲಿ ನಡೆಯುತ್ತಿರುವ ಘಟನೆಗಳಿಂದ ದಿವ್ಯಾ ಇಮೇಜ್​ಗೆ ಏನಾದರೂ ತೊಂದರೆ ಆಗಬಹುದಾ ಎಂಬುದನ್ನೂ ಅರವಿಂದ್​ ಆಲೋಚಿಸಿದ್ದಾರೆ. ‘ನಾನು ಈ ಶೋ ಮುಗಿದ ಬಳಿಕ ಎಲ್ಲೋ ಇರುವವನು. ಆದರೆ, ಅವಳು ಸಿನಿಮಾ ಇಂಡಸ್ಟ್ರಿಯಲ್ಲಿ ಇರುವವಳು. ಅವಳಿಗೆ ಆಗಾಗ ಇದರ ಬಗ್ಗೆ ಪ್ರಶ್ನೆ ಎದುರಾಗುತ್ತದೆ’ ಎಂದು ಅರವಿಂದ್​ ಹೇಳಿದ್ದಾರೆ.

ಬಿಗ್​ ಬಾಸ್​ 8ನೇ ಸೀಸನ್​ ಆರಂಭವಾಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಇಬ್ಬರ ನಡುವೆ ಮೂಡಿದ ಆಪ್ತತೆಗೆ ಪ್ರೀತಿ ಎಂದು ಕರೆಯುವುದು ಸರಿಯೋ ತಪ್ಪೋ ಎಂಬ ಬಗ್ಗೆ ಅರವಿಂದ್​ಗೆ ಸ್ವಲ್ಪ ಗೊಂದಲ ಇದೆ. ‘ಬಿಗ್​ ಬಾಸ್​ ಮನೆಯಲ್ಲಿ ಇರುವವರಲ್ಲಿ ದಿವ್ಯಾ ನನಗೆ ಹೆಚ್ಚು ಇಷ್ಟ. ಕ್ಯೂಟ್​ ಆಗಿದ್ದಾಳೆ. 25 ದಿನದಲ್ಲಿ ಏನು ಅಂತ ನಿರ್ಧಾರ ಮಾಡೋಕೆ ಆಗಲ್ಲ. ಮುಂದೆ ಏನೋ ಗೊತ್ತಿಲ್ಲ’ ಎಂದು ಅರವಿಂದ್​ ಹೇಳಿದ್ದಾರೆ.

ಇದನ್ನೂ ಓದಿ: ದಿವ್ಯಾ ಸುರೇಶ್​ಗೇಕೆ ಇಷ್ಟೊಂದು ಹೊಟ್ಟೆ ಉರಿ? ದಿವ್ಯಾ ಉರುಡುಗ-ಅರವಿಂದ್ ಪ್ರೀತಿಗೆ ಇವರೇ ವಿಲನ್​!

ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಈ ತಿಂಗಳಿಂದಲೇ ಬಜೆಟ್ ಸಿದ್ಧತೆ ಆರಂಭ ಎಂದ ಸಿಎಂ ಸಿದ್ದರಾಮಯ್ಯ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಹೊಸ ವರ್ಷದ ಪ್ರಯುಕ್ತ ನೀಲಕಂಠವರ್ಣಿ ಸ್ವಾಮಿಗೆ ವಿಶೇಷ ಅಭಿಷೇಕ
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
ಬಾಂಗ್ಲಾದಲ್ಲಿ ಮತ್ತೋರ್ವ ಹಿಂದೂ ಮೇಲೆ ಹಲ್ಲೆ ನಡೆಸಿ, ಬೆಂಕಿ ಹಚ್ಚಿದ ಗುಂಪು
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
46 ಎಸೆತಗಳಲ್ಲಿ 58 ರನ್ ಬಾರಿಸಿ ತಂಡ ಗೆಲ್ಲಿಸಿದ ಬಾಬರ್ ಆಝಂ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಕಾಂಗ್ರೆಸ್ ನಾಯಕ ನಾನಾ ಪಟೋಲೆ
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಮದ್ಯದ ಅಮಲಲ್ಲಿ ಫುಟ್ಪಾತ್​​ಗೆ ಕಾರು ನುಗ್ಗಿಸಿದ ಚಾಲಕ: ಬಾಲಕಿ ಜಸ್ಟ್​​ಮಿಸ್
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಕರ್ನಾಟಕದವರನ್ನ ಬಿಟ್ಟು ಬೇರೆಯವರಿಗೆ ಮನೆ ಕೊಡಲ್ಲ: ಸಚಿವ ಜಮೀರ್ ಖಡಕ್ ಮಾತು
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಬೆಂಗಳೂರಲ್ಲಿ 26 ಕಿ.ಮೀ. ಹೆಜ್ಜೆ ಹಾಕಿದ ಪಾದಚಾರಿಗಳು: ಕಾರಣ ಏನು?
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ಟಿ20 ವಿಶ್ವಕಪ್​ಗೆ ತಂಡ ಪ್ರಕಟವಾದ ಬೆನ್ನಲ್ಲೇ ಅಬ್ಬರಿಸಿದ ಆಸೀಸ್ ನಾಯಕ
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್
ರಾಮನಗರ: ನಡುರಸ್ತೆಯಲ್ಲೇ ವಾಮಾಚಾರ; ನ್ಯೂಇಯರ್​ ಸಂಭ್ರಮದಲ್ಲಿದ್ದವರಿಗೆ ಶಾಕ್