Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಟ್ಟೂಬಿಡದೆ ಶುಭಾ ಪೂಂಜಾ ಕನಸಲ್ಲಿ ಬಂದು ಕಾಡ್ತಿರೋ ರಾಜಕುಮಾರ ಯಾರು?

ನಟಿ ಶುಭಾ ಪೂಂಜಾ ಅವರು ಬಿಗ್​ ಬಾಸ್​ ಮನೆ ಸೇರಿದ ನಂತರ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ಮನೆಯಲ್ಲಿ ಜಾಲಿಯಾಗಿರೋದು. ಈಗ ಅವರ ಕನಸಲ್ಲಿ ರಾಜಕುಮಾರನೋರ್ವ ಬಂದು ಕಾಡುತ್ತಿದ್ದಾನೆ.

ಬಿಟ್ಟೂಬಿಡದೆ ಶುಭಾ ಪೂಂಜಾ ಕನಸಲ್ಲಿ ಬಂದು ಕಾಡ್ತಿರೋ ರಾಜಕುಮಾರ ಯಾರು?
ಶುಭಾ ಫೂಂಜಾ
Follow us
ರಾಜೇಶ್ ದುಗ್ಗುಮನೆ
| Updated By: Skanda

Updated on: Mar 20, 2021 | 10:51 AM

ನಟಿ ಶುಭಾ ಪೂಂಜಾ ಅವರು ಬಿಗ್​ ಬಾಸ್​ ಮನೆ ಸೇರಿದ ನಂತರ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರು ಮನೆಯಲ್ಲಿ ಜಾಲಿಯಾಗಿರೋದು. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶುಭಾ ಹಾಯಾಗಿರುತ್ತಾರೆ. ಈಗ ಶುಭಾಗೆ ಮನೆಯಲ್ಲಿ ಸಮಸ್ಯೆ ಒಂದು ಕಾಡುತ್ತಿದೆ. ಕನಸಲ್ಲಿ ರಾಜಕುಮಾರನೋರ್ವ ಬಂದು ಕಾಡುತ್ತಿದ್ದಾನೆ! ಈ ಬಗ್ಗೆ ಅವರು ತುಂಬಾನೇ ತಲೆಕೆಡಿಸಿಕೊಂಡಿದ್ದಾರೆ. ಮನೆ ಮಂದಿ ಜತೆಗೆಲ್ಲ ಈ ಬಗ್ಗೆ ಹೇಳಿಕೊಂಡಿದ್ದಾರೆ. ಶುಭಾ ಅವರಿಗೆ ನಿತ್ಯ ಕನಸಲ್ಲಿ ಅವರನ್ನು ಮದುವೆ ಆಗುವ ಹುಡುಗ ಸುಮಂತ್​ ಬರುತ್ತಿದ್ದಾರಂತೆ. ಈ ಬಗ್ಗೆ ಹೇಳಿಕೊಂಡಿರುವ ಅವರು, ನನಗೆ ನಿನ್ನೆ ಒಂದು ಕನಸು ಬಿದ್ದಿತ್ತು. ಆ ಕನಸಲ್ಲಿ ಸುಮಂತ್​ ಬಂದಿದ್ದರು. ಅವರು ಬಿಗ್​ ಬಾಸ್​ ಮನೆಗೆ ಬಂದಿದ್ದರು. ಮನೆಯಲ್ಲಿ ಅವರನ್ನು ಸುತ್ತಾಡಿಸಿದ್ದೆ. ಆದರೆ, ನೋಡಿದ್ರೆ ಒಂದೇ ಕ್ಷಣಕ್ಕೆ ಅದು ಹಳ್ಳಿ ಮನೆಯಾಗಿಬಿಟ್ಟಿತ್ತು. ಎಲ್ಲಾ ಸ್ಪರ್ಧಿಗಳು ಸಣ್ಣ ಸಣ್ಣ ಗೂಡಲ್ಲಿ ಅಡಗಿ ಕೂತಿದ್ದರು ಎಂದು ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ. ಈ ವೇಳೆ ಮಂಜು ಪಾವಗಡ, ನಾವು ಯಾರನ್ನು ಹೆಚ್ಚು ನೆನಪಿಸಿಕೊಳ್ಳುತ್ತೇವೋ ಅವರೇ ಕನಸಲ್ಲಿ ಬರುತ್ತಾರೆ ಎಂದಿದ್ದಾರೆ.

ಇದಾದ ಸ್ವಲ್ಪ ಹೊತ್ತಿನ ನಂತರ ಮತ್ತೆ ಕನಸಿನ ಬಗ್ಗೆ ಹೇಳಿಕೊಂಡಿದ್ದಾರೆ ಶುಭಾ. ನನಗೆ ಸುಮಂತ್​ ಕೆಲ ದಿನಗಳಿಂದ ಕನಸಲ್ಲಿ ಬರುತ್ತಿದ್ದಾರೆ. ಆದರೆ, ಕನಸಲ್ಲಿ ಅವರನ್ನು ತಲುಪೋಕೆ ಸಾಧ್ಯವಾಗುತ್ತಿಲ್ಲ. ಏಕೆ ಎಂಬುದೇ ಗೊತ್ತಾಗುತ್ತಿಲ್ಲ ಎಂದಿದ್ದಾರೆ ಶುಭಾ. ಅವರು ಆರಾಮಾಗೇ ಇರುತ್ತಾರೆ ನೀವು ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳಿಕೊಂಡಿದ್ದಾರೆ.

ಹಾಗೆಲ್ಲ ಮುಟ್ಬೇಡಿ ಅಂದ್ರು ವೈಷ್ಣವಿ ವೈಷ್ಣವಿ ಮನೆಯಲ್ಲಿ ತುಂಬಾನೇ ಸೈಲೈಂಟ್​. ಅವರು ಬೇರೆಯವರ ಮೇಲೆ ರೇಗಾಡಿದ ಉದಾಹರಣೆ ಕಡಿಮೆ. ಅವರು, ಯಾರ ತಂಟೆಗೂ ಹೋದವರಲ್ಲ. ಈ ವಿಚಾರ ವೀಕೆಂಡ್​ನಲ್ಲಿ ಕೂಡ ಚರ್ಚೆಗೆ ಕಾರಣವಾಗಿದ್ದಿದೆ. ಈ ಮಧ್ಯೆ, ವೈಷ್ಣವಿ ಬಿಗ್​ ಬಾಸ್​ ಮನೆಯಲ್ಲಿ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಅದು ಯಾರಿಗೆ? ಏಕೆ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಗ್​ ಬಾಸ್​ ಮನೆಯಲ್ಲಿ 19ನೇ ದಿನ. ಎಲ್ಲರೂ ಬೆಳಗ್ಗೆ ಎದ್ದು ಅವರವರ ಚಟುವಟಿಕೆಯಲ್ಲಿ ತೊಡಗಿದ್ದರು. ಈ ವೇಳೆ ಶುಭಾ ಪೂಂಜಾ ಹಾಗೂ ವೈಷ್ಣವಿ ಒಟ್ಟಾಗಿ ಮಾತನಾಡುತ್ತಿದ್ದರು. ವೈಷ್ಣವಿ ಆಗತಾನೇ ಸ್ನಾನ ಮಾಡಿ ಬಂದಿದ್ದರಿಂದ ಅವರಿಗೆ ತೊಂದರೆ ಕೊಡೋ ಕೆಲಸ ಮಾಡುತ್ತಿದ್ದರು. ಈ ಕೀಟಲೆ ಮುಂದುವರಿದೇ ಇತ್ತು. ವೈಷ್ಣವಿ ಸಮೀಪ ಸೈಲೆಂಟ್​ ಆಗಿ ಬಂದ ಶುಭಾ ತುಂಬಾನೇ ಕಚಗುಳಿ ಇಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಅದು ವರ್ಕೌಟ್​ ಆಗಲೇ ಇಲ್ಲ. ಏಕೆಂದರೆ, ವೈಷ್ಣವಿ ಅವರಿಗೆ ಅದು ತಾಗಲೇ ಇಲ್ಲ. ಆಗ, ವೈಷ್ಣವಿ ಹೀಗೆ ಮುಟ್ತಾ ಇದ್ರೆ ಕಚ್ಚಿ ಬಿಡುತ್ತೇನೆ ಎನ್ನುವ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಮೂರು ವಾರ ಮುಚ್ಚಿಟ್ಟಿದ್ದ ವಿಶೇಷ ಪ್ರತಿಭೆಯನ್ನು ಹೊರ ಹಾಕಿದ ಶಮಂತ್​

ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ರಾಷ್ಟ್ರೀಯ ಭೂಮಾಪನ ದಿನಾಚರಣೆಯನ್ನು ಪ್ರತಿವರ್ಷ ಆಚರಿಸಬೇಕು: ಸಿದ್ದರಾಮಯ್ಯ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಭೂಮಾಪನ ಇಲಾಖೆಯಲ್ಲಾದ ಬದಲಾವಣೆಗಳ ಕ್ರೆಡಿಟ್ ಮುಖ್ಯಮಂತ್ರಿಗೆ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ಚುನಾವಣೆ ಹತ್ತಿರದಲ್ಲಿಲ್ಲ, ದಗಿಮಿಕ್ ಮಾಡ್ತಿಲ್ಲ; ಉಡುಪಿಯಲ್ಲಿ ವಿಜಯೇಂದ್ರ
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ನಗರಸಭೆ ಮತ್ತು ಜಿಲ್ಲಾಡಳಿತ ವಿರುದ್ಧ ಬೆಂಕಿಯುಗುಳಿದ ಯಾದಗಿರಿ ನಿವಾಸಿಗಳು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಲೈವ್​ನಲ್ಲೇ ಅಂಬಾಟಿ ರಾಯುಡು ಚಳಿ ಬಿಡಿಸಿದ ನವಜೋತ್ ಸಿಂಗ್ ಸಿಧು
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಸಿಕ್ಕ‌ಸಿಕ್ಕ ಮನೆಗಳಿಗೆ ನುಗ್ಗಿದ ಆಸಾಮಿ: ಮೊಬೈಲ್, ವಾಚ್ ಕಳ್ಳತನ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ಬಸನಗೌಡ ಯತ್ನಾಳ್ ಬಗ್ಗೆ ಮಾತಾಡಲು ಇಚ್ಛಿಸದ ವಿಜಯೇಂದ್ರ
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ತುಮಕೂರು ಜಿಲ್ಲೆ ನೀರಿನ ಯೋಜನೆಗಳ ಬಗ್ಗೆ ಶ್ರೀಗಳಿಗೆ ವಿವರಿಸಿದ ಪರಮೇಶ್ವರ್
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ಕಾಂಗ್ರೆಸ್ ಅಧಿಕಾರದಲ್ಲಿ 50 ವಸ್ತುಗಳ ಬೆಲೆ ಜಾಸ್ತಿಯಾಗಿದೆ: ಹಿರಿಯ ನಾಗರಿಕ
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶ್ರೀಗಳ ಹೆಸರು: ಪರಮೇಶ್ವರ್ ಹೇಳಿದ್ದಿಷ್ಟು