ಹಾಗೆಲ್ಲಾ ಮುಟ್ಟಿದ್ರೆ ಕಚ್ಚಿ ಬಿಡ್ತೀನಿ; ವೈಷ್ಣವಿ ಹೀಗೆ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

ವೈಷ್ಣವಿ ಮನೆಯಲ್ಲಿ ತುಂಬಾನೇ ಸೈಲೈಂಟ್​. ಅವರು ಬೇರೆಯವರ ಮೇಲೆ ರೇಗಾಡಿದ ಉದಹಾರಣೆ. ಅವರು, ಯಾರ ತಂಟೆಗೂ ಹೋದವರಲ್ಲ. ಈಗ ಅವರು ಬಿಗ್​ ಬಾಸ್​ ಮನೆಯಲ್ಲಿ ಸುದ್ದಿಯಲ್ಲಿದ್ದಾರೆ.

ಹಾಗೆಲ್ಲಾ ಮುಟ್ಟಿದ್ರೆ ಕಚ್ಚಿ ಬಿಡ್ತೀನಿ; ವೈಷ್ಣವಿ ಹೀಗೆ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?
ವೈಷ್ಣವಿ ಗೌಡ
Follow us
|

Updated on: Mar 19, 2021 | 10:02 PM

ವೈಷ್ಣವಿ ಮನೆಯಲ್ಲಿ ತುಂಬಾನೇ ಸೈಲೈಂಟ್​. ಅವರು ಬೇರೆಯವರ ಮೇಲೆ ರೇಗಾಡಿದ ಉದಹಾರಣೆ. ಅವರು, ಯಾರ ತಂಟೆಗೂ ಹೋದವರಲ್ಲ. ಈ ವಿಚಾರ ವೀಕೆಂಡ್​ನಲ್ಲಿ ಕೂಡ ಚರ್ಚೆಗೆ ಕಾರಣವಾಗಿದ್ದಿದೆ. ಈ ಮಧ್ಯೆ, ವೈಷ್ಣವಿ ಬಿಗ್​ ಬಾಸ್​ ಮನೆಯಲ್ಲಿ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಅದು ಯಾರಿಗೆ? ಏಕೆ? ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಬಿಗ್​ ಬಾಸ್​ ಮನೆಯಲ್ಲಿ 19ನೇ ದಿನ. ಎಲ್ಲರೂ ಬೆಳಗ್ಗೆ ಎದ್ದು ಅವರವರ ಚಟುವಟಿಕೆಯಲ್ಲಿ ತೊಡಗಿದ್ದರು. ಈ ವೇಳೆ ಶುಭಾ ಪೂಂಜಾ ಹಾಗೂ ವೈಷ್ಣವಿ ಒಟ್ಟಾಗಿ ಮಾತನಾಡುತ್ತಿದ್ದರು. ವೈಷ್ಣವಿ ಆಗತಾನೇ ಸ್ನಾನ ಮಾಡಿ ಬಂದಿದ್ದರಿಂದ ಅವರಿಗೆ ತೊಂದರೆ ಕೊಡೋ ಕೆಲಸ ಮಾಡುತ್ತಿದ್ದರು. ಈ ಕೀಟಲೆ ಮುಂದುವರಿದೇ ಇತ್ತು.

ವೈಷ್ಣವಿ ಸಮೀಪ ಬಂದ ಸೈಲೆಂಟ್​ ಆಗಿ ಬಂದ ಶುಭಾ ತುಂಬಾನೇ ಕಚಗುಳಿ ಇಡುವ ಪ್ರಯತ್ನ ಮಾಡಿದ್ದಾರೆ. ಆದರೆ, ಅದು ವರ್ಕೌಟ್​ ಆಗಲೇ ಇಲ್ಲ. ಏಕೆಂದರೆ, ವೈಷ್ಣವಿ ಅವರಿಗೆ ಅದು ತಾಗಲೇ ಇಲ್ಲ. ಆಗ, ವೈಷ್ಣವಿ ಹೀಗೆ ಮುಡ್ತಾ ಇದ್ರೆ ಕಚ್ಚಿ ಬಿಡುತ್ತೇನೆ ಎನ್ನುವ ಎಚ್ಚರಿಕೆ ನೀಡಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಕಪ್​ ರಾಮಾಯಣ.. ದಿವ್ಯಾ ಸುರೇಶ್​ ಹಾಗೂ ಮಂಜು ಪಾವಗಡ ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಅನ್ಯೋನ್ಯವಾಗಿರುತ್ತಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಒಬ್ಬರಿಗೊಬ್ಬರು ಜಗಳ ಆಡಿದ ಉದಾಹರಣೆ ತುಂಬಾನೇ ಕಡಿಮೆ. ಸಮಯ ಸಿಕ್ಕಾಗೆಲ್ಲ ಬಿಗ್​ ಬಾಸ್​ ಮನೆಯಲ್ಲಿ ಇವರು ಹರಟೆ ಹೊಡೆಯುತ್ತಿರುತ್ತಾರೆ. ಇಂದು (ಮಾರ್ಚ್​ 19) ಕೂಡ ಹಾಗೆಯೇ ಆಗಿದೆ.

ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಹಾಗೂ ಮಂಜು ಮಾತನಾಡುತ್ತಿದ್ದರು. ಆಗ ಮಂಜು ಕಾಫಿ ಕಪ್​ ಇಡೋಕೆ ಹೋಗಿ ಕೆಳಕ್ಕೆ ಬೀಳಿಸಿದ್ದಾರೆ. ಆ ಕಪ್​ ಬಿದ್ದ ರಭಸಕ್ಕೆ ಒಡೆದೇ ಹೋಗಿದೆ. ಬಿಗ್​ ಬಾಸ್​ ಕೊಟ್ಟ ಕಪ್​ಅನ್ನು ಒಡೆದ ನಂತರ ಮಂಜುಗೆ ಅತೀವವಾಗಿ ಅಪರಾಧ ಮನೋಭಾವನೆ ಕಾಡಿದೆ.

ಕಪ್​ ಒಡೆದು ಹಾಕಿದ್ದಕ್ಕೆ ಸಾರಿ ಬಿಗ್​ ಬಾಸ್​. ದಯವಿಟ್ಟು ನನ್ನನ್ನು ಕ್ಷಮಿಸಿ ಬಿಗ್​ ಬಾಸ್​ ಎಂದು ಪರಿ ಪರಿಯಾಗಿ ಕೇಳಿಕೊಂಡಿದ್ದಾರೆ. ನಾನು ಬೇಕಂತಲೇ ಇದನ್ನು ಒಡೆದಿಲ್ಲ. ಮಿಸ್​ ಆಗಿ ಬಿದ್ದು ಹೋಗಿದೆ. ಯಾರಿಗೂ ಗೊತ್ತಾಗದಂತೆ ಇದನ್ನು ಬಚ್ಚಿಡುತ್ತೇನೆ. ಆಮೇಲೆ ಸ್ಪರ್ಧಿಗಳ ಬಳಿ ನನ್ನ ಕಪ್​ ಎಲ್ಲಿದೆ ಎಂದು ಪ್ರಶ್ನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಘಟನೆಯನ್ನು ನೋಡಿ ದಿವ್ಯಾ ನಕ್ಕಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಮೂರು ವಾರ ಮುಚ್ಚಿಟ್ಟಿದ್ದ ವಿಶೇಷ ಪ್ರತಿಭೆಯನ್ನು ಹೊರ ಹಾಕಿದ ಶಮಂತ್​

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?