AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shilpa Shetty: ಡಾನ್ಸ್​ ಮಾಡುವಾಗಲೇ ಎಡವಿದ ಶಿಲ್ಪಾ ಶೆಟ್ಟಿ; ಜರಾ ದೇಖ್​ ಕೆ ಚಲೋ ಎಂದ ವಿಡಿಯೋ ವೈರಲ್​

Shilpa Shetty Viral Video: ತಮ್ಮ ಬಗ್ಗೆ ತಾವೇ ಟ್ರೋಲ್​ ಮಾಡಿಕೊಳ್ಳೋಕೆ ಯಾವ ಸೆಲೆಬ್ರಿಟಿಗಳು ಇಷ್ಟಪಡುವುದಿಲ್ಲ. ಆದರೆ, ಶಿಲ್ಪಾ ಶೆಟ್ಟಿ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ಅವರ ಬಗ್ಗೆ ಅವರೇ ಟ್ರೋಲ್​ ಮಾಡಿಕೊಳ್ಳುವಂತ ವಿಡಿಯೋ ಒಂದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ

Shilpa Shetty: ಡಾನ್ಸ್​ ಮಾಡುವಾಗಲೇ ಎಡವಿದ ಶಿಲ್ಪಾ ಶೆಟ್ಟಿ; ಜರಾ ದೇಖ್​ ಕೆ ಚಲೋ ಎಂದ ವಿಡಿಯೋ ವೈರಲ್​
ಶಿಲ್ಪಾ ಶೆಟ್ಟಿ ಡಾನ್ಸ್​ ವಿಡಿಯೋ
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Mar 20, 2021 | 10:17 AM

ನಟಿ ಶಿಲ್ಪಾ ಶೆಟ್ಟಿ ಸಿನಿಮಾ ರಂಗದಿಂದ ದೂರ ಉಳಿದರೂ ಸೋಶಿಯಲ್​ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟಿವ್​ ಆಗಿದ್ದಾರೆ. ಭಿನ್ನ ರೀತಿಯ ಫೋಟೋ ಹಾಗೂ ವಿಡಿಯೋಗಳನ್ನು ಪೋಸ್ಟ್​ ಮಾಡುವ ಮೂಲಕ ಅವರು ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಸಾಕಷ್ಟು ಬಾರಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಶಿಲ್ಪಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲೇ ಉತ್ತರ ನೀಡಿದ ಉದಾಹರಣೆ ಕೂಡ ಇದೆ. ಈ ಮಧ್ಯೆ ಶಿಲ್ಪಾ ಶೆಟ್ಟಿ ಹಾಕಿಕೊಂಡಿರುವ ವಿಡಿಯೋ ಒಂದು ಸಾಕಷ್ಟು ವೈರಲ್​ ಆಗಿದೆ. ತಮ್ಮ ಬಗ್ಗೆ ತಾವೇ ಟ್ರೋಲ್​ ಮಾಡಿಕೊಳ್ಳೋಕೆ ಯಾವ ಸೆಲೆಬ್ರಿಟಿಗಳು ಇಷ್ಟಪಡುವುದಿಲ್ಲ. ಹೀಗಾಗಿ, ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವುದಕ್ಕೂ ಮೊದಲು ಅನೇಕ ಬಾರಿ ವಿಚಾರ ಮಾಡುತ್ತಾರೆ. ಅಷ್ಟೇ ಅಲ್ಲ ಮನೆಯಿಂದ ಹೊರ ಹೋಗುವಾಗ ಯಾವ ಉಡುಗೆ ತೊಡಬೇಕು ಎನ್ನುವ ಬಗ್ಗೆ ಆಲೋಚಿಸುತ್ತಾರೆ. ಏಕೆಂದರೆ, ಅವರು ಮಾಡುವ ಸಣ್ಣ ತಪ್ಪು ಕೂಡ ಟ್ರೋಲ್​ ಮಾಡುವವರಿಗೆ ಆಹಾರವಾಗಿ ಬಿಡುತ್ತದೆ.

ಆದರೆ, ಶಿಲ್ಪಾ ಶೆಟ್ಟಿ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ಅವರ ಬಗ್ಗೆ ಅವರೇ ಟ್ರೋಲ್​ ಮಾಡಿಕೊಳ್ಳುವಂತ ವಿಡಿಯೋ ಒಂದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಕಷ್ಟು ವೈರಲ್​ ಆಗಿದೆ. ಅಷ್ಟಕ್ಕೂ ಆ ವಿಡಿಯೋದಲ್ಲಿ ಇರುವುದಾದರೂ ಏನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಶಿಲ್ಪಾ ಶೆಟ್ಟಿ ಹಳದಿ ಬಣ್ಣದ ಉಡುಗೆ ಒಂದನ್ನು ಧರಿಸಿದ್ದರು. ಈ ಉಡುಗೆ ತೊಟ್ಟು ಅವರು ಸ್ಟೈಲಿಶ್​ ಆಗಿ ಡಾನ್ಸ್​ ಮಾಡೋಕೆ ಹೋಗಿದ್ದಾರೆ. ಈ ವೇಳೆ ಅವರ ಕಾಲನ್ನು ಆ ಕಡೆ ಈ ಕಡೆ ಮಾಡಿದ್ದಾರೆ. ಆಗ ಶಿಲ್ಪಾ ಶೆಟ್ಟಿ ಎಡವಿ ಬೀಳುವವರಾಗಿದ್ದರು. ಅದೃಷ್ಟವಶಾತ್​ ಅವರು ಬೀಳದೇ ಬಚಾವ್​ ಆಗಿದ್ದಾರೆ. ಅಲ್ಲದೆ ಈ ವಿಡಿಯೋಗೆ, ಏಯ್​ ಭಾಯ್​ ಜರಾ ದೇಖ್​ ಕೆ ಚಲೋ (ಅಣ್ಣಾ ಸ್ವಲ್ಪ ನೋಡಿಕೊಂಡು ಹೋಗಿ) ಎನ್ನುವ ಕ್ಯಾಪ್ಶನ್​ ಕೂಡ ಹಾಕಿದ್ದಾರೆ.

ಸಿನಿಮಾ ವಿಚಾರಕ್ಕೆ ಬರೋದಾದರೆ 2007ರಲ್ಲಿ ತೆರೆಗೆ ಬಂದ ಅಪ್ನೆ ಸಿನಿಮಾ ಕೊನೆ. ನಂತರ ಮೂರು ಚಿತ್ರಗಳಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದು ಬಿಟ್ಟರೆ ಮತ್ತಾವುದೇ ಚಿತ್ರಗಳಲ್ಲಿ ಶಿಲ್ಪಾ ನಟಿಸಿಲ್ಲ. 2009ರಲ್ಲಿ ಶಿಲ್ಪಾ ವಿವಾಹ ಕೂಡ ಆದರು. ನಂತರ ಅವರು ಚಿತ್ರರಂಗದಿಂದ ಸಂಪೂರ್ಣವಾಗಿ ದೂರ ಉಳಿದರು. ಸದ್ಯ ಅವರ ಕೈನಲ್ಲಿ ಎರಡು ಚಿತ್ರಗಳಿವೆ. ಈ ಸಿನಿಮಾಗಳು ಶೀಘ್ರವೇ ತೆರೆಗೆ ಬರಲಿವೆಯಂತೆ.

ಇದನ್ನೂ ಓದಿ: Raj Kundra Audi Car: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಸೇರಿದ ಕಾರು ಹಿಟ್ ಅಂಡ್​ ರನ್ ಅಪಘಾತಕ್ಕೆ ತುತ್ತು

Published On - 7:17 pm, Fri, 19 March 21

ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’
‘ದರ್ಶನ್ ಎದುರು ನಾನು ವಿಲನ್, ನಟಿಸುವಾಗ ನಾನೇ ನಡುಗುತ್ತಿದ್ದೆ’
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ
Live: ಪಾಕಿಸ್ತಾನ ಮೇಲಿನ ದಾಳಿ ಬಗ್ಗೆ ವಿದೇಶಾಂಗ ಇಲಾಖೆ ಪತ್ರಿಕಾಗೋಷ್ಠಿ
ಪಾಕ್ ಮೇಲೆ ಆಕ್ರಮಣಕ್ಕೆ ಪ್ರಧಾನಿ ಮೋದಿ 10 ವರ್ಷಗಳಿಂದ ತಯಾರಿ: ಸೂಲಿಬೆಲೆ
ಪಾಕ್ ಮೇಲೆ ಆಕ್ರಮಣಕ್ಕೆ ಪ್ರಧಾನಿ ಮೋದಿ 10 ವರ್ಷಗಳಿಂದ ತಯಾರಿ: ಸೂಲಿಬೆಲೆ