AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾ ಸುರೇಶ್​ಗೇಕೆ ಇಷ್ಟೊಂದು ಹೊಟ್ಟೆ ಉರಿ? ದಿವ್ಯಾ ಉರುಡುಗ-ಅರವಿಂದ್ ಪ್ರೀತಿಗೆ ಇವರೇ ವಿಲನ್​!

ಬಿಗ್​ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ-ಅರವಿಂದ್ ನಡುವೆ ಪ್ರೀತಿ ಮೊಳೆತಿದೆ ಎನ್ನುವ ವಿಚಾರ ಚರ್ಚೆಯಲ್ಲಿದೆ. ಇದನ್ನು ಇಬ್ಬರೂ ನೇರವಾಗಿ ಒಪ್ಪಿಕೊಂಡಿಲ್ಲ.

ದಿವ್ಯಾ ಸುರೇಶ್​ಗೇಕೆ ಇಷ್ಟೊಂದು ಹೊಟ್ಟೆ ಉರಿ? ದಿವ್ಯಾ ಉರುಡುಗ-ಅರವಿಂದ್ ಪ್ರೀತಿಗೆ ಇವರೇ ವಿಲನ್​!
ದಿವ್ಯಾ ಸುರೇಶ್​- ದಿವ್ಯಾ ಉರುಡುಗ-ಅರವಿಂದ್
ರಾಜೇಶ್ ದುಗ್ಗುಮನೆ
| Edited By: |

Updated on: Mar 25, 2021 | 7:14 AM

Share

ದಿವ್ಯಾ ಸುರೇಶ್​ ಬಂದ ಆರಂಭದಿಂದಲೂ ಮಂಜು ಪಾವಗಡ ಮೇಲೆ ಆಸಕ್ತಿ ತೋರುತ್ತಿದ್ದಾರೆ. ಇದು ಮೂರು ವಾರ ಯಶಸ್ವಿಯಾಗಿ ಮುಂದುವರಿದಿತ್ತು. ಆದರೆ, ನಾಲ್ಕನೇ ವಾರ ಇದು ಸ್ವಲ್ಪ ಬದಲಾದಂತಿದೆ. ದಿವ್ಯಾ ಮಂಜು ಮೇಲೆ ಆಸಕ್ತಿ ತೋರಿದ್ದು ಪ್ರಚಾರಕ್ಕೋ ಎನ್ನುವ ಅನುಮಾನ ಕಾಡಿತ್ತು. ಈಗ ಇದು ಪ್ರೇಕ್ಷಕರಿಗೆ ನಿಜ ಅನಿಸೋಕೆ ಆರಂಭವಾಗಿದೆ. ಏಕೆಂದರೆ, ದಿವ್ಯಾ ಸುರೇಶ್​ ನಿಧಾನವಾಗಿ ಮಂಜು ಮೇಲೆ ಆಸಕ್ತಿ ಕಳೆದುಕೊಳ್ಳುತ್ತಿದ್ದು, ಅರವಿಂದ್ ಕೆಪಿ ಮೇಲೆ ಹೆಚ್ಚು ಇಂಟರೆಸ್ಟ್​ ತೋರುತ್ತಿದ್ದಾರೆ. ಬಿಗ್​ ಬಾಸ್ ಮನೆಯಲ್ಲಿ ದಿವ್ಯಾ ಉರುಡುಗ-ಅರವಿಂದ್ ನಡುವೆ ಪ್ರೀತಿ ಮೊಳೆತಿದೆ ಎನ್ನುವ ವಿಚಾರ ಚರ್ಚೆಯಲ್ಲಿದೆ. ಇದನ್ನು ಇಬ್ಬರೂ ನೇರವಾಗಿ ಒಪ್ಪಿಕೊಂಡಿಲ್ಲ. ಆದರೆ, ಒಬ್ಬರ ಮೇಲೆ ಒಬ್ಬರು ಆಸಕ್ತಿ ಹೊಂದಿದ್ದೇವೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಈಗ ಇವರಿಬ್ಬರ ಪ್ರೀತಿಗೆ ದಿವ್ಯಾ ಸುರೇಶ್​ ವಿಲನ್​ ಆಗುತ್ತಾರಾ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

ದಿವ್ಯಾ ಉರುಡುಗ ಹಾಗೂ ಅರವಿಂದ್ ಕ್ಲೋಸ್​ ಆಗುತ್ತಿರುವುದು ದಿವ್ಯಾ ಸುರೇಶ್​ಗೆ ಸಹಿಸಿಕೊಳ್ಳಲು ಆಗುತ್ತಿಲ್ಲ ಅನಿಸುತ್ತಿದೆ. ಹೀಗಾಗಿ ದಿವ್ಯಾ ಉರುಡುಗ- ಅರವಿಂದ್ ಒಂದಾಗಿದ್ದಾಗೆಲ್ಲ ಇವರು ಮಧ್ಯ ಬರುತ್ತಿದ್ದಾರೆ. ಇದು ಮನೆಯವರ ಗಮನಕ್ಕೂ ಬಂದಿದೆ.

ಇನ್ನು, ಅರವಿಂದ್​ ಮೈಮೇಲೆ ದಿವ್ಯಾ ಸುರೇಶ್​ ಬಂದು ಬಂದು ಬೀಳುತ್ತಿದ್ದಾರೆ. ಇದು ಅರವಿಂದ್​ಗೆ​ ಇಷ್ಟವಾಗುತ್ತಿಲ್ಲ. ಇದೇ ಕಾರಣಕ್ಕೆ ಅವರು ದೂರ ದೂರ ಹೋಗುತ್ತಿದ್ದಾರೆ. ಬುಧವಾರ (ಮಾರ್ಚ್​ 24) ಹಾಗೆಯೇ ಆಗಿದೆ. ದಿವ್ಯಾ ಅರವಿಂದ್​ ಅವರ ಮೈಗೆ ಒರಗಿಕೊಂಡಿದ್ದರು. ಆಗ ಅವರಿಬ್ಬರ ಮಧ್ಯೆ ದಿವ್ಯಾ ಉರುಡುಗ ಕೂಡ ಬಂದರು.

ಸದ್ಯ ವೀಕ್ಷಕರು ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ದಿವ್ಯಾ ಸುರೇಶ್​ ಫೇಮಸ್​ ಆಗಲು ಈ ರೀತಿ ಮಾಡುತ್ತಿದ್ದಾರಾ? ಎಲ್ಲರ ಗಮನ ನಮ್ಮ ಮೇಲೆ ಇರಬೇಕು ಎಂದು ಹೀಗೆ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಇದನ್ನೂ ಓದಿ: BBK8: ನಿಧಿ-ಶುಭಾ ಬಿಗ್​ ಬಾಸ್​ ಮನೆಯ ಗಾಸಿಪ್​ ರಾಣಿಯರು! ಮಲಗುವ ಮುನ್ನ ಬರೀ ಇಂಥ ಮಾತುಗಳೇ

ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
Video: ನಿಯಂತ್ರಣ ತಪ್ಪಿ ಕೆರೆಗೆ ಜಾರಿದ ಸರ್ಕಾರಿ ಬಸ್
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ!
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?
KPCC ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರು ಏನಂದ್ರು?