Sign In

By signing in or creating an account, you agree with Associated Broadcasting Company's Terms & Conditions and Privacy Policy.

Godzilla vs. Kong: Tamilrockersನಲ್ಲಿ ಲೀಕ್​ ಆಯ್ತು ಗಾಡ್ಜಿಲಾ vs ಕಾಂಗ್​ ಸಿನಿಮಾ

ಪೈರಸಿಯಲ್ಲಿ ಮುಂದಿರುವ Tamilrockers ಈ ಸಿನಿಮಾವನ್ನು ಲೀಕ್​ ಮಾಡಿದೆ. ಇಂಗ್ಲಿಷ್​ ವರ್ಷನ್​ ಬದಲು ಹಿಂದಿಗೆ ಡಬ್​ ಆದ ವರ್ಷನ್​ಅನ್ನು ಈ ಸೈಟ್​ನಲ್ಲಿ ಲೀಕ್​ ಮಾಡಲಾಗಿದೆ.

Godzilla vs. Kong: Tamilrockersನಲ್ಲಿ ಲೀಕ್​ ಆಯ್ತು ಗಾಡ್ಜಿಲಾ vs ಕಾಂಗ್​ ಸಿನಿಮಾ
ಗಾಡ್ಜಿಲ್ಲಾ vs ಕಾಂಗ್​ ಸಿನಿಮಾದ ಪೋಸ್ಟರ್​
Follow us
ರಾಜೇಶ್ ದುಗ್ಗುಮನೆ
|

Updated on: Mar 24, 2021 | 8:27 PM

ಪೈರಸಿ ಅನ್ನೋದು ಚಿತ್ರರಂಗಕ್ಕೆ ತಟ್ಟಿರುವ ದೊಡ್ಡ ಶಾಪ. ಕೋಟ್ಯಾಂತರ ರೂಪಾಯಿ ಸುರಿದು, ವರ್ಷಾನುಗಟ್ಟಲೆ ಕಷ್ಟಪಟ್ಟು ಮಾಡುವ ಸಿನಿಮಾ ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಪೈರಸಿಗೆ ತುತ್ತಾಗುತ್ತದೆ. ಈಗ ಹಾಲಿವುಡ್​ನ ಗಾಡ್ಜಿಲಾ vs ಕಾಂಗ್​ ಸಿನಿಮಾಗೂ ಪೈರಿಸಿ ಬಿಸಿ ತಟ್ಟಿದೆ. ಸಿನಿಮಾ ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಈ ಚಿತ್ರದ ಹಿಂದಿ ವರ್ಷನ್​ ಆನ್​ಲೈನ್​ನಲ್ಲಿ ಲೀಕ್​ ಆಗಿದೆ. ಪೈರಸಿಯಲ್ಲಿ ಮುಂದಿರುವ Tamilrockers ಈ ಸಿನಿಮಾವನ್ನು ಲೀಕ್​ ಮಾಡಿದೆ. ಇಂಗ್ಲಿಷ್​ ವರ್ಷನ್​ ಬದಲು ಹಿಂದಿಗೆ ಡಬ್​ ಆದ ವರ್ಷನ್​ಅನ್ನು ಈ ಸೈಟ್​ನಲ್ಲಿ ಲೀಕ್​ ಮಾಡಲಾಗಿದೆ. ಹಿಂದಿ ಅವತರಣಿಕೆಗೆ ಬೇಡಿಕೆ ಹೆಚ್ಚಿರುವ ಕಾರಣಕ್ಕೆ ತಮಿಳ್​ ರಾಕರ್ಸ್​ ಈ ರೀತಿ ಮಾಡಿದೆ ಎನ್ನಲಾಗುತ್ತಿದೆ. ರಿಲೀಸ್​ ಆದ ಕೆಲವೇ ಗಂಟೆಗಳಲ್ಲಿ ಚಿತ್ರ ಲೀಕ್​ ಆಗಿರುವುದು ಭಾರತದಲ್ಲಿನ ಬಾಕ್ಸ್​ ಆಫೀಸ್​ ಕಲೆಕ್ಷನ್​ಗೆ ಹೊಡೆತ ನೀಡಿದೆ.

ತಮಿಳ್​ರಾಕರ್ಸ್ ವೆಬ್​ಸೈಟ್​ ಅನ್ನು ಯಾರು ನಿರ್ವಹಣೆ ಮಾಡುತ್ತಿದ್ದಾರೆ ಎಂಬುದನ್ನು ಪತ್ತೆ ಹಚ್ಚುವುದು ಅಸಾಧ್ಯ ಎಂಬಂತಾಗಿದೆ. ದೇಶದಲ್ಲಿ ರಿಲೀಸ್​ ಆಗುವ ಬಹುತೇಕ ಚಿತ್ರಗಳನ್ನು ಇವರು ನಕಲು ಮಾಡಿ ಬಿಡುತ್ತಾರೆ. ಇವರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಲಾಕ್‌ಡೌನ್ ಸಮಯದಲ್ಲಿ ಒಟಿಟಿಯಲ್ಲಿ ರಿಲೀಸ್​ ಆದ ಸಾಕಷ್ಟು ಸಿನಿಮಾಗಳನ್ನು ಇವರು ಲೀಕ್​ ಮಾಡಿದ್ದಾರೆ. ಲಾಕ್‌ಡೌನ್​ ನಂತರ ಮತ್ತೆ ತಮ್ಮ ಕೆಲಸವನ್ನು ಇವರು ಮುಂದುವರಿಸಿದ್ದಾರೆ.

ಅಂದಹಾಗೆ, ಗಾಡ್ಜಿಲಾ vs ಕಾಂಗ್​ ಸಿನಿಮಾಗೆ ಮೆಚ್ಚುಗೆಯ ಮಾತು ಕೇಳಿ ಬಂದಿದೆ. ಅನೇಕ ಆಂಗ್ಲ ವೆಬ್​ಸೈಟ್​ಗಳು ಸಿನಿಮಾವನ್ನು ಹೊಗಳಿ ಬರೆದಿದ್ದಾರೆ. ಪ್ರೇಕ್ಷಕರು ಕೂಡ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇದನ್ನೂ ಓದಿ: KGF Chapter 2: ಹಾಲಿವುಡ್​ ಸಿನಿಮಾದಲ್ಲಿ ಕೆಜಿಎಫ್​-2 ಡೈಲಾಗ್? ಏನಿದರ ಹಿಂದಿನ ರಹಸ್ಯ

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!