AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೈತ್ರಾ ಕೋಟೂರ್​-ನಾಗಾರ್ಜುನ್​ ಮದುವೆ ವಿವಾದ! ಏನು ಹೇಳುತ್ತಿವೆ ಈ ಫೋಟೋಗಳು?

ಚೈತ್ರಾ ಮತ್ತು ನಾಗಾರ್ಜುನ್​ ಅನೇಕ ಬಾರಿ ಭೇಟಿ ಆಗಿದ್ದರು ಎಂಬುದಕ್ಕೆ ಕೆಲವು ಫೋಟೋಗಳು ಸಾಕ್ಷಿ ಒದಗಿಸುತ್ತಿವೆ. ಇಬ್ಬರೂ ಕೂಡ ಕಾರಿನಲ್ಲಿ ಸುತ್ತಾಡಿದ್ದಾರೆ. ನಾಗಾರ್ಜುನ್​ ಹುಟ್ಟುಹಬ್ಬವನ್ನು ತುಂಬ ಜೋರಾಗಿ ಸೆಲೆಬ್ರೇಟ್​ ಮಾಡಲಾಗಿತ್ತು.

ಚೈತ್ರಾ ಕೋಟೂರ್​-ನಾಗಾರ್ಜುನ್​ ಮದುವೆ ವಿವಾದ! ಏನು ಹೇಳುತ್ತಿವೆ ಈ ಫೋಟೋಗಳು?
ಚೈತ್ರಾ ಕೋಟೂರ್​ - ನಾಗಾರ್ಜುನ್​
Follow us
ಮದನ್​ ಕುಮಾರ್​
|

Updated on: Mar 30, 2021 | 8:17 AM

ಬಿಗ್​ ಬಾಸ್ ಮಾಜಿ​ ಸ್ಪರ್ಧಿ ಚೈತ್ರಾ ಕೋಟೂರ್​ ಅವರು ನಾಗಾರ್ಜುನ್​ ಎಂಬುವವರ ಜೊತೆ ಭಾನುವಾರ (ಮಾ.28) ಬೆಳಗ್ಗೆ ಮದುವೆ ಆಗಿದ್ದರು. ಆದರೆ ಆ ಮದುವೆ ವಿವಾದದ ಸ್ವರೂಪ ಪಡೆದುಕೊಂಡಿತು. ತಾಳಿ ಕಟ್ಟಿದ ಕೆಲವೇ ಗಂಟೆಗಳ ಬಳಿಕ ನಾಗಾರ್ಜುನ್​ ಮನೆಯವರು ಬಂದು ಗಲಾಟೆ ಮಾಡಿದರು. ಎರಡೂ ಕುಟುಂಬದ ನಡುವೆ ಜಗಳ ಆಗಿದೆ. ಆ ಬಗ್ಗೆ ಈಗ ನಾಗಾರ್ಜುನ್​ ಮತ್ತು ಚೈತ್ರಾ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ.

‘ಚೈತ್ರಾ ಅವರು ನನಗೆ ಫೇಸ್​ಬುಕ್​ ಮೂಲಕ ಪರಿಚಯ ಆದರು. ಕೆಲವೇ ಕೆಲವು ಬಾರಿ ಮಾತ್ರ ನಾನು ಅವರನ್ನು ಭೇಟಿ ಮಾಡಿರುವುದು. ಕಳೆದ ಆರು ತಿಂಗಳಿನಿಂದ ಅವರ ನಂಬರ್​ ಬ್ಲಾಕ್​ ಮಾಡಿದ್ದೇನೆ’ ಎಂದು ನಾಗಾರ್ಜುನ್​ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತ ಚೈತ್ರಾ ಕೂಡ ಪ್ರತ್ಯಾರೋಪ ಮಾಡುತ್ತಿದ್ದಾರೆ. ತಮ್ಮಿಬ್ಬರ ನಡುವೆ ಹೆಚ್ಚು ಆಪ್ತತೆ ಇತ್ತು ಎಂದು ಚೈತ್ರಾ ಹೇಳುತ್ತಿದ್ದಾರೆ.

Chaithra Kotoor image 1

ಚೈತ್ರಾ- ನಾಗಾರ್ಜುನ್​

ಚೈತ್ರಾ ಮತ್ತು ನಾಗಾರ್ಜುನ್​ ಅನೇಕ ಬಾರಿ ಭೇಟಿ ಆಗಿದ್ದರು ಎಂಬುದಕ್ಕೆ ಕೆಲವು ಫೋಟೋಗಳು ಸಾಕ್ಷಿ ಒದಗಿಸುತ್ತಿವೆ. ಇಬ್ಬರೂ ಕೂಡ ಕಾರಿನಲ್ಲಿ ಸುತ್ತಾಡಿದ್ದಾರೆ. ನಾಗಾರ್ಜುನ್​ ಹುಟ್ಟುಹಬ್ಬವನ್ನು ತುಂಬ ಜೋರಾಗಿ ಸೆಲೆಬ್ರೇಟ್​ ಮಾಡಲಾಗಿತ್ತು. ಈ ಸಂದರ್ಭದ ವಿಡಿಯೋ ಕೂಡ ಲಭ್ಯವಾಗಿದೆ. ಇಷ್ಟೆಲ್ಲ ಆಪ್ತತೆ ಇದ್ದಾಗಿಯೂ ಕೂಡ ಇವರಿಬ್ಬರ ಮದುವೆ ಈಗ ವಿವಾದಕ್ಕೆ ಕಾರಣ ಆಗಿದೆ.

ತಮ್ಮನ್ನು ಬೆದರಿಸಿ, ಬಲವಂತವಾಗಿ ಕರೆದುಕೊಂಡು ಹೋಗಿ ಮದುವೆ ಮಾಡಿಸಲಾಗಿದೆ ಎಂದು ನಾಗಾರ್ಜುನ್​ ಆರೋಪ ಮಾಡುತ್ತಿದ್ದಾರೆ. ಸಂಘಟನೆಯೊಂದರ ಬೆಂಬಲದೊಂದಿಗೆ ಚೈತ್ರಾ ಹೀಗೆಲ್ಲ ಮಾಡಿಸಿದ್ದಾರೆ ಎಂದು ಅವರು ಹೇಳುತ್ತಿದ್ದಾರೆ. ಮದುವೆ ನಂತರ ಎರಡೂ ಕುಟುಂಬದವರ ನಡುವೆ ಗಲಾಟೆ ಆಗಿದೆ. ಸದ್ಯ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳೋಣ ಎಂದು ಎರಡು ದಿನ ಸಮಯ ಕೇಳಲಾಗಿದೆ. ಒಟ್ಟಾರೆ ಪ್ರಕರಣದ ಸತ್ಯಾಸತ್ಯತೆ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

Chaithra Kotoor image 2

ಚೈತ್ರಾ- ನಾಗಾರ್ಜುನ್​

ರಂಗಭೂಮಿ ಕಲಾವಿದೆಯಾಗಿ, ಸಿನಿಮಾ ನಟಿಯಾಗಿ, ಬಿಗ್​ ಬಾಸ್​ ಸ್ಪರ್ಧಿಯಾಗಿ, ಜಾಹೀರಾತು ನಿರ್ದೇಶಕಿಯಾಗಿ ಚೈತ್ರಾ ಗುರುತಿಸಿಕೊಂಡಿದ್ದಾರೆ. ‘ಸೂಜಿದಾರ’ ಸಿನಿಮಾದಲ್ಲಿ ಅವರೊಂದು ಗಮನಾರ್ಹ ಪಾತ್ರ ಮಾಡಿದ್ದರು. ಬಿಗ್​ ಬಾಸ್​ ಕನ್ನಡ ಸೀಸನ್​ 7ರಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಹೆಚ್ಚಿತು. ಲಗ್ನ ಪತ್ರಿಕೆ ಸೀರಿಯಲ್​ನಲ್ಲಿ ಅವರೊಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಬಿಗ್​ ಬಾಸ್​ನಿಂದ ಹೊರಬಂದ ಬಳಿಕ ನಾಗಾರ್ಜುನ್ ಜೊತೆ ಚೈತ್ರಾಗೆ ಸ್ನೇಹ ಚಿಗುರಿತ್ತು.

ಇದನ್ನೂ ಓದಿ: Chaithra Kotoor: ಚೈತ್ರಾ ಕೋಟೂರ್​ ಮದುವೆ ರಂಪಾಟ! ಒಂದೇ ದಿನದಲ್ಲಿ ಪತಿ ನಾಗಾರ್ಜುನ್​ ಬಿಟ್ಟು ಹೋಗಿದ್ದೇಕೆ?