ತಪ್ಪು ಮಾಡಿದರೂ ಪ್ರಶಾಂತ್​ ಸಂಬರಗಿ ಬೆನ್ನು ತಟ್ಟಿದ ಸುದೀಪ್​! ಕಿಚ್ಚ ಮಾಡಿದ್ದು ಸರೀನಾ?

ಮಂಜು ಮೂರು ದಿನ ಮೊದಲೇ ನನಗೆ ಕಳಪೆ ಎನ್ನುವ ಪಟ್ಟ ನೀಡುವುದಾಗಿ ಹೇಳಿಕೊಂಡಿದ್ದರು. ಇದಕ್ಕೆ ಅವರು ಮನೆಯಲ್ಲಿ ಎಲ್ಲರನ್ನೂ ಎತ್ತಿಕಟ್ಟಿದ್ದರು ಎನ್ನುವ ಆರೊಪವನ್ನು ಪ್ರಶಾಂತ್​ ಮಾಡಿದರು.

ತಪ್ಪು ಮಾಡಿದರೂ ಪ್ರಶಾಂತ್​ ಸಂಬರಗಿ ಬೆನ್ನು ತಟ್ಟಿದ ಸುದೀಪ್​! ಕಿಚ್ಚ ಮಾಡಿದ್ದು ಸರೀನಾ?
ಪ್ರಶಾಂತ್​-ಕಿಚ್ಚ ಸುದೀಪ್​
Follow us
ರಾಜೇಶ್ ದುಗ್ಗುಮನೆ
|

Updated on: Mar 28, 2021 | 5:20 PM

ಪ್ರಶಾಂತ್​ ಸಂಬರಗಿ ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ಸ್ಪರ್ಧಿ. ಇಲ್ಲಿಗೆ ಬರುವ ಮೊದಲು ಸಾಕಷ್ಟು ವಿವಾದಗಳನ್ನು ಮಾಡಿಕೊಂಡಿದ್ದ ಅವರು, ಬಿಗ್​ ಬಾಸ್​ ಮನೆಯಲ್ಲೂ ತಮ್ಮ ನೇರ ಮಾತಿನಿಂದ ಚರ್ಚೆಯಲ್ಲಿದ್ದಾರೆ. ಈ ಮಧ್ಯೆ, ಬಿಗ್​ ಬಾಸ್​ ಮನೆಯಲ್ಲಿ ಸಾಕಷ್ಟು ವಿವಾದಗಳನ್ನು ಅವರು ಮೈಮೇಲೆ ಎಳೆದುಕೊಂಡಿದ್ದಾರೆ. ನಾಲ್ಕನೇ ವಾರ ಬಿಗ್​ ಬಾಸ್​ ಮನೆಯಲ್ಲಿ ಪ್ರಶಾಂತ್​ ಸಾಲು ಸಾಲು ತಪ್ಪು ಮಾಡಿದ್ದರೂ ಅವರನ್ನು ಕಿಚ್ಚ ಸುದೀಪ್​ ಹೊಗಳಿದ್ದಾರೆ. ಅಷ್ಟಕ್ಕೂ ಪ್ರಶಾಂತ್ ಅವರನ್ನು ಕಿಚ್ಚ ಹೊಗಳಲು ಕಾರಣ ಏನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ. ನಾಲ್ಕನೇ ವಾರ ಬಿಗ್​ ಬಾಸ್ ಮನೆಯಲ್ಲಿ ಪ್ರಶಾಂತ್​ ಸಾಕಷ್ಟು ಜನರ ಬಳಿ ಜಗಳ ಮಾಡಿಕೊಂಡಿದ್ದಾರೆ. ಅದರಲ್ಲೂ ಮಂಜು ಜತೆ ಪ್ರಶಾಂತ್​ ತುಂಬಾನೇ ಮುನಿಸಿಕೊಂಡಿದ್ದರು. ಈ ವಾರ ಅತಿ ಕಳಪೆ ಎನ್ನುವ ಪಟ್ಟವನ್ನು ಪ್ರಶಾಂತ್​ಗೆ ನೀಡಲಾಯಿತು. ನನಗೆ ಕಳಪೆ ಎನ್ನುವ ಪಟ್ಟ ಬರುವುದಕ್ಕೆ ಮಂಜು ಪಾವಗಡ ಪಾತ್ರ ದೊಡ್ಡದಿದೆ ಎಂದು ಪ್ರಶಾಂತ್​ ಆರೋಪ ಮಾಡಿದ್ದರು.

ಮಂಜು ಮೂರು ದಿನ ಮೊದಲೇ ನನಗೆ ಕಳಪೆ ಎನ್ನುವ ಪಟ್ಟ ನೀಡುವುದಾಗಿ ಹೇಳಿಕೊಂಡಿದ್ದರು. ಇದಕ್ಕೆ ಅವರು ಮನೆಯಲ್ಲಿ ಎಲ್ಲರನ್ನೂ ಎತ್ತಿಕಟ್ಟಿದ್ದರು ಎನ್ನುವ ಆರೊಪವನ್ನು ಪ್ರಶಾಂತ್​ ಮಾಡಿದರು. ಆದರೆ, ಮಂಜು ಈ ಆರೋಪವನ್ನು ಅಲ್ಲಗಳೆದಿದ್ದರು. ಪ್ರಶಾಂತ್​ ಮನೆಯಲ್ಲಿ ಕಸವನ್ನು ಸರಿಯಾಗಿ ಗುಡಿಸಿಲ್ಲ. ಈ ಕಾರಣಕ್ಕೆ ನಾನು ಕಳಪೆ ಎನ್ನುವ ಪಟ್ಟ ನೀಡಿದೆ ಎಂದು ಸ್ಪಷ್ಟನೆಯನ್ನೂ ನಿಡಿದರು. ಇದು ಪ್ರಶಾಂತ್​ಗೆ ಖುಷಿ ನೀಡಿಲ್ಲ. ಹೀಗಾಗಿ ಇಬ್ಬರ ನಡುವೆ ವೈಮನಸ್ಸು ಕೂಡ ಬೆಳೆಯಿತು.

ವಾರದ ಪಂಚಾಯ್ತಿಯಲ್ಲೂ ಸುದೀಪ್​ ಈ ವಿಚಾರ ಪ್ರಸ್ತಾಪ ಮಾಡಿದರು. ಅಂದು ಮನೆಯ ಕ್ಯಾಪ್ಟನ್​ ಆಗಿದ್ದ ಅರವಿಂದ್​ ಈ ಬಗ್ಗೆ ಪ್ರತಿಕ್ರಿಯೆ ನೀಡಿದರು. ಪ್ರಶಾಂತ್​ ಅವರು ತಮಗೆ ವಹಿಸಿದ ಕೆಲಸವನ್ನು ಸರಿಯಾಗಿ ಮಾಡಿಲ್ಲ ಎಂದರು. ಆಗ, ಪ್ರಶಾಂತ್​ ಸಂಬರಗಿ ತಪ್ಪನ್ನು ಒಪ್ಪಿಕೊಂಡರು. ಅಷ್ಟೇ ಅಲ್ಲ ಮುಂದಿನ ದಿನಗಳಲ್ಲಿ ಇದನ್ನು ತಿದ್ದುಕೊಳ್ಳುತ್ತೇನೆ ಎಂದು ಭರವಸೆ ಕೂಡ ನೀಡಿದರು.

ಪ್ರಶಾಂತ್​ ತಪ್ಪು ಮಾಡಿದ್ದರೂ ಅದನ್ನು ಒಪ್ಪಿಕೊಂಡು ತಿದ್ದುಕೊಳ್ಳುತ್ತೇನೆ ಎಂದು ಹೇಳಿರುವುದು ಸುದೀಪ್​ಗೆ ಖುಷಿ ತಂದಿದೆ. ಹೀಗಾಗಿ, ತಪ್ಪು ಮಾಡಿದರೂ ನೀವು ಅದನ್ನು ಒಪ್ಪಿಕೊಂಡಿದ್ದೀರ. ಹೀಗಾಗಿ, ನಾನು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದರು.

ಇದನ್ನೂ ಓದಿ: ಸ್ಪರ್ಧಿಗಳ ವಿರುದ್ಧ ಸಿಟ್ಟಿಗೆದ್ದ ಪ್ರಶಾಂತ್​; ಬಿಗ್​ ಬಾಸ್​ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ!

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್