ಪೈರಸಿ ಮಾಡುತ್ತಿದ್ದ ಅತಿ ದೊಡ್ಡ ಜಾಲ ಅರೆಸ್ಟ್; ಇವರ ತಂತ್ರಜ್ಞಾನ ನೋಡಿ ಪೊಲೀಸರೇ ಕಂಗಾಲು

ಫರೀದಾಬಾದ್ ಪೊಲೀಸರ ಪ್ರಕಾರ ಬಂಧಿತರು ಸುಮಾರು 400 ಚಾನೆಲ್​ಗಳಿಂದ ಕಾಂಟೆಂಟ್​ಗಳನ್ನು ಕದಿಯುತ್ತಿದ್ದರು. ಕದಿಯುವ ವಿಧಾನಕ್ಕೆ ತುಂಬಾನೇ ಆಧುನಿಕ ತಂತ್ರಜ್ಞಾನ ಬಳಕೆ ಮಾಡುತ್ತಿದ್ದರಂತೆ!

  • TV9 Web Team
  • Published On - 16:54 PM, 28 Mar 2021
ಪೈರಸಿ ಮಾಡುತ್ತಿದ್ದ ಅತಿ ದೊಡ್ಡ ಜಾಲ ಅರೆಸ್ಟ್; ಇವರ ತಂತ್ರಜ್ಞಾನ ನೋಡಿ ಪೊಲೀಸರೇ ಕಂಗಾಲು
ಚಿತ್ರಮಂದಿರ

ಪೈರಸಿ ಅನ್ನೋದು ಇಂದು ಚಿತ್ರರಂಗ, ಕಿರುತೆರೆ ಹಾಗೂ ಒಟಿಟಿ ಪ್ಲಾಟ್​​ಫಾರ್ಮ್​ಗೆ ದೊಡ್ಡ ಪಿಡುಗಾಗಿ ಕಾಡುತ್ತಿದೆ. ಇದನ್ನು ಹತ್ತಿಕ್ಕಲು ಪೊಲೀಸರು ಕೂಡ ಪ್ರಯತ್ನ ಮಾಡುತ್ತಿದ್ದಾರೆ. ಇದರ ಭಾಗವಾಗಿ ಅತಿದೊಡ್ಡ ಪೈರಸಿ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರು ಜನರನ್ನು ಅರೆಸ್ಟ್​ ಮಾಡಲಾಗಿದೆ. ಇವರು ಬಳಕೆ ಮಾಡುತ್ತಿದ್ದ ಆಧುನಿಕ ತಂತ್ರಜ್ಞಾನ ನೋಡಿ ಪೊಲೀಸರೇ ಅಚ್ಚರಿ ಹೊರ ಹಾಕಿದ್ದಾರೆ.

ಹರಿಯಾಣದ ಫರಿದಾಬಾದ್​ನಲ್ಲಿ ಆರು ಜನರನ್ನು ಅರೆಸ್ಟ್​ ಮಾಡಲಾಗಿದೆ. ರಹಿಸ್ಲೆ ಹೆಸರಿನ ಕಂಪನಿ ಪಿಪಿಇ ಕಿಟ್​ ಮತ್ತು ಮಾಸ್ಕ್​ ತಯಾರಿಸುತ್ತಿದೆ. ಆದರೆ, ಈ ಕಂಪೆನಿಯ ಮೂಲ ಕಸುಬು ಪೈರಸಿ ಮಾಡುವುದು. ಭಾರತ ಹಾಗೂ ವಿದೇಶಿ ಚಾನೆಲ್​ಗಳಿಂದ ಕಾಂಟೆಂಟ್​ಗಳನ್ನು ಕದ್ದು, ಕಡಿಮೆ ಬೆಲೆಗೆ ಅದನ್ನು ಮಾರಾಟ ಮಾಡುವ ಕೆಲಸವನ್ನು ರಹಿಸ್ಲೆ ಮಾಡುತ್ತಿತ್ತು.

ಫರೀದಾಬಾದ್ ಪೊಲೀಸರ ಪ್ರಕಾರ ಬಂಧಿತರು ಸುಮಾರು 400 ಚಾನೆಲ್​ಗಳಿಂದ ಕಾಂಟೆಂಟ್​ಗಳನ್ನು ಕದಿಯುತ್ತಿದ್ದರು. ಕದಿಯುವ ವಿಧಾನಕ್ಕೆ ತುಂಬಾನೇ ಆಧುನಿಕ ತಂತ್ರಜ್ಞಾನ ಬಳಕೆ ಮಾಡುತ್ತಿದ್ದರಂತೆ! ಇವರು, ಭಾರತ ಹಾಗೂ ವಿದೇಶಿ ಚಾನೆಲ್​ಗಳ ಸಿಗ್ನಲ್​ಗಳನ್ನು ಹ್ಯಾಕ್​ ಮಾಡಿ ಚಾನೆಲ್​ಗಳಲ್ಲಿ ಪ್ರಸಾರವಾಗುವ ಮಾಹಿತಿಯನ್ನೇ ಕದ್ದು ಬಿಡುತ್ತಿದ್ದರು.

ಈ ವಿಚಾರಕ್ಕೆ ಸಂಬಂಧಿಸಿ YuppTV ಸೈಬರ್​ ಠಾಣೆಗೆ ದೂರು ನೀಡಿತ್ತು. ಈ ದೂರನ್ನು ಆಧರಿಸಿ ಫರೀದಾಬಾದ್ ಪೊಲೀಸರು ಸಾಕಷ್ಟು ಕಡೆಗಳಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಈ ಕಂಪನಿಯಿಂದ ಕಾಂಟೆಂಟ್​ಗಳನ್ನು ಮಾರಾಟ ಮಾಡಿದ ಬಗ್ಗೆ ಇ-ಮೇಲ್​ಗಳು ದೊರೆತಿವೆ. GoDaddy.com, informir.eu. ಸೇರಿ ಸಾಕಷ್ಟು ಸೈಟ್​ಗಳು ಈ ಪೈರಸಿಯಲ್ಲಿ ಪಾಲುದಾರರವಾಗಿವೆ ಎನ್ನುವ ಮಾತು ಕೇಳಿ ಬಂದಿದೆ.

ಕೆಲ ವೆಬ್​ಸೈಟ್ ಮೂಲಕವೂ ಈ ಕಾಂಟೆಂಟ್​ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಕಡಿಮೆ ಬೆಲೆಯಲ್ಲಿ ಸಿಗುತ್ತದೆ ಎನ್ನುವ ಕಾರಣಕ್ಕೆ ವೀಕ್ಷಕರು ಇದಕ್ಕೆ ಲಾಗಿನ್​ ಆಗುತ್ತಿದ್ದರು. ಆದರೆ, ಈ ವೇಳೆ ಪರ್ಸನಲ್​ ಡೇಟಾಗಳನ್ನು ಹ್ಯಾಕ್​ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: Darshan: ಪೈರಸಿ ತಡೆಯೋಕೆ ದರ್ಶನ್​ ಹೊಸ ತಂತ್ರ!; ಇದು ಜಾರಿಗೆ ಬಂದ್ರೆ ಕಳ್ಳರು ಸಿಕ್ಕಿ ಬೀಳೋದು ಪಕ್ಕಾ

ಪೈರಸಿ ಮಾಡಿದ್ರೂ ರಾಬರ್ಟ್​ ಓಡ್ತಿರೋದು, ರಾಯರ ಸನ್ನಿಧಿಯಲ್ಲಿ ಸಿಕ್ಕ ಸನ್ಮಾನ ಎರಡೂ ನನಗೆ ಖುಷಿ ತಂದಿದೆ’