ಟಾಲಿವುಡ್ ಸ್ಟಾರ್ ನಟರ ವಿರುದ್ಧ ತಿರುಗಿ ಬಿದ್ದ ನಾನಿ; ಫ್ಯಾನ್ಸ್ ವಾರ್ಗೆ ಮುನ್ನುಡಿ?
ಟಾಲಿವುಡ್ನಲ್ಲಿ ಸ್ಟಾರ್ ನಟರು ಕಟೌಟ್ಗೆ ಹಾಲು ಹಾಕುತ್ತಾರೆ. ಕೆಲವೊಮ್ಮೆ ಫ್ಯಾನ್ಸ್ ವಾರ್ ಕೂಡ ಮಾಡುತ್ತಾರೆ. ಇದನ್ನು ಉಲ್ಲೇಖಿಸಿ ನಾನಿ ತಮ್ಮ ಭಾಷಣದ ವೇಳೆ ಟಾಲಿವುಡ್ನ ಸ್ಟಾರ್ಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ ಎನ್ನಲಾಗುತ್ತಿದೆ.
ಟಾಲಿವುಡ್ ನಟ ನಾನಿ ಸದಾ ವಿವಾದಗಳಿಂದ ದೂರವೇ ಇರುತ್ತಾರೆ. ಯಾರ ಜತೆಯೂ ಅವರು ಕಾಲು ಕೆರೆದುಕೊಂಡು ಜಗಳಕ್ಕೆ ಹೋದವರಲ್ಲ. ಮತ್ತೊಂದು ಅಚ್ಚರಿಯ ವಿಚಾರ ಎಂದರೆ ಅವರು ಎಲ್ಲಿಯೂ ಅಭಿಮಾನಿಗಳನ್ನು ಭೇಟಿ ಮಾಡುವುದಿಲ್ಲ. ಈ ಬಗ್ಗೆ ಫ್ಯಾನ್ಸ್ಗೆ ಬೇಸರವಿದೆ. ಈ ಬಗ್ಗೆ ಮಾತನಾಡುವಾಗ ನಾನಿ ಟಾಲಿವುಡ್ ಸ್ಟಾರ್ ನಟರ ಬಗ್ಗೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಈ ವಿಚಾರದಲ್ಲಿ ಫ್ಯಾನ್ಸ್ ವಾರ್ ಸ್ಟಾರ್ಟ್ ಆದರೂ ಅಚ್ಚರಿ ಇಲ್ಲ ಎನ್ನುತ್ತಿದ್ದಾರೆ ಟಾಲಿವುಡ್ ಮಂದಿ. ನನ್ನ ಅಭಿಮಾನಿಗಳು ನನ್ನ ಕಚೇರಿಗೆ, ಶೂಟಿಂಗ್ ಸ್ಪಾಟ್ಗೆ ಭೇಟಿ ನೀಡಿದಾಗ ಅಥವಾ ನನ್ನ ಕಾರ್ಯಕ್ರಮಕ್ಕೆ ತೆರಳಿದಾಗ ನನ್ನನ್ನು ಭೇಟಿಯಾಗಲು ಅಥವಾ ನನ್ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವರಿಗೆ ಅವಕಾಶ ಸಿಗುವುದಿಲ್ಲ. ಈ ಬಗ್ಗೆ ಟ್ವಿಟರ್‌ನಲ್ಲಿ ಅವರ ಕಾಮೆಂಟ್‌ಗಳನ್ನು ನೋಡುತ್ತೇನೆ. ನಾನಿಗೆ ಅಭಿಮಾನಿಗಳ ಬಗ್ಗೆ ಕಾಳಜಿ ಇಲ್ಲ ಎಂಬುದು ಅವರ ಆಲೋಚನೆ. ನಾನು ಈ ವಿಚಾರವನ್ನು ನೇರವಾಗಿ ಹೇಳುತ್ತೇನೆ. ನನ್ನ ಅಭಿಮಾನಿಗಳನ್ನು ನಾನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ, ಎಂದು ನಾನಿ ಹೇಳಿದ್ದಾರೆ.
ಬೇರೆ ಹೀರೋಗಳ ಅಭಿಮಾನಿಗಳಂತೆ ನನ್ನ ಅಭಿಮಾನಿಗಳು ಇರಬಾರದು. ನನ್ನ ಅಭಿಮಾನಿಗಳು ಕಿಡಿಗೇಡಿತನ ತೋರಬಾರದು. ನನ್ನ ಕಟೌಟ್‌ಗಳಿಗೆ ಹಾಲಿನ ಅಭಿಷೇಕ ಮಾಡಬಾರದು. ನನ್ನ ಪಾಲಕರು ನನ್ನ ಬಗ್ಗೆ ಹೇಗೆ ಹೆಮ್ಮೆ ಪಡುತ್ತಾರೋ ಅದೇ ರೀತಿ ನನ್ನ ಅಭಿಮಾನಿಗಳು ನನ್ನ ಬಗ್ಗೆ ಹೆಮ್ಮೆ ಪಡುವಂತೆ ಮಾಡಲು ನಾನು ಬಯಸುತ್ತೇನೆ. ನನ್ನನ್ನು ನೋಡುವವರಿಗೆ ನನ್ನ ಕೈಯಲ್ಲಿರುವ ಇಟ್ಟಿಗೆ ಮಾತ್ರ ಕಾಣಬಹುದು. ಆದರೆ, ಒಂದು ದಿನ ಅವರು ಗಟ್ಟಿಯಾದ ಗೋಡೆಯನ್ನು ನೋಡುತ್ತಾರೆ. ಈ ಗೋಡೆ ಬುಲ್ಡೋಜರ್ನಿಂದಲೂ ಮುಟ್ಟಲು ಸಾಧ್ಯವಿಲ್ಲ ಎಂದು ಭಾವುಕರಾಗಿದ್ದಾರೆ.
ಟಾಲಿವುಡ್ ಸ್ಟಾರ್ ನಟರಿಗೆ ಸಾಕಷ್ಟು ಫ್ಯಾನ್ಸ್ಗಳಿದ್ದಾರೆ. ಅವರನ್ನು ದೇವರಂತೆ ಆರಾಧನೆ ಕೂಡ ಮಾಡುತ್ತಾರೆ. ಕಟೌಟ್ಗೆ ಹಾಲು ಹಾಕುತ್ತಾರೆ. ಕೆಲವೊಮ್ಮೆ ಫ್ಯಾನ್ಸ್ ವಾರ್ ಕೂಡ ಮಾಡುತ್ತಾರೆ. ಇದನ್ನು ಉಲ್ಲೇಖಿಸಿ ನಾನಿ ತಮ್ಮ ಭಾಷಣದ ವೇಳೆ ಟಾಲಿವುಡ್ನ ಸ್ಟಾರ್ಗಳಿಗೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಫ್ಯಾನ್ಸ್ ವಾರ ಆರಂಭವಾಗಬಹುದು ಎನ್ನುವ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: ಟಾಲಿವುಡ್ನಲ್ಲಿ ಕನ್ನಡದ ನಟಿಯರಿಗೆ ಟಫ್ ಕಾಂಪಿಟೇಷನ್ ಕೊಡುತ್ತಿರುವ ಮತ್ತೊಬ್ಬ ಕನ್ನಡದ ನಟಿ!
Published On - 6:28 pm, Sun, 28 March 21