AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪೈರಸಿ ಮಾಡಿದ್ರೂ ರಾಬರ್ಟ್​ ಓಡ್ತಿರೋದು, ರಾಯರ ಸನ್ನಿಧಿಯಲ್ಲಿ ಸಿಕ್ಕ ಸನ್ಮಾನ ಎರಡೂ ನನಗೆ ಖುಷಿ ತಂದಿದೆ’

ಮನಸ್ಸಿನ ನೆಮ್ಮದಿಗೋಸ್ಕರ ಮಂತ್ರಾಲಯಕ್ಕೆ ಬಂದಿದ್ದೇನೆ ಎಂದು ಮಂತ್ರಾಲಯಕ್ಕೆ ಭೇಟಿಕೊಟ್ಟ ವೇಳೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಹೇಳಿದ್ದಾರೆ. ‘ರಾಬರ್ಟ್’​​ ಸಿನಿಮಾದ ಯಶಸ್ಸು ಖುಷಿ ತಂದಿದೆ. ಪೈರಸಿ ಮಾಡಿದರೂ ಸಿನಿಮಾ ಓಡ್ತಿರೋದು ಖುಷಿ ತಂದಿದೆ. ರಾಯರ ಸನ್ನಿಧಿಯಲ್ಲಿನ ಸನ್ಮಾನವೂ ನನಗೆ ಖುಷಿ ತಂದಿದೆ ಎಂದು ಮಂತ್ರಾಲಯದಲ್ಲಿ ಯಜಮಾನ ತಮ್ಮ ಸಂತಸ ಹಂಚಿಕೊಂಡಿರು.

‘ಪೈರಸಿ ಮಾಡಿದ್ರೂ ರಾಬರ್ಟ್​ ಓಡ್ತಿರೋದು, ರಾಯರ ಸನ್ನಿಧಿಯಲ್ಲಿ ಸಿಕ್ಕ ಸನ್ಮಾನ ಎರಡೂ ನನಗೆ ಖುಷಿ ತಂದಿದೆ’
ದರ್ಶನ್​
KUSHAL V
|

Updated on:Mar 17, 2021 | 9:37 PM

Share

ರಾಯಚೂರು: ಮನಸ್ಸಿನ ನೆಮ್ಮದಿಗೋಸ್ಕರ ಮಂತ್ರಾಲಯಕ್ಕೆ ಬಂದಿದ್ದೇನೆ ಎಂದು ಮಂತ್ರಾಲಯಕ್ಕೆ ಭೇಟಿಕೊಟ್ಟ ವೇಳೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಹೇಳಿದ್ದಾರೆ. ‘ರಾಬರ್ಟ್’​​ ಸಿನಿಮಾದ ಯಶಸ್ಸು ಖುಷಿ ತಂದಿದೆ. ಪೈರಸಿ ಮಾಡಿದರೂ ಸಿನಿಮಾ ಓಡ್ತಿರೋದು ಖುಷಿ ತಂದಿದೆ. ರಾಯರ ಸನ್ನಿಧಿಯಲ್ಲಿನ ಸನ್ಮಾನವೂ ನನಗೆ ಖುಷಿ ತಂದಿದೆ ಎಂದು ಮಂತ್ರಾಲಯದಲ್ಲಿ ಯಜಮಾನ ತಮ್ಮ ಸಂತಸ ಹಂಚಿಕೊಂಡಿರು.

ಅಂದ ಹಾಗೆ, ಮಂತ್ರಾಲಯದಲ್ಲಿ ಗುರು ಭಕ್ತಿ ಉತ್ಸವ ಸಂಭ್ರಮವಿರುವ ಹಿನ್ನೆಲೆಯಲ್ಲಿ ರಾಯರ ಬೃಂದಾವನದ ದರ್ಶನ ಪಡೆಯಲು ಇಂದು ಡಿ ಬಾಸ್​ ಆಗಮಿಸಿದ್ದರು. ರಾಬರ್ಟ್​ ಯಶಸ್ಸಿಗಿಂತ  ನನಗೆ ರಾಯರನ್ನು ಬಂದು ನೋಡುವುದೇ ಒಂದು ದೊಡ್ಡ ಖುಷಿ. ಇಲ್ಲಿಗೆ ಬಂದು ತುಂಬಾ ವರ್ಷಗಳಾಗಿತ್ತು ಎಂದು ದರ್ಶನ್​ ಹೇಳಿದರು.

ಸಾರ್​ ರಾಬರ್ಟ್​ ಯಶಸ್ಸಿನ ಬಗ್ಗೆ ಏನು ಹೇಳುತ್ತೀರಾ? ಎಂಬ ಪ್ರಶ್ನೆಗೆ ಇದನ್ನು ನೀವು ಪೈರಸಿ ಮಾಡಿದವರಿಗೆ ಕೇಳಬೇಕು ಸರ್​ ಎಂದು ಯಜಮನಾನ ನಸುನಕ್ಕರು. ಅವರನ್ನ ಕೇಳಿ ಪೈರಸಿ ಮಾಡಿ ನಿಮಗೇನು ಸಿಕ್ತು ಈಗ ಅಂತಾ ಎಂದು ದರ್ಶನ್​ ಹೇಳಿದರು. ಜೊತೆಗೆ, ಅಭಿಮಾನಿಗಳು ಬಂದು ರಾಬರ್ಟ್​ ನೋಡ್ತಿರೋದು ಖುಷಿ ತಂದಿದೆ. ನಿಮ್ಮೆಲರಿಗೂ ನಾನು ಕೃತಜ್ಞ ಎಂದು ಹೇಳಿದರು.

ಅಂದ ಹಾಗೆ, ಇಂದು ದರ್ಶನ್​  ನವರಸ ನಾಯಕ ಜಗ್ಗೇಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದರು. ಹುಟ್ಟುಹಬ್ಬದ ಶುಭಾಶಯಗಳು ಜಗ್ಗೇಶ್ ಅಣ್ಣ ಎಂದು ನಟ ದರ್ಶನ್ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದರು. ಅಷ್ಟೇ ಅಲ್ಲ, ಪುನೀತ್ ರಾಜ್​ಕುಮಾರ್​ ಅವರಿ‌ಗೂ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.

ಇದನ್ನೂ ಓದಿ: ವಾಹನಗಳ ನೋಂದಣಿ ಫಲಕದಲ್ಲಿ ನಂಬರ್ ಹೊರತುಪಡಿಸಿ ಬೇರೆ ಅಕ್ಷರ, ಸಂಘಟನೆ ಹೆಸರು ಇದ್ದರೆ ದಂಡ -ಸಾರಿಗೆ ಇಲಾಖೆ

ಅನುಮತಿ ಇಲ್ಲದೇ ಲಹರಿ ಸಂಸ್ಥೆಯ ಹಾಡುಗಳನ್ನ ಬಳಸಿದ ಆರೋಪ: ಖಾಸಗಿ ಕಂಪನಿಗೆ ಖಾಕಿಯಿಂದ ನೋಟಿಸ್

Published On - 8:55 pm, Wed, 17 March 21

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ