ಅನುಮತಿ ಇಲ್ಲದೇ ಲಹರಿ ಸಂಸ್ಥೆಯ ಹಾಡುಗಳನ್ನ ಬಳಸಿದ ಆರೋಪ: ಖಾಸಗಿ ಕಂಪನಿಗೆ ಖಾಕಿಯಿಂದ ನೋಟಿಸ್
ಲಹರಿ ಸಂಸ್ಥೆಯ ಹಾಡುಗಳನ್ನು ಅನುಮತಿ ಇಲ್ಲದೇ ಬಳಸಿದ ಆರೋಪದಡಿ ಗ್ಲ್ಯಾನ್ಸ್ ಕಂಪನಿಗೆ ಯಶವಂತಪುರ ಪೊಲೀಸರಿಂದ ನೋಟಿಸ್ ನೀಡಲಾಗಿದೆ. ರೊಪೊಸೋ ಆ್ಯಪ್ನಲ್ಲಿ ಲಹರಿ ಆಡಿಯೋ ಸಂಸ್ಥೆಯ ಹಾಡುಗಳನ್ನು ಅನುಮತಿ ಇಲ್ಲದೆ ಬಳಸಿದ್ದಕ್ಕೆ ನೋಟಿಸ್ ಜಾರಿಯಾಗಿದೆ.

ಬೆಂಗಳೂರು: ಲಹರಿ ಸಂಸ್ಥೆಯ ಹಾಡುಗಳನ್ನು ಅನುಮತಿ ಇಲ್ಲದೇ ಬಳಸಿದ ಆರೋಪದಡಿ ಗ್ಲ್ಯಾನ್ಸ್ ಕಂಪನಿಗೆ ಯಶವಂತಪುರ ಪೊಲೀಸರಿಂದ ನೋಟಿಸ್ ನೀಡಲಾಗಿದೆ. ರೊಪೊಸೋ ಆ್ಯಪ್ನಲ್ಲಿ ಲಹರಿ ಆಡಿಯೋ ಸಂಸ್ಥೆಯ ಹಾಡುಗಳನ್ನು ಅನುಮತಿ ಇಲ್ಲದೆ ಬಳಸಿದ್ದಕ್ಕೆ ನೋಟಿಸ್ ಜಾರಿಯಾಗಿದೆ. ಗ್ಲ್ಯಾನ್ಸ್ ಸಂಸ್ಥೆಯ ವಿರುದ್ಧ ಲಹರಿ ವೇಲು ಕಾಪಿರೈಟ್ಸ್ ಉಲ್ಲಂಘನೆ ಪ್ರಕರಣವನ್ನು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ, ಬೆಳ್ಳಂದೂರಿನಲ್ಲಿರುವ ಕಂಪನಿಯ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಬಳಿಕ, ಲಹರಿ ಸರ್ವರ್ ಬಳಸಲು ಅನುಮತಿ ನೀಡದ ಹಿನ್ನೆಲೆಯಲ್ಲಿ ನೋಟಿಸ್ ನೀಡಿದರು.
ಟಾಲಿವುಡ್ ನಟ ತನೀಶ್ ಪೊಲೀಸ್ ಠಾಣೆಗೆ ಹಾಜರು ನಿರ್ಮಾಪಕ ಶಂಕರ್ಗೌಡ ಕಚೇರಿ ಮೇಲೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟ ತನೀಶ್ ಪೊಲೀಸ್ ಠಾಣೆಗೆ ಹಾಜರಾದರು. ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣೆಗೆ ಹಾಜರಾದರು. ಶಂಕರ್ಗೌಡ ಜೊತೆ ನಿಕಟ ಸಂಪರ್ಕ ಹೊಂದಿದ್ದ ನಟ ತನೀಶ್ ಶಂಕರ್ಗೌಡ ಆಯೋಜಿಸುತ್ತಿದ್ದ ಸಾಕಷ್ಟು ಪಾರ್ಟಿಗಳಲ್ಲಿ ಭಾಗಿಯಾಗಿದ್ದರು. ಹೀಗಾಗಿ, ಮಾ.12ರಂದು ತನೀಶ್ಗೆ ಪೊಲೀಸರು ನೋಟಿಸ್ ನೀಡಿದ್ದರು. ಅಂತೆಯೇ, ಟಾಲಿವುಡ್ ನಟ ತನೀಶ್ ಇಂದು ಠಾಣೆಗೆ ಹಾಜರಾಗಿದ್ದರು.
ಕಾಮಗಾರಿ ವೇಳೆ ಕಟ್ಟಡದಿಂದ ಬಿದ್ದು ಕಾರ್ಮಿಕ ದುರ್ಮರಣ ಕಾಮಗಾರಿ ವೇಳೆ ಕಟ್ಟಡದಿಂದ ಬಿದ್ದು ಕಾರ್ಮಿಕ ದುರ್ಮರಣ ಹೊಂದಿರುವ ಘಟನೆ ಬೆಂಗಳೂರಿನ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಟ್ಟಡದ 2ನೇ ಮಹಡಿಯಿಂದ ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿದ್ದಾರೆ. ರಾಯಚೂರು ಮೂಲದ ಕೋಟೇಶ್ವರ್(23) ಮೃತ ಕಾರ್ಮಿಕ.
ಇದೀಗ, ನಿರ್ಲಕ್ಷ್ಯತನದ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಟ್ಟಡದ ಮಾಲೀಕ ರಾಘವೇಂದ್ರ ರಾವ್ ಹಾಗೂ ಗುತ್ತಿಗೆದಾರ ಕೃಷ್ಣಪ್ಪ ಪೆರುಮಾಳ್ ವಿರುದ್ಧ ಕೇಸ್ ದಾಖಲಾಗಿದೆ.

ಕಾಮಗಾರಿ ವೇಳೆ ಕಟ್ಟಡದಿಂದ ಬಿದ್ದು ಕಾರ್ಮಿಕ ದುರ್ಮರಣ
ಇದನ್ನೂ ಓದಿ: ‘ಸಿಎಂ BSY ಪುತ್ರ ವಿಜಯೇಂದ್ರ ಮಾರಿಷಸ್ಗೆ ಹೋಗಿದ್ರು, Why?.. ಇದು ರಾಜ್ಯದ ಜನರಿಗೆ ಗೊತ್ತಾಗಬೇಕು’
Published On - 7:50 pm, Wed, 17 March 21



