AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಹನಗಳ ನೋಂದಣಿ ಫಲಕದಲ್ಲಿ ನಂಬರ್ ಹೊರತುಪಡಿಸಿ ಬೇರೆ ಅಕ್ಷರ, ಸಂಘಟನೆ ಹೆಸರು ಇದ್ದರೆ ದಂಡ -ಸಾರಿಗೆ ಇಲಾಖೆ

ವಾಹನ ನೋಂದಣಿ ಫಲಕದಲ್ಲಿ ನಂಬರ್ ಮಾತ್ರ ಇರಬೇಕು. ವಾಹನಗಳ ನಂಬರ್ ಹೊರತುಪಡಿಸಿ ಬೇರೆ ಅಕ್ಷರ ಅಥವಾ ಸಂಘಟನೆ ಹೆಸರು ಇದ್ದರೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ವಾಹನಗಳ ನೋಂದಣಿ ಫಲಕದಲ್ಲಿ ನಂಬರ್ ಹೊರತುಪಡಿಸಿ ಬೇರೆ ಅಕ್ಷರ, ಸಂಘಟನೆ ಹೆಸರು ಇದ್ದರೆ ದಂಡ -ಸಾರಿಗೆ ಇಲಾಖೆ
ಪ್ರಾತಿನಿಧಿಕ ಚಿತ್ರ
KUSHAL V
|

Updated on:Mar 17, 2021 | 8:04 PM

Share

ಬೆಂಗಳೂರು: ವಾಹನ ನೋಂದಣಿ ಫಲಕದಲ್ಲಿ ನಂಬರ್ ಮಾತ್ರ ಇರಬೇಕು. ವಾಹನಗಳ ನಂಬರ್ ಹೊರತುಪಡಿಸಿ ಬೇರೆ ಅಕ್ಷರ ಅಥವಾ ಸಂಘಟನೆ ಹೆಸರು ಇದ್ದರೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ. ಮೋಟಾರು ವಾಹನ ಕಾಯ್ದೆ 50-51ರಂತೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ಕೊಟ್ಟಿದೆ. ಜೊತೆಗೆ, ಹುದ್ದೆ ಹೆಸರು, ಇಲಾಖೆಗಳ ಹೆಸರು ಸಹ ಬರೆಯಬಾರದು ಎಂದು ಸಾರಿಗೆ ಇಲಾಖೆ ಮಾ.12ರಂದೇ ಆದೇಶ ಜಾರಿಮಾಡಿದೆ.

ಇತ್ತ, ವಾಹನಗಳ ನವೀಕರಣ ಶುಲ್ಕ ಏರಿಕೆಗೆ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಇಲಾಖೆಯಿಂದ ಪ್ರಸ್ತಾವನೆ ಕೇಳಿಬಂದಿದೆ. ಅಂದ ಹಾಗೆ, ಪ್ರಸ್ತಾವನೆಯಲ್ಲಿ ದ್ವಿಚಕ್ರ ವಾಹನಗಳ ನವೀಕರಣ ಶುಲ್ಕ 1,000 ರೂ, ತ್ರಿಚಕ್ರ ವಾಹನಗಳ ನವೀಕರಣ ಶುಲ್ಕ‌ 2,500 ರೂ, ಲಘು ವಾಹನಗಳ ನವೀಕರಣ ಶುಲ್ಕ 5,000 ರೂ, ಗೂಡ್ಸ್ ವಾಹನಗಳ ನವೀಕರಣ ಶುಲ್ಕ 1,000 ರೂ. ಹಾಗೂ ಭಾರಿ ವಾಹನಗಳ ನವೀಕರಣ ಶುಲ್ಕ 1,500 ರೂ. ಎಂದು ನಿಗದಿ ಮಾಡಲಾಗಿದೆ.

ಇದಲ್ಲದೆ, ಹಳೆಯ ವಾಹನವನ್ನು ಗುಜರಿಗೆ ಹಾಕಿದ ಸರ್ಟಿಫಿಕೇಟ್ ನೀಡಿದ್ರೆ ಹೊಸ ವಾಹನದ ರಿಜಿಸ್ಟ್ರೇಷನ್ ಶುಲ್ಕ ಮನ್ನಾ ಆಗಲಿದೆ. ಜೊತೆಗೆ, ವಾಹನ ನವೀಕರಣ ವಿಳಂಬದ ಶುಲ್ಕ 500 ರೂ.ಗೆ ಏರಿಕೆ ಮಾಡಲು ಸಹ ಕೇಂದ್ರ ಸರ್ಕಾರದಿಂದ ಪ್ರಸ್ತಾವನೆ ಬಂದಿದೆ.

ಇದನ್ನೂ ಓದಿ: ಅನುಮತಿ ಇಲ್ಲದೇ ಲಹರಿ ಸಂಸ್ಥೆಯ ಹಾಡುಗಳನ್ನ ಬಳಸಿದ ಆರೋಪ: ಖಾಸಗಿ ಕಂಪನಿಗೆ ಖಾಕಿಯಿಂದ ನೋಟಿಸ್

Published On - 8:02 pm, Wed, 17 March 21

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು