AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತ ಟಿ20 ತಂಡಕ್ಕೆ ಸೂರ್ಯಕುಮಾರ್ ಶೀಘ್ರದಲ್ಲೇ ಕಂಬ್ಯಾಕ್..!

Suryakumar Yadav's T20 Comeback: ಟಿ20 ವಿಶ್ವಕಪ್ ಗೆಲ್ಲಿಸಿದರೂ, ಕಳಪೆ ಫಾರ್ಮ್‌ನಿಂದ ಸೂರ್ಯಕುಮಾರ್ ಯಾದವ್ ತಂಡದಿಂದ ಹೊರಬಿದ್ದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ಸತತ 6 ಸೋಲು ಕಂಡಿದೆ. ಭಾರತ ತಂಡಕ್ಕೆ ಸೂರ್ಯಕುಮಾರ್ ಮತ್ತೆ ಮರಳಲು, ಮುಂಬರುವ ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಿದೆ. ಈ ಮೂಲಕ ಸೂರ್ಯ ಮತ್ತೆ ಭಾರತದ ಟಿ20 ತಂಡದಲ್ಲಿ ಕಾಣಿಸಿಕೊಳ್ಳಬಹುದು.

ಪೃಥ್ವಿಶಂಕರ
|

Updated on: Jul 13, 2026 | 6:20 PM

Share
ಟೀಂ ಇಂಡಿಯಾವನ್ನು ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಮಾಡಿದ್ದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ನಾಯಕನಾಗಿ ಅದ್ಭುತ ಪ್ರದರ್ಶನ ನೀಡಿದ್ದ ಸೂರ್ಯ ಆಟಗಾರನಿಗೆ ಕಳಪೆ ಪ್ರದರ್ಶನ ನೀಡಿದ್ದರು. ಅಲ್ಲದೆ ಆ ಬಳಿಕ ನಡೆದ ಐಪಿಎಲ್​ನಲ್ಲೂ ಸೂರ್ಯಕುಮಾರ್ ಪ್ರದರ್ಶನ ತೀರ ಕಳಪೆಯಾಗಿತ್ತು. ಇದನೆಲ್ಲ ಗಮನಿಸಿದ ಬಿಸಿಸಿಐ, ಸೂರ್ಯಕುಮಾರ್ ಅವರನ್ನು ಟಿ20 ತಂಡದಿಂದ ಕೈಬಿಟ್ಟಿತ್ತು (PC-PTI).

1 / 5
ದುರಾದೃಷ್ಟವೆಂಬಂತೆ ಸೂರ್ಯಕುಮಾರ್ ತಂಡದಿಂದ ಹೊರಬಿದ್ದ ಬಳಿಕ ಟೀಂ ಇಂಡಿಯಾದ ಪ್ರರ್ದನವೂ ಪಾತಳಕ್ಕೆ ಕುಸಿದಿದೆ. ಅಪರೂಪಕ್ಕೊಂದು ಪಂದ್ಯಗಳನ್ನು ಸೋಲುತ್ತಿದ್ದ ಟೀಂ ಇಂಡಿಯಾ ಇದೀಗ ಸತತ 6 ಪಂದ್ಯಗಳನ್ನು ಸೋತಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಭಾರತ ಟಿ20 ತಂಡದಲ್ಲಿ ಕೆಲವು ಬದಲಾವಣೆಗಳಾಗುವುದು ಖಚಿತ(PC-BCCI).

2 / 5
ಈ ಬದಲಾವಣೆಗಳ ಭಾಗವಾಗಿ ಭಾರತ ಟಿ20 ತಂಡದಿಂದ ಹೊರಬಿದ್ದಿರುವ ಸೂರ್ಯಕುಮಾರ್ ಯಾದವ್ ಮತ್ತೆ ತಂಡಕ್ಕೆ ಸೇರಿಕೊಳ್ಳುವ ಸಾಧ್ಯತೆಗಳಿವೆ. ಆದರೆ ತಂಡವನ್ನು ಸೇರಿಕೊಳ್ಳಬೇಕೆಂದರೆ ಸೂರ್ಯಕುಮಾರ್ ಯಾದವ್ ದೇಶಿ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಮುಂಬರುವ ದೇಶಿ ಟೂರ್ನಿಗಳಲ್ಲಿ ಸೂರ್ಯ ಮಿಂಚಿದರೆ, ಮತ್ತೆ ಭಾರತ ಟಿ20 ತಂಡದಲ್ಲಿ ಕಾಣಿಸಿಕೊಳ್ಳಬಹುದು(PC-PTI).

3 / 5
ಮುಂಬರುವ ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಮತ್ತು ಇತರ ಟಿ20 ಪಂದ್ಯಾವಳಿಗಳಲ್ಲಿ ಸೂರ್ಯ ಉತ್ತಮ ಪ್ರದರ್ಶನ ನೀಡಿದರೆ, ಆಯ್ಕೆದಾರರು ಅವರಿಗೆ ತಂಡಕ್ಕೆ ಮರಳಲು ಅವಕಾಶ ನೀಡುವ ಸಾಧ್ಯತೆಯಿದೆ ಎಂದು ತಂಡದೊಳಗಿನ ಮೂಲಗಳನ್ನು ಉಲ್ಲೇಖಿಸಿ ಎಎನ್‌ಐ ವರದಿ ಮಾಡಿದೆ. ಇದಕ್ಕೆ ಕಾರಣ, ಸೂರ್ಯಕುಮಾರ್ ಯಾದವ್ ನಿರ್ಗಮನದ ನಂತರ, ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾದ ಕಳಪೆ ಪ್ರದರ್ಶನ(PC-PTI).

4 / 5
ಇನ್ನು ಟೀಂ ಇಂಡಿಯಾದ ಮುಂದಿನ ಟಿ20 ಸರಣಿಯನ್ನು ಜಿಂಬಾಬ್ವೆ ವಿರುದ್ಧ ಆಡಲಿದೆ. ಈ ಮೂರು ಪಂದ್ಯಗಳ ಸರಣಿ ಹರಾರೆಯಲ್ಲಿ ನಡೆಯಲಿದೆ. ಮೊದಲ ಪಂದ್ಯ ಜುಲೈ 23 ರಂದು, ಎರಡನೇ ಟಿ20 ಜುಲೈ 25 ರಂದು ಮತ್ತು ಮೂರನೇ ಟಿ20 ಜುಲೈ 26 ರಂದು ನಡೆಯಲಿದೆ. ಜಿಂಬಾಬ್ವೆಯ ಪಿಚ್‌ಗಳು ಸಹ ಸಾಕಷ್ಟು ಬೌನ್ಸಿ ಆಗಿರುವುದರಿಂದ, ಟೀಂ ಇಂಡಿಯಾ ಅಲ್ಲಿಯೂ ತೊಂದರೆಗಳನ್ನು ಎದುರಿಸಿದರೆ ಆಶ್ಚರ್ಯವೇನಿಲ್ಲ (PC-BCCI).

5 / 5
Follow Us
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!

ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​

5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು

ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು

ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ

ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್

ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ

ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!

ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಭಾಗಿ

ಲಿಂಗನಮಕ್ಕಿ ಡ್ಯಾಮ್ ಹಿನ್ನೀರು ಇಳಿಕೆ: ನಿಂತಿದ್ದ ಲಾಂಚ್ ಮತ್ತೆ ಶುರು