AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೋದಿ ವಿಫಲರಾಗಿದ್ದಾರೆ…’ – ವ್ಯಂಗ್ಯದ ಬಾಣ ಬಿಟ್ಟ ಬಿಜೆಪಿ ಮುಸ್ಲಿಂ ನಾಯಕ ಶೆಹಜಾದ್ ಪೂನಾವಾಲಾ

Shehzad Poonawalla shares video message: ಮೊನ್ನೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ಶೆಹಜಾದ್ ಪೂನಾವಾಲಾ, ಸೋಷಿಯಲ್ ಮೀಡಿಯಾದಲ್ಲಿ ಮೋದಿ ಬಗ್ಗೆ ವ್ಯಂಗ್ಯದ ವಿಡಿಯೋ ಹಂಚಿಕೊಂಡಿದ್ದಾರೆ. ಮೋದಿ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎನ್ನುವ ವಿಪಕ್ಷಗಳ ಆರೋಪಕ್ಕೆ ಪೂನಾವಾಲ ವ್ಯಂಗ್ಯದ ಉತ್ತರ ಕೊಟ್ಟಿದ್ದಾರೆ.

‘ಮೋದಿ ವಿಫಲರಾಗಿದ್ದಾರೆ...’ - ವ್ಯಂಗ್ಯದ ಬಾಣ ಬಿಟ್ಟ ಬಿಜೆಪಿ ಮುಸ್ಲಿಂ ನಾಯಕ ಶೆಹಜಾದ್ ಪೂನಾವಾಲಾ
ಶೆಹಜಾದ್ ಪೂನಾವಾಲಾImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 02, 2026 | 8:05 PM

Share

ನವದೆಹಲಿ, ಆಗಸ್ಟ್ 2: ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ (Shehzad Poonawalla) ಅವರು ಪ್ರಧಾನಿ ನರೇಂದ್ರ ಮೋದಿ ಬಗ್ಗೆ ವ್ಯಂಗ್ಯಾತ್ಮಕ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಪ್ರತಿಪಕ್ಷಗಳು ಮತ್ತು ಮೋದಿಯವರ ಟೀಕಾಕಾರರನ್ನು ಲೇವಡಿ ಮಾಡಿದ್ದಾರೆ. ಮೊನ್ನೆಯಷ್ಟೇ ಅವರು ಬಿಜೆಪಿಯ ರಾಷ್ಟ್ರೀಯ ವಕ್ತಾರ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದರು. ತಮ್ಮ ಟ್ವಿಟ್ಟರ್ ಬಯೋದಲ್ಲಿ ಬಿಜೆಪಿ ಪದದ ಉಲ್ಲೇಖವನ್ನು ತೆಗೆದುಹಾಕಿ, ಅವರು ಪಕ್ಷದಿಂದಲೇ ನಿರ್ಗಮಿಸುತ್ತಿರಬಹುದು ಎನ್ನುವ ಶಂಕೆಗೆ ಎಡೆ ಮಾಡಿಕೊಟ್ಟಿದ್ದರು. ಅದರ ಬೆನ್ನಲ್ಲೇ ಅವರು ಮೋದಿ ವಿಫಲರಾಗಿದ್ದಾರೆ ಎಂದು ಹೇಳಿ ವಿಡಿಯೋ ಮೆಸೇಜ್ ಹಾಕಿ ಕುತೂಹಲ ಮೂಡಿಸಿದ್ದಾರೆ.

ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ‘ನೀಟ್’ (NEET) ಪರೀಕ್ಷಾ ಅಕ್ರಮ ಖಂಡಿಸಿ ನಡೆದ ಪ್ರತಿಭಟನೆಗಳ ವೇಳೆ ಕೆಲವು ಪ್ರತಿಭಟನಾಕಾರರು ಪ್ರಧಾನಿ ಮೋದಿ ಹಾಗೂ ಅವರ ದಿವಂಗತ ತಾಯಿಯವರ ವಿರುದ್ಧ ಶಬ್ದಕೋಶವಿಲ್ಲದ ದುರ್ಭಾಷೆ ಬಳಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, “ಅವರೆಲ್ಲ ತಪ್ಪುದಾರಿ ತುಳಿದ ಮಕ್ಕಳು, ಅವರನ್ನು ಕ್ಷಮಿಸಿಬಿಡಿ” ಎಂದು ಸಾರ್ವಜನಿಕರಲ್ಲಿ ಮತ್ತು ಪೊಲೀಸರಲ್ಲಿ ಮನವಿ ಮಾಡಿದ್ದರು. ಪ್ರಧಾನಿಯವರ ಈ ಹೇಳಿಕೆಯನ್ನು ಉಲ್ಲೇಖಿಸಿ ಶೆಹಜಾದ್ ಪೂನಾವಾಲಾ ಪ್ರಧಾನಿ ಮೋದಿಯ ‘ವೈಫಲ್ಯ’ದ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ಓದಿ: ಸಿಜೆಪಿ ಸ್ಥಾಪಕ ಅಭಿಜೀತ್ ದೀಪ್ಕೆ ಯಾರು? ಡಿಜಿಟಲ್ ಫಂಡ್ ಹಾಗೂ ವಿದೇಶಿ ಶಿಕ್ಷಣದ ವೆಚ್ಚದ ತನಿಖೆಗೆ ಆರ್‌ಟಿಐ ಅರ್ಜಿ

ವೀಡಿಯೋದಲ್ಲಿ ಪೂನಾವಾಲಾ ಹೇಳಿದ್ದೇನು?

ಮೋದಿ ಅವರು ಇಂದಿರಾ ಗಾಂಧಿಯವರಂತೆ ಸರ್ವಾಧಿಕಾರಿಯಾಗಲು ವಿಫಲರಾಗಿದ್ದಾರೆ ಎಂದಿದ್ದಾರೆ ಶೆಹಜಾದ್ ಪೂನಾವಾಲಾ. “ನನಗೆ ಪ್ರಧಾನಿ ಮೋದಿ ಅವರ ಮೇಲೆ ತೀವ್ರ ನಿರಾಶೆಯಾಗಿದೆ. ಅಧಿಕಾರಕ್ಕೆ ಬಂದು 12 ವರ್ಷಗಳಾದರೂ ಅವರಿಗೆ ಇನ್ನೂ ಸರಿಯಾದ ‘ಏಕಾಧಿಪತಿ’ (Dictator) ಆಗಲು ಸಾಧ್ಯವಾಗಿಲ್ಲ. ಪ್ರತಿಪಕ್ಷಗಳು ಮತ್ತು ಎಡಪಂಥೀಯ ಉದಾರವಾದಿಗಳು (Left Liberals) ಅವರ ಮೇಲೆ ಇಟ್ಟುಕೊಂಡಿದ್ದ ಆಶಯಕ್ಕೆ ಮೋದಿ ನೀರೆರೆಚಿದ್ದಾರೆ” ಎಂದು ವೀಡಿಯೋದಲ್ಲಿ ಪೂನಾವಾಲಾ ತಮಾಷೆ ಮಾಡಿದ್ದಾರೆ.

“ನಿಜವಾದ ಸರ್ವಾಧಿಕಾರಷಾಹಿ (Dictatorship) ಎಂದರೆ ಏನು ಎಂದು ತಿಳಿಯಲು ಪ್ರಧಾನಿ ಮೋದಿ ಅವರು ಜವಾಹರಲಾಲ್ ನೆಹರೂ ಮತ್ತು ಇಂದಿರಾ ಗಾಂಧಿಯವರಿಂದ ಕಲಿಯಬೇಕು. ಪ್ರತಿಪಕ್ಷಗಳ ನಾಯಕರನ್ನು ಜೈಲಿಗಟ್ಟಿದ್ದು, 1975ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದು ಕಾಂಗ್ರೆಸ್ ಆಡಳಿತದಲ್ಲಿ” ಎಂದು ಶೆಹಜಾದ್ ಆರೋಪಿಸಿದ್ದಾರೆ.

ಶೆಹಜಾದ್ ಅವರ ಎಕ್ಸ್ ಪೋಸ್ಟ್

ವಿಪಕ್ಷಗಳ ಆಡಳಿತದ ರಾಜ್ಯಗಳ ವಿರುದ್ಧ ಟೀಕೆ: ಪ್ರಧಾನಿ ಮೋದಿ ಅವರು ತಮ್ಮನ್ನು ನಿಂದಿಸಿದ ಮಕ್ಕಳನ್ನು ಕ್ಷಮಿಸಿ ಸರಿಯಾದ ದಾರಿಗೆ ತರಬೇಕು ಎನ್ನುತ್ತಿದ್ದರೆ, ರಾಹುಲ್ ಗಾಂಧಿ ಮತ್ತು ವಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ (ಕೇರಳ, ಕರ್ನಾಟಕ) ಸಣ್ಣ ಸೋಶಿಯಲ್ ಮೀಡಿಯಾ ಪೋಸ್ಟ್ ಅಥವಾ ಪೋಸ್ಟರ್ ಹಾಕಿದ್ದಕ್ಕೂ ಜನರ ವಿರುದ್ಧ ಎಫ್‌ಐಆರ್ ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತಿದೆ ಎಂದು ವೀಡಿಯೋದಲ್ಲಿ ಪೂನಾವಾಲಾ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ, ಅರಾಜಕತೆಗಲ್ಲ: ನೀಟ್ ಪ್ರತಿಭಟನೆಗಳ ಕುರಿತು ಸ್ಮೃತಿ ಇರಾನಿ ಖಡಕ್ ಹೇಳಿಕೆ

ನೀಟ್ ಪರೀಕ್ಷಾ ಅಕ್ರಮದ ಪ್ರತಿಭಟನೆ ವೇಳೆ ಪ್ರತಿಪಕ್ಷಗಳ ನಾಯಕರು ಪ್ರಧಾನಿ ಮೋದಿ ಸರ್ಕಾರವನ್ನು “ಏಕಾಧಿಪತಿ ಸರ್ಕಾರ” ಎಂದು ಕಟುವಾಗಿ ಟೀಕಿಸಿದ್ದರು. ಪ್ರತಿಪಕ್ಷಗಳ ಈ ಹೇಳಿಕೆಗೆ ತಿರುಗೇಟು ನೀಡಲು ಶೆಹಜಾದ್ ಪೂನಾವಾಲಾ ಈ ವ್ಯಂಗ್ಯಾತ್ಮಕ ವೀಡಿಯೋ ಹಂಚಿಕೊಂಡಿದ್ದಾರೆ.

ಯಾರು ಈ ಶೆಹಜಾದ್ ಪೂನಾವಾಲಾ?

ಕೆಲ ವರ್ಷಗಳ ಹಿಂದೆ ಶೆಹಜಾದ್ ಪೂನಾವಾಲಾ ಅವರು ಕಾಂಗ್ರೆಸ್​ನಿಂದ ಬಿಜೆಪಿ ಸೇರಿದ್ದರು. ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ನಡೆಯುವ ಡಿಬೇಟ್​ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಜನರಿಗೆ ಚಿರಪರಿಚಿತರೆನಿಸಿದ್ದಾರೆ. ಮುಸ್ಲಿಮರಾಗಿರುವ ಇವರು ತಮ್ಮನ್ನು ಇಸ್ಲಾಮ್ ಮತದಲ್ಲಿ ಹುಟ್ಟಿದನವೆಂದು, ಹಿಂದೂ ಸಂಸ್ಕೃತಿಯನ್ನು ಅನುಸರಿಸುವವನೆಂದು ಹೇಳಿಕೊಳ್ಳುತ್ತಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ