Horoscope Today 14 July : ನಿಮ್ಮ ರಾಶಿಯ ರಹಸ್ಯಗಳು ಇಂದು ಬಹಿರಂಗ
ನಿತ್ಯ ಭವಿಷ್ಯ: ಜುಲೈ 14, 2026 ರ ದೈನಂದಿನ ಜಾತಕವನ್ನು ಪ್ರಸ್ತುತಪಡಿಸುತ್ತದೆ, ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಜ್ಯೋತಿಷ್ಯ ಒಳನೋಟಗಳನ್ನು ನೀಡುತ್ತದೆ. ಗ್ರಹಗಳ ಸ್ಥಾನಗಳು ಮತ್ತು ನಕ್ಷತ್ರಗಳು ನಿಮ್ಮ ಪ್ರೇಮ ಜೀವನ, ವೃತ್ತಿ, ಹಣಕಾಸು ಮತ್ತು ವೈಯಕ್ತಿಕ ಯೋಗಕ್ಷೇಮಕ್ಕಾಗಿ ಏನನ್ನು ಊಹಿಸುತ್ತವೆ ಎಂಬುದನ್ನು ಕಂಡುಕೊಳ್ಳಿ. ರಹಸ್ಯವನ್ನು ಬಹಿರಂಗಪಡಿಸುವ ಬಗ್ಗೆ ಒಂದು ಚಿಹ್ನೆಗೆ ಎಚ್ಚರಿಕೆ, ದಿನದ ವಿಶಿಷ್ಟ ಶಕ್ತಿಗಳು ಮತ್ತು ಘಟನೆಗಳ ಮೂಲಕ ನಿಮಗೆ ಮಾರ್ಗದರ್ಶನ ನೀಡುವುದು ಸೇರಿದಂತೆ ಸಂಭಾವ್ಯ ಸವಾಲುಗಳು, ಅವಕಾಶಗಳು ಮತ್ತು ವಿಶೇಷ ಸಲಹೆಗಳನ್ನು ಅನ್ವೇಷಿಸಿ.

ಶಾಲಿವಾಹನ ಶಕವರ್ಷ 1949ರ ಉತ್ತರಾಯಣ, ಗ್ರೀಷ್ಮ ಋತುವಿನ ನಿಜ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯಾ ತಿಥಿಯ ಮಂಗಳವಾರದಂದು ಶತ್ರುಗಳ ಜಯ, ದಿನಾಂತ್ಯದಲ್ಲಿ ಶುಭವಾರ್ತೆ, ಪ್ರಯಾಣಕ್ಕೆ ತಯಾರಿ, ಪ್ರತಿಜ್ಞೆ, ಮುಂಗಡದಿಂದ ಪಾವತಿ, ಅಪಘಾತ ಸೂಚನೆ, ಕಾರ್ಯಸಾಧನೆಗೆ ಪ್ರಯತ್ನ, ಪ್ರಭಾವ ಬಳಕೆ ಇವೆಲ್ಲ ಈ ದಿನದ ವಿಶೇಷ.
ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ನಿಜ ಜ್ಯೇಷ್ಠ, ಸೌರ ಮಾಸ : ಮಿಥುನ, ಮಹಾನಕ್ಷತ್ರ : ಪುನರ್ವಸು, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಪುನರ್ವಸು, ಯೋಗ : ಧ್ರುವ, ಕರಣ : ಶಕುನಿ, ಸೂರ್ಯೋದಯ – 06 – 01 am, ಸೂರ್ಯಾಸ್ತ – 06 – 49 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:37 – 17:13, ಯಮಗಂಡ ಕಾಲ 09:14 – 10:50, ಗುಳಿಕ ಕಾಲ 12:25 – 14:01
ಮೇಷ ರಾಶಿ :
ಯಾರೇ ಪ್ರೀತಿಯಿಂದ ಏನನ್ನೇ ಕೊಟ್ಟರೂ ಅದನ್ನು ಸ್ವೀಕರಿಸಿ. ನೀವು ಇಂದು ಆಲಂಕಾರಿಕ ವಸ್ತುಗಳನ್ನು ಹೆಚ್ಚು ಖರೀದಿಸುವಿರಿ. ಆಯ್ಕೆಗಳ ವಿಚಾರದಲ್ಲಿ ಗೊಂದಲದಲ್ಲಿ ಇರಬೇಕಾಗಬಹುದು. ಶತ್ರುಗಳ ಪರಾಜಯವನ್ನು ಕಂಡು ಸಂತಸಪಡುವಿರಿ. ಇಂದು ಹೆಚ್ಚು ಹುಡುಗಾಟದ ಮಾನಸಿಕತೆ ಇರಲಿದೆ ಶರೀರದಲ್ಲಿ ಅಸಮತೋಲನವು ಇರಲಿದೆ. ಇಂದು ಉಪಾಯದಿಂದ ಕೆಲಸವನ್ನು ಮಾಡುವುದು ಉತ್ತಮ. ದುರಭ್ಯಾಸವು ಹೆಚ್ಚಾಗುವ ಸಾಧ್ಯತೆ ಇದೆ. ಸ್ನೇಹಿತರ ವಿವಾಹ ಸಮಾರಂಭದಲ್ಲಿ ಖುದ್ದಾಗಿ ಭಾಗಿಯಾಗುವಿರಿ.
ವೃಷಭ ರಾಶಿ :
ನಿಮಗೆ ಆತ್ಮವಿಶ್ವಾಸವನ್ನು ಪಡೆಯಲು ಮತ್ತು ನಿಮ್ಮ ಆಲೋಚನೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಇನ್ನೊಬ್ಬರಿಗೆ ಹೋಲಿಸುವುದು ಅಪಮಾನವಾಗವುದು. ಇಂದು ನಿಮ್ಮ ವ್ಯಕ್ತಿತ್ವದ ಸ್ಪಷ್ಟ ಚಿತ್ರಣವನ್ನು ನಿಮ್ಮವರಿಗೆ ತೋರಿಸುವಿರಿ. ವಿದೇಶ ಪ್ರಯಾಣವನ್ನು ಮಾಡುವವರು ಹೆಚ್ಚು ಸಿದ್ಧತೆಯಲ್ಲಿ ತೊಡಗುವರು. ದಿನಾಂತ್ಯವು ಬಹಳ ಆನಂದದಲ್ಲಿ ಮುಕ್ತಾಯವಾಗುವುದು. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು.
ಮಿಥುನ ರಾಶಿ :
ನೀವು ಮತ್ತು ನಿಮ್ಮ ಸಂಗಾತಿ ಉತ್ತಮ ಸಮಯವನ್ನು ಹೊಂದಿರುತ್ತೀರಿ. ಇಂದು ನೀವು ಕುಟುಂಬದ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಏರಿಸುವಿರಿ. ಬೇಡವಾದ ಸಂಗತಿಗಳೇ ನಿಮ್ಮ ಕಿವಿಗೆ ಬೀಳಬಹುದು. ನಿಮ್ಮ ಸಾಧನೆಗೆ ಗೌರವ ಸಿಗಲಿದೆ. ಸಣ್ಣ ಆದಾಯವನ್ನೂ ಕಡೆಗಣಿಸುವುದು ಬೇಡ. ನಿಮ್ಮ ಉಳಿತಾಯಕ್ಕೆ ಬೆಲೆ ಇಂದು ಬರುವುದು. ಹೊಸ ಪರಿಚಯವು ಅತಿಯಾಗಿ ಆಪ್ತವಾಗಬಹುದು. ಯಾರ ಜೊತೆಗೂ ನೇರವಾದ ಮಾತುಗಳನ್ನು ಆಡದೇ ಕುಹಕವಾಡುವಿರಿ.
ಕರ್ಕಾಟಕ ರಾಶಿ :
ಇಂದು ಮನೆಯ ಕಾರ್ಯವನ್ನು ನಿರ್ವಹಿಸಲು ಸಮರ್ಥರಾಗುವುದಿಲ್ಲ. ನೀವು ಇಂದು ದಿನದ ಚಟುವಟಿಕೆಗಳನ್ನು ಬದಲಾಯಿಸುವ ಮನಸ್ಸು ಮಾಡುವಿರಿ. ವೃತ್ತಿಜೀವನವು ನಿಮ್ಮನ್ನು ಕೈಬೀಸಿ ಕರೆದರೂ ನಿಮ್ಮಲ್ಲಿ ನಿರಾಸಕ್ತಿ ಇರುವುದು. ಸಾಲದ ಬಗ್ಗೆ ಹೆಚ್ಚು ಚಿಂತೆ ಮಾಡುವಿರಿ. ರಾಜಕಾರಣಿಗಳು ಅತ್ಯಂತ ಸಂತೋಷದಿಂದ ಇರುವ ದಿನವಾಗಿದೆ. ಭಾವುಕರಾಗುವ ಸಂದರ್ಭವು ಬರಬಹುದು. ಬೇಕೆಂದೇ ನಿಮ್ಮನ್ನು ಕೆಣಕಬಹುದು.
ಸಿಂಹ ರಾಶಿ :
ನೀವು ಇಂದು ಪ್ರಾಮಾಣಿಕತೆಯ ಫಲವನ್ನು ಕಾಣಲಿದ್ದೀರಿ. ಸಂಗಾತಿಯಿಂದ ಶುಭಸಮಾಚಾರವು ಬರಲಿದೆ. ಸಿಟ್ಟಿಂದ ಕೆಲಸವನ್ನು ಸಾಧಿಸಲಾಗದು. ವಾಹನದಿಂದ ಜಾರುವಿರಿ. ಅಪಾಯದ ಯಾವದೇ ಲಕ್ಷಣ ಕಾಣಿಸದು. ತಾಳ್ಮೆ ಮತ್ತು ಕ್ರಮಬದ್ಧ ತಂತ್ರದಿಂದ ಸಾಧ್ಯವಾಗುವುದು. ಮನೋರಂಜನೆಯನ್ನು ಇಷ್ಟಪಡುವಿರಿ. ಅಪರಿಚಿತರಿಗೆ ಮಾಡಿದ ಸಹಾಯವನ್ನು ದುರುಪಯೋಗ ಮಾಡಿಕೊಳ್ಳುವಿರಿ. ನಿಮ್ಮ ಭದ್ರತೆಯಲ್ಲಿ ಲೋಪವಾಗುವ ಸಾಧ್ಯತೆ ಇದೆ.
ಕನ್ಯಾ ರಾಶಿ :
ನಿಮಗೆ ಆರ್ಥಿಕತೆಯಲ್ಲಿ ಸ್ಪಷ್ಟತೆ ಅವಶ್ಯವಾಗಿ ಬೇಕು. ಕಷ್ಟವೇ ನಿಮಗೆ ಎತ್ತರಕ್ಕೇರುವ ಸಾಧನವಾಗಲಿದೆ. ಕೆಲಸದ ತಪ್ಪನ್ನು ಯಾರಮೇಲೂ ಹಾಕದೇ ನೀವೇ ಸರಿ ಮಾಡಿಕೊಳ್ಳುವಿರಿ. ಪ್ರೇಮವ್ಯವಹಾರದಲ್ಲಿ ಸಿಕ್ಕಿಕೊಂಡು ಒದ್ದಾಡುವಿರಿ. ಮುದ್ರಣದ ವಿಚಾರದಲ್ಲಿ ಸರಿಯಾದ ನಿರ್ಧಾರ ಪಡೆಯಲಾಗದು. ಅನುಕರಣೆಯಿಂದ ನಿಮಗೆ ಅಪಾಯ ಸಾಧ್ಯತೆ ಇದೆ. ಬಂಧುಗಳ ಸಹಾಯವನ್ನು ಪಡೆದು ನೆಮ್ಮದಿಯಿಂದ ಇರಿ. ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು ಎನ್ನುವುದು ನಿಜವಾದರೂ, ಅದಕ್ಕೂ ವಿಧಾನವಿದೆ.
ತುಲಾ ರಾಶಿ :
ನಿಮ್ಮನ್ನು ಭೇಟಿ ಮಾಡಲು ಇಂದು ಆಪ್ತರು ಬರಬಹುದು. ಕೆಲಸದ ಕ್ಷೇತ್ರದಲ್ಲಿ ನೀವಂದುಕೊಂಡಂತೆ ಆಗಲಿದೆ. ಮನೆಯ ಕೆಲಸ ಕಾರ್ಯಗಳು ಪರ್ವತಾಕಾರದಲ್ಲಿ ತೋರುವುದು. ಆರಂಭದ ಗೊಂದಲೂ ಆದೀತು. ವಾಹನ ಖರೀದಿಗೆ ಪರ ಊರಿಗೆ ಹೋಗುವಿರಿ. ಶತ್ರುಗಳ ಮಸಲತ್ತು ನಿಮಗೆ ಗೊತ್ತಾಗಿ ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುವಿರಿ. ಇಂದು ಹೆಚ್ಚು ನಗುತ್ತ ಸಂತೋಷದಿಂದ ಇರುವಿರಿ. ಯಾವುದೇ ಗೌಪ್ಯವನ್ನು ನೀವು ಬಿಟ್ಟುಕೊಡಲಾರಿರಿ. ಅಯಾಚಿತ ಭಾಗ್ಯದಿಂದ ಖುಷಿಯಾಗಲಿದೆ.
ವೃಶ್ಚಿಕ ರಾಶಿ :
ನಿಮಗೆ ಉದ್ಯೋಗಕ್ಕೆ ಬೇಕಾದ ಉಪಯುಕ್ತ ಮಾಹಿತಿಯನ್ನು ಪಡೆಯುವಿರಿ. ಸ್ವಂತ ಕಾರ್ಯ ನಿಮಿತ್ತ ದೂರ ಪ್ರಯಾಣ ಮಾಡುವಿರಿ. ಇಂದಿನ ನಿಮ್ಮ ಸುತ್ತಲಿನ ವಾತಾವರಣ ಕಿರಿಕಿರಿ ತರಿಸುವುದು. ಅಂದುಕೊಂಡ ಕೆಲಸವು ಪೂರ್ಣವಾಗುವುದು. ಅಪರಿಚಿತ ಕೆಲಸದಲ್ಲಿ ಮುನ್ನುಗ್ಗಲು ಭಯಪಡುವಿರಿ. ನಿಮ್ಮ ವರ್ತನೆಯು ಅಹಂಕಾರದಂತೆ ತೋರೀತು. ಮಕ್ಕಳಿಗೆ ಜವಾಬ್ದಾರಿಯನ್ನು ಕೊಡಲು ಹಿಂಜರಿಯುವಿರಿ. ಕಷ್ಟವಾದರೂ ಸಾಲದ ಮರುಪಾವತಿಯನ್ನು ಮಾಡವಿರಿ.
ಧನು ರಾಶಿ :
ಹೊರಗೆ ಹೋಗುವ ಎಲ್ಲ ಕೆಲಸಕ್ಕೂ ವಿರಾಮ ಕೊಟ್ಟು ಮನೆಯಲ್ಲಿ ಇದ್ದು ಆನಂದವನ್ನು ಪಡೆಯುವಿರಿ. ಯಾರದೋ ಯೋಜನೆಯನ್ನು ನೀವು ಬಳಸಿಕೊಂಡು ಪ್ರಸಿದ್ಧಿ ಪಡೆಯುವಿರಿ. ಭವಿಷ್ಯದ ಸಂಗಾತಿಯನ್ನು ಮನೆಯವರಿಗೆ ಪರಿಚಯಿಸುವಿರಿ. ಎಲ್ಲವನ್ನೂ ಕಳೆದುಕೊಂಡೆ ಎಂಬ ನೋವು ನಿಮ್ಮನ್ನು ಅಕಾರ್ಯದಲ್ಲಿ ತೊಡಗುವಂತೆ ಮಾಡೀತು. ಆರ್ಥಿಕ ಅಸಮತೋಲನವನ್ನು ಸರಿದೂಗಿಸಿಕೊಳ್ಳುವ ಪ್ರಯತ್ನದಲ್ಲಿ ಇರುವಿರಿ. ಕೊಟ್ಟ ಹಣವನ್ನು ನೀವು ಪುನಃ ಕೇಳುವುದರಿಂದ ಕಲಹವಾಗಬಹುದು.
ಮಕರ ರಾಶಿ :
ಸಂಗಾತಿಯು ಸ್ಪಂದಿಸುತ್ತಿಲ್ಲ ಸರಿಯಾಗಿ ಎಂಬ ವಿಚಾರದಲ್ಲಿ ಬೇಸರವಿರಲಿದೆ. ಮಾಧ್ಯಮದಲ್ಲಿ ಇರುವವರಿಗೆ ಒಳ್ಳೆಯ ವಿಚಾರಗಳು ತಮ್ಮ ಪ್ರಚಾರಕ್ಕೆ ಸಿಗುವುದು. ಖರ್ಚುಗಳನ್ನು ನೀವಾಗಿಯೇ ತಂದುಕೊಳ್ಳಲಿದ್ದೀರಿ. ಅಪರಿಚಿತರು ನಿಮ್ಮ ಸ್ನೇಹದ ನೆಪದಲ್ಲಿ ಬರಬಹುದು. ಬೇಕಾದಷ್ಟು ಅವಕಾಶವಿದ್ದರೂ ನೀವು ಬಳಸಿಕೊಳ್ಳದೇ ಸುಮ್ಮನಾಗುವಿರಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಕಛೇರಿಯ ವ್ಯವಹಾರದಲ್ಲಿ ನಿಮಗೆ ಒತ್ತಡವು ಬರಬಹುದು.
ಕುಂಭ ರಾಶಿ :
ಕಾರ್ಯದ ಸ್ಥಳದಿಂದ ಒಳ್ಳೆಯ ಸುದ್ದಿಗಳು ಬರಲಿವೆ. ಇಂದು ಭೂಮಿಗೆ ಸಂಬಂಧಿಸಿದಂತೆ ಲಾಭ ಪಡೆಯುವಿರಿ. ಇಂದು ನಿಮ್ಮ ಸ್ವಂತ ಆಲೋಚನೆಗಳಿಂದ ಮುಂದುವರಿಯಿರಿ. ಇನ್ನೊಬ್ಬರ ಮಾತಿಗೂ ಬೆಲೆ ಇರಲಿ. ಸಂಗಾತಿಯನ್ನು ದ್ವೇಷಿಸುವಿರಿ. ವ್ಯಾಪಾರದಲ್ಲಿ ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಹೆಚ್ಚಿನ ನಿರೀಕ್ಷೆಯಲ್ಲಿ ಇರುವುದು ಬೇಡ. ನಿಮ್ಮ ಅನುಕೂಲತೆಗೆ ತಕ್ಕಂತೆ ಇಂದಿನ ದಿನವನ್ನು ಇಟ್ಟುಕೊಳ್ಳಿ. ಸಂಗಾತಿಯ ಅನಪೇಕ್ಷಿತ ಆಸೆಗಳನ್ನು ದೂರ ಮಾಡುವಿರಿ.
ಇದನ್ನೂ ಓದಿ: ವಾರ ಭವಿಷ್ಯ ಜುಲೈ 12-18, 2026: ಆರೋಗ್ಯ, ಆರ್ಥಿಕತೆ, ವಿದ್ಯಾಭ್ಯಾಸ ಎಲ್ಲ ರಾಶಿಗಳ ಭವಿಷ್ಯ
ಮೀನ ರಾಶಿ :
ಇಂದು ನಿಮ್ಮ ನೋವನ್ನು ಯಾರ ಜೊತೆಯೂ ಹಂಚಿಕೊಳ್ಳಲು ಹೋಗುವುದಿಲ್ಲ. ಕಷ್ಟವಾದರೂ ಕೆಲಸವನ್ನು ಮಾಡಬೇಕಾದೀತು. ಹಿಂಸೆಯ ಸ್ವಭಾವವು ನಿಮಗೆ ಇಷ್ಟವಾಗದು. ವಿದ್ಯಾಭ್ಯಾಸದಿಂದ ಗಮನ ಬೇರೆಡೆಗೆ ಹೋಗುವ ಸಾಧ್ಯತೆ. ಹೂಡಿಕೆಯಲ್ಲಿ ನಿಮಗೆ ಗೊದಲವಾಗಬಹುದು. ಅಪರೂಪದ ಬಂಧುಗಳ ಭೇಟಿಯಾಗಲಿದೆ. ಇನ್ನೊಬ್ಬರ ಜವಾಬ್ದಾರಿಯನ್ನು ನೀವು ಕಸಿದುಕೊಳ್ಳುವ ಆಲೋಚನೆ ಮಾಡುವಿರಿ. ಬೇರೆ ಕಾರ್ಯದಿಂದಾಗಿ ನಿಮ್ಮ ಮುಖ್ಯ ಕಾರ್ಯವು ಹಿಂದುಳಿಯುವುದು.
-ಲೋಹಿತ ಹೆಬ್ಬಾರ್ – 8762924271 (what’s app only)
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:41 am, Tue, 14 July 26




