ಜಿಬಿಎ ಅಸ್ತಿತ್ವಕ್ಕೆ ಬಂದು ವರ್ಷ ಕಳೆದರೂ ನಗರದಲ್ಲಿ ಇನ್ನೂ ರಾರಾಜಿಸುತ್ತಿವೆ ಹಳೆಯ ಬಿಬಿಎಂಪಿ ನಾಮಫಲಕಳು!
ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೆದರೂ, ಹಳೆಯ ಬಿಬಿಎಂಪಿ ನಾಮಫಲಕಗಳು ಇನ್ನೂ ನಗರದಲ್ಲಿ ಕಾಣಸಿಗುತ್ತಿವೆ. ಐದು ಹೊಸ ನಗರಪಾಲಿಕೆಗಳು ರೂಪುಗೊಂಡಿದ್ದರೂ, ಬೋರ್ಡ್‌ಗಳ ಬದಲಾವಣೆಯಲ್ಲಿನ ವಿಳಂಬ ಸಾರ್ವಜನಿಕರಲ್ಲಿ ತಮ್ಮ ವಾರ್ಡ್‌ಗಳು ಮತ್ತು ಆಡಳಿತ ವ್ಯಾಪ್ತಿಯ ಬಗ್ಗೆ ತೀವ್ರ ಗೊಂದಲ ಮೂಡಿಸಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಾಗರಿಕರಿಗೆ ಅನಾನುಕೂಲವಾಗುತ್ತಿದೆ.
ಬೆಂಗಳೂರು, ಜುಲೈ 13: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬದಲಾಗಿ ಬೃಹತ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಅಸ್ತಿತ್ವಕ್ಕೆ ಬಂದು ಒಂದು ವರ್ಷ ಕಳೆದಿದ್ದರೂ, ನಗರದಲ್ಲಿ ಹಳೆಯ ಬಿಬಿಎಂಪಿ ನಾಮಫಲಕಗಳು ಇನ್ನೂ ರಾರಾಜಿಸುತ್ತಿವೆ. ಜಿಬಿಎ ಅಡಿ ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಎಂಬ ಐದು ಹೊಸ ನಗರಪಾಲಿಕೆಗಳು ರೂಪುಗೊಂಡಿವೆ. ಆದರೆ, ಈ ಬದಲಾವಣೆಗೆ ಅನುಗುಣವಾಗಿ ನಾಮಫಲಕಗಳನ್ನು ಅಳವಡಿಸುವಲ್ಲಿ ಅಧಿಕಾರಿಗಳು ತೀವ್ರ ವಿಳಂಬ ಮಾಡುತ್ತಿದ್ದಾರೆ. ಹಳೆಯ ಬೋರ್ಡ್‌ಗಳು ಯಥಾಸ್ಥಿತಿಯಲ್ಲಿರುವುದರಿಂದ ಸಾರ್ವಜನಿಕರು ತೀವ್ರ ಗೊಂದಲಕ್ಕೀಡಾಗಿದ್ದಾರೆ. ತಮ್ಮ ವಾರ್ಡ್ ಯಾವುದು, ಯಾವ ನಗರಪಾಲಿಕೆ ವ್ಯಾಪ್ತಿಗೆ ಬರುತ್ತೆ, ವಾರ್ಡ್ ಸಂಖ್ಯೆ ಬದಲಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿಯಿಲ್ಲ. ಇದರಿಂದಾಗಿ ನಾಗರಿಕರು ತಮ್ಮ ಸಮಸ್ಯೆಗಳನ್ನು ಯಾರಿಗೆ ತಿಳಿಸಬೇಕು ಎಂಬ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

