AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Darshan: ಪೈರಸಿ ತಡೆಯೋಕೆ ದರ್ಶನ್​ ಹೊಸ ತಂತ್ರ!; ಇದು ಜಾರಿಗೆ ಬಂದ್ರೆ ಕಳ್ಳರು ಸಿಕ್ಕಿ ಬೀಳೋದು ಪಕ್ಕಾ

ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ದೊಡ್ಡ ಗಳಿಕೆ ಮಾಡಿದೆ. ಈ ಮಧ್ಯೆ ಅವರ ಸಿನಿಮಾ ಪೈರಸಿಗೆ ತುತ್ತಾಗಿದೆ. ಇದನ್ನು ತಡೆಯೋಕೆ ದರ್ಶನ್​ ಹೊಸ ಐಡಿಯಾ ಹುಟ್ಟುಹಾಕಿದ್ದಾರೆ.

Darshan: ಪೈರಸಿ ತಡೆಯೋಕೆ ದರ್ಶನ್​ ಹೊಸ ತಂತ್ರ!; ಇದು ಜಾರಿಗೆ ಬಂದ್ರೆ ಕಳ್ಳರು ಸಿಕ್ಕಿ ಬೀಳೋದು ಪಕ್ಕಾ
ದರ್ಶನ್​
ರಾಜೇಶ್ ದುಗ್ಗುಮನೆ
| Edited By: |

Updated on: Mar 17, 2021 | 4:09 PM

Share

ಡಿ ಬಾಸ್​ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ರಿಲೀಸ್​ ಆದ ಒಂದು ವಾರದೊಳಗೆ 60 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಬಾಚಿಕೊಂಡು ಮುನ್ನುಗ್ಗುತ್ತಿದೆ. ಈ ಮಧ್ಯೆ ಸಿನಿಮಾ ಪೈರಸಿ ಕೂಡ ಆಗಿದೆ. ಇದನ್ನು ತಡೆಯೋಕೆ ಸಿನಿಮಾ ತಂಡ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದು, ನೂರಾರು ಪೈರಸಿ ಲಿಂಕ್​ಗಳನ್ನು ಚಿತ್ರತಂಡ ತೆಗೆದು ಹಾಕಿದೆ. ಕೆಲವರನ್ನು ಬಂಧಿಸಿ ಬುದ್ಧಿ ಕೂಡ ಹೇಳಿದೆ. ಈ ಮಧ್ಯೆ ಪೈರಸಿಯನ್ನು ಸಂಪೂರ್ಣವಾಗಿ ತಡೆಯೋಕೆ ದರ್ಶನ್​ ಹೊಸ ಐಡಿಯಾ ಒಂದನ್ನು ನೀಡಿದ್ದಾರೆ. ‘ರಾಬರ್ಟ್’​ ಯಶಸ್ಸಿನ ಖುಷಿ ಹಂಚಿಕೊಳ್ಳಲು ಖಾಸಗಿ ಹೋಟೆಲ್​ನಲ್ಲಿ ಚಿತ್ರತಂಡ ಸಮಾರಂಭ ಹಮ್ಮಿಕೊಂಡಿತ್ತು. ಈ ಸಮಾರಂಭದಲ್ಲಿ ಡಿ ಬಾಸ್​ ದರ್ಶನ್​​ ಮಾತನಾಡಿದ್ದಾರೆ. ಈ ವೇಳೆ ಅವರು ಈ ತಮ್ಮ ಆಲೋಚನೆ ಹಂಚಿಕೊಂಡಿದ್ದಾರೆ. ಸಿನಿಮಾ ಚೆನ್ನಾಗಿದ್ದರೆ ಎಲ್ಲರೂ ಚಿತ್ರಮಂದಿರಕ್ಕೆ ಬಂದು ನೋಡುತ್ತಾರೆ. ಆಗ ನಾನು ಉಚಿತವಾಗಿ ಮೊಬೈಲ್​ಗೆ ಹಾಕಿ ಕೊಡುತ್ತೇನೆ ಎಂದರೂ ಜನರು ಸಿನಿಮಾ ನೋಡಲ್ಲ. ಉತ್ತಮ ಸಿನಿಮಾ ಯಾವಾಗಲೂ ಗೆದ್ದೇ ಗೆಲ್ಲುತ್ತದೆ ಎಂದರು ದರ್ಶನ್​.

ಪೈರಸಿ ತಡೆಯೋ ಬಗ್ಗೆ ಮಾತನಾಡಿದ ದರ್ಶನ್​, ಪೈರಸಿಯನ್ನು ಎಲ್ಲಿ ಮಾಡುತ್ತಿದ್ದಾರೆ ಎನ್ನುವುದು ಗೊತ್ತಾಗುವುದಿಲ್ಲ. ಇದನ್ನು ತಡೆಯೋಕೆ ಸಿನಿಮಾ ಪ್ರದರ್ಶಕರಾದ ಯುಎಫ್​ಒ ಹಾಗೂ ಕ್ಯೂಬ್​ನವರು ಒಂದು ತಂತ್ರ ಬಳಕೆ ಮಾಡಬಹುದು. ಮನೆಯಲ್ಲಿ ಕೇಬಲ್​ ಹಾಕಿಕೊಂಡರೆ ಟಿವಿಯಲ್ಲಿ ಒಂದು ಸಂಖ್ಯೆ ಓಡುತ್ತಿರುತ್ತದೆ. ಅದೇ ರೀತಿ ಪ್ರತಿ ಚಿತ್ರಮಂದಿರಕ್ಕೆ ಒಂದು ನಂಬರ್​ ನೀಡಬೇಕು. ಆಗ ಯಾವ ಚಿತ್ರಮಂದಿರದಲ್ಲಿ ರೆಕಾರ್ಡ್​ ಮಾಡಲಾಗಿದೆ ಎಂಬುದು ಗೊತ್ತಾಗುತ್ತದೆ. ಇದು ನನ್ನ ಆಲೋಚನೆ ಅಷ್ಟೆ. ಇದನ್ನು ಬೇಕಿದ್ದರೆ ಇಂಪ್ಲಿಮೆಂಟ್​ ಮಾಡಬಹುದು ಎಂದರು.

ಈ ಹಿಂದೆ ತರುಣ್​ ಸುಧೀರ್​ ನಿರ್ದೇಶನ ಮಾಡಿದ್ದ ‘ಚೌಕ’ ಸಿನಿಮಾದಲ್ಲಿ ದರ್ಶನ್​ ಅವರು ರಾಬರ್ಟ್​ ಎಂಬ ಅತಿಥಿ ಪಾತ್ರವನ್ನು ಮಾಡಿದ್ದರು. ಅದೇ ಪಾತ್ರವನ್ನು ಮುಖ್ಯವಾಗಿ ಇಟ್ಟುಕೊಂಡು ತರುಣ್​ ಅವರು ಹೊಸ ಕಥೆ ಬರೆದು ‘ರಾಬರ್ಟ್​’ ಸಿನಿಮಾ ಮಾಡಿದ್ದರು. ಆಶಾ ಭಟ್​ ಸಿನಿಮಾದ ನಾಯಕಿ. ತೆಲುಗಿನ ಖಳ ಜಗಪತಿ ಬಾಬು ಈ ಸಿನಿಮಾದಲ್ಲಿ ಪ್ರಮುಖ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ವಿನೋದ್​​ ಪ್ರಭಾಕರ್​, ರವಿಶಂಕರ್​, ಸೋನಲ್​ ಮೊಂಥೆರೋ, ಚಿಕ್ಕಣ್ಣ, ಅವಿನಾಶ್​, ದೇವರಾಜ್​, ಶಿವರಾಜ್​ ಕೆ.ಆರ್​. ಪೇಟೆ, ಐಶ್ವರ್ಯಾ ಪ್ರಸಾದ್​ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಸಕ್ಸಸ್: ನಿರ್ದೇಶಕ ತರುಣ್ ಸುಧೀರ್ ಏನ್ ಹೇಳಿದ್ದಾರೆ?

Follow Us
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ