AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Kannada: ಶುಭಾ ಪೂಂಜಾ ಬಾಯ್​ಫ್ರೆಂಡ್​ ಧ್ವನಿ ಕೇಳಿ ಗಳಗಳನೆ ಅತ್ತ ವಿಶ್ವನಾಥ್​! ಇದೆಂಥಾ ಕನೆಕ್ಷನ್​?

BBK8: ಕಣ್ಣೀರನ್ನು ತಡೆದುಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ವಿಶ್ವನಾಥ್​ಗೆ ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಶುಭಾ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ ಕೇಳಿ ಈ ಪುಟಾಣಿ ವಿಶ್ವ ಯಾಕೆ ಅಳುತ್ತಿದ್ದಾನೆ ಎಂದು ಮನೆಯ ಎಲ್ಲ ಸದಸ್ಯರಿಗೂ ಪ್ರಶ್ನೆ ಮೂಡಿತು.

Bigg Boss Kannada: ಶುಭಾ ಪೂಂಜಾ ಬಾಯ್​ಫ್ರೆಂಡ್​ ಧ್ವನಿ ಕೇಳಿ ಗಳಗಳನೆ ಅತ್ತ ವಿಶ್ವನಾಥ್​! ಇದೆಂಥಾ ಕನೆಕ್ಷನ್​?
ವಿಶ್ವನಾಥ್​ - ಶುಭಾ ಪೂಂಜಾ
ಮದನ್​ ಕುಮಾರ್​
| Edited By: |

Updated on: Mar 28, 2021 | 4:15 PM

Share

ಬಿಗ್​ ಬಾಸ್​ ಕನ್ನಡ ಸೀಸನ್​ 8ರಲ್ಲಿ ಭಾಗವಹಿಸಿರುವ ಅತಿ ಕಿರಿಯ ಸ್ಪರ್ಧಿ ವಿಶ್ವನಾಥ್​. ಚಿಕ್ಕವನು ಎಂಬ ಕಾರಣ ಪ್ರೀತಿ-ಪ್ರೇಮದ ಸಹವಾಸಕ್ಕೆ ವಿಶ್ವ ಕೈ ಹಾಕಿಲ್ಲ. ಮಹಿಳಾ ಸ್ಪರ್ಧಿಗಳನ್ನು ಅಕ್ಕ ಎಂದು ಕರೆಯುವ ಅವರು, ಟಾಸ್ಕ್​ನಲ್ಲಿಯೂ ಬಲು ಚೂಟಿ ಇದ್ದಾರೆ. ಆದರೆ ವೀಕೆಂಡ್​ ಎಪಿಸೋಡ್​ನಲ್ಲಿ ವಿಶ್ವ ಗಳಗಳನೆ ಅತ್ತಿದ್ದಾರೆ. ಅವರು ಹಾಗೆ ಬಿಕ್ಕಿ ಬಿಕ್ಕಿ ಅಳಲು ಕಾರಣ ಆಗಿರುವುದು ಶುಭ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ!

ಬಿಗ್​ ಬಾಸ್​ನಲ್ಲಿ ಸ್ಪರ್ಧಿಸುತ್ತಿರುವವರು ತಮ್ಮ ಕುಟುಂಬದ ಎಲ್ಲರಿಂದಲೂ ದೂರ ಇರುತ್ತಾರೆ. ಹಾಗಾಗಿ ಬಿಗ್​ ಬಾಸ್​ ಆಗೊಮ್ಮೆ ಈಗೊಮ್ಮೆ ಒಂದು ಸರ್ಪ್ರೈಸ್​ ನೀಡುತ್ತಿರುತ್ತಾರೆ. ಸ್ಪರ್ಧಿಗಳ ಕುಟುಂಬದವರಿಂದ ಯಾರಾದರೊಬ್ಬರ ಧ್ವನಿಯನ್ನು ರೆಕಾರ್ಡ್​ ಮಾಡಿ ಕೇಳಿಸುತ್ತಾರೆ. ಈ ಬಾರಿ ಶುಭಾ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ ಕೇಳಿಸಲಾಯಿತು. ಅದನ್ನು ಕೇಳಿಸಿಕೊಂಡು ಶುಭಾ ಪೂಂಜಾ ಅವರು ಸಿಕ್ಕಾಪಟ್ಟೆ ಖುಷಿ ಆದರು. ಆನಂದ ಭಾಷ್ಪ ಸುರಿಸಿದರು. ಆದರೆ ಅವರ ಜೊತೆಗೆ ವಿಶ್ವನಾಥ್​ ಕೂಡ ಅಳಲು ಶುರು ಮಾಡಿದರು!

‘ನೀನು ಬಿಗ್​ ಬಾಸ್​ಗೆ ಹೋಗುತ್ತಿದ್ದೀಯ ಅಂದಾಗ, ಅಬ್ಬಾ ಆರಾಮಾಗಿ ಇರೋಣ ಎಂದುಕೊಂಡಿದ್ದೆ. ಆದರೆ ನಿನ್ನನ್ನು ಎಷ್ಟು ಮಿಸ್​ ಮಾಡುತ್ತಿದ್ದೇನೆ ಅಂತ ನೀನು ಹೋದ ಮರುದಿನ ಗೊತ್ತಾಯಿತು. ಮನೆಯಲ್ಲಿ ತಲೆಹರಟೆ ಮಾಡುತ್ತಿದ್ದ ಮಗುವೇ ಕಾಣಿಸುತ್ತಿಲ್ಲ ಎಂಬಂತೆ ಅನಿಸುತ್ತಿದೆ. ಮೌನ ಆವರಿಸಿದೆ. ಕಳೆದ ವರ್ಷ ಲಾಕ್​ಡೌನ್​ನಲ್ಲಿ ನಾವು ಮಂಗಳೂರಿನಲ್ಲಿ ಇದ್ವಿ. ಬೇರೆ ಯಾರೂ ಇರಲಿಲ್ಲ. ಈಗ ಎಲ್ಲರೂ ಇದ್ದಾರೆ. ಆದರೆ ನೀನು ಇಲ್ಲ. ಇದೇ ನನಗೆ ಕಷ್ಟದ ಲಾಕ್​ಡೌನ್​ ಎನಿಸುತ್ತಿದೆ’ ಎಂದು ಶುಭಾ ಪೂಂಜಾ ಬಾಯ್​ಫ್ರೆಂಡ್​ ವಾಯ್ಸ್​ ಮೆಸೇಜ್​ ಕಳಿಸಿದ್ದರು.

ಇದನ್ನು ಕೇಳಿಸಿಕೊಂಡ ವಿಶ್ವ ಸಿಕ್ಕಾಪಟ್ಟೆ ಅತ್ತು ಬಿಟ್ಟರು. ಕಣ್ಣೀರನ್ನು ತಡೆದುಕೊಳ್ಳಲು ಅವರು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅಷ್ಟಕ್ಕೂ ಶುಭಾ ಪೂಂಜಾ ಅವರ ಬಾಯ್​ ಫ್ರೆಂಡ್​ ಧ್ವನಿ ಕೇಳಿ ಈ ಪುಟಾಣಿ ವಿಶ್ವ ಯಾಕೆ ಅಳುತ್ತಿದ್ದಾನೆ ಎಂದು ಮನೆಯ ಎಲ್ಲ ಸದಸ್ಯರಿಗೂ ಪ್ರಶ್ನೆ ಮೂಡಿತು. ಅಷ್ಟೇ ಅಲ್ಲದೆ, ನಿರೂಪಕ ಕಿಚ್ಚ ಸುದೀಪ್​ ಕೂಡ ವಿಶ್ವನಿಗೆ ಈ ಪ್ರಶ್ನೆ ಕೇಳಿದರು. ಆಗ ವಿಶ್ವ ಅಸಲಿ ಕಾರಣ ಬಾಯಿ ಬಿಟ್ಟರು.

‘ಮೊದಲು ಶುಭ ಅಕ್ಕನ್ನ ನೋಡಿದೆ. ಸಡನ್​ ಆಗಿ ಅಮ್ಮ ನೆನಪಾದರು. ಕಳೆದ ಬಾರಿ ನನಗೆ ಅಮ್ಮನ ವಾಯ್ಸ್​ ಮೆಸೇಜ್​ ಬಂದಿತ್ತು. ನಂತರ ಅಪ್ಪ ಮಾತನಾಡುತ್ತಾರೆ ಎಂದು ಕಾಯುತ್ತಿದ್ದೆ. ಆದರೆ ಅವರ ಧ್ವನಿ ಬರಲೇ ಇಲ್ಲ. ಅಂದು ನಾನು ಎಲ್ಲರ ಮುಂದೆ ಅಳು ತಡೆದುಕೊಂಡಿದ್ದೆ. ಆದರೆ ಇವತ್ತು ಏನೋ ಕನೆಕ್ಟ್​ ಆದಂತೆ ಆಯಿತು. ಅಪ್ಪನ ಧ್ವನಿ ನೆನಪಿಗೆ ಬಂತು’ ಸುದೀಪ್​ ಎದುರಿನಲ್ಲಿ ಎಲ್ಲವನ್ನೂ ಒಪ್ಪಿಕೊಂಡರು ವಿಶ್ವ.

ಇದನ್ನೂ ಓದಿ: Bigg Boss Elimination: ಬಿಗ್​ ಬಾಸ್​ನಿಂದ ಹೊರಬಿದ್ದ ಚಂದ್ರಕಲಾ ಮೋಹನ್​? ಎಲಿಮಿನೇಷನ್​ಗೆ ಆ ಒಂದು ವರ್ತನೆಯೇ ಕಾರಣ

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬ್ಯಾಟ್ ಬೀಸಿದ ಸಚಿವ ಗಜೇಂದ್ರ ಸಿಂಗ್ ಶೇಖಾವತ್
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸೌಜನ್ಯ ಕೇಸ್​​ ತನಿಖೆಗೆ SIT ಚಾಲನೆ: ಮೊದಲ ಸಭೆ, ಇನ್​ ಸೈಡ್​ ಮಾಹಿತಿ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ಸ್ಮಿತ್ ದೀರ್ಘಾಯುಷ್ಯಕ್ಕಾಗಿ ಸೋಮನಾಥ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ವಿಶೇಷಚೇತನರ ಪ್ರತಿಭಟನೆ: ಮಳೆಯಲ್ಲೇ ಸಮಸ್ಯೆ ಆಲಿಸಿದ ಆರ್​ ಅಶೋಕ್​​
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸ್ಮಿತ್ ಮಚ್ಛಾರ್ ಚೇತರಿಕೆಗೆ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಸೆಷನ್ಸ್ ಕೋರ್ಟ್‌ಗೆ ಮರು ಅರ್ಜಿ ಸಲ್ಲಿಸಲು ಪ್ರಿಯಾಂಕ್, ನಲಪಾಡ್‌ಗೆ ಸೂಚನೆ
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಯೋಗೇಶ್​​ ಗೌಡ ಕೊಲೆ ಕೇಸ್​​: ವಿನಯ್​​ ಕುಲಕರ್ಣಿಗೆ 'ಸುಪ್ರೀಂ' ಸಂಕಷ್ಟ?
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಪ್ರಶಾಂತ್, ಗಗನ್ ತಮಾಷೆ ಮಾತಿಗೆ ಬಿದ್ದು ಬಿದ್ದು ನಕ್ಕ ಸೋನಿಕಾ ಗೌಡ
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಬೋಗಸ್ ಫಾರ್ಮ್ ನೀಡಿ ಮತದಾರರ ಹೆಸರು ಡಿಲೀಟ್ ಆರೋಪ:  25 ಜನರ ವಿರುದ್ಧ FIR
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್
ಉತ್ತರಾಖಂಡದಲ್ಲಿ ಭಾರೀ ಭೂಕುಸಿತ; ಗುಡ್ಡ ಕುಸಿಯುವ ಭಯಾನಕ ವಿಡಿಯೋ ವೈರಲ್