‘ಇದು ನನಗೆ ಚೆನ್ನಾಗಿ ನೆನಪಿದೆ’: ರಕ್ಷಿತ್​ಗೆ ಪ್ರತಿಕ್ರಿಯೆ ಕೊಟ್ಟ ರಶ್ಮಿಕಾ ಮಂದಣ್ಣ!

ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಈಗ ಒಡನಾಟ ಹೇಗಿದೆ? ಈ ಪ್ರಶ್ನೆ ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಿತ್ತು. ರಕ್ಷಿತ್​ ಮಾಡಿದ ಹೊಸ ಟ್ವೀಟ್​ ನೋಡಿದ ಅನೇಕರಿಗೆ ಒಂದು ಚಿತ್ರಣ ಸಿಕ್ಕಿದೆ.

‘ಇದು ನನಗೆ ಚೆನ್ನಾಗಿ ನೆನಪಿದೆ’: ರಕ್ಷಿತ್​ಗೆ ಪ್ರತಿಕ್ರಿಯೆ ಕೊಟ್ಟ ರಶ್ಮಿಕಾ ಮಂದಣ್ಣ!
ರಕ್ಷಿತ್​ ಶೆಟ್ಟಿ - ರಶ್ಮಿಕಾ ಮಂದಣ್ಣ
Follow us
ಮದನ್​ ಕುಮಾರ್​
|

Updated on: Apr 06, 2021 | 8:04 AM

ಸ್ಯಾಂಡಲ್​ವುಡ್​ನ ಮುದ್ದಾದ ಜೋಡಿಗಳ ಸಾಲಿನಲ್ಲಿದ್ದ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಕಾರಣಾಂತರಗಳಿಂದ ನಂತರದ ದಿನಗಳಲ್ಲಿ ಬೇರಾದರು. ಮೊದಲು ಅವರಿಬ್ಬರ ನಡುವೆ ಮನಸ್ತಾಪವಿತ್ತು. ಆದರೆ ಈಗ ಅದನ್ನೆಲ್ಲ ಮರೆತು ಮುಂದೆ ಸಾಗುತ್ತಿದ್ದಾರೆ. ಅಷ್ಟೇ ಅಲ್ಲದೆ, ಸೋಶಿಯಲ್​ ಮೀಡಿಯಾದಲ್ಲಿ ಪರಸ್ಪರ ವಿಶ್​ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ಕಂಡು ಅಭಿಮಾನಿಗಳಿಗೆ ಗೊಂದಲ ಆಗಿರುವುದಂತೂ ನಿಜ. ಈ ನಡುವೆ ರಶ್ಮಿಕಾ ಬರ್ತ್​ಡೇ ಸಲುವಾಗಿ ರಕ್ಷಿತ್​ ಮಾಡಿದ ಒಂದು ಟ್ವೀಟ್​ ಸಖತ್ ವೈರಲ್​ ಆಗಿತ್ತು. ಅದಕ್ಕೆ ರಶ್ಮಿಕಾ ಮಂದಣ್ಣ ಸೂಕ್ತ ಪ್ರತಿಕ್ರಿಯೆ ನೀಡಿದ್ದಾರೆ.

ಏ.5ರಂದು ರಶ್ಮಿಕಾ ಮಂದಣ್ಣ ಬರ್ತ್​ಡೇ. ಆ ಪ್ರಯುಕ್ತ ಅನೇಕ ಸೆಲೆಬ್ರಿಟಿಗಳು ಅವರಿಗೆ ಟ್ವಿಟರ್​ ಮೂಲಕ ಶುಭ ಹಾರೈಸಿದ್ದರು. ಅದೇ ರೀತಿ ರಕ್ಷಿತ್​ ಶೆಟ್ಟಿ ಕೂಡ ಒಂದು ವಿಶೇಷವಾದ ವಿಡಿಯೋ ಮೂಲಕ ವಿಶ್​ ಮಾಡಿದರು. ಕಿರಿಕ್​ ಪಾರ್ಟಿ ಸಿನಿಮಾದ ಹೀರೋಯಿನ್​ ಪಾತ್ರಕ್ಕಾಗಿ ಮಾಡಿದ ಆಡಿಷನ್​ ವಿಡಿಯೋವನ್ನು ಅವರು ಹಂಚಿಕೊಂಡರು. ಅದು ಸಖತ್ ವೈರಲ್​ ಆಗಿದೆ. ರಶ್ಮಿಕಾ ಗಮನಕ್ಕೂ ಬಂದಿದೆ.

‘ಕಿರಿಕ್​ ಪಾರ್ಟಿ ಸಿನಿಮಾದ ಆಡಿಷನ್​ನಿಂದ ಈ ಸುಂದರ ನೆನಪನ್ನು ಹಂಚಿಕೊಳ್ಳುತ್ತಿದ್ದೇನೆ. ಅಲ್ಲಿಂದ ನೀನು ತುಂಬ ದೂರ ಪ್ರಯಾಣ ಮಾಡಿದ್ದೀಯ. ನಿಜವಾದ ವಾರಿಯರ್​ ರೀತಿಯಲ್ಲಿ ನಿನ್ನ ಕನಸುಗಳ ಬೆನ್ನು ಹತ್ತಿದ್ದೀಯ. ನಿನ್ನ ಬಗ್ಗೆ ಹೆಮ್ಮೆ ಎನಿಸುತ್ತದೆ ಹುಡುಗಿ. ಜನ್ಮದಿನದ ಶುಭಾಶಯಗಳು. ನಿನಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ’ ಎಂದು ರಕ್ಷಿತ್​ ಶೆಟ್ಟಿ ಟ್ವೀಟ್​ ಮಾಡಿದ್ದರು. ಅದನ್ನು ಕಂಡ ರಶ್ಮಿಕಾ ಖುಷಿ ಆಗಿದ್ದಾರೆ.

‘ಆ….. ನನಗೆ ಇದು ತುಂಬಾ ಚೆನ್ನಾಗಿ ನೆನಪಿದೆ. ಧನ್ಯವಾದಗಳು ರಕ್ಷಿತ್​ ಶೆಟ್ಟಿ’ ಎಂದು ರಶ್ಮಿಕಾ ಮಂದಣ್ಣ ಟ್ವೀಟ್​ ಮಾಡಿದ್ದಾರೆ. ಈ ಟ್ವೀಟ್​ಗೆ ಅಭಿಮಾನಿಗಳು ಹಲವು ಬಗೆಯಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ. ರಶ್ಮಿಕಾ ಮತ್ತು ರಕ್ಷಿತ್​ ಮತ್ತೆ ಒಂದಾಗಲಿ ಎಂದು ಅನೇಕರು ಬಯಸುತ್ತಿದ್ದಾರೆ. ಪ್ರೀತಿ ತಿರಸ್ಕರಿಸಿ ಹೋದ ಹುಡುಗಿಯ ಬಗ್ಗೆ ರಕ್ಷಿತ್​ ಇಂದಿಗೂ ಒಳ್ಳೆಯ ಭಾವನೆ ಇಟ್ಟುಕೊಂಡಿದ್ದಾರೆ ಎಂದು ತುಂಬ ಜನ ಕಾಮೆಂಟ್​ ಮಾಡಿದ್ದಾರೆ. ರಕ್ಷಿತ್​ ಅವರ ಈ ಟ್ವೀಟ್​ ಕೆಲವರಿಗೆ ಹಿಡಿಸಿಲ್ಲ. ದಯವಿಟ್ಟು ಇದನ್ನು ಡಿಲಿಟ್​ ಮಾಡಿ ಎಂದು ಅವರೆಲ್ಲ ಮನವಿ ಮಾಡಿಕೊಂಡಿದ್ದಾರೆ.

ಈ ಹಿಂದೆ ‘ಕಿರಿಕ್​ ಪಾರ್ಟಿ’ ಸಿನಿಮಾದ ‘ಬೆಳಗೆದ್ದು ಯಾರ ಮುಖವ..’ ಹಾಡು 100 ಮಿಲಿಯನ್​ ವೀಕ್ಷಣೆ ಕಂಡಾಗಲೂ ಅದರ ಬಗ್ಗೆ ರಶ್ಮಿಕಾ ಟ್ವೀಟ್​ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ರಕ್ಷಿತ್​, ‘ನೀನು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಹುಡುಗಿ. ನಿನ್ನ ಕನಸುಗಳೆಲ್ಲ ನನಸಾಗಲಿ’ ಎಂದು ಹಾರೈಸಿದ್ದರು. ಇಬ್ಬರ ನಡುವೆ ಇದ್ದ ವೈಮನಸ್ಸು ತಣ್ಣಗಾಗಿದೆ ಎಂಬುದಕ್ಕೆ ಆ ಟ್ವೀಟ್​ ಸಂಭಾಷಣೆ ಸಾಕ್ಷಿ ನೀಡಿತ್ತು.

ಇದನ್ನೂ ಓದಿ: Rakshit Shetty: ರಶ್ಮಿಕಾ ಜೊತೆಗಿನ 6 ವರ್ಷದ ಹಳೇ ವಿಡಿಯೋ ಹಂಚಿಕೊಂಡ ರಕ್ಷಿತ್​ ಶೆಟ್ಟಿ! ಸಾನ್ವಿಗೆ ಕರ್ಣನ ಬರ್ತ್​ಡೇ ಗಿಫ್ಟ್​

‘ಕಿರಿಕ್​ ಪಾರ್ಟಿ 2’ ಸಿನಿಮಾಗಾಗಿ ಕಾಯುತ್ತಿದ್ದೀರಾ? ಹಾಗಾದರೆ ಇಲ್ಲಿದೆ ರಕ್ಷಿತ್​ ಶೆಟ್ಟಿ ನೀಡಿದ ಗುಡ್​ ನ್ಯೂಸ್​!

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ