Rashmika Mandanna: ರಕ್ಷಿತ್​ ಶೆಟ್ಟಿ ಬರ್ತ್​ಡೇ ವಿಶ್​​ಗೆ ಪ್ರೀತಿಯಿಂದ ಉತ್ತರಿಸಿದ ರಶ್ಮಿಕಾ ಮಂದಣ್ಣ!

ಚಿತ್ರದ ಕೆಲವು ಡೈಲಾಗ್​ಗಳನ್ನು ಹೇಳುವಂತೆ ರಶ್ಮಿಕಾಗೆ ಸೂಚಿಸಲಾಗಿತ್ತು. ಈ ವಿಡಿಯೋವನ್ನು ರಕ್ಷಿತ್​ ಹಂಚಿಕೊಂಡು ಬರ್ತ್​ ಡೇ ವಿಶ್​ ತಿಳಿಸಿದ್ದರು.

Rashmika Mandanna: ರಕ್ಷಿತ್​ ಶೆಟ್ಟಿ ಬರ್ತ್​ಡೇ ವಿಶ್​​ಗೆ ಪ್ರೀತಿಯಿಂದ ಉತ್ತರಿಸಿದ ರಶ್ಮಿಕಾ ಮಂದಣ್ಣ!
ರಕ್ಷಿತ್​-ರಶ್ಮಿಕಾ
Follow us
ರಾಜೇಶ್ ದುಗ್ಗುಮನೆ
|

Updated on: Apr 05, 2021 | 6:25 PM

ನಟ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಇದ್ದ ಪ್ರೀತಿ ಸೇತುವೆ ಮುರಿದು ಬಿದ್ದಿತ್ತು. ಈ ಎಲ್ಲಾ ಕಹಿ ಘಟನೆಗಳನ್ನು ರಕ್ಷಿತ್ ಮರೆತಿದ್ದಾರೆ. ಅಷ್ಟೇ ಅಲ್ಲ ಕಳೆದ ವರ್ಷಗಳಿಂದ ರಶ್ಮಿಕಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಇಂದು ರಶ್ಮಿಕಾ ಜನ್ಮದಿನ. ಇದಲ್ಲದೆ ವಿಶೇಷ ಟ್ವೀಟ್​ ಮೂಲಕ ಶುಭ ಹಾರೈಸಿದ್ದರು. ಇದಕ್ಕೆ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರಿಗೆ ಬಣ್ಣದ ಲೋಕದಲ್ಲಿ ಭದ್ರ ಬುನಾದಿ ಹಾಕಿಕೊಟ್ಟ ಸಿನಿಮಾ ಕಿರಿಕ್​ ಪಾರ್ಟಿ. 2016ರಲ್ಲಿ ಬಂದ ಆ ಚಿತ್ರವನ್ನು ರಕ್ಷಿತ್​ ಶೆಟ್ಟಿ ನಿರ್ಮಾಣ ಮಾಡಿದ್ದರು. ರಶ್ಮಿಕಾಗೆ ಕಿರಿಕ್​ ಪಾರ್ಟಿಯಲ್ಲಿ ರಕ್ಷಿತ್​ ಅವಕಾಶ ನೀಡಿದ್ದರು. ರಶ್ಮಿಕಾ ಬದುಕು ಬದಲಾಗಲು ಇದು ಪ್ರಮುಖ ಕಾರಣವಾಗಿತ್ತು. ಕಿರಿಕ್​ ಪಾರ್ಟಿ ಚಿತ್ರದ ಹೀರೋಯಿನ್​ ಪಾತ್ರಕ್ಕಾಗಿ ಹಲವಾರು ಹುಡುಗಿಯರ ಆಡಿಷನ್ ಮಾಡಲಾಗಿತ್ತು. ಅದರಲ್ಲಿ ರಶ್ಮಿಕಾ ಮಂದಣ್ಣ ಕೂಡ ಭಾಗವಹಿಸಿದ್ದರು. ಚಿತ್ರದ ಕೆಲವು ಡೈಲಾಗ್​ಗಳನ್ನು ಹೇಳುವಂತೆ ರಶ್ಮಿಕಾಗೆ ಸೂಚಿಸಲಾಗಿತ್ತು. ಈ ವಿಡಿಯೋವನ್ನು ರಕ್ಷಿತ್​ ಹಂಚಿಕೊಂಡು ಬರ್ತ್​ ಡೇ ವಿಶ್​ ತಿಳಿಸಿದ್ದರು.

‘ಕಿರಿಕ್​ ಪಾರ್ಟಿ ಸಿನಿಮಾದ ಆಡಿಷನ್​ನಿಂದ ಈ ಸುಂದರ ನೆನಪನ್ನು ಹಂಚಿಕೊಳ್ಳುತ್ತಿದ್ದೇನೆ. ಅಲ್ಲಿಂದ ನೀನು ತುಂಬ ದೂರ ಪ್ರಯಾಣ ಮಾಡಿದ್ದೀಯ. ನಿಜವಾದ ವಾರಿಯರ್​ ರೀತಿಯಲ್ಲಿ ನಿನ್ನ ಕನಸುಗಳ ಬೆನ್ನು ಹತ್ತಿದ್ದೀಯ. ನಿನ್ನ ಬಗ್ಗೆ ಹೆಮ್ಮೆ ಎನಿಸುತ್ತದೆ ಹುಡುಗಿ. ಜನ್ಮದಿನದ ಶುಭಾಶಯಗಳು. ನಿನಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ’ ಎಂದು ರಕ್ಷಿತ್​ ಶೆಟ್ಟಿ ಟ್ವೀಟ್​ ಮಾಡಿದ್ದರು.

ಇದಕ್ಕೆ ಈಗ ರಶ್ಮಿಕಾ ಉತ್ತರಿಸಿದ್ದಾರೆ. ನನಗೆ ಇದು ಇನ್ನೂ ಸ್ಪಷ್ಟವಾಗಿ ನೆನಪಿದೆ. ಧನ್ಯವಾದಗಳು ರಕ್ಷಿತ್​ ಶೆಟ್ಟಿ. ಮೀನ್ಸ್​ ಅ ಲಾಟ್​ ಎಂದು ಉತ್ತರಿಸಿದ್ದಾರೆ.

ಇದನ್ನೂ ಓದಿ: Rakshit Shetty: ರಶ್ಮಿಕಾ ಜೊತೆಗಿನ 6 ವರ್ಷದ ಹಳೇ ವಿಡಿಯೋ ಹಂಚಿಕೊಂಡ ರಕ್ಷಿತ್​ ಶೆಟ್ಟಿ! ಸಾನ್ವಿಗೆ ಕರ್ಣನ ಬರ್ತ್​ಡೇ ಗಿಫ್ಟ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ