AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakshit Shetty: ರಶ್ಮಿಕಾ ಜೊತೆಗಿನ 6 ವರ್ಷದ ಹಳೇ ವಿಡಿಯೋ ಹಂಚಿಕೊಂಡ ರಕ್ಷಿತ್​ ಶೆಟ್ಟಿ! ಸಾನ್ವಿಗೆ ಕರ್ಣನ ಬರ್ತ್​ಡೇ ಗಿಫ್ಟ್​

Happy Birthday Rashmika Mandanna: ಕಿರಿಕ್​ ಪಾರ್ಟಿ ಸಿನಿಮಾದ ತೆರೆಹಿಂದಿನ ಒಂದು ಅಪರೂಪದ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ರಕ್ಷಿತ್​ ಶೆಟ್ಟಿ ಶೇರ್​ ಮಾಡಿಕೊಂಡಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

Rakshit Shetty: ರಶ್ಮಿಕಾ ಜೊತೆಗಿನ 6 ವರ್ಷದ ಹಳೇ ವಿಡಿಯೋ ಹಂಚಿಕೊಂಡ ರಕ್ಷಿತ್​ ಶೆಟ್ಟಿ! ಸಾನ್ವಿಗೆ ಕರ್ಣನ ಬರ್ತ್​ಡೇ ಗಿಫ್ಟ್​
ರಶ್ಮಿಕಾ ಮಂದಣ್ಣ - ರಕ್ಷಿತ್​ ಶೆಟ್ಟಿ
ಮದನ್​ ಕುಮಾರ್​
| Edited By: |

Updated on: Apr 05, 2021 | 2:17 PM

Share

ನಟ ರಕ್ಷಿತ್​ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಡುವೆ ಒಂದು ಕಾಲದಲ್ಲಿ ತುಂಬಾ ಆಪ್ತತೆ ಇತ್ತು. ನಂತರ ಅವರ ನಡುವೆ ವೈಮನಸ್ಸು ಉಂಟಾಯಿತು. ಆದರೆ ಎಲ್ಲಾ ಕಹಿ ಘಟನೆಗಳನ್ನು ಮರೆತಿರುವ ರಕ್ಷಿತ್ ಶೆಟ್ಟಿ ಅವರು ಕಳೆದ ವರ್ಷದಿಂದ ಮತ್ತೆ ರಶ್ಮಿಕಾ ಬಗ್ಗೆ ಪ್ರೋತ್ಸಾಹ ಭರಿತ ಮಾತುಗಳನ್ನು ಆಡುತ್ತಿದ್ದಾರೆ. ಈಗ ತಮ್ಮ ಮಾಜಿ ಪ್ರೇಯಸಿ ಜನ್ಮದಿನದ ಸಲುವಾಗಿ ಒಂದು ವಿಶೇಷ ವಿಡಿಯೋವನ್ನು ರಕ್ಷಿತ್​ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರಿಗೆ ಬಣ್ಣದ ಲೋಕದಲ್ಲಿ ಭದ್ರ ಬುನಾದಿ ಹಾಕಿಕೊಟ್ಟ ಸಿನಿಮಾ ಕಿರಿಕ್​ ಪಾರ್ಟಿ. 2016ರಲ್ಲಿ ಬಂದ ಆ ಚಿತ್ರವನ್ನು ರಕ್ಷಿತ್​ ಶೆಟ್ಟಿ ನಿರ್ಮಾಣ ಮಾಡಿದ್ದರು. ರಶ್ಮಿಕಾಗೆ ಕಿರಿಕ್​ ಪಾರ್ಟಿಯಲ್ಲಿ ರಕ್ಷಿತ್​ ಅವಕಾಶ ನೀಡಿದ್ದರಿಂದಲೇ ಈ ಕೊಡಗಿನ ಕುವರಿಗೆ ಹೊಸ ಬದುಕು ಸಿಕ್ಕಿತು. ಈಗ ಕಿರಿಕ್​ ಪಾರ್ಟಿ ತೆರೆಹಿಂದಿನ ಒಂದು ಅಪರೂಪದ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ರಕ್ಷಿತ್​ ಶೇರ್​ ಮಾಡಿಕೊಂಡಿದ್ದಾರೆ.

ಕಿರಿಕ್​ ಪಾರ್ಟಿ ಚಿತ್ರದ ಹೀರೋಯಿನ್​ ಪಾತ್ರಕ್ಕಾಗಿ ಹಲವಾರು ಹುಡುಗಿಯರ ಆಡಿಷನ್ ಮಾಡಲಾಗಿತ್ತು. ಅದರಲ್ಲಿ ರಶ್ಮಿಕಾ ಮಂದಣ್ಣ ಕೂಡ ಭಾಗವಹಿಸಿದ್ದರು. ಚಿತ್ರದ ಕೆಲವು ಡೈಲಾಗ್​ಗಳನ್ನು ಹೇಳುವಂತೆ ರಶ್ಮಿಕಾಗೆ ಸೂಚಿಸಲಾಗುತ್ತು. ಆ ಸಂದರ್ಭದ ವಿಡಿಯೋವನ್ನು ರಕ್ಷಿತ್ ಇನ್ನೂ ಜೋಪಾನವಾಗಿ ಇಟ್ಟುಕೊಂಡಿದ್ದಾರೆ. ಅದನ್ನು ಈಗ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅವರು ಅಚ್ಚರಿ ಮೂಡಿಸಿದ್ದಾರೆ.

‘ಕಿರಿಕ್​ ಪಾರ್ಟಿ ಸಿನಿಮಾದ ಆಡಿಷನ್​ನಿಂದ ಈ ಸುಂದರ ನೆನಪನ್ನು ಹಂಚಿಕೊಳ್ಳುತ್ತಿದ್ದೇನೆ. ಅಲ್ಲಿಂದ ನೀನು ತುಂಬ ದೂರ ಪ್ರಯಾಣ ಮಾಡಿದ್ದೀಯ. ನಿಜವಾದ ವಾರಿಯರ್​ ರೀತಿಯಲ್ಲಿ ನಿನ್ನ ಕನಸುಗಳ ಬೆನ್ನು ಹತ್ತಿದ್ದೀಯ. ನಿನ್ನ ಬಗ್ಗೆ ಹೆಮ್ಮೆ ಎನಿಸುತ್ತದೆ ಹುಡುಗಿ. ಜನ್ಮದಿನದ ಶುಭಾಶಯಗಳು. ನಿನಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ’ ಎಂದು ರಕ್ಷಿತ್​ ಶೆಟ್ಟಿ ಟ್ವೀಟ್​ ಮಾಡಿದ್ದಾರೆ. ಸದ್ಯ ಈ ಟ್ವೀಟ್​ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ರಕ್ಷಿತ್​ ಜೊತೆಗಿನ ಪ್ರೀತಿಗೆ ರಶ್ಮಿಕಾ ಮಂದಣ್ಣ ಎಳ್ಳು-ನೀರು ಬಿಟ್ಟರು ಎಂಬ ಕಾರಣಕ್ಕಾಗಿ ಸಿಂಪಲ್​ ಸ್ಟಾರ್​ ಅಭಿಮಾನಿಗಳು ರಶ್ಮಿಕಾ ಬಗ್ಗೆ ಅಸಮಾಧಾನ ಹೊಂದಿದ್ದರು. ಅದು ಸೋಶಿಯಲ್​ ಮೀಡಿಯಾದ ಕಾಮೆಂಟ್​ಗಳ ಮೂಲಕ ವ್ಯಕ್ತವಾಗುತ್ತಿತ್ತು. ಆದರೆ ಈಗ ಸ್ವತಃ ರಕ್ಷಿತ್​ ಅವರು ರಶ್ಮಿಕಾ ಬಗ್ಗೆ ಪ್ರೀತಿಯ ಮಾತುಗಳನ್ನು ಆಡಲು ಆರಂಭಿಸಿರುವುದರಿಂದ ಅವರ ಫ್ಯಾನ್ಸ್​ ಕೂಡ ಖುಷಿ ಆಗಿದ್ದಾರೆ. ಎಲ್ಲ ಕಹಿಯನ್ನು ಮರೆತು ಪ್ರೀತಿ ಹಂಚುತ್ತಿರುವ ರಕ್ಷಿತ್​ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸದ್ಯ ಈ ಟ್ವೀಟ್​ಗೆ ರಶ್ಮಿಕಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕ ಅವರ ಅಭಿಮಾನಿಗಳ ಮನದಲ್ಲಿ ಸೃಷ್ಟಿಯಾಗಿದೆ.

ಇದನ್ನೂ ಓದಿ: Rashmika Mandanna: ಮುಂಬೈನಲ್ಲಿ ರಶ್ಮಿಕಾ ಜೊತೆ ಇಷ್ಟೆಲ್ಲ ಕ್ಲೋಸ್​ ಆಗಿರುವ ನಟ ಯಾರು? ಫೋಟೋ ವೈರಲ್​!

Rashmika Mandanna: ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಬದುಕು ಬದಲಾಯಿಸಿದ ಐದು ಪ್ರಮುಖ ಘಟನೆಗಳು!​

(Rashmika Mandanna Birthday: Rakshit Shetty wishes his ex girlfriend Rashmika Mandanna with Kirik Party audition video)