Rashmika Mandanna: ರಶ್ಮಿಕಾ ಮಂದಣ್ಣ ಬರ್ತ್​​ಡೇ ಸಂಭ್ರಮ! ಕಾಮನ್​ ಡಿಪಿಯಲ್ಲಿ ಮಿಂಚಿದ ನ್ಯಾಶನಲ್​ ಕ್ರಶ್​

Happy Birthday Rashmika Mandanna: ಸಿನಿಮಾ ಲೋಕದಲ್ಲಿ ರಶ್ಮಿಕಾ ಮಂದಣ್ಣ ದಿನದಿಂದ ದಿನಕ್ಕೆ ಒಂದೊಂದೇ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಿದ್ದಾರೆ. ಅವರಿಗೆ ಅಭಿಮಾನಿಗಳಿಂದ ಜನ್ಮದಿನದ ಶುಭಾಶಯಗಳ ಮಹಾಪೂರ ಹರಿದುಬಂದಿದೆ.

Rashmika Mandanna: ರಶ್ಮಿಕಾ ಮಂದಣ್ಣ ಬರ್ತ್​​ಡೇ ಸಂಭ್ರಮ! ಕಾಮನ್​ ಡಿಪಿಯಲ್ಲಿ ಮಿಂಚಿದ ನ್ಯಾಶನಲ್​ ಕ್ರಶ್​
ರಶ್ಮಿಕಾ ಮಂದಣ್ಣ
Follow us
ಮದನ್​ ಕುಮಾರ್​
| Updated By: Digi Tech Desk

Updated on:Apr 05, 2021 | 9:20 AM

ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇಂದು (ಏ.5) 25ನೇ ವರ್ಷದ ಜನ್ಮದಿನದ ಸಂಭ್ರಮ. ಕೋಟ್ಯಂತರ ಅಭಿಮಾನಿಗಳು, ಸ್ನೇಹಿತರು, ಆಪ್ತರು ಮತ್ತು ಸೆಲೆಬ್ರಿಟಿಗಳಿಂದ ರಶ್ಮಿಕಾಗೆ ಜನ್ಮದಿನದ ಶುಭಾಶಯ ಹರಿದು ಬರುತ್ತಿದೆ. ಸೋಶಿಯಲ್​ ಮೀಡಿಯಾ ತುಂಬೆಲ್ಲ ಅವರ ಅಭಿಮಾನಿಗಳು ಕಾಮನ್​ ಡಿಪಿ ಶೇರ್​ ಮಾಡಿಕೊಳ್ಳುವ ಮೂಲಕ ಸಂಭ್ರಮಿಸುತ್ತಿದ್ದಾರೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದ ತಾರೆಯರು ಈ ಕೊಡಗಿನ ಕುವರಿಗೆ ವಿಶ್​ ಮಾಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ ಈಗ ಕನ್ನಡಕ್ಕಿಂತಲೂ ಹೆಚ್ಚಾಗಿ ಪರಭಾಷೆಯಲ್ಲೇ ಬ್ಯುಸಿ ಆಗಿದ್ದಾರೆ. ಎಲ್ಲ ಭಾಷೆಯಲ್ಲಿಯೂ ಅವರಿಗೆ ಅಭಿಮಾನಿಗಳಿದ್ದಾರೆ. ಜನ್ಮದಿನದ ಸಲುವಾಗಿ ಅದರ ಕಾಮನ್​ ಡಿಪಿ ಬಿಡುಗಡೆ ಮಾಡಲಾಗಿದೆ. ವಿಜಯ್​ ದೇವರಕೊಂಡ ಸಹೋದರ ಆನಂದ್​ ದೇವರಕೊಂಡ ಸೇರಿದಂತೆ ಅನೇಕರು ಕಾಮನ್​ ಡಿಪಿ ಹಂಚಿಕೊಂಡಿದ್ದಾರೆ.

ಸಿನಿಮಾ ಲೋಕದಲ್ಲಿ ರಶ್ಮಿಕಾ ಮಂದಣ್ಣ ದಿನದಿಂದ ದಿನಕ್ಕೆ ಒಂದೊಂದೇ ಸಾಧನೆಯ ಮಟ್ಟಿಲುಗಳನ್ನು ಏರುತ್ತಿದ್ದಾರೆ. ಕಿರಿಕ್​ ಪಾರ್ಟಿ ಸಿನಿಮಾದಿಂದ ಆರಂಭವಾದ ಅವರ ಪಯಣ ಈಗ ಬಾಲಿವುಡ್​ವರೆಗೂ ಸಾಗಿದೆ. ಈಗಾಗಲೇ ಗಾಯಕ ಬಾದ್​ಷಾ ಜೊತೆ ‘ಟಾಪ್​ ಟಕ್ಕರ್​’ ಹಾಡಿನಲ್ಲಿ ಕಾಣಿಸಿಕೊಂಡು ಧೂಳೆಬ್ಬಿಸಿದ್ದಾರೆ. ಅವರ ಮೊದಲ ಬಾಲಿವುಡ್​ ಸಿನಿಮಾ ‘ಮಿಷನ್​ ಮಜ್ನು’ ಚಿತ್ರೀಕರಣ ನಡೆಯುತ್ತಿದೆ. ಆ ಸಿನಿಮಾದಲ್ಲಿ ಅವರಿಗೆ ಸ್ಟಾರ್​ ನಟ ಸಿದ್ದಾರ್ಥ್​ ಮಲ್ಹೋತ್ರ ಜೋಡಿ ಆಗಿದ್ದಾರೆ.

ಮೊದಲ ಬಾಲಿವುಡ್​ ಸಿನಿಮಾ ಶೂಟಿಂಗ್​ ಮುಗಿಸುವ ಮುನ್ನವೇ ರಶ್ಮಿಕಾಗೆ ಎರಡನೇ ಹಿಂದಿ ಚಿತ್ರದಲ್ಲಿ ಬಂಪರ್​ ಅವಕಾಶ ಸಿಕ್ಕಿದೆ. ‘ಗುಡ್​ ಬೈ’ ಶೀರ್ಷಿಕೆಯ ಈ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್​ ಜೊತೆ ರಶ್ಮಿಕಾ ತೆರೆ ಹಂಚಿಕೊಳ್ಳಲಿದ್ದಾರೆ. ಅಲ್ಲದೆ, ‘ತಪಡ್​’ ಖ್ಯಾತಿಯ ನಟ ಪಾವೈಲ್​ ಗುಲಾಟಿಗೆ ಜೋಡಿಯಾಗಿ ರಶ್ಮಿಕಾ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾ ಮುಹೂರ್ತ ಸಮಾರಂಭ ನೆರವೇರಿದೆ.

ದಕ್ಷಿಣ ಭಾರತದಲ್ಲಂತೂ ರಶ್ಮಿಕಾ ಹವಾ ಜೋರಾಗಿದೆ. ಇಲ್ಲಿನ ಎಲ್ಲ ಸ್ಟಾರ್​ ನಟರ ಸಿನಿಮಾಗಳಿಗೂ ರಶ್ಮಿಕಾ ಅವರೇ ನಾಯಕಿ ಆಗಬೇಕು ಎಂಬಷ್ಟರ ಮಟ್ಟಿಗೆ ಬೇಡಿಕೆ ಸೃಷ್ಟಿ ಆಗಿದೆ. ಕಾರ್ತಿ ಜೊತೆ ಅವರು ನಟಿಸಿರುವ ‘ಸುಲ್ತಾನ್​’ ಸಿನಿಮಾ ಏ.2ರಂದು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಅಲ್ಲು ಅರ್ಜುನ್​ ಜೊತೆ ನಟಿಸಿರುವ ‘ಪುಷ್ಪ’ ಸಿನಿಮಾ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

ರಶ್ಮಿಕಾ ಕನ್ನಡದಲ್ಲಿ ನಟಿಸಿರುವ ಕೊನೇ ಸಿನಿಮಾ ಪೊಗರು. ಧ್ರುವ ಸರ್ಜಾ ಜೊತೆ ತೆರೆಹಂಚಿಕೊಂದಿದ್ದ ಆ ಚಿತ್ರ ಫೆ.19ರಂದು ಬಿಡುಗಡೆಯಾಗಿ ಧೂಳೆಬ್ಬಿಸಿತು. ಆದರೆ ಆ ಚಿತ್ರದ ಬಳಿಕ ರಶ್ಮಿಕಾ ಕನ್ನಡದಲ್ಲಿ ಬೇರೆ ಯಾವುದೇ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ. ಮತ್ತೆ ಅವರು ಸ್ಯಾಂಡಲ್​ವುಡ್​ ಕಡೆಗೆ ಮುಖ ಹಾಕುವುದು ಯಾವಾಗ ಎಂಬ ಪ್ರಶ್ನೆಗೆ ಕರುನಾಡಿನಲ್ಲಿರುವ ಅವರ ಅಭಿಮಾನಿಗಳು ಉತ್ತರ ನಿರೀಕ್ಷಿಸುತ್ತಿದ್ದಾರೆ.

ಇದನ್ನೂ ಓದಿ: Rashmika Mandanna: ಮುಂಬೈನಲ್ಲಿ ರಶ್ಮಿಕಾ ಜೊತೆ ಇಷ್ಟೆಲ್ಲ ಕ್ಲೋಸ್​ ಆಗಿರುವ ನಟ ಯಾರು? ಫೋಟೋ ವೈರಲ್​!

ರಶ್ಮಿಕಾಗೆ ಸಿಕ್ತು ಸೀಕ್ರೆಟ್ ಗಿಫ್ಟ್ ಉಂಗುರ.. ಅದಕ್ಕೆ ಐ ಲವ್ ಇಟ್ ಎಂದ ಕರುನಾಡ ಕ್ರಶ್

Published On - 8:11 am, Mon, 5 April 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್